ಸ್ತ್ರೀ ಸಂಕುಲಕೆ ನಮನ~ ✍️ ಭಾಗ್ಯಶ್ರೀ ಕಂಬಳಕಟ್ಟ

ಹೆಣ್ಣು ಕಣ್ಣಾರೆ ಕಾಣುವ ದೇವತೆ ಸ್ವರೂಪ
ತಾನುರಿದು ಬೆಳಕು ನೀಡುವ ನಂದಾದೀಪ
ಅನುಭವಿಸುವಳು ಕಷ್ಟ ಕಾರ್ಪಣ್ಯ ಕೂಪ
ಹೆಣ್ಣುಜನ್ಮವನು ಮೂದಲಿಸುವರು ಪಾಪ

ತಾನು ಒಬ್ಬಳೇ ಸಕಲ ನೋವನು ಸಹಿಸುತ
ಸರ್ವರೆದುರು ಮರೆಮಾಚಲು ನಗುನಗುತ
ಮನೆಯ ಒಳಗೂ ಹೊರಗೂ ದುಡಿಯುತ
ಬಯಸುವಳು ಸದಾಕಾಲ ಸಂಸಾರದ ಹಿತ

ಒಡಲಲಿ ಪ್ರೀತಿ ಕರುಣೆಗಳ ಸಮಾಗಮ
ವಾತ್ಸಲ್ಯಮಯಿಯಾದ ಸ್ತ್ರೀ ಅನುಪಮ
ಪಾವನವು ದೊರೆತ ಈ ಹೆಣ್ಣು ಜನುಮ
ಮಹಿಳೆಗೆ ಜಗದಲಿ ಯಾರಿಲ್ಲ ಸರಿಸಮ

ಪಡೆದಿದೆ ಈ ಜೀವ ಹೆಣ್ಣಿನಿಂದಲೇ ಜನನ
ಹೆತ್ತಬ್ಬೆಗೆ ಮುಡಿಪಾಗಿಡುವೆ ನನ್ನೀ ಜೀವನ
ಸ್ತ್ರೀ ಸಂಕುಲಕೆ ಸಲ್ಲಿಸುವೆ ಕೋಟಿ ನಮನ
ಅರ್ಪಿಸುವೆ ಮಮತಾಮಯಿಗೆ ಈ ಕವನ

ಜನನಿಗೆ ಸದಾ ಪ್ರೀತಿಯನು ನೀಡೋಣ
ಸ್ತ್ರೀ ಶಿಕ್ಷಣದಾ ಮಹತ್ವವನು ಸಾರೋಣ
ಮಾನಿನಿ ಮನದ ನೋವ ಅರಿಯೋಣ
ಮಹಿಳಾ ದಿನವ ಸಾರ್ಥಕಗೊಳಿಸೋಣ

 
 
 
 
 
 
 
 
 
 
 

Leave a Reply