ಮೂಗಿಗೆ ನಿಂಬೆ ರಸ ಹಾಕಿದರೆ ಉಸಿರಾಟದ ಸಮಸ್ಯೆಗೆ ಮುಕ್ತಿ: ಡಾ.ವಿಜಯ ಸಂಕೇಶ್ವರ 

ಹುಬ್ಬಳ್ಳಿ: ಕೊರೊನಾದಿಂದಾಗಿ ರಾಜ್ಯದಲ್ಲಿ ಜನ ಹೇಗೆ ಪರದಾಡುತ್ತಿದ್ದಾರೆ ಅನ್ನೋದನ್ನು ನಾವು ಗಮನಿಸುತ್ತಿ ದ್ದೇವೆ. ಆದ್ರೆ ಈ ಕೊರೊನಾದಿಂದ ಕಾಣಿಸಿಕೊಳ್ಳುವ ಉಸಿರಾಟದ ಸಮಸ್ಯೆಗೆ ನಾವು ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು .ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಚ್ಚರಿಯ ವಿಚಾರವೊಂದನ್ನು ತಿಳಿಸಿ ದ್ದಾರೆ.

 
ನಿಂಬೆ ಹಣ್ಣಿನ ರಸವನ್ನು ಮೂಗಿಗೆ ಹಾಕಿಕೊಳ್ಳುವುದಿಂದ ಅರ್ಧ ಗಂಟೆಯಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬಂದು ಉಸಿರಾಟದ ಸಮಸ್ಯೆ ಸರಿ ಹೋಗುತ್ತದೆ. ಇದನ್ನು ನಾನು, ನನ್ನ ಕುಟುಂಬ ಹಾಗೂ ಸುಮಾರು 200 ಜನರಿಗೆ ಸೂಚಿಸಿದ್ದೆ ಇದರಿಂದ ಪರಿಣಾಮಕಾರಿ ಫಲಿತಾಂಶ ಬಂದಿದೆ ಎಂದು ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಂಬೆ ಹಣ್ಣಿನ ರಸ ಹಾಕಿಕೊಳ್ಳುವುದರಿಂದ ಉತ್ತಮ ಫಲಿತಾಂಶ ಕಂಡಿದ್ದೇನೆ. ದಿನಕ್ಕೆ ಎರಡು ಬಾರಿ 3-4 ಹನಿಗಳನ್ನು ಹಾಕಿಕೊಳ್ಳಬೇಕು. ಹೀಗೆ ಹಾಕಿ ಕೊಳ್ಳುವುದರಿಂದ 30-45 ನಿಮಿಷದಲ್ಲಿ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಕಫ ಹೊರ ಬರಲಿದೆ. ಇದರಂದ ಉಸಿರಾಟದ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರಲಿದೆ‌ ಇದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಿ ಶೇ. 80 ರಷ್ಟು ಆಸ್ಪತ್ರೆ ಹಾಸಿಗೆ ಖಾಲಿಯಾಗಲಿವೆ. ಈ ಮನೆಮದ್ದು ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದಿದ್ದಾರೆ.

 
ಈ ವಿಧಾನವನ್ನು ನಾನು, ನನ್ನ ಕುಟುಂಬ ಸೇರಿದಂತೆ ಸುಮಾರು 200 ಜನರಿಗೆ ಹೇಳಿದ್ದೇನೆ. 30ರಿಂದ 45 ನಿಮಿಷ ದಲ್ಲಿ ಕಫ ಹೊರ ಬಂದು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿದೆ. ಇದನ್ನರಲ್ಲಿ ಅನುಸರಿಸಿದವರು ವಾಪಸ್ಸು ಕರೆ ಮಾಡಿ ಫಲಿತಾಂಶ ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರು ಇದನ್ನು ಅನುಸರಿಸುವು ದರಿಂದ ಆಮ್ಲಜನಕದ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ವಿಧಾನದ ಅನುಸರಿಸುವ ಜತೆಗೆ ವೈದ್ಯಕೀಯ ಸಲಹೆ, ಚಿಕಿತ್ಸೆ ಅನುಸರಿಸಿಬೇಕು ಎಂದರು 

 
 
 
 
 
 
 
 
 
 
 

Leave a Reply