ಕೋವಿಡ್ ಹೆಲ್ಪ್ ಡೆಸ್ಕ್ ಅಂಬಲಪಾಡಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಉಡುಪಿ: ಕೋವಿಡ್-19 ಹೆಲ್ಪ್ ಡೆಸ್ಕ್ ಅಂಬಲಪಾಡಿ ವತಿಯಿಂದ ಅಂಬಲಪಾಡಿ ನಗರ, ಅಂಬಲಪಾಡಿ ಗ್ರಾಮಾಂತರ, ಕಪ್ಪೆಟ್ಟು ಮತ್ತು ಮೂಡನಿಡಂಬೂರು ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ದಾನಿಗಳು ನೀಡಿದ ಆಹಾರ ಧಾನ್ಯಗಳ ಕಿಟ್ ಗಳನ್ನು ಅಂಬಲಪಾಡಿ ಯುವಕ ಮಂಡಲ ಕಛೇರಿಯಲ್ಲಿ ವಿತರಿಸಲಾಯಿತು.

ಈ ವೇಳೆ ಕೋವಿಡ್ ಹೆಲ್ಪ್ ಡೆಸ್ಕ್ ಅಂಬಲಪಾಡಿ ಕೇಂದ್ರದ ಪ್ರಾರಂಭ ಹಂತದಲ್ಲಿ ಸಕ್ರಿಯವಾಗಿದ್ದ ಸುಮಾರು 50ಕ್ಕೂ ಮಿಕ್ಕಿ ಕೋವಿಡ್ ಪ್ರಕರಣಗಳು ಶೂನ್ಯದತ್ತ ಸಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಕಿದಿಯೂರು ಅವರ ಮನೆಗೆ ತೆರಳಿ ಆಹಾರ ಧಾನ್ಯಗಳ ಕಿಟ್ ಹಸ್ತಾಂತರಿಸಲಾಯಿತು.

ಉಡುಪಿ ನಗರ ಆರಕ್ಷಕ ಠಾಣೆಯ ಸಹಾಯಕ ಉಪ ನಿರೀಕ್ಷಕ ಜಯಕರ್ ಐರೋಡಿ, ದಾನಿಗಳಾದ ಬಾಳಿಗಾ ಫಿಶ್ ನೆಟ್ಸ್ ಜನರಲ್ ಮೆನೇಜರ್ ಚಂದ್ರಶೇಖರ್ ಸುವರ್ಣ, ಶೈಲಜಾ ಚಂದ್ರಶೇಖರ್,ಯುವಕ ಮಂಡಲ ಅಧ್ಯಕ್ಷ ಹರೀಶ್ ಪಾಲನ್,ಗೌರವಾಧ್ಯಕ್ಷ ಕೀರ್ತಿ ಶೆಟ್ಟಿ, ಮಾಜಿ ಗೌರವಾಧ್ಯಕ್ಷ ಜಗದೀಶ್ ಕೆದ್ಲಾಯ,ಅಂಬಲಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಯೋಗೀಶ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಎ.ಶಿವಕುಮಾರ್,ಗ್ರಾ.ಪಂ. ಸದಸ್ಯ ರಾಜೇಶ್ ಸುವರ್ಣ, ಮಾಜಿ ಗ್ರಾ.ಪಂ. ಸದಸ್ಯ ಜಗದೀಶ್ ಆಚಾರ್ಯ,ಬುಡೋಕಾನ್ ಕರಾಟೆ ಅಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ವಾಮನ್ ಪಾಲನ್, ಕೋವಿಡ್ ಹೆಲ್ಪ್ ಡೆಸ್ಕ್ ಕೇಂದ್ರದ ವಿವಿಧ ವಿಭಾಗ ಪ್ರಮುಖರಾದ ಪ್ರಶಾಂತ್ ಕೆ.ಎಸ್, ಭರತ್ ರಾಜ್ ಕೆ.ಎನ್, ಸತೀಶ್ ಭಂಡಾರಿ, ಶಿವರಾಮ್ ಪೂಜಾರಿ ಹಾಗೂ ಆಶಾ ಕಾರ್ಯಕರ್ತೆಯರಾದ ಸರಸ್ವತಿ ಕೆ. ಶ್ರೀಯಾನ್, ಗ್ರಾಯತ್ರಿ, ನಿಶಾ ಕಿದಿಯೂರು, ಆಟೋ ಚಾಲಕ ಶ್ರೀನಿವಾಸ್ ಕಪ್ಪೆಟ್ಟು ಉಪಸ್ಥಿತರಿದ್ದರು.

 

 
 
 
 
 
 
 

Leave a Reply