ನಾಯಿ ಹಾಡುವುದಲ್ಲ ಬೊಗಳ ಬೇಕು : ಕೋಗಿಲೆ ಬೊಗಳುವುದಲ್ಲ ಹಾಡಬೇಕು~ ಡಾ. ಶಶಿಕಿರಣ್ ಶೆಟ್ಟಿ

2023 ರ ಮೊದಲ ದಿನ ಆ ನಾಯಿಗೆ ಕೋಗಿಲೆಯನ್ನು ನೋಡಿ ಹೊಟ್ಟೆ ಉರಿಯುತಿತ್ತು. ನಾನು ಅದರ ತರ ಹಾಡಬೇಕು ಎಂದು ನಿರ್ಣಯಿಸಿತ್ತು ಮನಸ್ಸಲ್ಲಿ. ಸಮಯ ಸಿಕ್ಕಾಗೆಲ್ಲ ಕೋಗಿಲೆಯ ಧ್ವನಿಯನ್ನು ಅನುಕರಿಸಲು ಪ್ರಯತ್ನಿಸಿತ್ತು..ಅಂದು ರಾತ್ರಿಯೂ ಅದರ ಗದ್ದಲ ಅತಿಯಾದಾಗ ರೋಸಿ ಹೋದ ಮನೆಯಜಮಾನ ದೊಡ್ಡ ದೊಣ್ಣೆಯಲ್ಲಿ ಹೊಡೆದು ಸೊಂಟದ ಏಲುಬನ್ನೇ ಮುರಿದು ಬಿಟ್ಟ.. ಈಗ ಹಾಡುವುದು ಬಿಟ್ಟು ಬೊಗಳಲು ಆರಂಭಿಸಿತ್ತು ನಾಯಿ..ಅದಕ್ಕೆ ತಡವಾಗಿ ಅನ್ನಿಸಿತ್ತು ನಾನು ಬೊಗಳಿದರೇನೇ ಶ್ರೇಷ್ಠ ಎಂದು..

ಅದೆಷ್ಟು ಸುಂದರ ಮಾತು ಹೇಳಿದೆ ನೋಡಿ ಈ ನಾಯಿ, ನಮ್ಮಲ್ಲೂ ಇದ್ದಾರೆ ಈ ನಾಯಿ ಜಾತಿಯವರು, ಹೊಸ ವರ್ಷ ಎಂದು ಹೊಸ ಹೊಸ ನಿರ್ಣಯ ತೆಗೆದು ಕೊಳ್ಳುವ ಮಂದಿ..

ಮದುವೆ ಎಂಬ ಪವಿತ್ರ ಸಂಬಂಧವನ್ನೇ ಹಾಳು ಮಾಡಿ ಲಿವಿಂಗ್ ಟುಗೆದರ್ ಸಂಬಂಧಕ್ಕೆಒಳಗಾಗುವವರು, ಸ್ಟೇಟಸ್ ಮೆಂಟೇನ್ ಮಾಡ ಬೇಕು ಎಂದು ಕುಡಿತ, ತಂಬಾಕು, ಡ್ರಗ್ಸ್ ನಂತಹ ದುಶ್ಚಟ ಗಳಿಗೆ, ಬದಲಾವಣೆಯ ಹೆಸರಲ್ಲಿ ಹಾಳಾಗುವ ಯುವ ಜನತೆಗೆ ನಾಯಿ ಕೊಟ್ಟ ಸಂದೇಶ ಮನ ಮುಟ್ಟುವಂತಿದೆ ಅಲ್ಲವೇ..

ಬದಲಾವಣೆ ವರ್ಷದ ಮೊದಲದಿನ ಒಳ್ಳೆಯದೇ
ಆದರೆ ಆ ಬದಲಾವಣೆ ನಿಮ್ಮ ವ್ಯಕ್ತಿತ್ವ ವನ್ನು ಇನ್ನಷ್ಟು ಮೇಲಕೇರಿಸಲಿ….

ನೆನಪಿರಲಿ ನಾಯಿ ಹಾಡುವುದಲ್ಲ ಬೊಗಳಬೇಕು, ಕೋಗಿಲೆ ಬೊಗಳುವುದಲ್ಲ ಹಾಡಬೇಕು.
ಅಲ್ಲವೇ??

 
 
 
 
 
 
 
 
 
 
 

Leave a Reply