ಆರೋಗ್ಯ ಪಾಲನೆ ಪ್ರತಿಯೊಬ್ಬ ನಾಗರಿಕನ​ ಮೂಲಭೂತ ಕರ್ತವ್ಯ.~ ಡಾ|ನಿ.ಬೀ. ವಿಜಯ ಬಲ್ಲಾಳ್

ಡಾ| ನಿ.ಬೀ. ವಿಜಯ ಬಲ್ಲಾಳ್ ಒಂದು ಕಾಲದಲ್ಲಿ ಕಾಡು ಗುಡ್ಡೆಯಂತಿದ್ದ ಮಣಿಪಾಲ ಇಂದು ಅಂತರಾಷ್ಟ್ರೀಯ  ಶಿಕ್ಷಣ ನಗರಿ. ವಿನೂತನ ತಂತ್ರಜ್ಞಾನದ ಮೂಲಕ ಅತ್ಯುತ್ತಮ ವೈದ್ಯಕೀಯ ಸೇವೆ​ ಒದಗಿಸುವಲ್ಲಿ ಮಣಿಪಾಲದ ಕೊಡುಗೆ ಅನನ್ಯ.

ಆರೋಗ್ಯ ಪಾಲನೆ ಪ್ರತಿಯೊಬ್ಬ ನಾಗರಿಕನ​ ಮೂಲಭೂತ ಕರ್ತವ್ಯ. ನಿತ್ಯ ವ್ಯಾಯಾಮ,​ ಮಿತ ಆಹಾರ, ಶಿಸ್ತುಬದ್ಧ ದಿನಚರಿ ಹಾಗೂ​ ನಿಯಮಿತ ಆರೋಗ್ಯ ತಪಾಸಣೆ ಆರೋಗ್ಯದ​ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ​ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು​ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ,ಬುಡೋ ಕಾನ್ ಕರಾಟೆ ಎಂಡ್ ​ಸ್ಪೋರ್ಟ್ಸ್ ​ಅಸೋಸಿಯೇಶನ್ ಗೌರವಾಧ್ಯಕ್ಷ ಡಾ| ನಿ.ಬೀ.​ ವಿಜಯ ಬಲ್ಲಾಳ್ ಹೇಳಿದರು.

ಅವರು ರವಿವಾರ ಶ್ರೀ ಜನಾರ್ದನ ಮತ್ತು​ ಮಹಾಕಾಳಿ ದೇವಸ್ಥಾನ ಅಂಬಲಪಾಡಿ, ಬುಡೋಕಾನ್​ ಕರಾಟೆ ಎಂಡ್  ​ಸ್ಪೋರ್ಟ್ಸ್   ಅಸೋಸಿಯೇಶನ್​ ಇವರ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ​ ಮಣಿಪಾಲ ಮತ್ತು ಅಭಯ ಹಸ್ತ ಹೆಲ್ಪ್ಲೈನ್​ ಉಡುಪಿ ಇವರ ಸಹಯೋಗದೊಂದಿಗೆ ಅಂಬಲಪಾಡಿ​ ದೇವಳದ ಜನಾರ್ದನ ಮಂಟಪದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ​ ಶಿಬಿರ ಮತ್ತು ಆರೋಗ್ಯ ಜಾಗೃತಿ ಮಾಹಿತಿಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಣಿಪಾಲ್​ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ ಮತ್ತು​ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್​ ಇದರ ಡೀನ್ ಡಾ| ಜಿ.ಅರುಣ್ ಮಯ್ಯ ಮಾತನಾಡಿ,​ ರಕ್ತದಾನ ಜೀವದಾನಕ್ಕೆ ಸಮಾನ. ಜನತೆ​ ಸ್ವಯಂ ಪ್ರೇರಿತರಾಗಿ ರಕ್ತದಾನ​ ಪ್ರಕ್ರಿಯೆಯಲ್ಲಿ ಭಾಗವಹಿಸಿದಾಗ ರಕ್ತದಕೊರತೆ ನೀಗಿಸಲು ಸಾಧ್ಯ.
ಯಾಂತ್ರಿಕ ಜೀವನ​ ಮತ್ತು ಅಪರಿಮಿತ ಆಕಾಂಕ್ಷೆಗಳು ಒತ್ತಡದ​ ಬದುಕಿಗೆ ಕಾರಣ. ಸೂಕ್ತ ಸಮಯದಲ್ಲಿಆರೋಗ್ಯದ ತಪಾಸಣೆ, ಆರೋಗ್ಯ ಜಾಗೃತಿ​ ಮಾಹಿತಿಗಳು ಇಂದಿನ ಅಗತ್ಯತೆ. ಶುಚಿತ್ವ,​ ಮಾಸ್ಕ್ ಧಾರಣೆ ಹಾಗೂ ಸಾಮಾಜಿಕ ಅಂತರ​ ಕಾಯ್ದುಕೊಳ್ಳ್ಳುವ ಮೂಲಕ ಕೊರೋನಾ​ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ​ ಜೋಡಿಸೋಣ ಎಂದರು.​ 

ಮುಖ್ಯ ಅತಿಥಿಗಳಾದ ಕಸ್ತೂರ್ಬಾ ಆಸ್ಪತ್ರೆ​ ರಕ್ತ ಕೇಂದ್ರ ಮಣಿಪಾಲ ಇದರ ನಿರ್ದೇಶಕಿ​ ಡಾ| ಶಮೀ ​ಶಾಸ್ತ್ರೀ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ​ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಉಡುಪಿ ಜಿಲ್ಲಾ ಕರಾಟೆ​ ಶಿಕ್ಷಕರ ಸಂಘ(ರಿ.) ಅಧ್ಯಕ್ಷ ರವಿ ಸಾಲ್ಯಾನ್​ ಪಡುಕರೆ ಮಾತನಾಡಿದರು.

ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಅಧ್ಯಕ್ಷ​ ಗೋಪಾಲ್ ಸಿ. ಬಂಗೇರ, ಬುಡೋಕಾನ್ ಕರಾಟೆ​ ಎಂಡ್  ​ಸ್ಪೋರ್ಟ್ಸ್   ಅಸೋಸಿಯೇಶನ್ ಅಧ್ಯಕ್ಷ​ ಹಾಗೂ ಕರಾಟೆ ಮುಖ್ಯ ಶಿಕ್ಷಕ ವಾಮನ್ ಪಾಲನ್​ ಅಂಬಲಪಾಡಿ, ಬಿರುವೆರ್ ಕುಡ್ಲ(ರಿ.) ಉಡುಪಿ ಘಟಕ​ ಅಧ್ಯಕ್ಷ ಕಿಶೋರ್ ಕುಮಾರ್, ಚೈತನ್ಯ​ ಸೋಷಿಯಲ್ ವೆಲ್ಫೇರ್ ಫೌಂಡೇಶನ್(ರಿ.).

ಮೆನೇ​ಜಿಂಗ್ ಟ್ರಸ್ಟಿ ಸುನಿಲ್ ಸಾಲ್ಯಾನ್ ಕಡೆಕಾರ್,​ ಯುವಕ ಮಂಡಲ(ರಿ.) ಹಿರಿಯರ ವೇದಿಕೆ​  ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್ ಕಪ್ಪೆಟ್ಟು,​ ಅಂಬಲಪಾಡಿ ಗ್ರಾಮ ಪಂಚಾಯತ್ ಮಾಜಿ​ ಉಪಾಧ್ಯಕ್ಷ ಶಿವಕುಮಾರ್ ಅಂಬಲಪಾಡಿ, ಬಿಲ್ಲವ​ ಸೇವಾ ಸಂಘ(ರಿ.) ಕಡೆಕಾರು ಕಾರ್ಯದರ್ಶಿ​ ಸುರೇಂದ್ರ ಪೂಜಾರಿ, ಸ್ವಸ್ತಿ ಕ್ರಿಕೆಟರ್ಸ್ ಅಂಬಲಪಾಡಿ ಅಧ್ಯಕ್ಷ ಅಜಿತ್ ಕುಮಾರ್ ಕಪ್ಪೆಟ್ಟು.​ ಉಪಸ್ಥಿತರಿದ್ದರು.


ಬುಡೋಕಾನ್ ಕರಾಟೆ ಎಂಡ್  ​ಸ್ಪೋರ್ಟ್ಸ್   ಅಸೋಸಿಯೇಶನ್ ಉಪಾಧ್ಯಕ್ಷೆ ದಿವ್ಯಾ ಹೆಚ್.​ ಸ್ವಾಗತಿಸಿ, ಕಾರ್ಯದರ್ಶಿ ಮೇಘಾ ವಂದಿಸಿದರು.​ ​ಸಂಘಟನಾ  ಕಾರ್ಯದರ್ಶಿ ಪವನ್ ಕುಮಾರ್​ ಕಾರ್ಯಕ್ರಮ ನಿರೂಪಿದರು.​
 
 
 
 
 
 
 
 
 
 
 

Leave a Reply