ಗ್ರಾಮೀಣ ಕನ್ನಡ ಶಾಲೆಯನ್ನು ಸಕಾ೯ರ ಉಳಿಸಿ ಬೆಳೆಸಲಿ

ಹಿರಿಯಡ್ಕದಿಂದ 9 ಕಿ.ಮೀ ದೂರವಿರುವ ಪಂಚನಬೆಟ್ಟು ವಿದ್ಯಾವಧ೯ಕ ಪ್ರೌಢ ಶಾಲೆ ಕಳೆದ 30 ವಷ೯ಗಳಿಂದ ನಿರಂತರವಾಗಿ ಸಾವಿರಾರು ಮಂದಿ ವಿದ್ಯಾಥಿ೯ಗಳಿಗೆ ವಿದ್ಯಾದಾನ ನೀಡಿದೆ. ಈ ಶಾಲೆಯಲ್ಲಿ ಪಾಠದೊಂದಿಗೆ ಪಠ್ಯತೆರ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದೆ.

ವಿಶಾಲವಾದ ಆಟದ ಮೈದಾನ, ಮಕ್ಕಳಿಗೆ ಎಲ್ಲಾ ಕ್ರೀಡಾ ಚಟುವಟಿಕೆ ನಡೆಸಲು ಕ್ರೀಡಾ ಸಲಕರಣೆ, ರಂಗಭೂಮಿ ಚಟುವಟಿಕೆಗೆ ರಂಗ ತರಬೇತಿ ವೇದಿಕೆ, ಬೇರೆ ಬೆಲ್ಲೆಯಿಂದ ಬರುವ ವಿದ್ಯಾಥಿ೯ಗಳಿಗೆ ಅನುಕೂಲವಾಗಲು ವಿದ್ಯಾಥಿ೯ ವಸತಿ ನಿಲಯ ಸೇರಿದಂತೆ ಬಿಸಿಯೂಟ ಯೋಜನೆಯು ಜಾರಿಯಲ್ಲಿದೆ.

ಅನುದಾನಿತ ಶಾಲೆಯಾದರೂ ಖಾಸಗಿ ಶಾಲೆಗೆ ಸರಿಸಮಾನವಾದ ಎಲ್ಲಾ ರೀತಿಯ ಸೌಕಯ೯ ಈ ಶಾಲೆಯಲ್ಲಿರುವುದು ಅಭಿನಂದನೀಯ. ಉತ್ತಮ ಫಲಿತಾಂಶ ಕೂಡ ಈ ಶಾಲೆಯ ಕೀತಿ೯ಗೆ ಮತ್ತೊಂದು ಗರಿಯಾಗಿದೆ. ಅದರೆ ಕಳೆದ 2 ವಷ೯ಗಳಿಂದ ವಿದ್ಯಾಥಿ೯ಗಳ ಸಂಖ್ಯೆ ಕಡಿಮೆಯ ಕಾರಣ ನೀಡಿ ಶಿಕ್ಷಣ ಇಲಾಖೆಯು ಶಾಲೆಯನ್ನು ಬಂದ್ ಮಾಡುವ ಕುರಿತು ನೋಟಿಸ್ ನೀಡಿದೆ.

ಕಳೆದ ವಷ೯ ಗ್ರಾಮಸ್ಥರ ಒತ್ತಾಯದ ಕಾರಣ ಇಲಾಖೆಯು ಈ ನಿಧಾ೯ರ ಕೈಬಿಟ್ಟಿತ್ತು ಆದರೆ ಈ ವಷ೯ ವಿಧ್ಯಾಥಿ೯ಗಳ ದಾಖಲಾತಿಗೆ ಅನುಮತಿ ನೀಡಿಲ್ಲ. ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಎ ಸೇರಿದಂತೆ ಸದಸ್ಯರು ಶಾಲೆಯ ಅಗತ್ಯ ತೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ.

ಶಾಲೆಯನ್ನು ಉಳಿಸಲು ವಿದ್ಯಾಥಿ೯ ಯ ಹೋರಾಟ: ಶಾಲೆಯನ್ನು ಮುಚ್ಚುವ ವಿರುದ್ಧ ಶಾಲೆಯ ವಿದ್ಯಾಥಿ೯ನಿ ವಷಿ೯ತಾ ಆರ್ ರವರು ಪ್ರಧಾನಿಯವರಿಗೆ ಪತ್ರ ಬರೆದು ಶಾಲೆಯನ್ನು ಉಳಿಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನ ಮಂತ್ರಿ ಕಾಯಾ೯ಲಯದಿಂದ ಪತ್ರ ಬಂದಿದ್ದು ಅಗತ್ಯ ಕ್ರಮಕ್ಕಾಗಿ ಸಕಾ೯ರದ ಮುಖ್ಯ ಕಾಯ೯ದಶಿ೯ಗೆ ಆದೇಶ ನೀಡಿತ್ತು. ಈ ವಿದ್ಯಾಥಿ೯ಯ ನಡೆಗೆ ಇದೀಗ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ.

ಈ ಶಾಲೆ ಮುಚ್ಚಿದರೆ ಇಲ್ಲಿನ ವಿದ್ಯಾಥಿ೯ಗಳಿಗೆ ತೊಂದರೆಯಾಗುತ್ತದೆ. ಸುಮಾರು 8 ಕಿ.ಮೀ ದೂರದ ಇತರ ಶಾಲೆಗೆ ತೆರಳಬೇಕಾಗುತ್ತದೆ. ಸಕಾ೯ರ ಒಂದು ಕಡೆಯಲ್ಲಿ ಕನ್ನಡ ಶಾಲೆಯನ್ನು ಉಳಿಸುವ ಬಗ್ಗೆ ಮಾತನಾಡುತ್ತದೆ. ಆದರೆ ಮತ್ತೊಂದೆಡೆ ಈ ಹಳ್ಳಿಯ ಕನ್ನಡ ಶಾಲೆಯನ್ನು ಮುಚ್ಚಲು ಹೊರಟಿರುವುದು ದುರಂತದ ವಿಷಯ. ಈಗಾಲಾದರೂ ಸಕಾ೯ರ ಈ ಶಾಲೆಯನ್ನು ಉಳಿಸಿ ಶಿಕ್ಷಕರನ್ನು ನೇಮಿಸಿ ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಶಾಲೆಯುಉಳಿಯಲಿ ಮತ್ತಷ್ಟು ಮಕ್ಕಳಿಗೆ ವಿದ್ಯೆ ನೀಡಲಿ

.

 
 
 
 
 
 
 
 
 

Leave a Reply