ಮೌನವಾಗಿದ್ದು ವಾದ ಜಯಿಸುವ ಮಂದಿ~ಡಾ. ಶಶಿಕಿರಣ್ ಶೆಟ್ಟಿ

ಅದೊಂದು ವೃದ್ದಾಶ್ರಮ…96 ವರ್ಷದ ವಾಸುದೇವ ಗೌಡರಿಗೊಂದು ಆಸೆ ಇತ್ತು. ಅದನ್ನು ಅದೇ ಆಶ್ರಮದ ಓನರ್ ಬಳಿ ಹೇಳಿಕೊಂಡರು. ಓನರ್ ವಾಮನರು ಸೌಮ್ಯ ಸ್ವಭಾವದವರಾದರೂ ಚುರುಕು ಮತಿಯವರು.. ಗೌಡರ ಆಸೆ ತಾನು ಸಾಯುವ ಮೊದಲು ತನ್ನೆ ಮಗ, ಮಗಳು, ಬಂದು, ಗಳು ಊರಿನ ಮುಖಂಡರು ಎಲ್ಲರನ್ನೂ ಒಮ್ಮೆ ನೋಡಬೇಕು ಎಂಬುದಾಗಿತ್ತು. ಆದರೆ ಆ ಆಸೆ ಅಷ್ಟೊಂದು ಸುಲಭದ್ದಾಗಿರಲಿಲ್ಲ

*ವಾಸುದೇವ ಗೌಡರದ್ದು ನೂರಾರು ಎಕರೆ ಭೂಮಿ ಇತ್ತು. ಅಂದು ಹಳ್ಳಿಯ ಪೋಸ್ಟ್ ಆಫೀಸ್ ಅಲ್ಲಿ ಪೋಸ್ಟ್ ಮಾಸ್ಟರ್ ಕೆಲಸ ಸಿಕ್ಕಿತ್ತು. ನೂರಾರು ಎಕರೆ ತೋಟದ ಯಜಮಾನರಿಗೆ ಆ ಕೆಲಸ ಬೇಕಿದ್ದೀರಲಿಲ್ಲ, ಆದರೂ ಟೈಮ್ ಪಾಸ್ ಗೆಂದು ಜಾಬ್ ಸೇರಿದ್ದರು.. ಹಾಗೇ ಕೆಲಸ ಮಾಡುತ್ತಾ ನಿವೃತ್ತಿ ಯಾದಾಗ ಪೆoಷನ್ ಬರುತಿತ್ತು. ಯಾವಾಗ ಅವರ ಹೆಂಡತಿ ತೀರಿಕೊಂಡರೋ ಮನೆಯಲ್ಲಿ ಮಗ, ಮಗಳ ಯಜಮಾನಿಕೆ ಶುರುವಾಗ ಹತ್ತಿತು. ತನ್ನದೇ ಮನೆಯಲ್ಲಿ ಗೌಡರು ಒಬ್ಬಂಟಿಯಾಗಿ ಮೂಲೆ ಗುಂಪಾದರು ಸ್ವಾಭಿಮಾನಿ ಗೌಡರಿಗೆ ಈ ಬದುಕು

ಇಷ್ಟವಾಗಿರಲಿಲ್ಲ… ಹಾಗಾಗಿ ಎಲ್ಲಾ ಬಿಟ್ಟು ಸಮೀಪವೇ ಇದ್ದ ವೃದ್ದಾಶ್ರಮ
ಸೇರಿದ್ದರು ಗೌಡರು. ಹೇಗೋ

ಅವರಿಗೆ ಬರುತಿದ್ದ ಪೆಂನ್ಷನ್ ಹಣ ಸಾಕಿತ್ತು ಅಲ್ಲಿ

ವಿಪರ್ಯಾಸ ಎಂದರೆ ಆ ದಿನದಿಂದ ಈ ವೃದ್ಧರು ಯಾರಿಗೂ ಬೇಕಿರಲಿಲ್ಲ. ಕಳೆದ 8 ವರ್ಷಗಳಿಂದ ಅವರ ಕಡೆಯ ಒಬ್ಬನೇ ವ್ಯಕ್ತಿ ಬಂದಿರಲಿಲ್ಲ ಆಶ್ರಮಕ್ಕೆ.

ಸೌಮ್ಯ ಸ್ವಭಾವ ದ ವಾಮನರು ತಾಮ್ಮೊಳಗೆ ಲೆಕ್ಕಾಚಾರ ಹಾಕಿದ್ದರು, ಮಕ್ಕಳಿಗೆ, ಹತ್ತಿರದ ಸಂಬಂಧಿ ಯೊಬ್ಬರಿಗೆ ಹಾಗೇ ಊರ ಮುಖಂಡನನ್ನು ಭಾನುವಾರ ದಂದು ಆಶ್ರಮಕ್ಕೆ ಬರಹೇಳಿದ್ದರು. ಗೌಡರ ಕೊನೆಯ ದಿನಗಳು ಬಂದಿದೆ ಅವರ ಆಸ್ತಿ ಹಂಚುವ ಸಲುವಾಗಿ ನೀವೆಲ್ಲ ಬನ್ನಿ ಎಂದಿದ್ದರಿಂದ ಅಂದು ಆಸ್ತಿ ಗಾಗಿ ಎಲ್ಲರೂ ಬಂದಿದ್ದರು ಅಲ್ಲಿ..

ಅಜ್ಜನಿಗೆ ಮೊದಲೇ ವಿಷಯ ಹೇಳಿದ್ದರು.. ಅಲ್ಲಿ ಕ್ಷೀಣ ಸ್ವರ ದಲ್ಲಿ ಮಾತನಾಡಿ ಎಂದು. ಅಲ್ಲಿ ಅಜ್ಜನ ಮಗ, ಮಗಳು, ಹತ್ತಿರದ ಬಂಧು ಒಬ್ಬರು, ಊರಿನ ಮುಖಂಡ ಹೀಗೆ 4 ಜನ ಅಲ್ಲಿ ಸುತ್ತುವರಿದಿದ್ದರು. ವೃದ್ದಾ ಶ್ರಮದ ಯಜಮಾನ ಹೇಳಿದ.. ಕಳೆದ ಹಲವು ವರ್ಷಗಳಿಂದ ವಾಸುದೇವ ಗೌಡರನ್ನು ನಾವು ನೋಡಿ ಕೊಳ್ಳುತ್ತಿದ್ದೇವೆ.. ಈಗ ಅಜ್ಜನಿಗೆ ವಯಸ್ಸಾಗಿದೆ.. ಸಾಯುವ ಮೊದಲು ಅವರ ನೂರಾರು ಎಕರೆ ಭೂಮಿ ಹಂಚಲು ನಿರ್ಧರಿಸಿದ್ದಾರೆ… ಅದಕ್ಕಾಗಿ ನಿಮ್ಮನ್ನೆಲ್ಲ ಕರೆದಿದ್ದೇವೆ ಇಲ್ಲಿ ಅಜ್ಜನ ಆಸ್ತಿ ಪಾಲಾಗಲು ವೀಲ್ ಬರೆಯಬೇಕಿದೆ,ಅಜ್ಜ ನ ಧ್ವನಿ ತುಂಬಾ ಕ್ಷೀಣಿನಿಸಿದೆ ನನಗಂತೂ ಅರ್ಥ ಆಗುತ್ತಿಲ್ಲ ನೀವು ಒಬ್ಬೊಬ್ಬರೇ ಅವರ ಬಾಯಿ ಬಳಿ ಕಿವಿ ಇಟ್ಟು ಅವರೇನು ಹೇಳುತ್ತಾರೆ ಹೇಳಿ ಎಂದು ಮೊದಲು ಮಗನನ್ನು ಕಳಿಸಿದರು.

ಮಗ ಬಗ್ಗಿ ತಂದೆಯ ಬಾಯಿ ಬಳಿ ಕಿವಿ ಅಗಲಿಸಿದ… ಸ್ವಲ್ಪ ಹೊತ್ತು ಕೇಳಿಸಿ ಕೊಂಡವನೆ ಮುಖ ಅಗಲಿಸಿ ಹೇಳಿಯೇ ಬಿಟ್ಟ..

ತಂದೆಯ ನೂರಾರು ಕೋಟಿ ಜಮೀನು ನನ್ನ ಹೆಸರಿಗೆ ಬರೆಯಬೇಕಂತೆ ಎಂದು ಬಿಟ್ಟ..

ತಕ್ಷಣ ತಂದೆಯಲ್ಲಿ ಮಗಳನ್ನು ಬಿಡಲಾಯಿತು.ಮಗಳೂ ಬಗ್ಗಿ ತಂದೆಯ ಬಾಯಿ ಬಳಿ ಕಿವಿ ತಂದಳು ಒಂದೆರಡು ನಿಮಿಷದ ಬಳಿಕ ಜೋರಾಗಿ ಹೇಳಿದಳು ಮುಖದಲ್ಲಿ ನಗುವ ತಂದುಕೊಂಡು. ಅಪ್ಪ ಹೇಳಿದ್ದು ಅವರ ಎಲ್ಲಾ ಆಸ್ತಿ ಅವರ ಮಗಳಿಗೆ ಕೊಡಬೇಕೆಂದು, ಮಗನ ಮೇಲೆ ನಂಬಿಕೆ ಇಲ್ಲ ಎಂದರು ಎಂದಾಗ ಮಗ ಅಲ್ಲೇ ಹಲ್ಲು ಕಡಿಯುತಿದ್ದ

ಆಗಲೂ ಸಮಾಧಾನವಾಗೇ ಇದ್ದ ಆಶ್ರಮದ ಯಜಮಾನ ಆ ಸಮೀಪದ ಬಂದುವನ್ನು ಕರೆದ…ಒಂದೆರಡು ನಿಮಿಷ ಆಲಿಸಿದ ಆತ ಜೋರಾಗಿ ಹೇಳಿದ ಅಜ್ಜನಿಗೆ ಮಕ್ಕಳ ಮೇಲೆ ನಂಬಿಕೆಯೇ ಹೊರಟು ಹೋಗಿದೆಯಂತೆ ಆಸ್ತಿ ಯನ್ನು ನನ್ನ ಹೆಸರಿಗೆ ವರ್ಗಾಯಿಸ ಬೇಕೆಂದು ಹೇಳುತ್ತಿದ್ದಾರೆ ಎಂದಾಗ..
ಇಷ್ಟೋತ್ತು ಸುಮ್ಮಗಿದ್ದ ಅಜ್ಜನ ಮುಖ ಕೆಂಪಾಗಿತ್ತು

ಮುಂದೆ ಊರಿನ ಮುಖಂಡನನ್ನು ಬಿಡಲಾಯಿತು ಅಜ್ಜನ ಕ್ಷೀಣ ಧ್ವನಿ ಅವನಿಗಷ್ಟೇ ಕೇಳಿಸಿತ್ತು ಎಂಬಂತೆ ಜೋರು ಧ್ವನಿಯಲ್ಲಿ ಹೇಳಿಯೇ ಬಿಟ್ಟ ಅಜ್ಜನಿಗೆ ಯಾರಮೇಲೂ ನಂಬಿಕೆ ಇಲ್ಲ ವಂತೆ ಆಸ್ತಿಯನ್ನು ನನಗೆ ಕೊಡುತ್ತಾನಂತೆ ಎಂದಾಗ ಅಲ್ಲಿ ಎಲ್ಲರೂ ಪರಸ್ಪರ ಕಚ್ಚಾಡ ತೊಡಗಿದರು..

*ಇಷ್ಟೋತ್ತು ಮೌನ ವಾಗಿದ್ದ ವಾಸುದೇವ ಗೌಡರ ತಾಳ್ಮೆಯ ಕಟ್ಟೆ ಒಡೆದಿತ್ತು.. ಮಲಗಿದಲ್ಲಿಂದ ಎದ್ದು ಜೋರಾಗಿ ಕೂಗಿ ಹೇಳಿದರು… ಅಯ್ಯ ಚಂಡಾಲ ರ ನಿಮಗೆ ಹಾಸಿಗೆ ಹಿಡಿದ ಅಪ್ಪ ಬೇಡ ಅಪ್ಪನ ಆಸ್ತಿ ಬೇಕಾ… ನಾನು ಆಗದಿಂದ ಹೇಳುತ್ತಿದ್ದೇನೆ ನನ್ನೆಲ್ಲ ಆಸ್ತಿ ಯನ್ನು ನನ್ನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ಈ ಆಶ್ರಮಕ್ಕೆ ಬರೆಯುತ್ತಿದ್ದೇನೆ.. ನನ್ನಂತ ಇನ್ನಷ್ಟು ನತದೃಷ್ಟ ತಂದೆ ತಾಯಿಯರಿಗೆ ಆಶ್ರಮ ಆಶ್ರಯ ಯವಾಗಲಿ… ಎಂದು ಕಣ್ಣೀರಿನೊಂದಿಗೆ ಮತ್ತೆ ಮಲಗಿಬಿಟ್ಟ.

ಇಷ್ಟು ಹೊತ್ತು ವಾದ ಮಾಡುತಿದ್ದ ಮಕ್ಕಳು ಬಂದುಗಳು, ಊರ ಮುಖಂಡ ಅಲ್ಲಿಂದ ಕಾಲ್ಕಿತ್ತಿದ್ದರು…

ಆ ಆಶ್ರಮದ ಓನರ್ ಮಾತ್ರ ಮೌನವಾಗಿದ್ದೇ ವಾದ ಜಯಿಸಿಬಿಟ್ಟಿದ್ದ …

ಇಂತಹ ಕೇವಲ ಆಸ್ತಿಗಾಗಿ ನಾಟಕ ಮಾಡುವ ಮಗ, ಮಗಳು, ಸಂಬಂದಿಗಳು, ಊರವರು ಬಹಳಷ್ಟು ಇದ್ದಾರೆ ನಮ್ಮ ಸುತ್ತಮುತ್ತ, ಹಾಗೇ ಏನೂ ಮಾಡದೆ ಎಲ್ಲಾ ನಾನೇ ಮಾಡಿದೆ ಎನ್ನುವವರೂ ಸಿಗಬಹುದು ನೋಡಿ, ತಂದೆ ತಾಯಿಯರ ಹೆಣ ಬೇಡ ಅವರ ಹಣ ವಷ್ಟೇ ಬೇಕು ಎನ್ನುವ ಮಕ್ಕಳು ಮತ್ತೆ ಮತ್ತೆ ಮುಟ್ಟಿ ನೋಡಿಕೊಳ್ಳಬೇಕು ಹಾಗೇ ತಮ್ಮ ಆಸ್ತಿ ಹಂಚಿ ಹೋಗುವ ತಂದೆ ತಾಯಿಗಳು ಬಹಳ ಕಮ್ಮಿ ಯಾಕೆಂದರೆ ಹೆತ್ತ ಕರುಳು ಹಾಗೇ ಮಾಡಲು ಒಪ್ಪುವುದಿಲ್ಲ ಆದರೂ ಅಲ್ಲೊಂದು ಇಲ್ಲೊಂದು ಹೀಗೆ ವಾದ ಮಾಡದೇ ಮೌನವಾಗಿದ್ದು ಪಂದ್ಯ ಜಯಿಸುವ ಮಂದಿ ಇರಬಹುದು ಅಲ್ಲವೇ????….

ಉದಾಹರಣೆ
1) ಅಡುಗೆ ಮಾಡಿ ಊಟ ಹಾಕುವಾಗ ತಾಯಿ ಮಕ್ಕಳಿಗೆ ಹೇಳುತ್ತಾಳಂತೆ ಇಷ್ಟು ಕಷ್ಟ ಪಟ್ಟು ಅಡುಗೆ ತಯಾರಿಸಿ ಊಟ ಹಾಕಿ ಸಾಕುವವಳು ನಾನು ಎನ್ನುವಾಗ ದೂರದಲ್ಲಿ ಅಂದಿನ ಅಕ್ಕಿ ಬೇಳೆಗೆಂದು ದಿನವಿಡೀ ಬಿಸಿಲಲ್ಲಿ ದುಡಿದು ಕೈಯ್ಯಲ್ಲಿ ಎದ್ದಿರುವ ಬೊಬ್ಬೆ ಗಳಿಗೆ ಎಣ್ಣೆ ಸವರುತ್ತ ಮಕ್ಕಳು ಉಣ್ಣು ವುದನ್ನು ಮೌನ ವಾಗಿ ವೀಕ್ಷಿಸುವ ತಂದೆ.

2) ವೃದ್ದಾಪ್ಯ ದಲ್ಲಿ ಹಾಸಿಗೆ ಯಲ್ಲಿದ್ದು ಊಟ ಕೊಡುವ ಮಗ, ನಿನಗೆ ಊಟ ಕೊಡುತ್ತಿರುವವನು ನಾನು ಎಂದು ಅಹಂಕಾರದಿಂದ ನುಡಿಯುವುದನ್ನೇ ಖುಷಿ ಇಂದ ಕೇಳುತ್ತಿರುವ ತಾಯಿ. ಆ ನೋವಲ್ಲೂ ಮೌನವಾಗೆ ಮಗನ ಗೆಲುವನ್ನು ಸಂಭ್ರಮಿಸುತ್ತಾಳೆ ಅವಳು

3)ಮಗಳು ದಾರಿ ತಪ್ಪಿದಾಗ ತಾಯಿಗೆ ಬೈದರೆ, ಅದೇ ಮಗಳು ಯಶಸ್ವೀ ಯಾದಾಗ ತಂದೆ ನೋಡಲ್ಲಿ ನನ್ನ ಮಗಳು ಎನ್ನುತ್ತಾನೆ.

ತಾಯಿ ಮಾತ್ರ ಎಲ್ಲವನ್ನೂ ಸಹಿಸಿ ಕೊಂಡು ಮಗಳ ಗೆಲುವಲ್ಲಿ ತನ್ನ ಗೆಲುವನ್ನು ಕಾಣುವಳು.

ಅದೆಷ್ಟು ವಿಚಿತ್ರ ನೋಡಿ…ಇಂದಿನಿಂದ ಇಂತಹ

ಮೌನ ವಾಗಿದ್ದು ವಾದ ಜಯಿಸುವ ಮಂದಿಯನ್ನು ಗೌರವಿಸಲು ಕಲಿಯೋಣವೇ .

 
 
 
 
 
 
 
 
 

Leave a Reply