ರೋಟರಿ ಜಿಲ್ಲಾ ಇಂಟರಾಕ್ಟ ಅಧಿವೇಶನ ಮತ್ತು ಜಿಲ್ಲಾ ಪ್ರತಿನಿಧಿ ಪದಗ್ರಹಣ ಸಮಾರಂಭ

ಉಡುಪಿ:  ರೋಟರಿ ಜಿಲ್ಲಾ 3182ರ ಇಂಟರಾಕ್ಟ ಅಧಿವೇಶನ ಶಾರದಾ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆಯಿತು. ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ ಭಟ್ ಉಧ್ಘಾಟಿಸಿ ಈ ಕೊರೊನಾ ಸಂದಿಗ್ದ ಪರಿಸ್ಥಿತಿಯಲ್ಲಿ ಶಾಲೆಗಳು ಪ್ರಾರಂಭವಾಗಿಲ್ಲದಾಗ್ಯೂ ಇಂಟರಾಕ್ಟನ್ನು ಸಕ್ರೀಯವಾಗಿ ಇಡುವರೇ ಈ ಅಧಿವೇಶನ ಉಪಯುಕ್ತವಾಗಲಿ ಎಂದು ಹಾರೈ ಸಿದರು. 
ಜಿಲ್ಲಾ ಇಂಟರಾಕ್ಟ ಪ್ರತಿನಿಧಿಯಾಗಿ ಶಾರದಾ ರೆಸಿಡೆನ್ಸಿಯಲ್ ಶಾಲೆಯ ಜೀವನ್ ಗೌಡರ ಪದಗ್ರಹಣವನ್ನು ರೋಟರಿ ಗವರ್ನರ್ ನೆರವೇರಿಸಿ ಕೊಟ್ಟರು. ಮುಖ್ಯ ಭಾಷಣಕಾರ ಮಾಜಿ ರೋಟರಿಗವರ್ನರ್ ಮತ್ತು ವಲಯ ಪಬ್ಲಿಕ್ ಇಮೇಜ್ ಕೋ ಆರ್ಡಿನೇಟರ್  ಅಭಿನಂದನ ಶೆಟ್ಟಿಯವರು ಇಂಟರಾಕ್ಟ ದ್ಯೆಯೋದ್ದೇಶಗಳನ್ನು ವಿವರಿಸಿ ಪ್ರಸಕ್ತ ಪರಿಸ್ಥಿತಿಯಲ್ಲಿ ರೋಟರಿ ಕ್ಲಬ್ ಗಳ ಬಾದ್ಯತೆಗಳ ಬಗ್ಗೆ ವಿವರಿಸಿದರು. 
ಸಂಪನ್ಮೂಲ ವ್ಯಕ್ತಿ, ಶಾರದಾ ರೆಸಿಡೆನ್ಸಿಯಲ್ ಶಾಲೆಯ ಪ್ರಾಂಶುಪಾಲ ರೋ. ವಿದ್ಯಾವಂತ ಆಚಾರ್ಯ  ವಿದ್ಯಾರ್ಥಿಗಳ ಮುಂದಿರುವ ಸವಾಲುಗಳು ಮತ್ತು ಅವುಗಳನ್ನು ನಿಭಾಯಿಸುವ ಬಗ್ಗೆ ವಿವರಿಸಿದರು.  
ಜಿಲ್ಲಾ ಯುವಸೇವೆ ನಿರ್ದೇಶಕ  ಮಾಜಿ ಗವರ್ನರ್ ಡಿ ಎಸ್ ರವಿ, ನಿಯೋಜಿತ ಗವರ್ನರ್ ಗಳಾದ ಎಂ.ಜಿ. ರಾಮಚಂದ್ರ ಮೂರ್ತಿ  ಮತ್ತು  ಡಾ. ಗೌರಿಯವರು ಅಧಿವೇಶನಕ್ಕೆ ಶುಭಹಾರೈಸಿದರು.  ಈ ಅಧಿವೇಶನದಲ್ಲಿ ರೋಟರಿ ಜಿಲ್ಲೆಯ ವಿವಿದ ಕ್ಲಬ್ ಗಳ ಸದಸ್ಯರುಗಳು ಮತ್ತು ಇಂಟರಾಕ್ಟ ಸದಸ್ಯರು ಬಾಗವಹಿಸಿದ್ದರು.
ಉಡುಪಿ ರೋಟರಿ ಪ್ರಾಯೋಜಿತ ಇಂಟರಾಕ್ಡ ಕ್ಲಬ್ ಗಳ ಪದಗ್ರಹಣವನ್ನು ರೋಟರಿ ಗವರ್ನರ್  ರಾಜಾರಾಮ ಭಟ್ ನೇರವೇರಿಸಿ ಶುಭ ಹಾರೈಸಿದರು. ರೋಟರಿ ಉಡುಪಿ ಅಧ್ಯಕ಼ೆ ರಾದಿಕಾ ಲಕ಼್ಮಿನಾರಾಯಣ ರವರು ಸ್ವಾಗತಿಸಿದ ನಂತರ ಜಿಲ್ಲಾ ಇಂಟರಾಕ್ಟಸಭಾಪತಿ ರಾಮಚಂದ್ರ ಉಪಾಧ್ಯಾಯ ಪ್ರಸ್ತಾವಿಸಿದರು   ರೋಟರಿ ಉಡುಪಿ ಕಾರ್ಯದರ್ಶಿ ದೀಪಾ ಭಂಡಾರಿ ನಿರೂಪಿಸಿ  ದನ್ಯವಾದವಿತ್ತರು.   
 
 
 
 
 
 
 
 
 
 
 

Leave a Reply