೧) ನಮ್ಮ ಮುಖದ ಚರ್ಮದಲ್ಲಿ ನೈಸರ್ಗಿಕವಾಗಿ ಇರುವಂತಹ ಕೊಲಾಜೆನ್ ಹಾಗೂ ಎಲಾಸ್ಟಿನ್ ಅಂಶಗಳ ಉತ್ಪಾದನೆ ಕಡಿಮೆಯಾದಲ್ಲಿ
೨)ವಿರುದ್ಧ ಆಹಾರಗಳ ಸೇವನೆ ,ಪೌಷ್ಟಿಕ ಆಹಾರ ಸೇವನೆಯ ಕೊರತೆ ಹಾಗೂ ಕಡಿಮೆ ನೀರಿನ ಸೇವನೆ
೩) ಸೂರ್ಯನ ಅಲ್ಟ್ರಾವೈಲೆಟ್ ಕಿರಾಣಗಳಿಂದ ಹಾಗೂ ರಾಸಾಯನಿಕ ಕ್ರೀಮ್ಗಳ ಬಳಕೆ
೪) ಮಾನಸಿಕ ಒತ್ತಡ ಹಾಗೂ ನಿದ್ರಾಹೀನತೆ
೫) ಹಾರ್ಮೋನ್ ಗಳ ಅಸಮತೋಲನದಿಂದ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತದೆ .ಆಯುರ್ವೇದ ಉಪಚಾರಗಳು
ವಿಟಮಿನ್ ಸಿ ಇರುವಂತಹ ಆಹಾರ ಸೇವನೆ .: ವಿಟಮಿನ್ ಸಿ ಅನ್ನೋದು ಒಂದು antioxidant . ಇದು ನಮ್ಮ ಚರ್ಮದಲ್ಲಿ ನೈಸರ್ಗಿಕವಾಗಿ ಕೊಲಾಜೆನ್ ಅನ್ನು ಉತ್ಪಾದನೆ ಮಾಡಿ ತ್ವಚೆಯನ್ನು ಕಾಂತಿಯುತವಾಗಿರಿಸುತ್ತದೆ .ವಿಟಮಿನ್ ಸಿ ನೈಸರ್ಗಿಕವಾಗಿ ಬಹಳಷ್ಟು ತರಕಾರಿ ಮತ್ತು ಹಣ್ಣುಗಳಲ್ಲಿ ಲಭ್ಯವಿರುತ್ತದೆ . ಉದಾಹರಣೆಗೆ ಕಿತ್ತಳೆ, ಕಿವಿ ಹಣ್ಣು ,ಮಾವಿನ ಹಣ್ಣು ಪಪ್ಪಾಯ ಪರಂಗಿ ,ಪೇರಳೆ ,ಕಲ್ಲಂಗಡಿ ,ಸ್ಟ್ರಾಬೆರಿ ಇತ್ಯಾದಿ ಹಣ್ಣುಗಳು. ಬ್ರಾಕೊಲಿ ,ಟೊಮ್ಯಾಟೊ , ಹಸಿರು ಸೊಪ್ಪುಗಳು ಇತ್ಯಾದಿ ತರಕಾರಿಗಳು .
ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ತ್ವಚೆ ಕಾಂತಿಯುತವಾಗಿ ಇರುತ್ತದೆ ಹಾಗೂ ಮುಖದಲ್ಲಿ ತೇವಾಂಶ ಅಥವಾ moisture ಕಾಪಾಡಿಕೊಳ್ಳಲು ನೀರಿನ ಸೇವನೆ ಬಹಳ ಅತ್ಯಗತ್ಯ. ಆಯುರ್ವೇದ ಫೇಸ್ ಮಾಸ್ಕ್ ಗಳ ಬಳಕೆ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ಚರ್ಮ ಹೊಂದಿರುತ್ತಾರೆ ಹಾಗಾಗಿ ನಿಮ್ಮ ಆಯುರ್ವೇದ ತಜ್ಞರನ್ನು ಸಂಪರ್ಕಿಸಿ ನಿಮ್ಮ ತ್ವಚೆಯ ಅನುಗುಣವಾಗಿ ಸರಿಯಾದ ಮಾಸ್ಕ್ ಗಳನ್ನು ಬಳಸಿಕೊಳ್ಳಿ. ಆಯುರ್ವೇದ ತೈಲದಿಂದ( ಚಂದನ ತೈಲ ,ನಾಲ್ ಪಾಮಾರಾಧಿತೈಲ,ನಿಮ್ ತೈಲ) ಮುಖವನ್ನು ಮಸಾಜ್ ಮಾಡಿದರೆ ಮುಖದಲ್ಲಿ ರಕ್ತ ಸಂಚಾರ ಹೆಚ್ಚಾಗಿ ತ್ವಚೆ ಕಾಂತಿಯುತ ವಾಗುತ್ತದೆ .
ಅರಿಶಿನ ,ಅಲೋವೆರಾ, ಮಂಜಿಷ್ಟ ,ರಕ್ತಚಂದನ , ಚಂದನ ಕಹಿ ಬೇವು, ಲಾವಂಚದ ಬೇರು , ಯಷ್ಟಿ ಮಧು, ಹಾಲಿನ ಕೆನೆ ಮುಂತಾದವುಗಳಿಂದ ಫೇಸ್ ಮಾಸ್ಕ್ ನ್ನು ನಿಮ್ಮ ತ್ವಚೆಯ ಅನುಗುಣವಾಗಿ ತಯಾರಿಸಿಕೊಳ್ಳಬಹುದು. ನಿಯಮಿತ ಕಾಲದಲ್ಲಿ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಹಾಗೂ ಸ್ಕ್ರಬ್ ಮಾಡುವುದರಿಂದ ತ್ವಚೆಯಲ್ಲಿರುವ ಧೂಳು ಹಾಗೂ ಡೆಡ್ ಸ್ಕಿನ್ಗಳ ನಿವಾರಣೆಯಾಗಿ ಕಾಂತಿಯುತ ಚರ್ಮ ಪಡೆಯಬಹುದು .
ಸರಿಯಾದ ಸಮಯದಲ್ಲಿ ನಿದ್ರಿಸುವುದು ಹಾಗೂ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಲು ಯೋಗಾಸನ ಮತ್ತು ಪ್ರಾಣಾಯಾ ಮದ ನಿಯಮಿತ ಅಭ್ಯಾಸದಿಂದ ತ್ವಚೆಯುಯೌವನ ಭರಿತವಾಗಿ ಹಾಗೂ ಕಾಂತಿಯುತವಾಗಿ ಇರುತ್ತದೆ. ಹಾರ್ಮೋನ್ಗಳ ಅಸಮ ತೋಲನದಿಂದ ಮುಖವು ಕಾಂತಿಹೀನ ವಾಗಿದ್ದರೆ ನಿಮ್ಮ ಆಯುರ್ವೇದ ತಜ್ಞರಲ್ಲಿ ಸರಿಯಾದ ಔಷಧವನ್ನು ಮತ್ತು ಸಲಹೆಯನ್ನು ಪಡೆದುಕೊಳ್ಳಿ.
