​ಕ್ಯಾಮರಾ ಕೈ ಚಳಕದಲ್ಲಿ ವೀಣಾ ಪಾಣಿಯ ಸುಂದರ ರೂಪ~ಪೂರ್ಣಿಮಾ ಜನಾರ್ದನ್ 

ನವರಾತ್ರಿ ನಾಡಹಬ್ಬ.​ ​ನವರಾತ್ರಿಗಳಲ್ಲಿ ನವ ವಿಧ ರೂಪದಲ್ಲಿ  ಜಗನ್ಮಾತೆಯ ಆರಾಧನೆ ಮಾಡುವುದು ಸಂಪ್ರ ದಾಯ.​ ​ವಿವಿಧ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ  ಅವರ ಅನುಗ್ರಹಕ್ಕೆ ಪಾತ್ರರಾಗುವುದು ಸರ್ವೇ ಸಾಮಾನ್ಯಆದರೆ ಇದೀಗ ದೇವರ ಸನ್ನಿಧಾನಕ್ಕೆ ತೆರಳಲು ಕೋವಿಡ್ 19 ನಿಂದಾಗಿ ಕಷ್ಟಸಾಧ್ಯ. ಅದರೊಂದಿಗೆ ಒಂದಿಷ್ಟು ಕಾನೂನು ಕಟ್ಟಳೆಗಳು‌. ಹಾಗಾಗಿ ಹೆಚ್ಚಿನ ಜನರು​ ಆಶ್ರಯಿಸಿದ್ದು ಫೇಸ್ಬುಕ್ ಸಾಮಾಜಿಕ ಜಾಲ ತಾಣ ಗಳನ್ನು. 

ಅಲ್ಲಿ  ಸಿಗುವ ಹಲವಾರು ಸಂದೇಶಗಳು ಛಾಯಾಚಿತ್ರಗಳನ್ನು ಕಂಡು ಧನ್ಯತೆ ಪಡುವವರ ಸಂಖ್ಯೆ ಹೇರಳ. ಅದರಲ್ಲೂ ಛಾಯಾಗ್ರಹಣ  ಕ್ಷೇತ್ರದಲ್ಲಿ ಛಾಯಾಗ್ರಾಹಕರು ತಮ್ಮ ಕೈಚಳಕದಿಂದ ತಮ್ಮ ಕ್ಯಾಮರಾ​ದ  ಮೂಲಕ ಒಂದು ಅದ್ಭುತ ಲೋಕವನ್ನು ಸೃಷ್ಟಿಸುವ ಸಾಮರ್ಥ್ಯವಿದ್ದವರು.
ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಬಾಲಕೃಷ್ಣ, ಯಶೋದ ಕೃಷ್ಣ, ರಾಧಾಕೃಷ್ಣರ ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣ ಗಳುಗಳು  ಜನರ ಮನಸೆಳೆದ ಪರಿ ಅದ್ಭುತ.​ ​ದ್ವಾಪರಯುಗದ ಕೃಷ್ಣನೇ ಮತ್ತೊಮ್ಮೆ ಬಂದಂತೆ, ರಾಧೆ​ ​ಯೊಂದಿಗೆ  ಪ್ರಣಯದಾಟ ಆಡಿದಂತೆ, ತಾಯಿ ಯಶೋದೆಯೊಂದಿಗೆ ತುಂಟಾಟ ಮಾಡಿದಂತೆ ಭಾಸ ವಾದರೆ, ತುಂಟ ಕೃಷ್ಣರು ಬಾಲಕೃಷ್ಣರು ಎಲ್ಲರ ಮನವನ್ನು ಆಕರ್ಷಿಸಿ​​ದವರು​. ​
 
ಒಟ್ಟಾರೆ ಹೇಳುವುದಾದರೆ ಈಗ ಇದೊಂದು ರೀತಿಯ ಪ್ರವರ್ತಿ (ಟ್ರೆಂಡ್ )ಎಂದೇ ಹೇಳಬಹುದು.​ ​ಒಂದು ಪಾತ್ರಕ್ಕೆ ತಕ್ಕುದಾದ ಚಂದಚಂದದ ವೇಷಭೂಷಣ ತೊಟ್ಟು ಅಂದದ ಮೊಗದ ಯುವಕ-ಯುವತಿಯರು ಭಗವಂತನ ರೂಪ ದಲ್ಲಿ ಕಾಣಿಸಿಕೊಂಡು ಧನ್ಯತೆ ಪಡೆದರೆ ಅವರನ್ನು ಆ ರೂಪದಲ್ಲಿ ನೋಡಿದ ಆಸ್ತಿಕ​ರೂ ಕೂಡ ಕೃತಾರ್ಥಗುತ್ತಾರೆ .
ಇದೀಗ ನವರಾತ್ರಿಯ ಪರ್ವಕಾಲ.​ ​ಜಗಜ್ಜನನಿಯನ್ನು ನವ  ದಿನಗಳಲ್ಲಿ ನವ ರೂಪದಲ್ಲಿ ಅಲಂಕರಿಸಿ ಪೂಜಿಸುವ ಈ ಸಮಯದಲ್ಲಿ ದೇವಿಯ ಒಂದೊಂದು ರೂಪ ಧಾರಣೆಯಲ್ಲಿ ಒಂದೊಂದು ವಿಶೇಷ ಸಂದರ್ಭ. ಅದರಲ್ಲೂ ತಾಯಿ ಶಾರದೆ ಲೋಕ ಪೂಜಿತೆ.ಶಾರದಾ ಪೂಜೆಗೆ ಶಾರದಾಮಾತೆಯ ಸುಂದರವಾದ ಬೃಹತ್ ವಿಗ್ರಹವನ್ನಿಟ್ಟು ಪೂಜಿಸು ವುದು ನಮ್ಮ ಸಂಪ್ರದಾಯ. ಇದೀಗ ಛಾಯಾಗ್ರಾಹಕರ ಕ್ಯಾಮರಾದಲ್ಲಿ ಅವರ ಕೈಚಳಕದಿಂದ ಸೆರೆಹಿಡಿದ ಶಾರದಾ ದೇವಿಯ ರೂಪ ಎಲ್ಲರ ಮನೆಮಾತಾಗಿದೆ. 
 
ನಿಜವಾಗಿಯೂ ವೀಣಾಪಾಣಿ ಶಾರದಾಮಾತೆ ಎದ್ದು​ ​ಬಂದಂತೆ ಅನಿಸುವ ಆ ದಿವ್ಯ ರೂಪಕ್ಕೆ ರೂಪದರ್ಶಿ ಯಾದವರು ಕನ್ನಡ  ಹಾಗು ತೆಲುಗು ಭಾಷೆಯ ಕಿರುತೆರೆ ನಟಿ​ ​ಮೂಲತಃ ಮಂಗ​ಳೂರಿನವರಾದ ಚೈತ್ರ ರೈ.  ​ಅಂತೆಯೇ ಇಂತಹ ಒಂದು ಛಾಯಾಚಿತ್ರವನ್ನು ಸೆರೆಹಿಡಿದವರು ಅಂತರಾಷ್ಟ್ರೀಯ ​ಖ್ಯಾತಿಯ ​ಛಾಯಾಚಿತ್ರ ಗ್ರಾಹಕ, ಸದಾ ಲವಲವಿಕೆ ಹಾಗೂ ಹೊಸತನಗಳಿಂದ ಛಾಯಾಚಿತ್ರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಛಾಯಾಚಿತ್ರ​ಗಾರ  ಅಪುಲ್ ಆಳ್ವ ಇರಾ‌‌​. ​ಚಂದದ ಮುಖಭಾವ ಹೊತ್ತ ಕಲಾವಿದೆಯ ಛಾಯಾಚಿತ್ರಗಳಿಗೆ ಪೂರಕ ವಾದ ಪರಿಸರ, ಭಾವಪೂರ್ಣ  ಮುಖ ಭಾವ, ಅವರನ್ನು ಅಷ್ಟೊಂದು ಅಲಂಕರಿಸಲು ಸಹವರ್ತಿಗಳ ಶ್ರಮ ಎಲ್ಲವೂ ಅಭಿನಂದನೀಯ.
 
ಒಂದು ಜೀವಂತ ಮೂರ್ತಿಯನ್ನು ಕಡೆದು ನಿಲ್ಲಿಸಿದಂತೆ ಕಾಣುವ ಶಾರದೆಯ ಭಾವಭಂಗಿ ಎಲ್ಲರ ಮನದಲ್ಲಿ ಹರ್ಷ ಧಾರೆ ಹರಿಸಿದ್ದು ಸುಳ್ಳಲ್ಲ. ಇಂತಹ ಹಬ್ಬ-ಹರಿದಿನಗಳು ಹೊಸ ಹೊಸ ಪ್ರಯೋಗಗಳಿಗೆ ವೇದಿಕೆ ಆಗಲಿ ಎಂದು ಆಶಿಸುತ್ತಾ  ಅಕ್ಷರ ಮಾಲೆ ಧರಿಸಿದ ಅಕ್ಷರಮಾತೆ ಸರಸ್ವತಿ  ಎಲ್ಲರಿಗೂ ಅಕ್ಷರಧಾರೆಯನ್ನಿತ್ತು ಸಲಹಲಿ​. ​ಎಲ್ಲರ ಮನೆ-ಮನ ಅಕ್ಷರ​ ​ಧಾಮವಾಗಲಿ ಎಂದು ಹಾರೈಸುತ್ತಾ  ಮತ್ತೊಮ್ಮೆ  ನವರಾತ್ರಿಯ ಶುಭಾಶಯಗಳು.

 

 
 
 
 
 
 
 
 
 
 
 

Leave a Reply