Janardhan Kodavoor/ Team KaravaliXpress
26 C
Udupi
Thursday, April 22, 2021

ರಂಗಸ್ಥಳದಲ್ಲಿ ರಂಗೇರಿದ ಕರ್ನಾಟಕ ಮಹಿಳಾ ಯಕ್ಷಗಾನ ತಂಡ ~ ಚೈತ್ರ ರಾಜೇಶ್ ಕೋಟ  

ಕಲೆಯನ್ನು ಯಾರು ಕರಗತ ಮಾಡಿಕೊಳ್ಳಲು ಪರಿಶ್ರಮ ಪಡುತ್ತಾರೋ ಅವರ ಸ್ವತ್ತಾಗುತ್ತದೆ. ಭವ್ಯ ಭಾರತದಲ್ಲಿ ಕಲೆಗೆ ಅದರದೇ ಆದ ಬೆಲೆಯಿದೆ, ಬೆಳವಣಿಗೆ ಇದೆ. ಅದರಲ್ಲೂ ನಮ್ಮ ಕರ್ನಾಟಕದ ಕಡಲ ತಡಿಯ ಕರಾವಳಿಯ ‘ಗಂಡು ಕಲೆ’ ಎಂದೇ ಪ್ರಖ್ಯಾತಿ ಗಳಿಸಿ, ವಿಶ್ವಮಾನ್ಯತೆಯನ್ನು ಪಡೆದಿರುವುದು ಯಕ್ಷಗಾನ.

ಬೆಂಗಳೂರಿನಲ್ಲಿ ಬೇರೆ ಬೇರೆ ಭಾಗದ ಜನರು ವಾಸವಾಗಿರುವುದರಿಂದ ಅನೇಕ ಕಲಾಪ್ರಕಾರಗಳ ಬೀಡು ಇದಾಗಿದೆ. ಅದರಲ್ಲಿ ಕರಾವಳಿಯ ಗಂಡು ಕಲೆ ‘ಯಕ್ಷಗಾನ’ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಬೆಂಗಳೂರಿನಂತಹ ದೊಡ್ಡ ನಗರಿಯಲ್ಲಿ ತಮ್ಮ ತಾಯ್ನಾಡಿನ ಕಲೆಯನ್ನು ಎತ್ತಿ ತೋರಿಸುವಲ್ಲಿ ಪಾತ್ರರಾದದ್ದು ‘ಬೆಂಗಳೂರಿನ ಕರ್ನಾಟಕ ಕಲಾ ದರ್ಶಿನಿ’ ತಂಡದ ಸಂಸ್ಥಾಪಕರು, ಯಕ್ಷಗುರುಗಳು ಶ್ರೀನಿವಾಸ ಸಾಸ್ತಾನ್. ಇವರ ಕನಸಿನ ಕೂಸಾದ ಈ ತಂಡವು ದೇಶ-ವಿದೇಶದಲ್ಲೂ ಮಿಂಚಿ, ಹಲವರಿಗೆ ಯಕ್ಷಗಾನದ ಸವಿಯನ್ನುಣಿಸಿದೆ. 
ಶ್ರೀನಿವಾಸ ಸಾಸ್ತಾನ್  ಸಹಕಾರದಲ್ಲಿ, ಇವರ ಪತ್ನಿ  ಕೆ. ಗೌರಿ ಇವರ ನೇತೃತ್ವದಲ್ಲಿ ಮೂಡಿಬಂದ ತಂಡ ಕರ್ನಾಟಕ ಮಹಿಳಾ ಯಕ್ಷಗಾನ(ರಿ) ಬೆಂಗಳೂರು. ಯಕ್ಷಗಾನ ಗಂಡು ಮೆಟ್ಟಿನ ಕಲೆಯಾದರೂ ಇತ್ತೀಚಿನ ದಿನಗಳಲ್ಲಿ ಮಹಿಳಾ ಮಣಿಗಳು ಈ ಕ್ಷೇತ್ರದಲ್ಲಿ ತನ್ನದೇ ಆದ ಹೊಸ ಛಾಪನ್ನು ಮೂಡಿಸಿದ್ದಾರೆ. ಅಂತಹ ನಿಟ್ಟಿನಲ್ಲಿ ಈ ಮಹಿಳಾ ತಂಡವು ದೇಶ-ವಿದೇಶಗಳಲ್ಲೂ ಕಾರ್ಯಕ್ರಮ ಕೊಡುವುದರ ಮೂಲಕ ಜನಮನ್ನಣೆಯನ್ನು ಪಡೆದಿದೆ. 
 
ಹೆಣ್ಣೊಬ್ಬಳು ಗಂಡಿನಂತೆ ವೇಷಭೂಷಣ ಧರಿಸಿ, ಗತ್ತು ಗಾಂಭಿರ್ಯದಿಂದ ಹೆಜ್ಜೆ ಹಾಕಿ, ಮಾತಿನ ಮಂಟಪದ ಮೂಲಕ ಜನರನ್ನು ಆಕರ್ಷಿಸುವಂತೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇಂತಹ ಕೆಲಸವನ್ನು ಈ ತಂಡ ಮಾಡುತ್ತಿದೆ ಎಂದರೂ ಅತಿಶಯೋಕ್ತಿಯಲ್ಲ. ಇದೇ ಫೆಬ್ರವರಿ 28 ರ ಭಾನುವಾರ, ಬೆಂಗಳೂರಿನ ಜೆ.ಸಿ ರಸ್ತೆಯ ನಯನ ಸಭಾಂಗಣದಲ್ಲಿ ಕರ್ನಾಟಕ ಮಹಿಳಾ ಯಕ್ಷಗಾನ(ರಿ) ಬೆಂಗಳೂರು ಮತ್ತು ಕಲಾ ಕುಟೀರ ಬೆಂಗಳೂರು ಇವರು ಪ್ರಸ್ತುತ ಪಡಿಸಿದ ಯಕ್ಷಗಾನ ರಂಗ ಪ್ರಯೋಗ ‘ಜಾಂಬವತಿ ಕಲ್ಯಾಣ & ಮಾಯಾಪುರಿ’ ಪ್ರಸಂಗವು ಬಂದ ಯಕ್ಷ ಪ್ರೇಮಿಗಳ ಮನಸ್ಸನ್ನು ಮುದಗೊಳಿಸಿತ್ತು 
 
ಹೌದು, ಇಳಿಸಂಜೆಯ ತಂಪಿನಲಿ, ಚಂಡೆ- ಮದ್ದಲೆಯ ಝೇಂಕಾರದ ನಡುವೆ ಭಾಗವತರ ತಾಳ ಸುಶ್ರಾವ್ಯ ಹಾಡುಗಾರಿಕೆ, ಜೊತೆಗೆ ವೇಷಭೂಷಣ ತೊಟ್ಟ ಪಾತ್ರಧಾರಿಗಳ ಆಂಗಿಕಾಭಿನಯ, ನೃತ್ಯಾಭಿನಯ ಮತ್ತು ಮಾತುಗಾರಿಕೆಯು ಬಂದ ಯಕ್ಷಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತು.

ಮಾಲಾ ವೆಂಕಟೇಶ್ ಇವರ ತಂಡ ‘ಕಲಾ ಕುಟೀರ’ ಬೆಂಗಳೂರು. ಇದರ ಬಾಲಕಲಾವಿದರಿಂದ ‘ಜಾಂಬವತಿ ಕಲ್ಯಾಣ’ ಎಂಬ ಕಥಾ ಪ್ರಸಂಗವು ಮುದ್ದಾಗಿ, ಮನೋಹರವಾಗಿ ಮೂಡಿಬಂತು. ಎ.ಪಿ. ಪಾಠಕ್ ರ ಭಾಗವತಿಕೆಯಲ್ಲಿ, ರಾಘವೇಂದ್ರ ಬಿಡುವಾಳರ ಮದ್ದಲೆಯ ಸೊಬಗಿಗೆ, ನರಸಿಂಹ ಆಚಾರ್ ರ ಚಂಡೆಯ ಸದ್ದು ಹಿಮ್ಮೇಳದ ಕಳೆಯನ್ನು ದುಪ್ಪಟ್ಟಾಗಿಸಿತು.

ಮುಮ್ಮೇಳದಲ್ಲಿ ಭಾಗವಹಿಸಿದ ವೇದಾಂತ್ ಭಾರಧ್ವಾಜ್, ಸಮೃದ್ ಆಚಾರ್ಯ, ಸ್ಕಂದ ವಿಠಲ್, ಸರಯೂ ವಿಠಲ್, ಕ್ಷಮ ಕೆ, ಹನ್ವಿಕಾ, ದಿತ್ಯಾ ಇವರೆಲ್ಲರೂ ತಮಗೆ ಕೊಟ್ಟ ಪಾತ್ರಕ್ಕೆ ಜೀವ ತುಂಬಿ, ಬಹಳ ಉತ್ಸುಕರಾಗಿ ಕುಣಿದು, ಎಲ್ಲರ ಪ್ರಶಂಸೆಗೆ ಪಾತ್ರರಾದರು. 
 
ಪುಟ್ಟ ಮಕ್ಕಳ ಮಾತಿನ ಶೈಲಿ, ಕುಣಿತದ ಭಂಗಿ, ನೋಡುಗರ ಮನಸೆಳೆದ್ದು ಅಲ್ಲದೆ ಪ್ರಸಂಗದ ಮಧ್ಯ ಮೂಡಿಬಂದ ಹಾಸ್ಯ ಸನ್ನಿವೇಷಗಳು ನೋಡುಗರನ್ನು ನಗೆಕಡಲಲ್ಲಿ ತೇಲಿಸಿತು. ಯಕ್ಷಗಾನ ಕಾರ್ಯಕ್ರಮದ ಸವಿಯನ್ನು ನೋಡಲು ಬಂದ ಕನ್ನಡ & ಸಂಸ್ಕೃತಿ ಇಲಾಖೆಯ ಗೆಜೆಟೆಡ್ ಮ್ಯಾನೇಜರ್ ಆಗಿರುವ ಬಿ.ನಾಗರಾಜ್, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಜೋಗಿಲ ಸಿದ್ದರಾಜು ಹಾಗೂ ಬೆಂಗಳೂರಿನ ಸೃಷ್ಟಿ ಕಲಾವಿದ್ಯಾಲಯದ ಸಂಸ್ಥಾಪಕರಾದ ಛಾಯಾಪತಿ ಕಂಚಿಬೈಲು ಇವರೆಲ್ಲ ನಡೆದ ಕಾರ್ಯಕ್ರಮದ ಅಂದವನ್ನು ಹೊಗಳಿ, ಯಕ್ಷಗಾನದ ಮಹತ್ವವನ್ನು, ಶ್ರೀನಿವಾಸ್ ಸಾಸ್ತಾನ್ ದಂಪತಿಗಳಿಗೆ ಯಕ್ಷಗಾನದ ಮೇಲಿರುವ ಅಪಾರ ಒಲವನ್ನು ಹೇಳಿ, ಅಭಿನಂದಿಸಿದರು. 
 
ತದನಂತರದಲ್ಲಿ ಮೂಡಿಬಂದ ಕರ್ನಾಟಕ ಮಹಿಳಾ ಯಕ್ಷಗಾನದ ತಂಡದ ‘ಮಾಯಾಪುರಿ’ ಎಂಬ ಕಥಾ ಪ್ರಸಂಗವು ರಂಗಸ್ಥಳದ ರಂಗನ್ನು ಹೆಚ್ಚಿಸಿತು. ಈ ಪ್ರಸಂಗದಲ್ಲಿ ಭಾಗವತರಾಗಿ ಮಿಂಚಿದ ವಿನಯ್ ಶೆಟ್ಟಿ, ರಾಜೇಶ್ ಆಚಾರ್ ರ ಮದ್ದಲೆಯ ಝೇಂಕಾರ ಜೊತೆಗೆ ನರಸಿಂಹ ಆಚಾರ್ ರ ಚಂಡೆಯ ಸದ್ದು ಪ್ರಸಂಗ ಮತ್ತಷ್ಟು ಕಳೆಗಟ್ಟುವಲ್ಲಿ ಸಾಕ್ಷಿ ಯಾಯಿತು. ಮುಮ್ಮೇಳದಲ್ಲಿ ಭಾಗವಹಿಸಿದ ಲತಾ ಕೃಷ್ಣಮೂರ್ತಿ, ಆಶಾ ರಾಘವೇಂದ್ರ, ವಿಜಯ ಲತಾ ರಮೇಶ್, ಅಮಿತ, ಅನಿತಾ, ಪವಿತ್ರ, ಶಶಿಕಲಾ, ಶರ್ವಾಣಿ ಹೆಗಡೆ, ಭೂಮಿಕಾ, ದೀಕ್ಷಾ ಭಟ್, ಮೇಘನ, ಸೌಜನ್ಯ ನಾವುಡ, ಶ್ರೀ ರಕ್ಷ, ಮಾನ್ಯ ಇವರೆಲ್ಲ ತಮಗೆ ಕೊಟ್ಟ ಪಾತ್ರಕ್ಕೆತಕ್ಕಂತೆ ಸೊಗಸಾಗಿ ನಿರ್ವಹಿಸಿದ್ದಾರೆ.
 
 ಮುಖವರ್ಣಿಕೆ ಹಾಗೂ ವಸ್ತ್ರಾಲಂಕಾರದಲ್ಲಿ ವಾಸುದೇವ ಹೆಗಡೆ, ಸುರೇಶ್ ತಂತ್ರಾಡಿ, ರಾಜೇಶ್ ಆಚಾರ್, ಸದಾನಂದ ಹೆಗಡೆ, ಕೃಷ್ಣ ಶೆಟ್ಟಿ ತಮ್ಮ ಕೈಚಳಕವನ್ನು ತೋರಿಸಿ, ಸೊಗಸಾಗಿ ವೇಷಭೂಷಣ ಮಾಡುವಲ್ಲಿ ಸಫಲರಾಗಿದರು. ಇವರೆಲ್ಲರ ಸಹಯೋಗದೊಂದಿಗೆ ಅಂದು ನಡೆದ ಎರಡು ಪ್ರಸಂಗಗಳು ಬಂದ ಪ್ರೇಕ್ಷಕರ ಮನ ಸೆಳೆದದ್ದಂತು ನಿಜ.

ಪ್ರಸಂಗಗಳ ಮೂಲಕ ಪೌರಾಣಿಕ ಕಥೆಗಳನ್ನು, ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ, ತಿಳುವಳಿಕೆಯನ್ನು- ಭಾಷಾಭಿಮಾನವನ್ನು ಹೆಚ್ಚಿಸುವ ಮಾಧ್ಯಮವಿದ್ದರೆ ಅದು ‘ಯಕ್ಷಗಾನ’. ಇಂತಹ ಕಲೆಯನ್ನು ಕರಗತ ಮಾಡಿ ಕೊಂಡು, ಅನೇಕ ಯಕ್ಷಗಾನ ಆಸಕ್ತರಿಗೆ ಕಲಿಸುವ ಕೆಲಸ ಮಾಡಿ, ಯಕ್ಷಗಾನ ಕಲೆಯನ್ನು ದೇಶದಾದ್ಯಂತ ಪಸರಿಸುವಲ್ಲಿ ಈ ದಂಪತಿಗಳಿಗೆ ಯಕ್ಷಗಾನದ ಮೇಲಿನ ಅತೀವ ಗೌರವವನ್ನು ಎತ್ತಿ ತೋರಿಸುತ್ತದೆ.

ಯಕ್ಷಗಾನ ಆಸಕ್ತ ವಿದ್ಯಾರ್ಥಿಗಳು ಇವರಲ್ಲಿ ಯಕ್ಷಗಾನ ಕಲಿತು, ನಮ್ಮ ಕರ್ನಾಟಕದ ಕಲೆಯನ್ನು ಬೆಳೆಸುವಲ್ಲಿ ನೀವು ಪಾತ್ರರಾಗಬಹುದು. ಆಸಕ್ತರು ಸಂಪರ್ಕಿಸಬಹುದು  : 9448503817

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಟ್ಟು ದೇವಳದಲ್ಲಿ ರಾಘವನ ಜನನ

ಪಲಿಮಾರು ಮಠ ಪರಂಪರೆಯ ರಾಮ ನವಮಿಯ ಆಚರಣಾ *ಇತಿಹಾಸದಲ್ಲೇ ಮೊದಲ ಬಾರಿಗೆ* ಮಟ್ಟು ದೇವಳದಲ್ಲಿ ಯತಿದ್ವಯರ ಆಶೀರ್ವಾದದೊಂದಿಗೆ *ಶ್ರೀರಾಮ ದೇವರ ರಥೋತ್ಸವ* ಬಹು ವಿಜ್ರಂಭಣೆಯಿಂದ ಜರುಗಿತು. ಈ ಪರ್ವ ಕಾಲದಲ್ಲಿ *ದೇವಳದ ಹಸುವು ಗಂಡು...

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ...

ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ: ಶ್ರೀ ಲಕ್ಷ್ಮಿವರ ತೀರ್ಥರ ಪೂರ್ವಾಶ್ರಮ ಸಹೋದರರಿಂದಲೇ ಆಕ್ಷೇಪ!

ಉಡುಪಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಸಹೋದರನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ನೇಮಕ ದ್ವಂದ್ವ ಮಠವಾದ ಸೋದೆ ಮಠಾಧೀಶ ರಿಂದ ಘೋಷಣೆಯಾಗಿದ್ದು ಇದಕ್ಕೆ ಶ್ರೀ ಲಕ್ಷ್ಮಿವರ ತೀರ್ಥರ...

ವಾರಾಂತ್ಯದಲ್ಲಿ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು – ರಘುಪತಿ ಭಟ್ ಆಗ್ರಹ

ಉಡುಪಿ: ರಾಜ್ಯದಲ್ಲಿ ವಾರಾಂತ್ಯ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದ ದಿನ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಜನ ನಿಗದಿಪಡಿಸಿದ ದಿನದಂದೆ ಅವಕಾಶ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಕೋವಿಡ್ - 19...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ...
error: Content is protected !!