ವರ್ತುಲ ~ ದಿನೇಶ ಉಪ್ಪೂರ

ಎಂದಿನಂತೆ ಇವತ್ತು ಕೂಡ ಬೆಳಿಗ್ಗೆ ಮಾಮೂಲಿನಂತೆ ಮಂಗಳೂರಿನ ಆಫೀಸ್ ಗೆ ಹೋಗಲು ರೆಡಿಯಾಗಿ ಇವಳು ತಂದುಕೊಟ್ಟ ಊಟದ ಚೀಲದೊಂದಿಗೆ ಮನೆಯಿಂದ ಹೊರಟೆ. ಗಡಿಬಿಡಿಯಲ್ಲಿ ನನ್ನ ಸ್ಕೂಟರ್ ಲ್ಲಿ ಉಡುಪಿಗೆ ಬಂದು ಅದನ್ನು ಮಾಮೂಲಿನಂತೆ ಸರಕಾರಿ ಆಸ್ಪತ್ರೆಯ ಕಂಪೌಂಡ್ ಬದಿಯಲ್ಲಿ ನಿಲ್ಲಿಸಿ ಬೀಗ ಹಾಕಿ, ಮುದ್ದಣ ಮಾರ್ಗದ ಎಕ್ಸ್ ಪ್ರೆಸ್ ಬಸ್ ನಿಲ್ದಾಣದಲ್ಲಿ ನಿಂತೆ.

ಸ್ವಲ್ಪ ಹೊತ್ತಿಗೆ ಮಂಗಳೂರಿಗೆ ಹೋಗುವ ದುರ್ಗಂಬಾ ಬಸ್ ಬಂತು. ಅವಸರದಲ್ಲಿ ಹತ್ತಿ ಮುಂದಿನ ಎಡ ಬದಿಯ ಎರಡನೆ ಸೀಟಿನಲ್ಲಿ ಕುಳಿತೆ. ಉಡುಪಿಯಿಂದಲೇ ಆ ಬಸ್ ಹೊರಡುವುದರಿಂದ ರಶ್ ಕಡಿಮೆ. ಆದರೆ ಉದ್ಯಾವರ ಕಟಪಾಡಿ ದಾಟುವುದರೊಳಗೆ ಫುಲ್ ಆಗಿಬಿಡುತ್ತದೆ. ನಾನು ಯಾವಾಗಲೂ ಬಸ್ ನ ಎಡಬದಿ ಎರಡು ಸೀಟು ಇರುವಲ್ಲಿ ಹೋಗಿ ಮಧ್ಯದಲ್ಲಿ ಕುಳಿತುಕೊಳ್ಳುವುದು. ಪರಿಚಿತರು ಯಾರಾದರೂ ಕಂಡರೆ ಕಿಟಕಿಬದಿಗೆ ಸರಿದು ಅವರಿಗೆ ಜಾಗ ಮಾಡಿಕೊಡುತ್ತಿದ್ದೆ.

ಆದರೆ ಇವತ್ತು ಬಸ್ ನಲ್ಲಿ ಅಷ್ಟು ಜನ ಇರಲಿಲ್ಲವಾದ್ದರಿಂದ ನನ್ನ ಪಕ್ಕದ ಸೀಟು ಉಡುಪಿ ಬಿಡುವವರೆಗೂ ಖಾಲಿಯಾಗಿಯೇ ಇತ್ತು. ಕಟಪಾಡಿಯಲ್ಲಿ ಒಬ್ಬ ಹೆಂಗಸು ಬಸ್ಸು ಹತ್ತಿ ಬಂದು ನನ್ನ ಪಕ್ಕದಲ್ಲಿಯೇ ನಿಂತದ್ದರಿಂದ ನಾನು ಕಿಟಕಿಯ ಬದಿಗೆ ಸರಿದು ಜಾಗ ಬಿಟ್ಟುಕೊಟ್ಟೆ. ಅವರು ನನ್ನನ್ನೊಮ್ಮೆ ಸರಿಯಾಗಿ ನೋಡಿ ಹೌದೋ ಅಲ್ಲವೋ ಅನ್ನುವ ಹಾಗೆ ನಕ್ಕು ಕುಳಿತುಕೊಂಡರು.

ನಾನೂ ಓರೆಗಣ್ಣಿನಲ್ಲಿ ಅವಳನ್ನು ನೋಡಿದೆ. ತುಂಬಾ ಸ್ಪುರಧ್ರೂಪಿಯಾದ ಹೆಂಗಸು. ಪ್ಯಾಂಟು ಬನಿಯನ್ ಹಾಕಿದ್ದು ಕೂದಲು ಹಿಂದಕ್ಕೆ ಇಳಿಬಿಟ್ಟಿದ್ದಳು. ಹಣೆಯಲ್ಲಿ ಬೊಟ್ಟು ಇರದ್ದರಿಂದ ನೋಡಲು ಮುಸ್ಲಿಂ ಹೆಂಗುಸಿನ ಹಾಗೆ ಇದ್ದಳು. ಬಿಳಿಬಣ್ಣ ನೀಳ ದೇಹ ಕ್ಕಿಂತಲೂ ಅವಳ ದುಂಡುಮುಖ ಹೊಳೆಯುವ ಕಣ್ಣುಗಳೇ ಅವಳ ಆಕರ್ಷಣೆಯಾಗಿತ್ತು. ಆದರೆ ಅವಳು ಕುಳಿತರೂ ಯಾವುದೋ ತೊಂದರೆ ಇದ್ದಂತೆ ಏಕೋ ತುಂಬಾ ಚಡಪಡಿಸುತ್ತಿದ್ದಳು. ಸ್ವಲ್ಪ ಹೊತ್ತು ಮುಂದಿನ ಸೀಟಿಗೆ ಕೈಯಿಟ್ಟು ತಲೆಯಿಟ್ಟು ಮಲಗಿದಳು.

ಮತ್ತೆ ನೇರವಾಗಿ ಕುಳಿತುಕೊಳ್ಳುವಳು. ಅವಳು ಹಚ್ಚಿದ ಸೆಂಟ್ ನ ಗಮಗಮ ಸುತ್ತಲೂ ಹರಡಿತ್ತು. ತೊಡೆಯ ಮೇಲೆ ಒಂದಷ್ಟು ಪುಸ್ತಕ ಮತ್ತು ಅವಳ ವ್ಯಾನಿಟಿ ಬ್ಯಾಗ್ ಇಟ್ಟುಕೊಂಡಿದ್ದರಿಂದ ಅವಳು ಮುಂದಕ್ಕೆ ಹಿಂದಕ್ಕೆ ಸರಿದಂತೆಲ್ಲ ಪುಸ್ತಕಗಳು ಮುಂದಕ್ಕೆ ಜಾರುತ್ತಿತ್ತು. ಒಟ್ಟಿನಲ್ಲಿ ಅವಳ ವರ್ತನೆಯಿಂದ ಆಕೆ ತುಂಬಾ ಸಮಸ್ಯೆಯಲ್ಲಿದ್ದಂತೆ ತೋರುತ್ತಿತ್ತು.

ಆಗಲೇ ಬಸ್ ಫುಲ್ ಆಗಿ ಒತ್ತೊತ್ತಾಗಿ ನಿಂತವರ ಮೈಯ ಬೆವರ ವಾಸನೆಯೂ ಗುಜುಗುಜು ಮಾತುಗಳು ಬಸ್ ನ್ನು ತುಂಬಿತ್ತು . ಸುಮಾರು ಪಡುಬಿದ್ರೆಯ ಹತ್ತಿರ ಬರುತ್ತಿದ್ದಂತೆ ಅವಳು ನನ್ನ ಕಡೆ ತಿರುಗಿ ” ಪುಸ್ತಕಗಳನ್ನು ಸ್ವಲ್ಪ ಹಿಡಿದುಕೊಳ್ಳಬಹುದೇ? ” ಎಂದು ಕೇಳಿದಳು. ಅವಳು ನಿದ್ದೆ ಮಾಡುತ್ತಾಳೆ ಎಂದು ಭಾವಿಸಿ ನಾನು ತೆಗೆದುಕೊಂಡೆ. ಅದರ ಸಂದಿಯಲ್ಲಿದ್ದ ಒಂದು ಬಿಳಿ ಪೆನ್ನು ಕೆಳಗೆ ಬಿತ್ತು. ನಾನು ಅದನ್ನು ಎತ್ತಿ ಸ್ವಲ್ಪ ಹೊತ್ತು ಕೈಯಲ್ಲಿ ಇಟ್ಟುಕೊಂಡಿದ್ದು ಕೊನೆಗೆ ಅವಳು ಇಳಿಯುವಾಗ ಕೊಟ್ಟರಾಯಿತೆಂದು ಜೇಬಿನಲ್ಲಿ ಇಟ್ಟುಕೊಂಡೆ.

ಅವಳು ಹಿಂದಿನ ಸೀಟಿಗೆ ತಲೆಯನ್ನು ಕೊಟ್ಟು ಮಲಗಿದಳು. ಏನೋ ಸಮಸ್ಯೆ ಇರಬಹುದು. ನಾನು ಗಮನಿಸುತ್ತಲೇ ಇದ್ದೆ. ಸ್ವಲ್ಪ ಹೊತ್ತಿನಲ್ಲಿ ಅವಳು ಹಾಗೆಯೇ ನನ್ನ ಭುಜಕ್ಕೆ ಒರಗಿದಳು. ನಾನು ನಿದ್ದೆ ಬಂದಿರಬಹುದು ಪಾಪ ಎಂದುಕೊಂಡೆ. ಅವಳ ಮೃದುವಾದ ಕೈಗಳು ನನಗೆ ಒತ್ತಿ ಹಿತವೆನಿಸುತಿತ್ತು.

ಮೂಲ್ಕಿ ದಾಟಿ ಸುರತ್ಕಲ್ ಸಮೀಪಿಸುತ್ತಿದ್ದಂತೆ ಅವಳು ದೊಪ್ಪನೇ ಜಾರಿ ನನ್ನ ತೊಡೆಗಳ ಮೇಲೆ ಬಿದ್ದುಬಿಟ್ಟಳು. ಒಂದು ಕ್ಷಣ ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಹಾಗೆಯೇ ಬಿಟ್ಟರೆ ಅವಳು ಮುಂದಕ್ಕೆ ಬಾಗಿ ಸೀಟಿನ ಕೆಳಗೆ ಜಾರುವ ಅಪಾಯವಿತ್ತು. ನಾನು ಮೆಲ್ಲನೆ ಅವಳನ್ನು ಏಳಿಸಬೇಕೆಂದು ಅವಳ ತೋಳುಗಳ ಮೇಲೆ ಕೈ ಹಾಕಿದೆ.

ಅದು ತಣ್ಣಗಾಗಿತ್ತು. ನನಗೆ ಗಾಬರಿಯಾಯಿತು. ಅಲುಗಾಡಿಸಿದೆ. ಅವಳು ಏಳಲಿಲ್ಲ. ನಾನು ಪಕ್ಕದಲ್ಲಿ ನಿಂತವರ ಮುಖ ನೋಡಿದೆ. ನನ್ನನ್ನೇ ಗಮನಿಸುತ್ತಿದ್ದ ಅವರು ಏನಾಯ್ತು? ಎಂಬಂತೆ ನೋಡಿ ಬಾಗಿ ಅವಳನ್ನು ಏಳಿಸಲು ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಮತ್ತೊಬ್ಬರು ಕಂಡಕ್ಟರ್ ನನ್ನು ಜೋರಾಗಿ ಕರೆದರು. ಕಂಡಕ್ಟರ್ ಹತ್ತಿರ ಬಂದು ವಿಚಾರಿಸಿ ಅವಳನ್ನು ಏಳಿಸಲು ನೋಡಿ, ಮೈ ತಣ್ಣಗಾಗಿರುವುದನ್ನು ನೋಡಿ ಜೋರಾಗಿ ವಿಸಿಲ್ ಊದಿ ಡ್ರೈವರ್ ರಿಗೆ ಬಸ್ ನಿಲ್ಲಿಸಲು ಹೇಳಿದ.

ಬಸ್ ನಿಂತಿತು. ವಿಷಯ ತಿಳಿದು ಬಸ್ ನಲ್ಲಿದ್ದ ಡಾಕ್ಟರ್ ಒಬ್ಬರು ಹತ್ತಿರ ಬಂದು ಅವಳ ನಾಡಿ ಹಿಡಿದು ನೋಡಿದರು. ಅವಳು ಸತ್ತು ಹೋಗಿದ್ದಳು. ಮತ್ತೆಲ್ಲ ಮುಂದಿನ ಹಂತಗಳು. ಆಸ್ಪತ್ರೆ, ಪೊಲೀಸ್ ಸ್ಟೇಷನ್ ಎಲ್ಲ. ಸಂಬಂಧವೇ ಇಲ್ಲದ ನಾನು ನನ್ನ ಕೈಮೇಲೆ ಪ್ರಾಣ ಬಿಟ್ಟಳಲ್ಲಾ ಎಂಬ ಕಾರಣಕ್ಕೆ ಬಸ್ಸಿನವರ ಜೊತೆಗೆ ಇರಬೇಕಾಯಿತು.

ಪೊಲೀಸ್ ಸ್ಟೇಷನ್ನಿನಲ್ಲಿ ಅವಳ ಪುಸ್ತಕವನ್ನು ವ್ಯಾನಿಟಿ ಬ್ಯಾಗ್ ನ್ನು ಪೊಲೀಸ್ ರಿಗೆ ಹಸ್ತಾಂತರಿಸಿ ಅವರ ಒತ್ತಾಯಕ್ಕೆ ಒಂದು ಸ್ಟೇಟ್ಮೆಂಟ್ ನ್ನೂ ಬರೆದು ಕೊಡುವುದರ ಜೊತೆಗೆ ಮುಂದೆ ಬೇಕಾಗಬಹುದು ಎಂದು ಹೇಳಿದ್ದರಿಂದ ನನ್ನ ಫೋನ್ ನಂಬರ್ ನ್ನೂ ಅವರಿಗೆ ಕೊಡಬೇಕಾಯಿತು.

ಎಲ್ಲ ಮುಗಿದು ಮತ್ತೆ ಮಂಗಳೂರಿನ ನಮ್ಮ ಆಫೀಸ್ ಮುಟ್ಟುವಾಗ ಮಧ್ಯಾಹ್ನ ಮೂರು ಗಂಟೆ. ಕೆಲಸ ಮಾಡಲು ಮನಸ್ಸೇ ಇರಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಅಕಸ್ಮಾತ್ ಕಿಸೆಯಲ್ಲಿದ್ದ ಬಿಳಿ ಪೆನ್ನಿನ ಮೇಲೆ ಗಮನ ಹೋಯಿತು. ಕೈಯಲ್ಲಿ ಹಿಡಿದುಕೊಂಡೆ. ಒಮ್ಮೆ ಎಲ್ಲ ಘಟನೆಯ ನೆನಪು ಮರುಕಳಿಸಿತು. ಒಂದು ಗಳಿಗೆಯ ಸ್ನೇಹ. ಇರಲಿ ಅವಳ ನೆನಪಿಗಾಯಿತು ಅನ್ನಿಸಿ ಅದನ್ನು ಪೆನ್ ಸ್ಟಾಂಡ್ ಗೆ ಹಾಕಿದೆ. ನಡೆದ ಸಂಗತಿಯನ್ನು ನನ್ನ ಆಫೀಸರ್ ಗೆ ತಿಳಿಸಿ “ಏಕೋ ತಲೆ ನೋಯುತ್ತಿದೆ. ಮನೆಗೆ ಹೋಗುತ್ತೇನೆ” ಎಂದು ಹೇಳಿ ಪುನಃ ಬಸ್ಸು ಹತ್ತಿ ಮನೆಗೆ ಬಂದೆ. *

ಮರುದಿನ ಪೇಪರಲ್ಲಿ ಅವಳ ಫೋಟೋ ಹಾಕಿ ಸುದ್ಧಿ ಪ್ರಕಟವಾಗಿತ್ತು. ವಾರಸುದಾರರಿದ್ದರೆ ಸಂಪರ್ಕಿಸಿ ಎಂದು. ಹಾಗಾದರೆ ಅವಳ ವ್ಯಾನಿಟಿ ಬ್ಯಾಗ್ ನಲ್ಲೂ ಅವಳ ಬಗ್ಗೆ ಏನೂ ವಿವರವಿರಲಿಲ್ಲವೇ? ಮೊಬೈಲ್ ಕೂಡ ಇರಲಿಲ್ಲವೇ? ಎಂದೆಲ್ಲ ಮನಸ್ಸಿಗೆ ಬಂತು. ನಾನ್ಯಾಕೆ ತಲೆಕೆಡಿಸಿಕೊಳ್ಳಲಿ?. ಅನ್ನಿಸಿ ರೆಡಿಯಾಗಿ ಆಫೀಸ್ ಗೆ ಹೊರಟೆ.

ಆಫೀಸ್ ಗೆ ಬಂದು ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿ ಫೋನ್ ಬಂತು. ಸುರತ್ಕಲ್ ನ ಪೊಲೀಸ್ ಸ್ಟೇಷನ್ ನಿಂದ.
ನಾವು ಕ್ರೈಮ್ ಡಿಪಾರ್ಟ್ಮೆಂಟ್ ನವರು ಮಾತಾಡಬೇಕಿತ್ತು ಅಂತ. ನನಗೆ ಭಯ ವಾದರೂ ತೋರಿಸಿಕೊಳ್ಳದೆ ನನ್ನ ವಿಳಾಸ ತಿಳಿಸಿದ ಒಂದು ಗಂಟೆಯಲ್ಲಿ ಬಂದೆ ಬಿಟ್ಟರು.

ನನ್ನ ಟೇಬಲ್ ಮುಂದಿನ ಕುರ್ಚಿಯಲ್ಲಿ ಕುಳಿತು ನನ್ನನ್ನೇ ವಿಚಾರಿಸಲು ಶುರು ಮಾಡಿದರು. ನನ್ನ ಮಾತನ್ನು ಮೊಬೈಲಲ್ಲಿ ರೆಕಾರ್ಡ್ ಕೂಡ ಮಾಡಿಕೊಳ್ಳುತ್ತಿದ್ದರು. ” ನಿಮಗೆ ಗೊತ್ತಿರುವುದನ್ನು ನೇರವಾಗಿ ಹೇಳಬೇಕು. ಮುಚ್ಚಿಟ್ಟರೆ ತೊಂದರೆಯಲ್ಲಿ ಸಿಲುಕುತ್ತೀರಿ. ನಿಮಗೆ ಗೊತ್ತಾ ಆ ಹುಡುಗಿ ಸಾಮಾನ್ಯಳಲ್ಲ ಪಾಕಿಸ್ಥಾನಕ್ಕೆ ರಹಸ್ಯವಾಗಿ ಸಂಪರ್ಕವಿಟ್ಟುಕೊಂಡು ಇಲ್ಲಿನ ಕೆಲವು ರಹಸ್ಯ ಸಂಗತಿಗಳನ್ನು ಅಲ್ಲಿಗೆ ಕಳಿಸುತ್ತಿದ್ದಾಳೆ. ಅವಳ ಬಗ್ಗೆ ನಿಮಗೆ ಹೇಗೆ ಗೊತ್ತು? ಎಲ್ಲ ಹೇಳಬೇಕು.

ನಿಮಗೆ ಅವಳು ಎಷ್ಟು ದಿನದಿಂದ ಪರಿಚಯ? ಏನೇನು ಮಾತನಾಡಿದಳು? ಅವಳ ಹತ್ತಿರ ರಹಸ್ಯ ದಾಖಲೆಯೊಂದು ಇತ್ತು ಎಂದು ಮಾಹಿತಿ ಇದೆ . ಅದನ್ನು ಎಲ್ಲಿಗೋ ಒಯ್ಯುತ್ತಿದ್ದಳು. ನಿಮಗೆ ಕೊಟ್ಟಳಾ? ನಿಮಗೆ ಅವಳು ಕುಳಿತಲ್ಲಿ ಏನಾದರೂ ಸಿಕ್ಕಿದೆಯಾ? ಇತ್ಯಾದಿ ಇತ್ಯಾದಿ ನನಗೆ ಏನೂ ಗೊತ್ತಿಲ್ಲದಿದ್ದುದರಿಂದ ನಾನು ‘ಏನೂ ಗೊತ್ತಿಲ್ಲ’ ವೆಂದು ನಿಜವನ್ನೇ ಹೇಳಿದೆ. ಅವರಿಗೆ ತೃಪ್ತಿಯಾದಂತೆ ಕಾಣಲಿಲ್ಲ. ಅವರವರಲ್ಲೇ ಏನೋ ರಹಸ್ಯವಾಗಿ ಮಾತಾಡಿಕೊಂಡರು.

ನನಗೆ ಅನವಶ್ಯಕವಾಗಿ ಯಾವುದೊ ಒಂದು ವ್ಯೂಹದಲ್ಲಿ ನಾನು ಸಿಲುಕುತ್ತಿರುವುದರ ಅನುಭವವಾಯಿತು. ಒಮ್ಮೆಲೇ ನನ್ನ ಉದ್ಯೋಗ, ಹೆಂಡತಿ ಮಕ್ಕಳು ಎಲ್ಲರೂ ಕಣ್ಣ ಮುಂದೆ ಹಾದು ಹೋದರು. ಅವರು ನನ್ನನ್ನು ಅನುಮಾನದಿಂದಲೇ ನೋಡಿ, ಎದ್ದು ಬೇಕಾದರೆ ಮತ್ತೆ ಕರೆ ಮಾಡಿ ಬರುತ್ತೇವೆ. ನಿಮ್ಮ ಸಹಾಯ ಬೇಕಾಗಬಹುದು ಎಂದು ಹೇಳಿ ಎದ್ದು ಹೊರಟರು. ನನಗೆ ಭಯವಾಯಿತು. ಏನಾಗುತ್ತಿದೆ ಇದೆಲ್ಲ? ಎಂದು ಗಾಬರಿಯಾಯಿತು. ಬಾಯಿ ಒಣಗಿಬಂದು ನೀರು ಕುಡಿದೆ. ಆದರೂ ಸಮಾಧಾನವಾಗಲಿಲ್ಲ.

ಅಷ್ಟರಲ್ಲಿ ಪೆನ್ ಸ್ಟ್ಯಾಂಡಲ್ಲಿ ಇದ್ದ ಆ ಬಿಳಿ ಪೆನ್ನು ನನ್ನ ಗಮನಕ್ಕೆ ಬಂತು. ಸುಮ್ಮನೆ ಅದನ್ನು ತೆಗೆದು ತಿರುಗಿಸಿ ತಿರುಗಿಸಿ ನೋಡಿದೆ. ಟಾಪ್ ತೆಗೆದು ಬರೆಯುತ್ತದಾ ನೋಡುವ ಅಂತ ಒಂದು ಪೇಪರ್ ಮೇಲೆ ಗೀಚಿದೆ . ಇಂಕ್ ಖಾಲಿಯಾಗಿರಬೇಕು. ನೋಡೋಣವೆಂದು ತ್ರೆಡ್ ಕಳಚಿ ತೆರೆದೆ. ಪಕ್ಕನೆ ಒಂದು ಸಣ್ಣ ಪೇಪರ್ ಕಟ್ಟು ಕೆಳಗೆ ಬಿತ್ತು. ಅದನ್ನು ಹೆಕ್ಕಿ ತೆರೆದು ನೋಡಿದರೆ ಅದರಲ್ಲಿ ಇತ್ತು ಒಂದು ಸಣ್ಣ ಚಿಪ್.

ನನಗೆ ಮೈ ನಡುಕ ಶುರುವಾಯಿತು. ಇದನ್ನೇ ಆಗ ಬಂದವರು ಹುಡುಕುತ್ತಿದ್ದಿರಬೇಕು. ಮೈಯೆಲ್ಲ ಬೆವರಿತು. ಕಣ್ಣುಕತ್ತಲೆ ಬಂದ ಹಾಗಾಯಿತು. ಸ್ವಲ್ಪ ಸಾವರಿಸಿಕೊಂಡೆ. ನಿಧಾನವಾಗಿ ಯೋಚಿಸತೊಡಗಿದೆ. ಇದನ್ನು ಅವರಿಗೆ ಮುಟ್ಟಿಸಲೇ? ಏನಾದರೂ ಮಾಡಿಕೊಳ್ಳಲಿ. ಇಲ್ಲ ಇನ್ನು ನಾನು ಆ ವಿಷ ವರ್ತುಲಕ್ಕೆ ಸಿಲುಕಲಾರೆ. ಸರಿ ಅದೇ ಸರಿ ಎಂದು ಒಂದು ನಿರ್ಧಾರಕ್ಕೆ ಬಂದು ಆ ವಸ್ತುವನ್ನು ಕಸದ ಬುಟ್ಟಿಗೆ ಎಸೆದುಬಿಟ್ಟೆ. ಎಟೆಂಡರ್ ನನ್ನು ಕರೆದು,
” ಇನ್ನೂ ಇವತ್ತಿನ ಕಸ ಎಸೆದಿಲ್ಲವಲ್ಲ. ಯಾಕೆ? ಕೂಡಲೇ ತೆಗೆದುಬಿಡಿ” ಎಂದು ಅಜ್ಞಾಪಿಸಿದೆ. ಅವನು ಬಂದು ಆ ಕಸದ ಬುಟ್ಟಿಯನ್ನು ತೆಗೆದುಕೊಂಡು ಹೋದ. ನಾನು ನಿಟ್ಟುಸಿರುಬಿಟ್ಟೆ. ಅವಳು ಹಿಂದಿನ ಸೀಟಿಗೆ ತಲೆಯನ್ನು ಕೊಟ್ಟು ಮಲಗಿದಳು. ಏನೋ ಸಮಸ್ಯೆ ಇರಬಹುದು. ನಾನು ಗಮನಿಸುತ್ತಲೇ ಇದ್ದೆ. ಸ್ವಲ್ಪ ಹೊತ್ತಿನಲ್ಲಿ ಅವಳು ಹಾಗೆಯೇ ನನ್ನ ಭುಜಕ್ಕೆ ಒರಗಿದಳು. ನಾನು ನಿದ್ದೆ ಬಂದಿರಬಹುದು ಪಾಪ ಎಂದುಕೊಂಡೆ. ಅವಳ ಮೃದುವಾದ ಕೈಗಳು ನನಗೆ ಒತ್ತಿ ಹಿತವೆನಿಸುತಿತ್ತು.

ಮೂಲ್ಕಿ ದಾಟಿ ಸುರತ್ಕಲ್ ಸಮೀಪಿಸುತ್ತಿದ್ದಂತೆ ಅವಳು ದೊಪ್ಪನೇ ಜಾರಿ ನನ್ನ ತೊಡೆಗಳ ಮೇಲೆ ಬಿದ್ದುಬಿಟ್ಟಳು. ಒಂದು ಕ್ಷಣ ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಹಾಗೆಯೇ ಬಿಟ್ಟರೆ ಅವಳು ಮುಂದಕ್ಕೆ ಬಾಗಿ ಸೀಟಿನ ಕೆಳಗೆ ಜಾರುವ ಅಪಾಯವಿತ್ತು. ನಾನು ಮೆಲ್ಲನೆ ಅವಳನ್ನು ಏಳಿಸಬೇಕೆಂದು ಅವಳ ತೋಳುಗಳ ಮೇಲೆ ಕೈ ಹಾಕಿದೆ.

ಅದು ತಣ್ಣಗಾಗಿತ್ತು. ನನಗೆ ಗಾಬರಿಯಾಯಿತು. ಅಲುಗಾಡಿಸಿದೆ. ಅವಳು ಏಳಲಿಲ್ಲ. ನಾನು ಪಕ್ಕದಲ್ಲಿ ನಿಂತವರ ಮುಖ ನೋಡಿದೆ. ನನ್ನನ್ನೇ ಗಮನಿಸುತ್ತಿದ್ದ ಅವರು ಏನಾಯ್ತು? ಎಂಬಂತೆ ನೋಡಿ ಬಾಗಿ ಅವಳನ್ನು ಏಳಿಸಲು ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಮತ್ತೊಬ್ಬರು ಕಂಡಕ್ಟರ್ ನನ್ನು ಜೋರಾಗಿ ಕರೆದರು. ಕಂಡಕ್ಟರ್ ಹತ್ತಿರ ಬಂದು ವಿಚಾರಿಸಿ ಅವಳನ್ನು ಏಳಿಸಲು ನೋಡಿ, ಮೈ ತಣ್ಣಗಾಗಿರುವುದನ್ನು ನೋಡಿ ಜೋರಾಗಿ ವಿಸಿಲ್ ಊದಿ ಡ್ರೈವರ್ ರಿಗೆ ಬಸ್ ನಿಲ್ಲಿಸಲು ಹೇಳಿದ.

ಬಸ್ ನಿಂತಿತು. ವಿಷಯ ತಿಳಿದು ಬಸ್ ನಲ್ಲಿದ್ದ ಡಾಕ್ಟರ್ ಒಬ್ಬರು ಹತ್ತಿರ ಬಂದು ಅವಳ ನಾಡಿ ಹಿಡಿದು ನೋಡಿದರು. ಅವಳು ಸತ್ತು ಹೋಗಿದ್ದಳು.

ಮತ್ತೆಲ್ಲ ಮುಂದಿನ ಹಂತಗಳು. ಆಸ್ಪತ್ರೆ, ಪೊಲೀಸ್ ಸ್ಟೇಷನ್ ಎಲ್ಲ. ಸಂಬಂಧವೇ ಇಲ್ಲದ ನಾನು ನನ್ನ ಕೈಮೇಲೆ ಪ್ರಾಣ ಬಿಟ್ಟಳಲ್ಲಾ ಎಂಬ ಕಾರಣಕ್ಕೆ ಬಸ್ಸಿನವರ ಜೊತೆಗೆ ಇರಬೇಕಾಯಿತು. ಪೊಲೀಸ್ ಸ್ಟೇಷನ್ನಿನಲ್ಲಿ ಅವಳ ಪುಸ್ತಕವನ್ನು ವ್ಯಾನಿಟಿ ಬ್ಯಾಗ್ ನ್ನು ಪೊಲೀಸ್ ರಿಗೆ ಹಸ್ತಾಂತರಿಸಿ ಅವರ ಒತ್ತಾಯಕ್ಕೆ ಒಂದು ಸ್ಟೇಟ್ಮೆಂಟ್ ನ್ನೂ ಬರೆದು ಕೊಡುವುದರ ಜೊತೆಗೆ ಮುಂದೆ ಬೇಕಾಗಬಹುದು ಎಂದು ಹೇಳಿದ್ದರಿಂದ ನನ್ನ ಫೋನ್ ನಂಬರ್ ನ್ನೂ ಅವರಿಗೆ ಕೊಡಬೇಕಾಯಿತು.

ಎಲ್ಲ ಮುಗಿದು ಮತ್ತೆ ಮಂಗಳೂರಿನ ನಮ್ಮ ಆಫೀಸ್ ಮುಟ್ಟುವಾಗ ಮಧ್ಯಾಹ್ನ ಮೂರು ಗಂಟೆ. ಕೆಲಸ ಮಾಡಲು ಮನಸ್ಸೇ ಇರಲಿಲ್ಲ. ಸ್ವಲ್ಪ ಹೊತ್ತು ಸುಮ್ಮನೆ ಕುಳಿತೆ. ಅಕಸ್ಮಾತ್ ಕಿಸೆಯಲ್ಲಿದ್ದ ಬಿಳಿ ಪೆನ್ನಿನ ಮೇಲೆ ಗಮನ ಹೋಯಿತು. ಕೈಯಲ್ಲಿ ಹಿಡಿದುಕೊಂಡೆ. ಒಮ್ಮೆ ಎಲ್ಲ ಘಟನೆಯ ನೆನಪು ಮರುಕಳಿಸಿತು. ಒಂದು ಗಳಿಗೆಯ ಸ್ನೇಹ. ಇರಲಿ ಅವಳ ನೆನಪಿಗಾಯಿತು ಅನ್ನಿಸಿ ಅದನ್ನು ಪೆನ್ ಸ್ಟಾಂಡ್ ಗೆ ಹಾಕಿದೆ. ನಡೆದ ಸಂಗತಿಯನ್ನು ನನ್ನ ಆಫೀಸರ್ ಗೆ ತಿಳಿಸಿ “ಏಕೋ ತಲೆ ನೋಯುತ್ತಿದೆ. ಮನೆಗೆ ಹೋಗುತ್ತೇನೆ” ಎಂದು ಹೇಳಿ ಪುನಃ ಬಸ್ಸು ಹತ್ತಿ ಮನೆಗೆ ಬಂದೆ. 
*
ಮರುದಿನ ಪೇಪರಲ್ಲಿ ಅವಳ ಫೋಟೋ ಹಾಕಿ ಸುದ್ಧಿ ಪ್ರಕಟವಾಗಿತ್ತು. ವಾರಸುದಾರರಿದ್ದರೆ ಸಂಪರ್ಕಿಸಿ ಎಂದು.

ಹಾಗಾದರೆ ಅವಳ ವ್ಯಾನಿಟಿ ಬ್ಯಾಗ್ ನಲ್ಲೂ ಅವಳ ಬಗ್ಗೆ ಏನೂ ವಿವರವಿರಲಿಲ್ಲವೇ? ಮೊಬೈಲ್ ಕೂಡ ಇರಲಿಲ್ಲವೇ? ಎಂದೆಲ್ಲ ಮನಸ್ಸಿಗೆ ಬಂತು. ನಾನ್ಯಾಕೆ ತಲೆಕೆಡಿಸಿಕೊಳ್ಳಲಿ?. ಅನ್ನಿಸಿ ರೆಡಿಯಾಗಿ ಆಫೀಸ್ ಗೆ ಹೊರಟೆ.

ಆಫೀಸ್ ಗೆ ಬಂದು ಕುಳಿತುಕೊಂಡ ಸ್ವಲ್ಪ ಹೊತ್ತಿನಲ್ಲಿ ಫೋನ್ ಬಂತು. ಸುರತ್ಕಲ್ ನ ಪೊಲೀಸ್ ಸ್ಟೇಷನ್ ನಿಂದ.
ನಾವು ಕ್ರೈಮ್ ಡಿಪಾರ್ಟ್ಮೆಂಟ್ ನವರು ಮಾತಾಡಬೇಕಿತ್ತು ಅಂತ. ನನಗೆ ಭಯ ವಾದರೂ ತೋರಿಸಿಕೊಳ್ಳದೆ ನನ್ನ ವಿಳಾಸ ತಿಳಿಸಿದ ಒಂದು ಗಂಟೆಯಲ್ಲಿ ಬಂದೆ ಬಿಟ್ಟರು.

ನನ್ನ ಟೇಬಲ್ ಮುಂದಿನ ಕುರ್ಚಿಯಲ್ಲಿ ಕುಳಿತು ನನ್ನನ್ನೇ ವಿಚಾರಿಸಲು ಶುರು ಮಾಡಿದರು. ನನ್ನ ಮಾತನ್ನು ಮೊಬೈಲಲ್ಲಿ ರೆಕಾರ್ಡ್ ಕೂಡ ಮಾಡಿಕೊಳ್ಳುತ್ತಿದ್ದರು.

” ನಿಮಗೆ ಗೊತ್ತಿರುವುದನ್ನು ನೇರವಾಗಿ ಹೇಳಬೇಕು. ಮುಚ್ಚಿಟ್ಟರೆ ತೊಂದರೆಯಲ್ಲಿ ಸಿಲುಕುತ್ತೀರಿ. ನಿಮಗೆ ಗೊತ್ತಾ ಆ ಹುಡುಗಿ ಸಾಮಾನ್ಯಳಲ್ಲ ಪಾಕಿಸ್ಥಾನಕ್ಕೆ ರಹಸ್ಯವಾಗಿ ಸಂಪರ್ಕವಿಟ್ಟುಕೊಂಡು ಇಲ್ಲಿನ ಕೆಲವು ರಹಸ್ಯ ಸಂಗತಿಗಳನ್ನು ಅಲ್ಲಿಗೆ ಕಳಿಸುತ್ತಿದ್ದಾಳೆ.

ಅವಳ ಬಗ್ಗೆ ನಿಮಗೆ ಹೇಗೆ ಗೊತ್ತು? ಎಲ್ಲ ಹೇಳಬೇಕು. ನಿಮಗೆ ಅವಳು ಎಷ್ಟು ದಿನದಿಂದ ಪರಿಚಯ? ಏನೇನು ಮಾತನಾಡಿದಳು? ಅವಳ ಹತ್ತಿರ ರಹಸ್ಯ ದಾಖಲೆಯೊಂದು ಇತ್ತು ಎಂದು ಮಾಹಿತಿ ಇದೆ . ಅದನ್ನು ಎಲ್ಲಿಗೋ ಒಯ್ಯುತ್ತಿದ್ದಳು. ನಿಮಗೆ ಕೊಟ್ಟಳಾ? ನಿಮಗೆ ಅವಳು ಕುಳಿತಲ್ಲಿ ಏನಾದರೂ ಸಿಕ್ಕಿದೆಯಾ? ಇತ್ಯಾದಿ ಇತ್ಯಾದಿ ನನಗೆ ಏನೂ ಗೊತ್ತಿಲ್ಲದಿದ್ದುದರಿಂದ ನಾನು ‘ಏನೂ ಗೊತ್ತಿಲ್ಲ’ ವೆಂದು ನಿಜವನ್ನೇ ಹೇಳಿದೆ. ಅವರಿಗೆ ತೃಪ್ತಿಯಾದಂತೆ ಕಾಣಲಿಲ್ಲ. ಅವರವರಲ್ಲೇ ಏನೋ ರಹಸ್ಯವಾಗಿ ಮಾತಾಡಿಕೊಂಡರು.

ನನಗೆ ಅನವಶ್ಯಕವಾಗಿ ಯಾವುದೊ ಒಂದು ವ್ಯೂಹದಲ್ಲಿ ನಾನು ಸಿಲುಕುತ್ತಿರುವುದರ ಅನುಭವವಾಯಿತು. ಒಮ್ಮೆಲೇ ನನ್ನ ಉದ್ಯೋಗ, ಹೆಂಡತಿ ಮಕ್ಕಳು ಎಲ್ಲರೂ ಕಣ್ಣ ಮುಂದೆ ಹಾದು ಹೋದರು. ಅವರು ನನ್ನನ್ನು ಅನುಮಾನದಿಂದಲೇ ನೋಡಿ, ಎದ್ದು ಬೇಕಾದರೆ ಮತ್ತೆ ಕರೆ ಮಾಡಿ ಬರುತ್ತೇವೆ. ನಿಮ್ಮ ಸಹಾಯ ಬೇಕಾಗ ಬಹುದು ಎಂದು ಹೇಳಿ ಎದ್ದು ಹೊರಟರು. ನಗೆ ಭಯವಾಯಿತು. ಏನಾಗುತ್ತಿದೆ ಇದೆಲ್ಲ? ಎಂದು ಗಾಬರಿ ಯಾಯಿತು. ಬಾಯಿ ಒಣಗಿಬಂದು ನೀರು ಕುಡಿದೆ. ಆದರೂ ಸಮಾಧಾನವಾಗಲಿಲ್ಲ.

ಅಷ್ಟರಲ್ಲಿ ಪೆನ್ ಸ್ಟ್ಯಾಂಡಲ್ಲಿ ಇದ್ದ ಆ ಬಿಳಿ ಪೆನ್ನು ನನ್ನ ಗಮನಕ್ಕೆ ಬಂತು. ಸುಮ್ಮನೆ ಅದನ್ನು ತೆಗೆದು ತಿರುಗಿಸಿ ತಿರುಗಿಸಿ ನೋಡಿದೆ. ಟಾಪ್ ತೆಗೆದು ಬರೆಯುತ್ತದಾ ನೋಡುವ ಅಂತ ಒಂದು ಪೇಪರ್ ಮೇಲೆ ಗೀಚಿದೆ . ಇಂಕ್ ಖಾಲಿಯಾಗಿರಬೇಕು. ನೋಡೋಣವೆಂದು ತ್ರೆಡ್ ಕಳಚಿ ತೆರೆದೆ. ಪಕ್ಕನೆ ಒಂದು ಸಣ್ಣ ಪೇಪರ್ ಕಟ್ಟು ಕೆಳಗೆ ಬಿತ್ತು. ಅದನ್ನು ಹೆಕ್ಕಿ ತೆರೆದು ನೋಡಿದರೆ ಅದರಲ್ಲಿ ಇತ್ತು ಒಂದು ಸಣ್ಣ ಚಿಪ್.

ನನಗೆ ಮೈ ನಡುಕ ಶುರುವಾಯಿತು. ಇದನ್ನೇ ಆಗ ಬಂದವರು ಹುಡುಕುತ್ತಿದ್ದಿರಬೇಕು. ಮೈಯೆಲ್ಲ ಬೆವರಿತು. ಕಣ್ಣುಕತ್ತಲೆ ಬಂದ ಹಾಗಾಯಿತು.

ಸ್ವಲ್ಪ ಸಾವರಿಸಿಕೊಂಡೆ. ನಿಧಾನವಾಗಿ ಯೋಚಿಸತೊಡಗಿದೆ. ಇದನ್ನು ಅವರಿಗೆ ಮುಟ್ಟಿಸಲೇ? ಏನಾದರೂ ಮಾಡಿಕೊಳ್ಳಲಿ. ಇಲ್ಲ ಇನ್ನು ನಾನು ಆ ವಿಷ ವರ್ತುಲಕ್ಕೆ ಸಿಲುಕಲಾರೆ. ಸರಿ ಅದೇ ಸರಿ ಎಂದು ಒಂದು ನಿರ್ಧಾರಕ್ಕೆ ಬಂದು ಆ ವಸ್ತುವನ್ನು ಕಸದ ಬುಟ್ಟಿಗೆ ಎಸೆದುಬಿಟ್ಟೆ. ಎಟೆಂಡರ್ ನನ್ನು ಕರೆದು, ” ಇನ್ನೂ ಇವತ್ತಿನ ಕಸ ಎಸೆದಿಲ್ಲವಲ್ಲ. ಯಾಕೆ? ಕೂಡಲೇ ತೆಗೆದುಬಿಡಿ” ಎಂದು ಅಜ್ಞಾಪಿಸಿದೆ. ಅವನು ಬಂದು ಆ ಕಸದ ಬುಟ್ಟಿಯನ್ನು ತೆಗೆದುಕೊಂಡು ಹೋದ. ನಾನು ನಿಟ್ಟುಸಿರುಬಿಟ್ಟೆ.

 
 
 
 
 
 
 
 
 
 
 

Leave a Reply