ಯುವ ಜನರ ಸ್ಪೂತಿ೯ ಸ್ವಾಮಿ ವಿವೇಕಾನಂದರು~✍️ ರಾಘವೇಂದ್ರ ಪ್ರಭು,ಕವಾ೯ಲು

ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ಕಂಡಾಗ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನನ್ನ ಭರವಸೆಯೆಲ್ಲ ಇಂದಿನ ಯುವ ಪೀಳಿಗೆಯ ಮೇಲೆ ನಿಂತಿದೆ. ಯುವಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ನಾನು ಜನ್ಮತಾಳಿದ್ದೇನೆ.

ಅವರ ವಾಣಿ ಯುವಜನರ ಮೇಲೆ ಅವರು ಇಟ್ಟ ನಂಬಿಕೆಗೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿ ದತ್ತವಾದ ನುಡಿಗಳನ್ನು ನೋಡಿದರೆ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ಈ ಪಾಂಚಜನ್ಯ ಸದೃಶ ವಾಣಿಯು ಮೊಳಗಿ 158 ವರ್ಷಗಳೇ ಕಳೆದಿವೆ. ಆದರೆ ಈ ಭರವಸೆಯ ನುಡಿಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅದೆಷ್ಟರ ಮಟ್ಟಿಗೆ ನಾವು ಸಫಲರಾಗಿದ್ದೇವೆ ಎಂಬುದು ಯೋಚಿಸಬೇಕಾದ ಸಂಗತಿ.

ನಮ್ಮ ಶಿಕ್ಷಣ ನಿಜವಾದ ಶಿಕ್ಷಣವಲ್ಲ: ನಾವು ಯುವಜನಾಂಗಕ್ಕೆ ನೀಡುತ್ತಿರುವ ಶಿಕ್ಷ ಣ ನಿಜವಾದ ಅರ್ಥದಲ್ಲಿ ಶಿಕ್ಷ ಣವೇ ಅಲ್ಲ! ನಿಜವಾದ ವಿದ್ಯಾಭ್ಯಾಸವೇ ಅಲ್ಲ, ಬದಲಾಗಿ ಕೇವಲ ಹೊಟ್ಟೆಪಾಡಿಗೆ ಹಾಗೂ ಸ್ವಾರ್ಥ ಜೀವನಕ್ಕೆ ಸೀಮಿತವಾಗಿರುವ ವಿದ್ಯಾಭ್ಯಾಸ ಎನ್ನಬಹುದು.

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಬಿಯಾಗಿ ಮಾಡಬೇಕು. ನಿಮಗೆ ಶಾಲೆ ಕಾಲೇಜುಗಳಲ್ಲಿ ದೊರೆಯುತ್ತಿರುವ ವಿದ್ಯೆಯಿಂದ ಅಜೀರ್ಣ ರೋಗಗ್ರಸ್ಥರ ಗುಂಪಿಗೆ ಸೇರಿರುವಿರಿ. ನೀವು ಕೇವಲ ಯಂತ್ರದಂತೆ ಕೆಲಸ ಮಾಡುತ್ತಾ ಶುದ್ಧ ಸೋಮಾರಿಗಳಾಗುವಿರಿ? ಎನ್ನುವ ಅವರ ಮಾತು ಇಂದಿಗೂ ಪ್ರಸ್ತುತ.

ಸ್ವಾಮಿ ವಿವೇಕಾನಂದರ ಪ್ರಕಾರ ‘ನಿಜವಾದ ವಿದ್ಯೆ ಎಂದರೆ ಸರ್ವರಲ್ಲಿಯೂ ಅಡಗಿರುವ ಆ ಚೈತನ್ಯವನ್ನು ಅರಿತು ಇಡೀ ವಿಶ್ವವೇ ನಮ್ಮದು’ ಎಂಬ ಉದಾತ್ತ ಭಾವನೆಯಿಂದ ‘ವಿಶ್ವಮಾನವ ತತ್ತ್ವ’ವನ್ನು ಅಳವಡಿಸಿ ಕೊಂಡು ಬಾಳುವುದಾಗಿದೆ’.

ಸ್ವಾಮೀಜಿ ಅವರು ಶಿಕ್ಷ ಣದ ಬಗ್ಗೆ ಮತ್ತೊಂದು ಸಂದೇಶ ನೀಡುತ್ತಾರೆ……’ಶಿಕ್ಷ ಣವೆಂದರೆ ನಿಮ್ಮ ತಲೆಯಲ್ಲಿ ತುಂಬಿಕೊಂಡ ವಿಷಯ ಸಂಗ್ರಹವಲ್ಲ, ರಕ್ತಗತವಾಗದೆ ಅದು ಜೀವಾವಧಿ ಚೆಲ್ಲಾಡುತ್ತಿರುವುದು. ಜೀವನ ವಿಕಾಸಕ್ಕೆ ಸಹಾಯ ಮಾಡುವ ಪುರುಷ ಸಿಂಹರನ್ನು ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ ಭಾವಗಳನ್ನು ರಕ್ತಗತ ಮಾಡಿಕೊಳ್ಳುವಂತಹ ಶಿಕ್ಷ ಣವಿರಬೇಕು’

‘ಭಾರತದ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅನುರಾಗ ಅತ್ಯಪಾರ. ಅವರ ಎದೆಬಡಿತದಲ್ಲಿ ಭಾರತ ಕೇಳಿ ಬರುತ್ತಿತ್ತು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳೆಲ್ಲೆಲ್ಲಾ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ, ಸ್ವತಃ ಅವರೇ ಭಾರತವಾಗಿ ಬಿಟ್ಟಿದ್ದರು.

ಭಾರತದ ಸಾಕಾರ ಮೂರ್ತಿಯೇ ಅವರಾಗಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯತೆ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಅವರು. ಅವರು ಭಾರತವೇ ಆಗಿದ್ದರು’ ಎನ್ನುತ್ತಾರೆ ಸೋದರಿ ನಿವೇದಿತಾ. ನವ ಭಾರತ ನಿಮಿ೯ಸೋಣ. 

ಯುವ ಜನಾಂಗ ಈ ಅಮೃತವಾಣಿಯನ್ನು ಆಲಿಸಿಯಾದರೂ ತಮ್ಮ ದೇಶಪ್ರೇಮ, ದೇಶಭಕ್ತಿಯನ್ನು ವೃದ್ಧಿಪಡಿಸಿ ಕೊಂಡು ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ. ಸ್ವಾಮಿ ವಿವೇಕಾನಂದರು ಈ ನಿಟ್ಟಿನಲ್ಲಿ ಯುವ ಜನತೆಗೆ ತಿಳಿಸಿದ ಸಿಂಹವಾಣಿ ಹೀಗಿದೆ; ‘ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು…’ ಎಂತಹ ಭರವಸೆಯ ನುಡಿಗಳಿವು.

ಆದರೆ ದುರದೃಷ್ಟವಶಾತ್‌ ಈ ತೆರನಾದ ಯುವಶಕ್ತಿಯನ್ನು ನಾವು ಕಾಣುವುದು ವಿರಳ. ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ. ಬನ್ನಿ! ಭಾರತೀಯ ಯುವ ಜನತೆ, ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ, ಈ ದೇಶವೇ ನಮ್ಮ ದೈವವಾಗಿರಲಿ.

ಈ ದೇಶಕ್ಕೆ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಉದ್ದೇಶವಾಗಿರಲಿ, ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ.ಭಾರತ ವನ್ನು ಜಗತ್ತಿನ ಶ್ರೇಷ್ಠ ದೇಶ ವಾಗಿ ಮಾಡೋಣ ಸ್ವಚ್ಚ ಭಾರತಕ್ಕಾಗಿ ಯುವ ಜನಾಂಗ ಒಂದಾಗಬೇಕಾಗಿದೆ. ಬದಲಾಗುವುದು ಈ ದೇಶ ನೀ ಬದಲಾದರೆ ಸರಿಯಾಗುವುದು ಸಮಾಜ ನೀ ಮೊದಲಾದರೆ.

 
 
 
 
 
 
 
 
 
 
 

Leave a Reply