ಸ್ವರ್ಣತಾಣವನ್ನು ತಲುಪಿದ ಕಥೆ ಕೇಳೋಣ*

*ಸ್ವರ್ಣತಾಣವನ್ನು ತಲುಪಿದ ಕಥೆಕೇಳೋಣ

*ರೇಡಿಯೊ ಮಣಿಪಾಲ್ 90.4 Mhz*
ಸಮುದಾಯ ಬಾನುಲಿ 📻 *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕ* ದ ಸಹಯೋಗದಲ್ಲಿ ಅರ್ಪಿಸುತ್ತಿ ರುವ. .*ಕಥೆ ಕೇಳೋಣ* ಸರಣಿ ಕಾರ್ಯ ಕ್ರಮದ *50* ನೇ ಸಂಚಿಕೆ ಎಪ್ರಿಲ್ ತಿಂಗಳ  ದಿನಾಂಕ *15* ರಂದು ಶನಿವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. *ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗ* ತಮ್ಮ ಸ್ವರಚಿತ ಕಥೆಯನ್ನು ವಾಚಿಸಲಿದ್ದಾರೆ.

ಎಪ್ರಿಲ್ *16* ರಂದು ಮಧ್ಯಾಹ್ನ 12.30ಕ್ಕೆ ಇದರ ಮರುಪ್ರಸಾರವಿರುವುದು. ನಮ್ಮ ರಾಜ್ಯದಲ್ಲೇ ಮೊದಲ ಬಾರಿಗೆ ಸಮುದಾಯ ಬಾನುಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಈ ರೀತಿಯ ಕಥಾ ಸರಣಿಯು ಮೂಡಿಬರುತ್ತಿದ್ದು ರೇಡಿಯೊ ಮಣಿಪಾಲ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಹಾಗೂ ಉಡುಪಿ ತಾಲೂಕು ಘಟಕಕ್ಕೆ ಹೆಮ್ಮೆತಂದಿದೆ.

ಈ ಕಥಾಯಾನದಲ್ಲಿ ಅನೇಕ ಮಂದಿ ಹಿರಿಯರು, ಉದಯೋನ್ಮುಖ ಕಥೆಗಾರರು ಭಾಗವಹಿಸಿ ವಿಶಿಷ್ಟ ಕಥಾನಕಗಳ ಸ್ವರಚಿತ ಕಥೆಗಳನ್ನು ಕೇಳುಗರ ಮುಂದಿಟ್ಟಿದ್ದಾರೆ. ಸಮುದಾಯ ಬಾನುಲಿಯ ಪರಿಕಲ್ಪನೆ ಯಂತೆ ಸಮುದಾಯದ ಪಾಲ್ಗೊಳ್ಳುವಿಕೆಗೂ ಇದು ಕಾರಣವಾಗಿದ್ದು ಸಾಮಾಜಿಕ ಜಾಲ ತಾಣಗಳ ಮೂಲಕವೂ ದೇಶವಿದೇಶ ಗಳಲ್ಲಿನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕಾರ್ಯಕ್ರಮದ ಆದಿಭಾಗದಲ್ಲಿ ದಿಕ್ಸೂಚಿ ಯಂತೆ ಕಾರ್ಯನಿರ್ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು, ಕಥೆಗಾರರಿಗೆ ಸ್ಫೂರ್ತಿಯನ್ನು ತುಂಬುತ್ತಾ ಕಾರ್ಯಕ್ರಮದ ಸಂಚಲನ ಶಕ್ತಿಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಸಂಘಟನಾ ಕಾರ್ಯದರ್ಶಿ ಸತೀಶ್ ಕೊಡವೂರು, ಅತ್ಯಾಕರ್ಷಕ ಪೋಸ್ಟರ್ ವಿನ್ಯಾಸದ ಮೂಲಕ ಜನಪ್ರಿಯತೆ ಹೆಚ್ಚುವಂತೆ ಮಾಡಿದ ವಿನ್ಯಾಸಗಾರ ಶಶಿ ಉಡುಪಿ, ಸದಾ ಸಹಕಾರ, ಪ್ರೋತ್ಸಾಹ ವನ್ನು ನೀಡಿದ ಕ.ಸಾ‌‌.ಪ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್.ಪಿ.ಸೇರಿದಂತೆ ಕ.ಸಾ.ಪ ಉಡುಪಿ ಜಿಲ್ಲೆ ಮತ್ತು ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ರೇಡಿಯೊ ಮಣಿಪಾಲ್ ನಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯ ಕ್ರಮದ‌ ಯಶಸ್ಸಿಗೆ ನೆರವಾಗಿದ್ದಾರೆ.

ಇಂದು ಪ್ರಸಾರವಾಗುವ ‘ಕಥೆ ಕೇಳೋಣ’ ಸ್ವರ್ಣ ಸಂಚಿಕೆಗೆ ರವಿರಾಜ್ ಹೆಚ್.ಪಿ ಸೇರಿದಂತೆ 94ರ ವಯೋಮಾನದ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ, ಹಿರಿಯ ಸಾಹಿತಿಗಳಾದ ವೈದೇಹಿ ಮತ್ತು ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಶುಭ ಸಂದೇಶ ನೀಡಿದ್ದಾರೆ ಎಂದು ರೇಡಿಯೋ ಮಣಿಪಾಲ್ ನಲ್ಲಿ ಸಹಾಯಕ ಪ್ರಾಧ್ಯಾಪಕರು ಮತ್ತು ಸಂಯೋಜಕರಾಗಿರುವ ಡಾ.ರಶ್ಮಿ ಅಮ್ಮೆಂಬಳ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 

Leave a Reply