Janardhan Kodavoor/ Team KaravaliXpress
26 C
Udupi
Thursday, April 22, 2021

ಏಕಾದಶಿ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ~ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

ದಿನಾಂಕ:09-03-2021 ಮಂಗಳವಾರ ಏಕಾದಶಿ ಹಾಗೂ 10-03-2021 ಬುಧವಾರ ಶ್ರವಣೋಪವಾಸ. ಸಾಧ್ಯವಿದ್ದವರು ಎರಡೂ ದಿನವು ಉಪವಾಸ ಮಾಡಬಹುದು.

ಏಕಾದಶಿ ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ದಿನ. ಈ ದಿನ‌ ಉಪವಾಸವಿದ್ದು, ಶ್ರೀಹರಿಯನ್ನು ಸೇವಿಸಿದರೆ ಒಳಿತು ಎನ್ನುತ್ತವೆ ಪುರಾಣಗಳು. ಉಪವಾಸವೆಂದರೆ ಊಟ ಮಾಡದೆ ಇರುವುದಷ್ಟೇ ಅಲ್ಲ. ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಈ ದಿನ ಭಗವಂತನ ಬಳಿಯಲ್ಲಿಯೇ ಇದ್ದು, ಅರ್ಚಿಸಿ, ಆನಂದಿಸಬೇಕು.‌ ಇದರ ಜತೆ ಖಾಲಿ ಹೊಟ್ಟೆಯಲ್ಲಿ ಶ್ರೀಹರಿಯನ್ನು ಸೇವಿಸಿದರೆ ಒಳಿತು.

ಕಾರಣ “ಲಂಘನಂ ಪರಮೌಷಧಂ” ಎನ್ನುತ್ತದೆ ಆಯುರ್ವೇದ. ಆಹಾರ ಸೇವಿಸದೆ ಇದ್ದರೆ, ಹೊಟ್ಟೆಯೊಳಗೆ ನಿತ್ಯ ಚಟುವಟಿಕೆಯಿಂದ ಕೆಲಸ ಮಾಡುವ ಅಂಗಾಂಗಗಳಿಗೆ ತುಸು ವಿರಾಮ. ತಿಂಗಳಲ್ಲಿ ಎರಡು ಬಾರಿ ಉಪವಾಸ ಮಾಡಿದರೆ, ಜೀರ್ಣಕ್ರಿಯೆ ಚುರುಕುಗೊಂಡು ಆರೋಗ್ಯ ಹೆಚ್ಚುತ್ತದೆ.

ಉಪವಾಸ(ಹತ್ತಿರ)ವಿದ್ದು ದೇವರನ್ನು ಸೇವಿಸಿ ಮಾನಸಿಕ ಶಕ್ತಿ ವೃದ್ಧಿಸಿಕೊಳ್ಳುವುದು ಜತೆಗೆ ಉಪವಾಸ(ಖಾಲಿ ಉದರ)ವಿದ್ದು ಆರೋಗ್ಯ ವೃದ್ಧಿಸಿಕೊಳ್ಳುವುದು. ಈ ಎರಡು ಕ್ರಿಯೆಗಳನ್ನು ಏಕಾದಶಿಯಂದು ಆಚರಿಸುವಂತೆ ಹಿರಿಯರು ಸಲಹೆ ಮಾಡಿದ್ದಾರೆ. ಈ ದಿನಕ್ಕೆ ಧಾರ್ಮಿಕ ಚೌಕಟ್ಟನ್ನು ಹಾಕಿ ದೈಹಿಕ ಸಬಲತೆಗೆ ಅನುವುಗೊಳಿಸ ಲಾಗಿದೆ.

ಇಂತಹ‌ ಏಕಾದಶಿಯಂದು ಏಕಾಗ್ರತೆಯೂ ಅಗತ್ಯ. ಅದಕ್ಕಾಗಿಯೇ ಈ ದಿನ ಸುಗಂಧ ದ್ರವ್ಯಗಳ ಬಳಕೆ ನಿಷೇಧಿಸಲಾಗಿದೆ. ಇಂದ್ರಿಯ ನಿಗ್ರಹಕ್ಕಾಗಿ ಇವುಗಳಿಂದ ದೂರ ಉಳಿಯಬೇಕು. ಸ್ವಯಂ ವ್ಯಕ್ತ ಕ್ಷೇತ್ರಗಳನ್ನು (ಬದರಿ, ತಿರುಪತಿ, ಪಂಢರಾಪುರ, ಉಡುಪಿ, ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಮತ್ತಿತರ) ಹೊರತು ಪಡಿಸಿ ದೇವರ ಪೂಜೆಗೂ ಸುಗಂಧ ಪುಷ್ಪವನ್ನೂ ಸಹ ಬಳಸುವಂತಿಲ್ಲ. (ಆದರೆ ಇದಕ್ಕೆ ಆಗಮಾನುಸಾರ ಕೆಲ ಅಪವಾದಗಳು ಉಂಟು).

ಸಹಜವಾಗಿ ಸುಗಂಧ ದ್ರವ್ಯಗಳು ಮನಸ್ಸನ್ನು ವಿರೂಪಗೊಳಿಸುವುದೇ ಹೆಚ್ಚು. ಹಾಗಾಗಿ ನಿಷೇಧ ಹೇರಲಾಗಿದೆ ಯಷ್ಟೆ. ಅಂದರೆ ಭೋಗ ವರ್ಜಿಸಿ ಭಗವಂತನನ್ನು ಸೇವಿಸಬೇಕು, ಇದು ನಿಯಮ.

ತಿಂಗಳಲ್ಲಿ ಶುಕ್ಲಪಕ್ಷ ಹಾಗೂ ಕೃಷ್ಣಪಕ್ಷದ ಹನ್ನೊಂದನೇ ದಿನ ಏಕಾದಶಿ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಒಂದು ದಿನ ಮಾತ್ರ ಉಪವಾಸ ಮಾಡಲಾಗುತ್ತದೆ.‌ ಆದರೆ ಕೆಲವೊಮ್ಮೆ ಹರಿವಾಸರ ಹಾಗೂ ಏಕಾದಶಿ ಒಟ್ಟಿಗೆ ಬಂದಾಗ ಎರಡು ದಿನ ಉಪವಾಸ ಮಾಡಬೇಕು. ಇದಲ್ಲದೆ, ಏಕಾದಶಿ ಮರುದಿನ ದ್ವಾದಶಿಯಂದು ವಿಷ್ಣುವಿನ ನಕ್ಷತ್ರವಾದ ಶ್ರವಣ ನಕ್ಷತ್ರವಿದ್ದರೆ, ಆ ದಿನವೂ ಉಪವಾಸ ಮಾಡಬೇಕು ಎಂದು ಧರ್ಮಶಾಸ್ತ್ರ ಹೇಳುತ್ತದೆ.

ಈಗ ಏಕಾದಶಿ ಹಾಗೂ ಶ್ರವಣ ದ್ವಾದಶಿ ಒಟ್ಟಾಗಿರುವುದರಿಂದ ಶ್ರದ್ಧಾಳುಗಳು ಎರಡು ದಿನ ಉಪವಾಸ ಮಾಡ ಬೇಕು. ಸಾಧಕರ ಜತೆ ಸಾಮಾನ್ಯರೂ ಈ ವ್ರತಾಚರಣೆ ಮಾಡಬಹುದು, ಇದರಿಂದ ಎರಡು ರೀತಿಯ ಫಲ ಪ್ರಾಪ್ತವಾಗುತ್ತದೆ.

“ಶರೀರಮಾಧ್ಯಂ ಖಲು ಧರ್ಮಸಾಧನಂ” ಎಂಬ ಮಹಾಕವಿ ಕಾಳಿದಾಸನ ವಚನದಂತೆ ಧರ್ಮ ಸಾಧನೆಗೆ, ಸ್ವಾಸ್ಥ ಶರೀರ ಅತ್ಯಗತ್ಯವಿದೆ. ಆದ್ದರಿಂದ ಸಾಧ್ಯವಾದ ಮಟ್ಟಿಗೆ ಹರಿದಿನ ಉಪವಾಸ ಮಾಡಿ ಆರೋಗ್ಯ ರೂಢಿಸಿಕೊಳ್ಳಿ. ಇದು ಎಲ್ಲರಿಗೂ ಕಡ್ಡಾಯವಲ್ಲ, ಆಚರಣೆಗೆ ಅಡ್ಡಿಯಿಲ್ಲ.

ನಾಹಂಕರ್ತಾ ಶ್ರೀಹರಿಕರ್ತಾ..

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಮಟ್ಟು ದೇವಳದಲ್ಲಿ ರಾಘವನ ಜನನ

ಪಲಿಮಾರು ಮಠ ಪರಂಪರೆಯ ರಾಮ ನವಮಿಯ ಆಚರಣಾ *ಇತಿಹಾಸದಲ್ಲೇ ಮೊದಲ ಬಾರಿಗೆ* ಮಟ್ಟು ದೇವಳದಲ್ಲಿ ಯತಿದ್ವಯರ ಆಶೀರ್ವಾದದೊಂದಿಗೆ *ಶ್ರೀರಾಮ ದೇವರ ರಥೋತ್ಸವ* ಬಹು ವಿಜ್ರಂಭಣೆಯಿಂದ ಜರುಗಿತು. ಈ ಪರ್ವ ಕಾಲದಲ್ಲಿ *ದೇವಳದ ಹಸುವು ಗಂಡು...

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ...

ಉಡುಪಿ: ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕ ವಿಚಾರ: ಶ್ರೀ ಲಕ್ಷ್ಮಿವರ ತೀರ್ಥರ ಪೂರ್ವಾಶ್ರಮ ಸಹೋದರರಿಂದಲೇ ಆಕ್ಷೇಪ!

ಉಡುಪಿ: ಉಡುಪಿ ಶಿರೂರು ಮಠಕ್ಕೆ ನೂತನ ಪೀಠಾಧಿಪತಿ ನೇಮಕಕ್ಕೆ ಸಹೋದರನಿಂದಲೇ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ನೇಮಕ ದ್ವಂದ್ವ ಮಠವಾದ ಸೋದೆ ಮಠಾಧೀಶ ರಿಂದ ಘೋಷಣೆಯಾಗಿದ್ದು ಇದಕ್ಕೆ ಶ್ರೀ ಲಕ್ಷ್ಮಿವರ ತೀರ್ಥರ...

ವಾರಾಂತ್ಯದಲ್ಲಿ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು – ರಘುಪತಿ ಭಟ್ ಆಗ್ರಹ

ಉಡುಪಿ: ರಾಜ್ಯದಲ್ಲಿ ವಾರಾಂತ್ಯ ಸಂಪೂರ್ಣ ಕರ್ಫ್ಯೂ ಜಾರಿಗೊಳಿಸಿದ ದಿನ ಈಗಾಗಲೇ ನಿಗದಿಪಡಿಸಿದ್ದ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಜನ ನಿಗದಿಪಡಿಸಿದ ದಿನದಂದೆ ಅವಕಾಶ ಕಲ್ಪಿಸುವಂತೆ ಶಾಸಕ ರಘುಪತಿ ಭಟ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಕೋವಿಡ್ - 19...

ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿ​ಯಾಗಿ ​ಅನಿರುದ್ದ ಸರಳತ್ತಾಯ​ ​ಆಯ್ಕೆ

ಉಡುಪಿ: 16ವರ್ಷ ವಯಸ್ಸಿನ ಅನಿರುದ್ದ ​​​​ಸರಳತ್ತಾಯ​ ​ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ​ಶ್ರೀಶ್ರೀ  ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.ಅವರು ಮಂಗಳವಾರ ಹಿರಿಯಡ್ಕ ಬಳಿಯ...
error: Content is protected !!