ಈ ಯುಗಾದಿ ತರಲಿ ಸಂತಸ ಸಮೃದ್ಧಿಯ ಸವಿಗಾನ~ ~ಪೂರ್ಣಿಮಾ ಜನಾರ್ದನ್

ಈ ಯುಗಾದಿ ತರಲಿ ಸಂತಸ ಸಮೃದ್ಧಿಯ ಸವಿಗಾನ….

ಪ್ರಕೃತಿಯ ಹಸಿರಲಿ ಹೊಸ ಚಿಗುರಲಿ ಮಾರ್ದನಿಸುತ್ತಲಿದೆ ವಸಂತ ಋತುಗಾನ ….

ತನು ಮನಕೆ ನೆಮ್ಮದಿ, ಉತ್ಸಾಹ ತುಂಬುತಲಿದೆ ಕೋಗಿಲೆಯ ಇಂಪಾದ ಕುಹೂ ಗಾನ ….

ಯುಗದ ಆದಿಯ ಸ್ವಾಗತಿಸುತಲಿದೆ ರಂಗಿನ ರಂಗವಲ್ಲಿ , ಮಾವು ಹಲಸಿನ ಹಸಿರು ತೋರಣ…

ಗೇರು , ಕಾಯಿ, ಹೂವು ಹಣ್ಣು, ಹೊಸ ಉಡುಪು ಪಾಯಸದೊಂದಿಗೆ ಕಣಿ‌ ನೋಡುವ ಸಡಗರಕೆ ಜೊತೆಯಾಗಿದೆ ಪಂಚಾಂಗ ಶ್ರವಣ …

ಬೇವು ಬೆಲ್ಲವ ಮೆದ್ದು ಬದುಕಿನಾಟದಲಿ ಕಹಿಯನು ಗೆದ್ದು ಸಿಹಿಯಲ್ಲಿ ಸಂಭ್ರಮಿಸೋಣ‌…

ಶೋಭಕೃತ್ ಸಂವತ್ಸರದ ಶುಭ ಗಳಿಗೆಯಲ್ಲಿ ಶೋಭಾಯಮಾನವಾಗಿರಲಿ ಸರ್ವರ ಜೀವನ ಪಯಣ….

ನೋವುಗಳ ಕಳೆದು ನಲಿವು ಅರಳಿ ನವಚೈತನ್ಯದಿ ಸಂಭ್ರಮಿಸಲಿ ಜೀವನ ಯಾನ…

ಜಗದ ಜನಕೆ ಆರೋಗ್ಯ ಆನಂದ ಸಮೃದ್ಧಿ ನೀಡಲಿ ಯುಗಾದಿಯ ಈ ಸವಿಗಾನ ….

~ಪೂರ್ಣಿಮಾ ಜನಾರ್ದನ್

 
 
 
 
 
 
 
 
 
 
 

Leave a Reply