ನನ್ನ ಕತೆಯ ಕಳ್ಳರಿದ್ದಾ ರೆ ಎಚ್ಚರಿಕೆ~ ಡಾ.ಶಶಿಕಿರಣ್ ಶೆಟ್ಟಿ

Flat design Piracy concept. Thief stealing light bulb idea from a head. Cartoon Vector Illustration.

ಆ ಊರಲ್ಲಿದ್ದ ಮೈಕ್ ಗಳೆಲ್ಲ ಬಾರಿ ಬೇಸರದಲ್ಲಿದ್ದವು, ನಮಗೆ ವಾಯ್ಸ್ ಇಲ್ಲ, ನಾವು ಕೇವಲ ಬೇರೆಯವರ ವಾಯ್ಸ್ ಅನ್ನಷ್ಟೇ ಪಸರಿಸುತ್ತೇವೆ, ನಮ್ಮ ವಾಯ್ಸ್ ಪಸಾರಿಸುವುದಿರಲಿ, ಒಂದೆರಡು ಡೈಲಾಗ್ ಹೇಳುವುದಾಗಲಿ ಸಾಧ್ಯವಿಲ್ಲ ನಮ್ಮಲ್ಲಿ, ಎಂದು ದುಃಖದಿಂದ ಭಗವಂತನಲ್ಲಿ ದೂರಿದವಂತೆ.. ಎಲ್ಲಾ ಮಾತುಗಳನ್ನು ಕೇಳಿದ ಭಗವಂತ ಹೇಳಿದ್ದು ಹೀಗೆ… ಹೌದು ಹೋದಜನ್ಮದಲ್ಲೂ ನೀವು ಇದೇ ಮಾಡುತ್ತಿದ್ದಿರಿ, ಯಾರೋ ಬರೆದ ಕತೆಗಳನ್ನು, ಅವರ ಹೆಸರು ತೆಗೆದು ಸೋಶಿಯಲ್ ಮೀಡಿಯಾ ದ ನಿಮ್ಮ ವಾಲ್ ಅಲ್ಲಿ ಹಾಕುತಿದ್ದೀರಿ ಅದಕ್ಕೇ ಈ ಜನ್ಮದಲ್ಲಿ ಈ ಶಿಕ್ಷೆ ನಿಮಗೆ ಎಂದರಂತೆ…ಈ ಬಾರಿ ನಾಚಿಕೆ ಯಿಂದ ತಲೆ ತಗ್ಗಿಸುವ ಕೆಲಸ ಮೈಕ್ ನದಾಗಿತ್ತು..

ಯಾರೋ ನಿನ್ನ ತಪ್ಪುಗಳನ್ನು ಎತ್ತಿ ತೋರಿಸಿ ಹಂಗಿಸುತ್ತಿದ್ದರೆ.. ಇನ್ಯಾರೋ ನೀ ಆಡಿದ ಮಾತುಗಳನ್ನು ನೀ ಬರೆದ ಕತೆಗಳನ್ನು ಕದ್ದು… ಅಲ್ಲಿ ಇರುವ ನಿನ್ನ ಹೆಸರನ್ನು ತೆಗೆದು ತಮ್ಮ ಪೇಜ್ ಗಳಲ್ಲಿ ಪಸರಿಸುತ್ತಿದ್ದಾರೆ ಎಂದರೆ.. ನಿನಗೆ ಅನ್ನಿಸಬೇಕು ಇವರು ನಿನ್ನ ಮಾತುಗಳಿಂದ ಒಂದೇ ಪ್ರಭಾವಿತಾರಾಗಿದ್ದಾರೆ ಇಲ್ಲ ನಿನ್ನ ಮೇಲೆ ಹೊಟ್ಟೆ ಉರಿ ಹೊಂದಿದ್ದಾರೆ ಎಂದು ಅರ್ಥ.

ಇಲ್ಲಿ ಡಿ.ವಿ.ಜಿ. ಯವರು ಹೇಳಿದಂತೆ ಹೊಟ್ಟೆ ತುಂಬಿದ ತೋಳ ತಾನ್ ಮಲಗೀತು ನೀನ್ ಪೇರರ ದಿಟ್ಟಿಸುವಿಯಲ್ಲೋ ( ತೋಳ ಕೂಡಾ ಹೊಟ್ಟೆ ತುಂಬಿದ ಮೇಲೆ ಮಲಗುತ್ತದೆ ಆದರೆ ಹೊಟ್ಟೆ ಉರಿ ಇರುವ ಮನುಷ್ಯ ಸುಮ್ಮನೆ ಇರಲಾರ ), ಹಾಗೇ ಪುರಂದರ ದಾಸರು ಹೇಳಿದಂತೆ ನಿಂದಕರಿರಬೇಕು, ಇರಬೇಕು ನಿಂದಕರಿರಬೇಕು, ಹಂದಿ ಇದ್ದಾರೆ ಕೇರಿ ಶುದ್ದಿ ಹ್ಯಾಂಗೋ ಹಂಗೆ ನಿಂದಕರಿರಬೇಕು…. ಅಂದಂದು ಮಾಡಿದ ಪಾಪ ಕರ್ಮ ವೆಂಬ ಮಲ ತಿಂದು ಹೋಗುವರಯ್ಯ ನಿಂದಕರು … ಅಲ್ಲವೇ ಈ ರೀತಿ ಕತೆಯ ಹೆಸರು ತೆಗೆದು ಪೋಸ್ಟ್ ಮಾಡುವ ಮಂದಿ ಯನ್ನು ಕೇರಿ ಮೇಲಿರುವ,ಮಲ ತಿಂದು ಹೋಗುವ ಹಂದಿಗೆ ಹೋಲಿಸೋಣ… ಆ ಮೂಲಕ ನನ್ನoತಹ ಲೇಖಕರ ಕತೆಗಳು ಇನ್ನಷ್ಟು ವೈರಲ್ ಮಾಡಿಸಿದ ಇಂತಹ ಹಂದಿಗಳಿಗೆ ಈ ಕತೆಯನ್ನು ಅರ್ಪಿಸೋಣವೇ?

 
 
 
 
 
 
 
 
 
 
 

Leave a Reply