ಇಂದು ವಿಶ್ವ ಪಿಕ್ ನಿಕ್ ಡೇ…ಚೆರ್ನೊಬಿಲ್  ಒಮ್ಮೆ ನೋಡಿ ಬನ್ನಿ!.~ಕಿರಣ್ ಪೈ, 

ಇಂದು, ವರ್ಲ್ಡ್ ಪಿಕ್ ನಿಕ್ ದಿನ, ಗಂಡೆದೆಯ ಪ್ರವಾಸಿಗರಿಗಾಗಿ ಒಂದು ಥ್ರಿಲ್ಲರ್, ಹಾರರ್ ಸ್ಪಾಟ್ ಇದೆ. ಅದೇ ‘ಚೆರ್ನೊಬಿಲ್’. 1986 ರ ಪರಮಾಣು ಅವಘಡ ದ ನಂತರ ಇಲ್ಲಿ ಸಾರ್ವಜನಿಕರ ಪ್ರವೇಶ ಕ್ಕೆ ಸಂಪೂರ್ಣ ನಿಷೇಧ ಹೇರಲಾಗಿತ್ತು.ಕಾಲ ಕ್ರಮೇಣ ಈಗ ನಿಯಮಗಳನ್ನು ಪಾಲಿಸಿ ಪ್ರವೇಶ ನೀಡಲಾಗಿದೆ.
ಅಂದ ಹಾಗೆ ಚೆರ್ನೊಬಿಲ್ ಭಾರತದಿಂದ ಐದು ಸಾವಿರ ಕಿಲೋಮೀಟರ್ ದೂರದ ಉಕ್ರೇನ್ ದೇಶದಲ್ಲಿ. ರಾಜಧಾನಿ ಕಿಯೆವ್ ನಗರದಿಂದ ಎರಡು ತಾಸಿನ ಪ್ರಯಾಣ ನಿಮಗೆ 35 ಕಿಲೋಮೀಟರ್ ವ್ಯಾಪ್ತಿಯ ಚೆರ್ನೊಬಿಲ್  ತಲುಪಿಸುವುದು.
ಇದು ಪ್ರಪಂಚದ ಅಪಾಯಕಾರಿ ಸ್ಥಳಗಳಲ್ಲಿ ಒಂದು, ಇಲ್ಲಿ ಈಗ ಯಾರು ವಾಸ ಮಾಡುತ್ತಿಲ್ಲ, ಮಾಡಲು ಅನುಮತಿ ಇಲ್ಲ.1986 ಚೆರ್ನೊಬಿಲ್ ಅಣು ಸ್ಥಾವರದ ಪರಮಾಣು ಸ್ಪೋಟ ರಷ್ಯಾ,ಯುರೋಪ್ ಇತಿಹಾಸದಲ್ಲೇ ಭೀಕರ ಅವಘಡ ಎಂದು ಉಲ್ಲೇಖಿಸಲಾಗಿದೆ. ಸಾಮಾನ್ಯ ನಗರದಂತೆ ಸುಸಜ್ಜಿತ ಪ್ಲಾಂಟ್, ನಗರ ಒಂದೇ ಕ್ಷಣದಲ್ಲಿ ಸ್ಮಶಾನದಂತೆ ಬದಲಾಯಿತು.
ಚೆರ್ನೊಬಿಲ್ ಥ್ರಿಲಿಂಗ್ ಪ್ರವಾಸಿ ಕೇಂದ್ರ : ವರ್ಷದ 7-8 ತಿಂಗಳು ಮೈನಸ್ ತಾಪಮಾನ ರಕ್ತ ಹೆಪ್ಪುಗಟ್ಟಿಸೋ ಚಳಿ, 2011 ರಲ್ಲಿ ಉಕ್ರೇನ್ ಸರ್ಕಾರ 30 ವರ್ಷಗಳ ಬಳಿಕ, ಪರ್ಯಟನೆ ಹಾಗೂ ಅಧ್ಯಯನಕ್ಕಾಗಿ ಕೆಲವರಿಗೆ ಷರತ್ತು ಬದ್ಧ ಪ್ರವೇಶಕ್ಕೆ ಅನುಮತಿ ನೀಡಿದೆ.
ಹೋಗಲಿಚ್ಚಿಸಿವವರು, ಮೊದಲು ರೆಡಿಯಯೇಷನ್ ಪರೀಕ್ಷೆಗೆ ಒಳಗಾಗ ಬೇಕು, ಫೂಲ್ ಹೆಲ್ತ್ ರಿಪೋರ್ಟ್ ಅತ್ಯಗತ್ಯ. ಇಷ್ಟೆಲ್ಲಾ ಆದ ಮೇಲೆ ಸರಕಾರದ ಮುಚ್ಚಳಿಕೆಯ ಆದೇಶದಂತೆ ಧೂಮ ಪಾನ, ಡ್ರಿಂಕ್ಸ್, ಇತರ ಮಾದಕ ವಸ್ತು ಒಯ್ಯಲು ಅವಕಾಶ ಇಲ್ಲ. ಕೇವಲ ಒಂದು ರಾತ್ರಿ ಉಳಿಯಲು ಅನುಮತಿ ಇದೆ. ವಿವಿಧ ಆಹಾರ, ಉಪಚಾರ ಇತರ ಮೂಲಭೂತ ಸೌಕರ್ಯ ಇಲ್ಲ. ಸದ್ಯ 90 ಹಾಸಿಗೆಯ ಹಾಸ್ಟೆಲ್ ತೆರೆಯಲಾಗಿದೆ.
 
 ಜಗತ್ತಿನ ವಿಜ್ಞಾನದ ವಿದ್ಯಾರ್ಥಿಗಳು, ಯುರೋಪ್, ಆಸ್ಟ್ರೇಲಿಯಾ, ಅಮೆರಿಕ ದ ಪ್ರತಿಷ್ಠಿತ ಸಂಸ್ಥೆಯ ವರದಿಗಾರರು ಇಲ್ಲಿ ಬೇಟಿ ನೀಡುತ್ತಾರೆ. ಇತ್ತೀಚೆಗೆ ಸರಕಾರ  ಅನೇಕ ಯೋಜನೆ, ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸ್ಥಳವನ್ನು ಪುನರ್ ನಿರ್ಮಾಣ ದ ಕಾರ್ಯ ಕೈಗೆತ್ತಿ ಕೊಂಡಿದೆ.
 
ಹಾರರ್ ವ್ಯೂ: ಯುರೋಪ್, ರಷ್ಯಾದ ಬಹುತೇಕ ನಗರಗಳಲ್ಲಿ ಚಳಿಗಾಲದ ಕತ್ತಲು ವಿಶೇಷ ಭಯಾನಕತೆ ಸೃಷ್ಟಿಸುತ್ತದೆ. , ಇಡೀ ನಗರ ಇವತ್ತಿಗೂ ಭಯಾನಕ ದೃಶ್ಯಗಳನ್ನು ಹೊಂದಿದೆ, ಭೂತ ಬಂಗಲೆಯಂತೆ, ಸ್ಪೋಟಗೊಂಡ ಪ್ಲಾಂಟ್, ಹಳೆಯ ವಸತಿ ಸಮುಚ್ಚಯ, ಇತರ ಬಿಲ್ಡಿಂಗ್ ಗಳು, ನೀರವ ಮೌನ, ಭಯ ಹುಟ್ಟಿಸುವುದು ಪಕ್ಕಾ.
 
ಅಲ್ಲಿನ ಒಂದೊಂದು ವಸ್ತು ಒಂದೊಂದು ರೀತಿಯ ಭಯ ಹುಟ್ಟಿಸುವಂತೆ, ನೂರಾರು ಸಾವಿನ ಕಾರಣ  ನಗರವನ್ನು ದೆವ್ವಗಳ ನಗರ ಎಂದು ಕರೆಯುತ್ತಾರೆ. ರಾತ್ರಿ ಭಯಾನಕ,ಕಿರುಚಾಟದ ಶಬ್ದ ಕೇಳಿ ಬರುತ್ತದೆ, ಏನೋ ಒಂದು ತರಹ ವಿಚಿತ್ರ ಭೀಕರ ಅನುಭವ ಎಂದು ಹೋಗಿ ಬಂದವರು ತಮ್ಮ ಬರವಣಿಗೆಯಲ್ಲಿ ಹಂಚಿಕೊಂಡಿದ್ದಾರೆ. 
 
ವಿಜ್ಞಾನ ಮತ್ತು ವಿಮರ್ಶೆ: ವೈಜ್ಞಾನಿಕ ಹಿನ್ನಲೆಯಲ್ಲಿ, ಬ್ರಿಟನ್ ಪರಿಸರ ವಿಭಾಗದ ಖ್ಯಾತ ವಿಜ್ಞಾನಿ ಫ್ರೊಫೆಸರ್ ನಿಕ್ ಬೆರೆಸ್ ಫೋರ್ಡ್ ಪ್ರಕಾರ ಇಲ್ಲಿ ಇಂದಿಗೂ ರೇಡಿಯೋ ವಿಕಿರಣ, ಕೆಮಿಕಲ್ ಮಿಶ್ರಿತ ಅಣುಶಕ್ತಿಯ ಪ್ರಭಾವ ವಾತಾವರಣದಲ್ಲಿ ಅಲ್ಪ ಸ್ವಲ್ಪ ಕಂಡುಬರುತ್ತದೆ. ಒಂದು ವ್ಯಕ್ತಿ ಈ ಪರಿಸರದಲ್ಲಿ ಎರಡಕ್ಕಿಂತ ಹೆಚ್ಚು ದಿನ ಇದ್ದಲ್ಲಿ ಅವರಿಗೆ ವಿಚಿತ್ರ ಅನುಭವ ಉಂಟಾದಂತೆ ಆಗುತ್ತದೆ. ದೆವ್ವ ಭೂತ ಅಲ್ಲಗೆಳೆದು, ವೈಜ್ಞಾನಿಕ ವಾದ ಮಂಡಿಸಿದ್ದಾರೆ.
 
 ಯಾವುದಕ್ಕೂ ಎಂಟೆದೆಯ ಗಟ್ಟಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಪ್ರವಾಸಿ ತಾಣ, ಭೂತ ನೋ, ವೈಜ್ಞಾನಿಕ ಕಾರಣ ನೋ, ಸ್ವಯಂ ಅನುಭವ ಮಾಡೋ ತನಕ ಯಾವುದೇ ನಿಷ್ಕ್ ರ್ಷ್ ಅಸಾಧ್ಯ. ಬೇಗ ಪ್ಲಾನ್ ಮಾಡಿ, ನೋಡಿ ಬರೋಣ…. ಹ್ಯಾಪಿ ಪಿಕ್ ನಿಕ್ ಡೇ ….!
 
 
 
 
 
 
 
 
 

Leave a Reply