ಕೊರಗಜ್ಜನ ವೆಕ್ಟರ್ ಆರ್ಟ್ ಮೂಲಕ ಜನಮನಗೆದ್ದ ಕಲಾವಿದ ಎಸ್.ಜೆ. ಶಶಾಂಕ್ ಆಚಾರ್ಯ

ಶಶಾಂಕ್ ಕಲ್ಪನೆಯಲ್ಲಿ ಮೂಡಿದ ಚಿತ್ತಾರಗಳು ಒಂದಕ್ಕಿಂತ ಒಂದು ವಿಭಿನ್ನ.  “ಆ್ಯರೋಸ್ ಸರ್ಚಿಂಗ್ ಫೇಸ್” ನ ಆಯ್ಕೆಯ ವ್ಯಕ್ತಿ ಬೇರಾರೂ ಅಲ್ಲ, ಕರಾವಳಿಯ ಹುಡುಗ  ವೆಕ್ಟರ್ ಆರ್ಟಿಸ್ಟ್ ಶ್ರೀ ಎಸ್.ಜೆ ಶಶಾಂಕ್ ಆಚಾರ್ಯ ಅವರು. ತುಳುನಾಡಿನ ದೈವ ದೇವರನ್ನು ತನ್ನ ವೆಕ್ಟರ್ ಆರ್ಟ್ ಮೂಲಕವೇ ಚಿತ್ರಿಸಿ ಸಾಯಿ ಎನಿಸಿಕೊಂಡ ಶಶಾಂಕ್ ಆಚಾರ್ಯ. ಸಾಮಾಜಿಕ ಜಾಲತಾಣದಲ್ಲಾಗಿರಬಹುದು, ವಾಹನಗಳಲ್ಲಾಗಿರಬಹುದು, ದೈವ ದೇವರುಗಳ ಅಲ್ಬಮ್ ಹಾಡುಗಳಲ್ಲಾಗಿರಬಹುದು ಶಶಾಂಕ್ ಅವರ ವೆಕ್ಟರ್ ಆರ್ಟ್ ಒಂದು  ಜಾಗ ಇದೆ.  ಮಂಗಳೂರಿನ ರಥಬೀದಿಯ ಪ್ರಖ್ಯಾತ ಸ್ವರ್ಣಶಿಲ್ಪಿ ಶ್ರೀ ಜಗದೀಶ್ ಆಚಾರ್ಯ ಸಿದ್ದಕಟ್ಟೆ ಮತ್ತು ಶ್ಯಾಮಲ ಜಗದೀಶ್ ಆಚಾರ್ಯ ದಂಪತಿಗಳ ಪುತ್ರ ಶಶಾಂಕ್ ಯುವಜನರ ಪಾಲಿಗೆ ಭಾರಿ ಅಚ್ಚುಮೆಚ್ಚಿನ ಕಲಾವಿದ. ಶಶಾಂಕ್ ಅವರು ಕೆನರಾ ಹೈಸ್ಕೂಲ್ ಮಂಗಳೂರಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣವನ್ನು ಪಡೆದರು. ಮುಂದೆ ಪ್ರೈವೇಟ್ ಇನ್ಸ್ಟಿಟ್ಯೂಟ್ ‌ನಲ್ಲಿ ಡಿಪ್ಲೋಮಾ ಮಾಡಿ ಗ್ರಾಫಿಕ್ ಡಿಸೈನ್ ಕಲಿತರು. ಮುಂದೆ ಅ್ಯಡ್ಲಾಬ್ಸ್ ಫೋಟೋ ಲ್ಯಾಬ್ ನಲ್ಲಿ ಡಿಸೈನರ್ ವರ್ಕರ್ ಆಗಿದ್ದರು. ಹೀಗೆ ಎರಡು ಮೂರು ಕಡೆ ಡಿಸೈನರ್ ವರ್ಕರ್ ಆಗಿ ಕೆಲಸ ಮಾಡಿ ನಂತರ ತಮ್ಮ ಸ್ವಂತ ಪರಿಶ್ರಮದಿಂದ ವಿ.ಟಿ ರೋಡ್ ಕಾರ್ ಸ್ಟ್ರೀಟ್ ಮಂಗಳೂರಿನಲ್ಲಿ   ತನ್ನದೇ ಹೊಸ ಸ್ಟುಡಿಯೋ ನಿರ್ಮಿಸಿದರು.  ಶಶಾಂಕ್ ಅವರ ವೃತ್ತಿ ಅಲ್ಬಮ್ ಡಿಸೈನ್, ಲೋಗೋ ಡಿಸೈನ್, ವೆಡ್ಡಿಂಗ್ ಫೋಟೋಗ್ರಾಫಿ, ವಿಡಿಯೋಗ್ರಾಫಿ ಮತ್ತು ಬೇರೆ ಬೇರೆ ಇವೆಂಟ್‌ಗಳ ಫೋಟೋಗ್ರಫಿ.   ದಿನದಿಂದ ದಿನಕ್ಕೆ ಶಶಾಂಕ್  ಕೊರಗಜ್ಜನ ಆಶಿರ್ವಾದದಿಂದ ಪಡೆದ ಈ ಕಲೆಯನ್ನು ಮುಂದೆ ತುಳುನಾಡಿನ ದೈವ ಮಂತ್ರದೇವತೆ ಮತ್ತು ದೇಶದ ಪ್ರಧಾನಿ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಶಿವು ಉಪ್ಪಾರ್, ವಜ್ರದೇಹಿ ಸ್ವಾಮೀಜಿ ಹೀಗೆ ಹಲವಾರು ವೆಕ್ಟರ್ ಆರ್ಟ್‌ಗಳನ್ನು ನಿರ್ಮಿಸಿ ಯುವಜನರ ಮನಗೆದ್ದಿದ್ದರು. ಇವರು ತಮ್ಮ ವೃತ್ತಿ ಬದುಕು ಮತ್ತು ವೆಕ್ಟರ್ ಆರ್ಟ್ ಮಾತ್ರವಲ್ಲದೇ ಹಾಡುಗಾರಿಕೆಯಲ್ಲೂ ಉತ್ತಮ‌ ಹಿಡಿತ ಕಂಡುಕೊಂಡಿದ್ದಾರೆ. ಸಿ. ಅಶ್ವತ್ ಅವರ ಕಾಣದ ಕಡಲಿಗೆ ಹಾಡನ್ನು ಸುಶ್ರಾವ್ಯ ವಾಗಿ ಜನಮನ ಸೂರೆಗೊಳ್ಳುವಂತೆ ಹಾಡಿದ್ದಾರೆ. ಇದರ ಜೊತೆಜೊತೆಗೆ ರೈಡಿಂಗ್ ಮತ್ತು ಪೇಯಿಂಟಿಂಗ್‌ನಲ್ಲಿ ಆಸಕ್ತಿ ಇರುವ ಶಶಾಂಕ್ ಅವರು ಒಂದಷ್ಟು ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯರು ಕೂಡಾ ಹೌದು.

ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಸೇರಿದ ಇವರು ಮುಂದೆ ಸುಮಾರು ಹಿಂದೂಪರ ಸಂಘಟನೆಗಳಲ್ಲದೇ ಸಮಾಜದಲ್ಲಿ ತನ್ನ ಉತ್ತಮ ಕಾರ್ಯಗಳು, ದಾನಗಳು ಮತ್ತು ಉದಾತ್ತ ಸೇವೆ ನೀಡುವ “ಅಮೃತ ಸಂಜೀವಿನಿ (ರಿ) ಮಂಗಳೂರು” ಇದರ ಸ್ಥಾಪಕ ಸದಸ್ಯರೂ ಕೂಡಾ ಹೌದು.

 ಹಿಂದೂ ಸಂರಕ್ಷಣಾ ಸಮಿತಿಯ ಗೋರಕ್ಷಕ ಪ್ರಮುಖ್ ಆಗಿರುವ ಶಶಾಂಕ್ ಅವರು ಸಮಾಜದ ಒಬ್ಬ ಅತ್ಯುತ್ತಮ ಪ್ರಜೆಯಾಗಿ ತಮ್ಮ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುವ ಯುವ ಶಕ್ತಿ ಎಂದರೆ ತಪ್ಪಾಗಲಾರದು. ಒಂದು ವರ್ಷದ  “ಪ್ರಧಾನಿ ಮೋದಿಜಿ”ಯವರ ಸಹೋದರ “ಸೋಮುಭಾಯ್ ಮೋದಿ” ಅವರು ಮಂಗಳೂರಿಗೆ ಬಂದಾಗ ತಮ್ಮ ಕಲಾಕೃತಿಯನ್ನು ಪ್ರದಾನ ಮಾಡಿದ್ದು‌ ತಮ್ಮ ಜೀವನದ ಅಮೂಲ್ಯ ಘಳಿಗೆ ಎಂದು ಹೇಳುವ ಶಶಾಂಕ್ ಅವರಿಗೆ ಕೆಲವು ಕಡೆ ಅಭಿನಂದನೆಗಳು ಕೂಡಾ ನಡೆದಿವೆ.

ಶಶಾಂಕ್ ಅವರು ಇಷ್ಟು ಸಣ್ಣ ವಯಸ್ಸಿನಲ್ಲಿ ಮಾಡಿದ ಸಾಧನೆ ಬಹುಶಃ ಇಡೀ ಕರಾವಳಿಗೆ ಹೆಮ್ಮೆ ಅಂದರೆ ತಪ್ಪಿಲ್ಲ. ಸುಂದರವಾದ ವೆಕ್ಟರ್ ಆರ್ಟ್‌ಗಳು ಇವರ ಕೈ ಚಳಕದಲ್ಲಿ ಇನ್ಫನು ಹೆಚ್ಚು ಮೂಡಿಬರಲಿ ಎಂದು karavalixpress.com ತಂಡ  ಶುಭ ಹಾರೈಸುತ್ತದೆ

  ~ ಎಂದಿನಂತೆ ಸ್ಟುಡಿಯೋಗೆ ಬಂದು ದೈವ ದೇವರ ಭಕ್ತಿಗೀತೆಗಳನ್ನು ಕೇಳುತ್ತಾ ತನ್ನ ಎಂದಿನ ಕರ್ತವ್ಯದಂತೆ ಪೋಟೋಶಾಪ್ ಪೇಜನ್ನು ಓಪನ್ ಮಾಡಿ ಬ್ಯಾಕ್ ಗ್ರೌಂಡ್ ಕಪ್ಪು ಮಾಡಿ ಮೂರು ನಾಮ ಎಳೆದೆ. ಅದೂ ಕೂಡಾ ಯಾವುದೋ ಒಂದು ಅವ್ಯಕ್ತ ಭಾವನೆಯಿಂದ ತನಗರಿವಿಲ್ಲದಂತೆ ಎಳೆದ ಮೂರು ನಾಮದ ಜೊತೆಗೆ ತುಳುನಾಡಿನ ದೈವ ಕೊರಗಜ್ಜನ ಹಿನ್ನಲೆ ಸಂಗೀತದೊಂದಿಗೆ ಅದೇ ಮೂರು ನಾಮವನ್ನು ಮುಂದುವರೆಸಿ ಕೊರಗಜ್ಜನ ಚಿತ್ರದ ರೇಖೆ ನಿರ್ಮಿಸಿದೆ. ಮಿಕ್ಕಿದ್ದೆಲ್ಲವೂ ಸೋಜಿಗ  ~ ಎಸ್.ಜೆ. ಶಶಾಂಕ್ ಆಚಾರ್ಯ

 
 
 
 
 
 
 
 
 
 
 

Leave a Reply