ಅಭಿಮಾನಿ ವೃಂದ ಕಂಡಂತೆ ಪ್ರೊಫೆಸರ್ ಯು. ಎಲ್. ಆಚಾರ್ಯರು~​​ಪೂರ್ಣಿಮಾ ಜನಾರ್ದನ್ ಕೊಡವೂರು

ಉಡುಪಿಯ ಉದ್ದಾಮ ಪಂಡಿತ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ,​ ​ಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ,​ ​ಪ್ರಸಿದ್ಧ ಹೋಮಿಯೋಪತಿ ವೈದ್ಯ, ಹೆಸರಾಂತ ಸಾಹಿತಿ, ಹತ್ತು ಹಲವು ವಿಶಿಷ್ಟತೆಗಳ ಸಂಗಮ ಉಡುಪಿ ಲಕ್ಷ್ಮೀನಾರಾಯಣ ಆಚಾರ್ಯರವರು ಪ್ರೊಫೆಸರ್ ಯು. ಎಲ್‌  ಆಚಾರ್ಯ ಎಂದು ಅಭಿಮಾನಿ ಬಳಗದಲ್ಲಿ ಜನಪ್ರಿಯರು. ಆಧುನಿಕ ವಿಜ್ಞಾನದೊಂದಿಗೆ  ಪರಂಪರಾಗತ ಜ್ಯೋತಿಷ್ಯ​ ​ಶಾಸ್ತ್ರದಲ್ಲೂ ಪಾಂಡಿತ್ಯ ಮೆರೆದು ಜನಸಾಮಾನ್ಯರ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಮಾರ್ಗವಾದ ಶ್ರೇಷ್ಠ ಗುರು ಇವರು.                             ಆಚಾರ್ಯರು ತಮ್ಮ ಮಕ್ಕಳೊಂದಿಗೆ… 

ಗಂಭೀರವದನ, ಮಗುವಿನ ಮನ, ನಿಖರ ಮಾತಿನ ಪ್ರಖರ ಜ್ಞಾನಿ ಆಚಾರ್ಯರು.  ಇವರ ಒಡನಾಟ ಸತ್ಯಸಂಧರಿಗೆ ಪುಳಕ ಹುಟ್ಟಿಸಿದರೆ ಸುಳ್ಳು ವಂಚನೆ ಮಾಡುವವರಿಗೆ ನಡುಕ ತಂದದ್ದು ಸುಳ್ಳಲ್ಲ . ತನಗೆ ಸರಿ ಎನಿಸಿ ಇತರರಿಗೂ ಒಳಿತು ಅನಿಸಿದಾಗ ಎಷ್ಟು ದೊಡ್ಡ ವ್ಯಕ್ತಿಯನ್ನು ಕೂಡಾ ಎದುರುಹಾಕಿಕೊಳ್ಳಲು ಹಿಂಜರಿಯದ ವ್ಯಕ್ತಿತ್ವ ಅವರದ್ದು. ಇವರ ಬಹುಮುಖ ಪ್ರತಿಭೆ ಒಂದು ಸಂಶೋಧನೆಗೆ ಗ್ರಾಸವಾಗುವ ವಿಷಯ. ಉಡುಪಿ ಕಲ್ಯಾಣಪುರ ಮಿಲಾಗ್ರಿಸ್  ಹೈಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿ, ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಉಡುಪಿಯ ಮಹಾತ್ಮಾ ಗಾಂಧಿ  ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅವರ ಸೇವೆ ಅನನ್ಯ .                                  ಪ್ರೊಫೆಸರ್ ಯು. ಎಲ್‌  ಆಚಾರ್ಯ

ಜ್ಞಾನಾರ್ಥಿಗಳಿಗೆ  ಅವರು ಸ್ವತಃ​ ​ ಬರೆದ ಮತ್ತು ಅನುವಾದಿಸಿದ  ಸುಮಾರು ಹದಿನೇಳು ಪುಸ್ತಕಗಳು ದಾರಿದೀಪ.​ ​ಅವ್ಯಕ್ತ ಮಾನವ (ಅನುವಾದ),​ ​ಮನುಷ್ಯ ಪರಿಸರ, ಭೌತಶಾಸ್ತ್ರದ ಪರಮಾಣು ಶಕ್ತಿಯ ಮೂಲ, ಗಣಿತದ ಮೂಲಕ್ರಿಯೆಗಳು ಹೀಗೆ  ಹತ್ತು ಹಲವು ಕೃತಿಗಳು ಹೆಸರಿಸಬಹುದಾದ ಕೃತಿಗಳು. ತೇ ಹಿ ನೋ ದಿವಸಾ ಗಥಾ ಎಂಬ ಅವರ ಆತ್ಮಚರಿತ್ರೆ ಪಿ ಎಚ್ ಡಿ ಮಾಡುವವರಿಗೆ ಒಂದು ಸಂಶೋಧನಾ ಕೃತಿಯೆಂದು ಅನಿಸಿದರೆ ಅತಿಶಯೋಕ್ತಿಯಲ್ಲ.​ ​ಮನೆಗೆ ವಿದ್ಯಾರ್ಥಿಗಳು,​ ​ಬಂಧು ಮಿತ್ರರು ಬಂದಾಗೊಮ್ಮೆ ಏನಪ್ಪಾ ಹೇಗಿದ್ದೀಯ ಎಂದೊಮ್ಮೆ ಗಂಭೀರ ಸ್ವರದಲ್ಲಿ ವಿಚಾರಿಸಿ ಮತ್ತೆ ತಮ್ಮ  ಯೋಚನಾ ಲಹರಿಯಲ್ಲಿ ಮುಳುಗುವ ಅವರನ್ನು ಕಂಡರೆ ಅವರ ಅಭಿಮಾನಿಗಳಿಗೆ ಭಯ-ಭಕ್ತಿ ಪ್ರೀತಿ ಗೌರವ.

                             ಆಚಾರ್ಯರ ತುಂಬು ಸಂಸಾರ…..
ಶಾರೀರಿಕ ಅಥವಾ ಮಾನಸಿಕವಾದ ಯಾವುದೇ ಸಮಸ್ಯೆಗೂ ಸಿದ್ಧ ಪರಿಹಾರ ನೀಡುವ ಇವರ ಖಡಕ್ ಜ್ಯೋತಿಷ್ಯಶಾಸ್ತ್ರ ವಿಚಾರಗಳಲ್ಲಿ  ಮೂಢನಂಬಿಕೆಗೆ  ಮಾತ್ರ ಯಾವತ್ತು ಸ್ಥಳವಿಲ್ಲ.  ದ್ವೇಷಿಸುವ ಇವರಿಗೆ ಮನುಷ್ಯ ಸಹಜ ಪ್ರೀತಿ ಮಮತೆ ವಾತ್ಸಲ್ಯ  ಜೀವಾಳ. ಆ ಕಾಲದಲ್ಲಿ ಹೋಮಿಯೋಪತಿಯ ಬಗ್ಗೆ ಅಪಾರ ಜ್ಞಾನ ಹೊಂದಿದ ಇವರ ವೈದ್ಯಕೀಯ ಜ್ಞಾನದಿಂದ ಆರೋಗ್ಯ ಸುಧಾರಿಸಿಕೊಂಡವರು ಅನೇಕರು. ಮನೆ ಮಂದಿಗೆಲ್ಲ ಅಣ್ಣನೆಂಬ ಗೌರವ ಸ್ಥಾನದಲ್ಲಿ ಸ್ಥಾನದಲ್ಲಿದ್ದು ತನ್ನ ಮಡದಿ‌ ಲಲಿತಾ ಆಚಾರ್ಯ,​ ​‌ಮಕ್ಕಳಾದ ವೇದವ್ಯಾಸ ಆಚಾರ್ಯ, ರಾಘವೇಂದ್ರ ಆಚಾರ್ಯ,​ ​ಹರಿದಾಸ ಆಚಾರ್ಯ ರಾವ್ ​ಹಾಗು ಜಯಂತಿ ಇವರೊಂದಿಗೆ ಪ್ರೀತಿಯಿಂದ ವ್ಯವಹರಿಸುವ ಇವರು ತಮ್ಮ ಒಡಹುಟ್ಟಿದವರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಒಲವಿನ ಸಂಬಂಧ ಇರಿಸಿಕೊಂಡಿದ್ದರು.
 
ಖ್ಯಾತ ಸಾಹಿತಿಗಳೊಂದಿಗೆ ಉಡುಪಿಯ ಪ್ರಸಿದ್ಧ ವ್ಯಕ್ತಿಗಳು,​ ​ಗೌರವಾನ್ವಿತರು,​ ​ಕನ ಪ್ರತಿನಿಧಿ ಗಳು ​​,​ ​ಹಲವಾರು ಕಾಲೇಜುಗಳ ವಿದ್ಯಾರ್ಥಿಗಳುಒಙದಿಗೆ ಸಹಜವಾಗಿ ವ್ಯವಹರಿಸುತ್ತಿದ್ದ ಅವರೊಂದು ಮೇರು ಪ್ರತಿಭೆ.  ಸುಸಂಸ್ಕೃತ ಮಕ್ಕಳು-ಮೊಮ್ಮಕ್ಕಳು, ಅಪಾರ ಅಭಿಮಾನಿ ಬಳಗ,​ ​ಒಂದಷ್ಟು ಶಿಷ್ಯವರ್ಗ ಅವರ ಆಸ್ತಿ‌. ಇಂದು ನಿತ್ಯ​ ​ಪೂಜನೀಯರಾದ  ಪ್ರೊ. ಯು ಎಲ್ ಆಚಾರ್ಯರ ಜನ್ಮ ಶತಮಾನೋತ್ಸವದ ಸಂಭ್ರಮ.  ಉಡುಪಿ ನಗರಸಭೆ ಅವರ ಮನೆಯ ಮುಂದಿನ ದಾರಿಯನ್ನು  ಯು ಎಲ್ ಆಚಾರ್ಯ ಮಾರ್ಗವೆಂದು ಹೆಸರಿಸಿ ಗೌರವ ತೋರಿದೆ. 
 
ಭಾರತೀಯ ಅಂಚೆ ಇಲಾಖೆ ಮಂಗಳೂರು ಅಂಚೆ ವಿಭಾಗವು ಅವರ  ಅಭಿಮಾನಿ ಬಳಗದ ವಿಶೇಷ ಪ್ರಯತ್ನದಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಅಂಚೆ ಗೌರವ ಸಲ್ಲಿಸುತ್ತಲಿದೆ. ಅಂದಿಗೂ, ಇಂದಿಗೂ, ಎಂದೆಂದಿಗೂ ಅವರ ಜ್ಞಾನ ಸಂಪತ್ತು ನಮಗೆ ದಾರಿದೀಪವಾಗಲಿ ಎಂದು ಆಶಿಸುತ್ತಾ ಕೀರ್ತಿಶೇಷ ಪ್ರೊ ಯು ಎಲ್ ಆಚಾರ್ಯ ರವರ ಜನ್ಮ ಶತಮಾನೋತ್ಸವದ ಈ  ಸಂದರ್ಭದಲ್ಲಿ ಅವರಿಗೆ ಶತ ನಮನಗಳು.

 
 
 
 
 
 
 
 
 
 
 

1 COMMENT

  1. Very very nice article.God bless both.Porrnima’s writing skill is blooming day by day.This atricle beats the best in this genre

Leave a Reply