ಇತ್ತಿಚೆಗೆ ಮಾದಕ ಡ್ರಗ್ಸ್ ವ್ಯಸನದ ಬಗ್ಗೆ ಬಹಳಷ್ಟು ಚಚೆ೯ ಯಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವಾರು ನಗರದಲ್ಲಿ ಇದರ ಜಾಲದ ಬಗ್ಗೆ ಹಾಗೂ ಚಿತ್ರರಂಗದಲ್ಲಿ ಇದರ ವ್ಯಾಪಕತೆಯ ಕುರಿತು ಮಾಧ್ಯಮಗಳಲ್ಲಿ ಬಹಳಷ್ಟು ವಿಸ್ತ್ರತ ಚಚೆ೯ ಯಾಗುತ್ತಿರು ವುದನ್ನು ನಾವು ನೋಡುತ್ತಿದ್ದೆವೆ. ಮಾದಕತೆಯ ಹೆಸರಿನಲ್ಲಿ ನಡೆಯುವ ಈ ವ್ಯವಸ್ಥಿತ ಜಾಲದ ಬಗ್ಗೆ ತನಿಖೆ ನಡೆಯಬೇಕಾಗಿದೆ. ಈ ಜಾಲದ ಕಪಿ ಮುಷ್ಠಿಗೆ ದಾಸರಾಗುತ್ತಿರುವವಲ್ಲಿ ಹೆಚ್ಚಿನವರು ಯುವ ಜನಾಂಗದವರು ಎಂಬುದು ದುರದೃಷ್ಟಕರ. ಅದೇ ರೀತಿ ಮಕ್ಕಳು ಕೂಡ ಮಾದಕ ವ್ಯಸನಕ್ಕೆ ದಾಸರಾಗುತ್ತಿರುವುದು ಬೇಸರದ ವಿಚಾರ.
ಗೆಳೆಯ ಅಥವಾ ಗೆಳತಿಯೊಂದಿಗೆ ಸೇರಿ ಮಕ್ಕಳು ಏನೇನು ಮಾಡುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಪಾಠ ಚನ್ನಾಗಿ ಕಲಿಯುತ್ತಿದ್ದಾ ರೆಯೇ? ಹೆತ್ತವರಲ್ಲಿ ಮಾತನಾಡುವ ಶೈಲಿಯಲ್ಲಿ ವ್ಯತ್ಯಾಸವಾಗಿದೆಯೇ? ಸಂಬಂಧಿಕರೊಳಗಿನ ಬಾಂಧವ್ಯ ಚೆನ್ನಾಗಿದೆಯೇ? ಮುಂತಾದವುಗಳಿಂದ ವ್ಯಸನಿಗಳನ್ನು ತಿಳಿದುಕೊಳ್ಳಬಹುದು. ಮಾರುಹೋದರೆ ಮತ್ತೆ ವಾಸ್ತವಕ್ಕೆ ಮರಳುವುದು ಕಷ್ಟಕರ. ಇಂತಹ ಮಾದಕ ವಸ್ತುಗಳು ತುಂಬಾ ಕಡೆಗಳಲ್ಲಿ ಕಳ್ಳಸಾಗಾಣಿಕೆಯಾಗುತ್ತಿವೆ. ಪೋಲಿಸರು ಕಂಡು ಹಿಡಿದು ವಶಕ್ಕೆ ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೈಗೆ ಸಿಗದೆ ಉಳಿದು ಬಿಡುತ್ತದೆ.
ಗಾಂಜಾ, ಅಫೀಮು ಚರಸ್ ನಂತಹ ಮಾದಕ ವಸ್ತುಗಳ ಶೇಖರಣೆ, ಬಳಕೆ, ಸಾಗಾಣಿಕೆ ಹಾಗೂ ಉತ್ಪಾದನೆ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಯುವ ಜನತೆ ಮನದಟ್ಟು ಮಾಡಿಕೊಳ್ಳಬೇಕು. ಇಂತಹ ಅಪರಾದಕ್ಕೆ ಗರಿಷ್ಠ 10 ವರ್ಷಗಳ ಸೆರೆವಾಸ ಹಾಗೂ ಭಾರೀ ದಂಡ ವಿಧಿಸಲಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಯುವ ಜನಾಂಗ ಮುಂದಾಗಬೇಕಾಗಿದೆ.
ಇಂದಿನ ಯುವ ಜನಾಂಗ ಆರಂಭದಲ್ಲಿ ಸಂತೋಷ ವಿನೋದಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹಾಗಾಗಿ ಯುವಜನತೆ ಜಾಗೃತರಾಗಿರಬೇಕು .ಇಲ್ಲವಾದಲ್ಲಿ ಇದಕ್ಕೆ ದಾಸರಾಗಿ ಬದುಕನ್ನು ಅಂತ್ಯಗೊಳಿಸುವಲ್ಲಿಗೆ ಬರುವ ಸ್ಥಿತಿ ನಿಮಾ೯ಣವಾಗಬಹುದು. ಈ ಬಗ್ಗೆ ವೈದ್ಯರ ಅಭಿಪ್ರಾಯದಂತೆ ಹೇಳುದಾದರೆ, ಡ್ರಗ್ ಅಡಿಷನ್ ಎಂದರೇನು?
ವ್ಯಕ್ತಿಯೊಬ್ಬ ಪ್ರತಿ ನಿತ್ಯ ಮಾದಕ ವಸ್ತುಗಳನ್ನು ಬಳಸುವ ಅನಾರೋಗ್ಯಕರ ಪ್ರವೃತ್ತಿಯನ್ನು ಮಾದಕ ದ್ರವ್ಯ ವ್ಯಸನ (ಡ್ರಗ್ ಅಡಿಷನ್) ಅಥವಾ ಮಾದಕ ವಸ್ತುಗಳ ದುರುಪಯೋಗ ಎನ್ನಬಹುದು. ಈ ರೀತಿಯ ಮಾದಕ ವ್ಯಸನವು ಗಂಭೀರವಾದ, ಭಾವನಾತ್ಮಕ ದೈಹಿಕ ಮತ್ತು ಸಾಮಾಜಿಕ ಸಂಬಂಧಗಳ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಾದಕ ದ್ರವ್ಯ ವ್ಯಸನ ಪ್ರಾರಂಭ ಜೀವನದ ಅಂತ್ಯದ ಸಂಕೇತ: ಮೊದ ಮೊದಲು ಮದ್ಯವನ್ನು ಅಥವಾ ಡ್ರಗ್ಸ್ ನ್ನು ಕುತೂಹಲ ಕ್ಕಾಗಿ ಸೇವಿಸಲು ಆರಂಭಿಸುವಂತೆ, ಜನರು ತಮ್ಮೊಳಗಿನ ಒತ್ತಡವನ್ನು ಶಮನಗೊಳಿಸಲೆಂದೋ, ಸ್ನೇಹಿತರ ಒತ್ತಾಯಕ್ಕೋ, ಶೈಕ್ಷಣಿಕ ಅಥವಾ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದಲೋ, ಸಮಸ್ಯೆಗಳನ್ನು ಮರೆಯಲೆಂದೋ ಮಾದಕ ದ್ರವ್ಯಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಕ್ರಮೇಣ ಡ್ರಗ್ಸ್ ಬಳಕೆಯಿಂದ ಮಿದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಕೆ ಮಾಡುವಂತೆ ಮಾಡುತ್ತದೆ. ಅಂತವರು ಅದರ ಸೇವನೆಯನ್ನು ನಿಯಂತ್ರಣ ಮಾಡಲಾಗದೇ ಹೋಗುತ್ತಾರೆ.
ಮಾದಕ ದ್ರವ್ಯಗಳಿಂದ ಮನುಷ್ಯನ ಮಿದುಳಿನ ಮೇಲೆ ಪರಿಣಾಮ:
ವೈದ್ಯರ ಪ್ರಕಾರ ಹೇಳುದಾದರೆ ಡ್ರಗ್ಸ್ ಸೇವನೆಯಿಂದ ಮನುಷ್ಯನ ಮಿದುಳಿನ ನರಗಳಲ್ಲಿ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ. ಯಾವಾಗ ನೀವು ಮಾದಕ ವಸ್ತುಗಳನ್ನು ಬಳಸುತ್ತಿರೋ ಇದು ಮಿದುಳಿನ ಸಂದೇಶದ ವ್ಯವಸ್ಥೆಯನ್ನು ಪುನರಾವರ್ತಿಸುತ್ತದೆ ಹೀಗೆ ಡೋಪಮೈನ್ ಬಿಡುಗಡೆಯಾಗಿ ಮಿದುಳಿನಲ್ಲಿ ಸಂತೋಷ ಉಂಟಾಗುತ್ತದೆ. ಮಿದುಳು ಮತ್ತೆ ಮತ್ತೆ ಸಂತೋಷಪಡಲು ಬಯಸಿ ಮಾದಕ ದ್ರವ್ಯವನ್ನು ಹೆಚ್ಚು ಹೆಚ್ಚಾಗಿ ಬಳಸುವಂತೆ ಉತ್ತೇಜಿಸುತ್ತದೆ.
ದೀರ್ಘಕಾಲದ ಡ್ರಗ್ಸ್ ಸೇವೆನೆಯು ಮಿದುಳಿನ ಅರಿವಿನ ಕಾರ್ಯಕ್ಷಮತೆಯನ್ನು ಹಾನಿಗೊಳಿಸಬಹುದು. ಅಧ್ಯಯನಗಳು ತಿಳಿಸುವಂತೆ ದೀರ್ಘಕಾಲದ ಡ್ರಗ್ಸ್ ಸೇವನೆಯಿಂದ ಮಿದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ನಿಯಂತ್ರಣ ಮುಂತಾದವುಗಳ ನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆಗೆ ಒಳಗಾಗಬಹುದು. ಅದೇ ರೀತಿ ಇತರ ಸಮಸ್ಯೆಗಳಾದ
* ನಡುಗುವಿಕೆ * ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, * ಮೂರ್ಛೆ ಹೋಗುವುದು * ತೂಕದಲ್ಲಿ ಏರಿಳಿತ
* ಸಾಮಾಜಿಕವಾಗಿ ಕಡೆಗಣಿಸಲ್ಪಡುವುದು * ಅತಿಯಾದ ಅಥವಾ ಅತಿರೇಕದ ಚಟುವಟಿಕೆಗಳು
* ಹೆದರಿಕೆ ಮತ್ತು ತಳಮಳ * ಆತಂಕ ಮತ್ತು ಮತಿ ವಿಕಲ್ಪ.ಉoಟಾಗುತ್ತವೆ.
ಹೆಚ್ಚಿನವಿದ್ಯಾಥಿ೯ಗಳು ಸೇರಿದಂತೆ ಯುವ ಜನಾಂಗ ಕ್ಷಣಿಕ ಸುಖ, ಮಾದಕತೆಗಾಗಿ ತಪ್ಪು ದಾರಿ ಹಿಡಿದು ಸಮಾಜ ಘಾತುಕ ಕಾಯ೯ದಲ್ಲಿ ತೊಡಗಿಕೊಳ್ಳುತ್ತಿರುದನ್ನು ತಡೆ ಹಿಡಿಯಬೇಕಾಗಿದೆ. ಸಕಾ೯ರ ಈ ಡ್ರಗ್ಸ್ ಜಾಲವನ್ನು ಭೇಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಸುಲಭ ರೀತಿಯ ಹಣ ಸಂಪಾದಿಸಲು ಈ ರೀತಿಯ ಕರಾಳ ದಂದೆಗೆ ಇಳಿಯುವವರ ಬಗ್ಗೆ ಕಠಿಣ ಶಿಕ್ಷೆ ನೀಡಬೇಕು.ಈಗಾಗಲೇ ಪಂಜಾಬ್ ರಾಜ್ಯದಲ್ಲಿರುವ ಅತೀ ಹೆಚ್ಚಿನ ಯುವ ಜನಾಂಗ ಈ ರೀತಿಯ ಡ್ರಗ್ಸ್ ಜಾಲಕ್ಕೆ ಒಳಪಟ್ಟಿರು ವುದು ನಮ್ಮ ಮುಂದೆ ದೊಡ್ಡ ಉದಾಹರಣೆಯಾಗಿದೆ. ಭಾರತವು ಪ್ರಪಂಚದಲ್ಲಿ ಅತೀ ಹೆಚ್ಚಿನ ಯುವ ಜನಾಂಗವನ್ನು ಹೊಂದಿದೆ .ದೇಶದ ಅಭಿವೃದ್ಧಿ ಯುವ ಜನಾಂಗದಿಂದ ಮಾತ್ರ ಸಾಧ್ಯ ಹೀಗಾಗಿ ಕೇಂದ್ರ ಸಕಾ೯ರ ಇದರ ಬಗ್ಗೆ ಕಠಿಣ ಕಾನೂನು ಜಾರಿಗೆ ತಂದು ಇದರ ಅಂತ್ಯಮಾಡಬೇಕಾಗಿದೆ.
ರಾಘವೇಂದ್ರ ಪ್ರಭು, ಕವಾ೯ಲು






