ನೋಯಿಸಿದವರನ್ನು ಕ್ಷಮಿಸಿಬಿಡಿ.. ಅವರ ಸಂತೋಷಕ್ಕಾಗಿ ಅಲ್ಲ, ನಿಮ್ಮ ನೆಮ್ಮದಿಗಾಗಿ~ ಡಾ. ಶಶಿಕಿರಣ್ ಶೆಟ್ಟಿ.

ಕಥೆಯಲ್ಲ ಜೀವನ

ಅದು ಅವರ 100 ನೆಯ ಜನ್ಮದಿನ. ಸುತ್ತ ಬಹಳಷ್ಟು ಜನ,ಬಂದುಗಳು, ಸ್ನೇಹಿತರು, ಮಕ್ಕಳು ಮರಿಮಕ್ಕಳು, ಪ್ರೆಸ್ ನವರು ಎಲ್ಲಾರೂ ಸೇರಿದ್ದರು. ಎಲ್ಲರೂ ಆ ಅಜ್ಜನಿಗೆ ಕೇಳಿದ್ದು ಒಂದೇ ಪ್ರಶ್ನೆ ಅಜ್ಜ ಶತಾಯುಷಿಗಳಾಗಲು ಬಯಸುವವರಿಗೆ ನಿಮ್ಮ ಹಿತವಚನ ಏನು? ಎಂದು.. ಅಜ್ಜ ಬೊಜ್ಜುಬಾಯಲ್ಲಿ ನಗುತ್ತಾ ಮೈಕ್ ಹಿಡಿದರು..

ಮೊದಲನೆಯದು ನಗುತ್ತಾ ನಗಿಸುತ್ತಾ ಬದುಕುವ ವಿಧಾನ.ಯಾವುದನ್ನೂ, ಯಾವ ವಿಷಯವನ್ನು ಗಂಭೀರವಾಗಿ ತೆಗೆದು ಕೊಳ್ಳದೆ ಬದುಕುವ ಪರಿಯಷ್ಟೇ ನಮ್ಮನ್ನು ಶತಾಯುಷಿಗಳಾಗಿಸಬಲ್ಲುದು… ನನ್ನ ಜೀವನ ವನ್ನೇ ತೆಗೆದುಕೊಳ್ಳಿ..10 ನೆಯ ತರಗತಿ ಫೇಲ್ ಆದೆ .. ಆದರೆ ಗಂಭೀರ ವಾಗಿ ಸ್ವೀಕರಿಸಲಿಲ್ಲ.. ಅದನ್ನೇ ಗಂಭೀರ ವಾಗಿ ತೆಗೆದುಕೊಂಡ ನನ್ನ ಸ್ನೇಹಿತ ಅಂದೆ ಆತ್ಮ ಹತ್ಯೆ ಮಾಡಿಕೊಂಡಿದ್ದ.

3 ಬಾರಿ ಸ್ವಂತ ಉದ್ಯೋಗ ಮಾಡಿ ಕೈ ಸುಟ್ಟುಕೊಂಡೆ ಆದರೂ ಮುಖದ ನಗು ಕಮ್ಮಿ ಆಗಿರಲಿಲ್ಲ, ನನ್ನ ನೋಡಿ ಜನ ನಕ್ಕರು ಆಗಲು ನಾನು ನಗುತ್ತಿದೆ ನನ್ನನ್ನೇ ನೋಡಿ, ಮದುವೆ ನಾನಿಷ್ಟ ಪಟ್ಟವಳೊಂದಿಗೆ ಆಗಲಿಲ್ಲ ಅವಳು ನಾನು ಬಿಸಿನೆಸ್ ಅಲ್ಲಿ ಸೋತೆ ಎಂದು ಯಾರೋ ದೊಡ್ಡ ಬಿಸಿನೆಸ್ ಮ್ಯಾನ್ ಅನ್ನು ಮದುವೆ ಯಾದಳು, ಆಗಲೂ ನಾನು ನಗುತ್ತಿದ್ದೆ ಯಾಕೆಂದರೆ ಮುಂದೆ 15 ವರ್ಷದ ದಂಪತ್ಯ ದ ನಂತರ ಅವಳೇ ನನ್ನಬಳಿ ಬಂದಿದ್ದಳು.

ಅಂದಿನ ಅವಳ ನಿರ್ಣಯ ತಪ್ಪು ಎಂದಳು, ಪಾಪ ಆ ಬಿಸಿನೆಸ್ ಮೆನ್ ಗೆ ಹೆಂಡತಿಗೆ ಕೊಡಲು ದಿನದಲ್ಲಿ 1 ಗಂಟೆಯೂ ಸಮಯವಿರಲಿಲ್ಲ ಅಂತೆ ಪಾಪ ಅವಳಾಗ ಬೇಸರದಲ್ಲಿದ್ದಳು, ನಾನು ಮಾತ್ರ ಆಗಲೂ ನಗುತ್ತಿದ್ದೆ ಯಾಕೆಂದರೆ ನಾನಗಾಗಲೇ ಹೆಂಡತಿ ಜೊತೆ ಮಗ ಮಗಳು ಇಬ್ಬರೂ ಇದ್ದರು, ಮುಂದೆ ಮಗಳು ಬೇರೆ ಜಾತಿಯ ಹುಡುಗನನ್ನ ಮದುವೆ ಯಾದಳು ನಮ್ಮ ಮಾತು ಮೀರಿ, ಸುತ್ತ ಮುತ್ತಲಿನ ಜನ ನಗುವುದ ನೋಡಿ ನನ್ನ ಹೆಂಡತಿ ದುಖಿ ಸುತ್ತ ಅದನ್ನೇ ತಲೆಗೆ ತೆಗೆದುಕೊಂಡು ಅವಳೂ ಸತ್ತಳು ,ನಾನು ಆಗಲೂ ನಗುತಿದ್ದೆ ಯಾಕೆಂದರೆ ಮೊದಲಿನಿಂದಲೂ ನನ್ನೊಂದಿಗಿದ್ದ ನಗುವಿಗೆ ಮೋಸ ಮಾಡಲು ಮನಸ್ಸಿರಲಿಲ್ಲ ನನಗೆ.

ಮುಂದೆ ಮಗಾ ಕೂಡಾ ನನ್ನ ಮಾತು ಕೇಳಲಿಲ್ಲ. ಹೀಗೆ ವರ್ಷ ನೂರು ಕೆಳೆದರೂ ನಗುವನ್ನು ನಗಿಸುವುದನ್ನು ಇನ್ನೂ ಬಿಟ್ಟಿಲ್ಲ.ಯಾಕೆಂದರೆ ಯಾವ ಭಾವನೆ ಗಳೂ ನನ್ನ ನಗುವನ್ನು ಕಸಿದು ಕೊಳ್ಳದಂತೆ ನೋಡಿಕೊಂಡೆ, ಹಾಗಾಗಿ ನನಗೆ ಬಿಪಿ ಇಲ್ಲ, ಶುಗರ್ ಇಲ್ಲ, ಹೃದಯ ಎಲ್ಲಾ ಓಕೆ ಯಾವುದಕ್ಕೂ ಮಾತ್ರೆ ಇಲ್ಲ ನನ್ನೊಂದಿಗೆ ಹುಟ್ಟಿದ ಸ್ನೇಹಿತರು, ಸಂಬಂಧಿ ಗಳು ಎಲ್ಲರೂ ಹೋಗಿ ಆಗಿದೆ ನಾನು ಮಾತ್ರ ಇವತ್ತಿಗೂ ನಗುತ್ತಿದ್ದೇನೆ..

ನೆನಪಿಡಿ ಸಿಟ್ಟು,ರೋಷ,ಸೇಡು ಇದೆಲ್ಲವನ್ನು ಬಿಟ್ಟರಷ್ಟೇ 100 ವರ್ಷ ಬದುಕಲು ಸಾಧ್ಯ ಹಾಗಾಗಿ.. ನೋಯಿಸಿದವರನ್ನು ಕೂಡಾ ಕ್ಷಮಿಸಿಬಿಡಿ ಅವರ ಸಂತೋಷಕ್ಕಾಗಿ ಅಲ್ಲ ನಮ್ಮ ನೆಮ್ಮದಿಗಾಗಿ… ಇದೇ ನನ್ನ ಶತಾ ಯುಷ್ಯದ ಗುಟ್ಟು ಎಂದು ಭೋಜ್ಜು ಬಾಯಲ್ಲಿ ನಗುತಿದ್ದರು ಅಜ್ಜ..ಇಡಿ ಸಭೆ ಎದ್ದುನಿಂತು ಚಪ್ಪಾಳೆ ಹೊಡೆಯುತ್ತಿತ್ತು..

ಅದೆಷ್ಟು ಮೌಲ್ಯಯುಕ್ತ ಮಾತುಗಳು ನೋಡಿ.. ಆಯುರ್ವೇದ ಅದೆಷ್ಟು ಸತ್ಯ ಹೇಳಿದೆ ನೋಡಿ ಭಯ, ಶೋಕ ಚಿಂತ, ಲೋಭ, ಮೋಹ, ಮಾತ್ಸರ್ಯ ಎಲ್ಲಾ ಕಾಯಿಲೆಗಳಿಗೂ ಮೂಲ ಎಂದು, ಯಾರು ಈ ಅರಿಷಡ್ವರ್ಗ ಗಳನ್ನು ಜಯಿಸುತ್ತಾನೋ ಅವನೆ ಶತಾಯುಷಿ ಯಾಗಬಲ್ಲ ಅದೆಷ್ಟು ಸತ್ಯ ನೋಡಿ ಸಿಟ್ಟು, ಭಯ, ಚಿಂತೆ, ಕ್ರೋಧ ಗಳಿಂದ ನಮ್ಮೊಳಗೇ ಸೃಷ್ಟಿ ಯಾಗುವ ಹಾರ್ಮೋನ್ ಗಳು, ಬಿಪಿ, ಸಕ್ಕರೆ ಕಾಯಿಲೆ, ಮನೋ ರೋಗಗಳು ಹಾಗೇ ಸೃಷ್ಟಿಯಾದ ಬಿಪಿ ಇಂದ ಮೆದುಳಿಗೆ ಹಾಗೇ ಬೇರೆ ಬೇರೆ ಅವಯವಗಳಾದ ಕಿಡ್ನಿ ಲಿವರ್, ಹೃದಯ ಕ್ಕೆ ಹಾನಿ, ಹಾಗೇ ಮಧುಮೆಹ ದಿಂದ ಬೇರೆ ಬೇರೆ ಅವಯವಗಳ ಹಾನಿ ಹಾಗೆಯೇ ಅದೆಷ್ಟೋ ಮಾನಸಿಕ ಕಾಯಿಲೆಗಳಿಗೆ ನಮ್ಮ ಶರೀರದ ಹಾರ್ಮೋನ್ ಗಳೇ ಕಾರಣ ವಾಗಿ ಹೆಚ್ಚಿನೆಲ್ಲ ಸಾವಿಗೂ ಅದೇ ಮುಖ್ಯಕಾರಣ ವಾಗಿದೆ ಪರಿಣಮಿಸಿದೆ.

ಒಂದೆರಡು ನಿಮಿಷದ ಸಿಟ್ಟು,ಆತಂಕ, ಭಯ ಸೇಡು ಮನುಷ್ಯನ ಜೀವ,ಜೀವನ ಎರಡನ್ನೂ ನಾಶ ಮಾಡುತ್ತಿದೆ.. ಕೋಟಿ ರೂ ಕೊಟ್ಟರೂ ಒಂದೈದು ನಿಮಿಷ ಹೆಚ್ಚು ಬದುಕಿಸಲು ಸಾಧ್ಯವಿಲ್ಲ ಎಂಬುದು ಅದೆಷ್ಟು ಸತ್ಯವೋ ಹಾಗೇ ಇಂದಿನಿಂದ ಬಿಂದಾಸ್ ನಗು ನಗುತ್ತಾ ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಗುತ್ತಾ ಬೇರೆಯವರನ್ನು ನಗಿಸುತ್ತಾ ಜೀವಿಸುತ್ತೇನೆ ಎಂದು ನಾವು ತೆಗೆದು ಕೊಳ್ಳುವ ನಮ್ಮ ನಿರ್ದಾರ ಖಂಡಿತವಾಗಿ 5 ನಿಮಿಷವಲ್ಲ ಹತ್ತಾರು ವರ್ಷಗಳಷ್ಟು ಜೀವನ ವನ್ನು ನಮಗೆ ನೀಡಬಲ್ಲುದು..

60/70 ಕ್ಕೆ ಜೀವನ ಮುಗಿಸ ಬೇಕಾಗಿದ್ದ ನಾವುಗಳು 80/90 ವರ್ಷ ಬದುಕಿದೆವೆಂದರೆ…. ನಿಜವಾದ ಕೋಟ್ಯಧಿಪತಿ ಗಳು ನಾವೇ ಅಲ್ಲವೇ…?? ಮತ್ತೆ, ಮತ್ತೆ ಯೋಚಿಸಿ ಇಂದೇ ದೃಢವಾಗಿ ನಿಶ್ಚಯಿಸಿ ಬಿಡಿ. ನಿಮ್ಮನ್ನು ನೋಯಿಸಿದವರನ್ನು ಕ್ಷಮಿಸಿಬಿಡಿ ಅವರ ಸಂತೋಷಕ್ಕಾಗಿ ಅಲ್ಲ, ನಿಮ್ಮ ನೆಮ್ಮದಿಗಾಗಿ.
ಇಂತಹ ಮೌಲ್ಯ ಯುಕ್ತ ಕಥೆಗಳ ಸಂಗ್ರಹ ಯೋಗ್ಯ ಪುಸ್ತಕ,..ಬದುಕ ಬದಲಿಸುವ ಕತೆಗಳು.. ಪ್ರತಿಗಳಿಗಾಗಿ ನನ್ನನ್ನು ಸಂಪರ್ಕಿಸಿ.

 

 
 
 
 
 
 
 
 
 
 
 

Leave a Reply