ಗ್ರಾಮಾಭಿವೃದ್ಧಿ ಯೋಜನೆ (ರಿ) ಬಿ.ಸಿ.ಟ್ರಸ್ಟ್ ಕೊಕ್ಕರ್ಣೆ ವಲಯದಿಂದ ಲಾಭಂಶ ವಿತರಣೆ

ಶ್ರೀ  ಕ್ಷೇತ್ರ  ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್  ಬಿ.ಸಿ.ಟ್ರಸ್ಟ್  ಬ್ರಹ್ಮಾವರ ತಾಲ್ಲೂಕು ಕೊಕ್ಕರ್ಣೆ ವಲಯದ ಸೂರಾಲು, ಪೇಜಾಮಂಗುರ್ ಕಾರ್ಯ ಕ್ಷೇತ್ರಗಳ  ಸಂಘಗಳಿಗೆ ಲಾಭoಶ  ವಿತರಣೆ  ಕಾರ್ಯಕ್ರಮ  ಹಮ್ಮಿಕೊಂಡಿದ್ದು, ಒಟ್ಟು ಬ್ರಹ್ಮಾವರ ತಾಲೂಕಿನಲ್ಲಿ  2215 ಸಂಘಗಳಲ್ಲಿ  8.50 ಕೋಟಿ ಲಾಭoಶ  ಇದ್ದು ಕೊಕ್ಕರ್ಣೆ ವಲಯದಲ್ಲಿ 293 ಸಂಘದಲ್ಲಿ  90 ಲಕ್ಷ  ಲಾಭoಶ  ನೀಡಲಿದ್ದಾರೆ. 

ಗುರುವಾರದಂದು ಸಾಂಕೇತಿಕವಾಗಿ 12 ಸಂಘಗಳಿಗೆ ಇವತ್ತು  4,69,282 ರೂಪಾಯಿ ಲಾಭoಶವನ್ನು ನೀಡುವ ಸಮಾರಂಭವನ್ನು ಗಣೇಶ್  ಕಲಾಮಂದಿರ  ಕೊಕ್ಕರ್ಣೆಯಲ್ಲಿ ನಿವೃತ ಮುಖ್ಯೋಪಾಧ್ಯಾಯರು ಡಾ.ಡಿ. ವೀರೇಂದ್ರ  ಹೆಗ್ಗಡೆ ಅಭಿಮಾನಿ ಬಳಗದ  ಅಧ್ಯಕ್ಷರು  ಅದ ಸಂಜೀವ ಪೂಜಾರಿ ಇವರು  ಉದ್ಘಾಟಿಸಿದರು. 
ಬೇರೆ ಯಾವ ಸಂಘ ಸಂಸ್ಥೆ ಗಳು ಇಲ್ಲಿಯವರೆಗೆ ಲಾಭoಶವನ್ನು ನೀಡಿದ ಬಗ್ಗೆ ಮಾಹಿತಿ ಇಲ್ಲ. ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯವರು ದೊಡ್ಡ ಮೊತ್ತದ ಲಾಭoಶಗಳನ್ನು ನೀಡುತಿರು ವುದು  ಅಭಿನಂದನಾರ್ಹ ವಿಷಯ. ಸದಸ್ಯರುಗಳು ಈ ಮೊತ್ತವನ್ನು ಒಳ್ಳೆಯ ಉದ್ದೇಶಕ್ಕೆ ವಿನಿಯೋಗಿಸಿ ಎಂದರು. 
ವಲಯ ಒಕ್ಕೂಟದ ಅಧ್ಯಕ್ಷೆ ಸುಜಾತಾರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿ ದರು. ಈ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿ ಗಳಾಗಿ ಗ್ರಾಮ ಪಂಚಾಯತ್  ಸದಸ್ಯ ಪ್ರಜ್ವತ್, ಕೊಕ್ಕರ್ಣೆ ವಲಯದ ಮೇಲ್ವಿಚಾರಕ ಬಿನೋಯ್ ಸೇವಾ ಪ್ರತಿನಿಧಿಗಳಾದ  ಯಶೋಧ, ಸಂದ್ಯಾ ಉಪಸ್ಥಿರಿದ್ದರು. ಕೊಕ್ಕರ್ಣೆ ವಲಯ ಮೇಲ್ವಿಚಾರಕ ಬಿನೋಯ್ ಕಾರ್ಯಕ್ರಮ ನಿರೂಪಿಸಿದರು. ಸೂರಾಲು  ಸೇವಾ ಪ್ರತಿನಿಧಿ ಯಶೋಧ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ವಿನೋಧಾ ವಂದಿಸಿದರು.
 
 
 
 
 
 
 
 
 
 
 

Leave a Reply