Janardhan Kodavoor/ Team KaravaliXpress
32 C
Udupi
Wednesday, March 3, 2021

ಬಡವರ ದೀನದಲಿತರ ಮನೆಯ ಬೆಳಗಿಸಿದ ಆಸರೆ ಚಾರಿಟೇಬಲ್ ಟ್ರಸ್ಟ್- ಡಾ. ಶಶಿಕಿರಣ್ ಉಮಾಕಾಂತ್

ದೀನ ದಲಿತರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮುಖೇನ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಬಡವರ ಮನೆ ಬೆಳಗಿದೆ ಎಂದು ಉಡುಪಿ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಹೇಳಿದರು. ಸೋಮವಾರದಂದು ಉಡುಪಿ ಪುತ್ತೂರು ಸುಬ್ರಹ್ಮಣ್ಯನಗರ ವಾರ್ಡಿನ ಕುದ್ಮಲ್ ರಂಗರಾವ್ ನಗರದ ನಿವಾಸಿ ದಲಿತ ಸಮುದಾಯದ ಶ್ರೀಮತಿ ಇಂದಿರಾ ಮತ್ತು ಕುಮಾರಿ ರಶ್ಮಿ ಇವರ ಮನೆಗೆ ಕಲ್ಪಿಸಿದ ಉಚಿತ ವಿದ್ಯುತ್ ಸಂಪರ್ಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ದಿವಂಗತರ ಸ್ಮರಣಾರ್ಥ ಈ ಮನೆಗಳಿಗೆ ವಿದ್ಯುತ್ ಸಂಪರ್ಕನೀಡಿದ ಉಡುಪಿಯ ಇಂಜಿನಿಯರ್ ವಿಶ್ವನಾಥ ಭಟ್ ರ ಕುಟುಂಬ ಅಭಿನಂದನಾರ್ಹರು ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.

ಈ ಎರಡು ಮನೆಗಳ ವಿದ್ಯುತ್ ಸಂಪರ್ಕದ ವೆಚ್ಚವನ್ನು ದಿವಂಗತ ಶ್ರೀ ಬಿ ವಾದಿರಾಜ್ ಭಟ್ ಅವರ 24 ನೇ ವರ್ಷದ ಪುಣ್ಯತಿಥಿಯ ಸಲುವಾಗಿ ಅವರ ಸ್ಮರಣಾರ್ಥ ಶ್ರೀಮತಿ ಬಿ ವರದಾ ಭಟ್ ಕೊಡವೂರು ನೀಡಿದ್ದಾರೆ. ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ   ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದು ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಶ್ರೀಮತಿ ಜಯಂತಿ ಪೂಜಾರಿ, ನಗರಸಭಾ ಸದಸ್ಯೆ ಶ್ರೀಮತಿ ಸುಬೇದ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಸದಸ್ಯ  ಮಂಜುನಾಥ್ ಹೆಬ್ಬಾರ್, ಸ್ಥಳೀಯ ಯತೀಶ್ ಶೆಣೈ, ಜಯಂತ್ ,ಸತೀಶ್ ಪೂಜಾರಿ, ಶ್ರೀಮತಿ ಲಕ್ಷ್ಮಿ, ಉಪಸ್ಥಿತರಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ, ರಾಕೇಶ್ ಜೋಗಿ ವಂದಿಸಿದರು. ಈ ಮನೆಯ ವಿದ್ಯುತ್ ಸಂಪರ್ಕ ಜೋಡಣೆ ವ್ಯವಸ್ಥೆಯನ್ನು ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ಕಡಿಯಾಳಿ ಯ ಅಶ್ವಥ್ ದೇವಾಡಿಗ ನಿರ್ವಹಿಸಿರುತ್ತಾರೆ.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕುಂಜಾರುಗಿರಿಯ ಗಿರಿಬಳಗ (ರಿ) ಇದರ 32ನೆಯ ವಾರ್ಷಿಕೋತ್ಸವ

ಕುಂಜಾರುಗಿರಿಯ ಗಿರಿಬಳಗ (ರಿ) ನ 32ನೆಯ ವಾರ್ಷಿಕೋತ್ಸವವು ಕುಂಜಾರುಗುರಿ ಶ್ರೀ ದುರ್ಗಾದೇವಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಭೆಯಲ್ಲಿ ಭಾಗವಹಿಸಿ, ಇಂದಿನ ಮಕ್ಕಳು ಜೀವನದಲ್ಲಿ ದಾರಿ ತಪ್ಪುತ್ತಿರುವುದು ಬೇಸರದ...

ಮಾಸ್ಟರ್ ಪ್ಲಾನ್ ಗೆ ವೇಗ, ಜನಸ್ನೇಹಿ ಆಡಳಿತಕ್ಕೆ ನಿರ್ಧಾರ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಿರ್ಣಯ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಸಾಮಾನ್ಯ ಸಭೆಯಲ್ಲಿ ಕೋವಿಡ್ ಕಾರಣದಿಂದ ವಿಳಂಬವಾಗುತ್ತಿರುವ ಮಾಸ್ಟರ್ ಪ್ಲಾನಿಗೆ ವೇಗ ನೀಡಲು, ಸಾರ್ವಜನಿಕರಿಗೆ ತಮ್ಮ ಅರ್ಜಿ ಸ್ಥಿತಿಗತಿ ಮಾಹಿತಿ ನೀಡುವ ನೂತನ ಸಾಫ್ಟವೇರ್ , ಪ್ರಾಧಿಕಾ ರದ ವ್ಯಾಪ್ತಿಯಲ್ಲಿ...

ವಿಪ್ರ ಸಂಘಟನೆಗಳು ಆಶಕ್ತರು, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ~ ವಾಸುದೇವ ಅಡೂರು

ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನ ದಲ್ಲಿ ಜರುಗಿತು. ಎಸ್ ಎಸ್ ಎಲ್ ಸಿ, ಪಿ ಯು ಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಮುಖ್ಯ ಅತಿಥಿ...

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ 

ಕುಂಜಾರುಗಿರಿ ಕುರ್ಕಾಲು ನಿವಾಸಿ ರಾಜೀವಿ ಬಿ. ಶೆಟ್ಟಿ (93 ವ.)  ಶನಿವಾರ ದಂದು ನಿಧನರಾಗಿರುತ್ತಾರೆ. ಇವರು ಸ್ವಾತಂ​ತ್ರ್ಯ ಹೋರಾಟಗಾರ ದಿ| ಕುರ್ಕಾಲು ಗಣಪಯ್ಯ ಶೆಟ್ಟರ ಮಗಳು, ಮೂಳೂರು ಬೈಲುಮನೆ ಶತಾಯುಷಿ ದಿ| ಬಾಬು ಶೆಟ್ಟಿಯವರ...
error: Content is protected !!