ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 350 ನೇ ಮಧ್ಯಾರಾಧನೆ.

ಇಂದಿಗೆ ಸರಿಯಾಗಿ 350 ವರ್ಷಗಳ ಹಿಂದೆ ರಾಯರು, ಮಂತ್ರಾಲಯ ಸುಕ್ಷೇತ್ರದಲ್ಲಿ ಸಶರೀರರಾಗಿ ಬಂದಾವನ ಪ್ರವೇಶಿಸಿದರು. 700 ವರ್ಷಗಳ ಕಾಲ ರಾಯರು ವೃಂದಾವನದಲ್ಲಿಯೇ ಶ್ರೀಹರಿಯ ನಾಮ ಸ್ಮರಣೆ ಮಾಡುತ್ತಾ ಭಕ್ತರನ್ನು ಉದ್ಧರಿಸುತ್ತಾರೆ ಎಂಬ ಅಚಲ ನಂಬಿಕೆ ಸದ್ಭಕ್ತರದು. ಇಂತಹ ಪರಮಗುರುಗಳ ಆಯುಃ ಪ್ರಮಾಣದ ಅರ್ಧ ಅವಧಿಯ ಆರಾಧನೆ ವಿಶೇಷ ಈ ದಿನ.

ಕೋಟ್ಯಾನುಕೋಟಿ ದೀನರನು ಉದ್ಧರಿಸಲು ವೃಂದಾವನಸ್ಥರಾದ ವೇಳೆ, ಗುರುಗಳ ಪರಮಾಪ್ತ ಶಿಷ್ಯರಾದ ಶ್ರೀಅಪ್ಪಣಾಚಾರ್ಯರು ಸ್ಥಳದಲ್ಲಿರಲಿಲ್ಲ. ಗುರುಗಳ ವೃಂದಾವನ ಸುದ್ದಿ ತಿಳಿದು ಬಿಚ್ಚಾಲೆಯಿಂದ ನೇರವಾಗಿ ಮಂತ್ರಾಲಯಕ್ಕೆ ಬಂದರು. ಮಾರ್ಗ ಮಧ್ಯೆ ಹರಿಯುವ ತುಂಗಭದ್ರಾ ನದಿಯಲ್ಲೇ ನಡೆಯುತ್ತಾ ಬರುವಾಗ, ಶ್ರೀನರಸಿಂಹ ದೇವರ ಕರುಣೆಯಿಂದ ಅಪ್ಪಣಾಚಾರ್ಯರ ಬಾಯಲ್ಲಿ ರಾಯರ ಕಾರುಣ್ಯ ಮಂತ್ರ ಸದೃಶವಾಗಿ ಹೊರಬಂತು.

ಮಂತ್ರಾಲಯಕ್ಕೆ ಬರುವಷ್ಟರಲ್ಲೇ ಗುರುಗಳು ವೃಂದಾವನ ಪ್ರವೇಶಿಸಿದ್ದರು. ಇದರಿಂದ ಬಹುದುಃಖಿತರಾಗಿ ಕಣ್ಣೀರು ಸುರಿಸುತ್ತಾ ರಾಯರ ವರ್ಣನೆ ಮಾಡುತ್ತಲೇ ಇದ್ದರು. ರಾಯರ ಮಹಿಮೆ ಹೇಳುತ್ತಿದ್ದಂತೆ ಗದ್ಗಧಿತರಾದ ಕಾರಣ ಮಾತು ಹೊರಡಲಿಲ್ಲ. ಮಂತ್ರ ತುಲ್ಯವಾದ ರಾಯರ ಸ್ತೋತ್ರ ಪೂರ್ಣಗೊಳ್ಳಲಿಲ್ಲ. ಶಿಷ್ಯನ ಮೇಲೆ ಅಪಾರ ಪ್ರೇಮ ಹೊಂದಿದ್ದ ರಾಯರು ಕೊನೆಗೆ ಬಂದಾವನದ ಒಳಗಿನಿಂದಲೇ “ಸಾಕ್ಷಿ ಹಯಾಸ್ಯೋತ್ರಹಿ” ಎಂದು ಹೇಳುವ ಮೂಲಕ ಮಂತ್ರವನ್ಬು ಪೂರ್ತಿಗೊಳಿಸಿ, ಈ ಮಂತ್ರಕ್ಕೆ ಸಾಕ್ಷಾತ್ “ಹಯವದನ” ದೇವರನ್ನೇ ಸಾಕ್ಷಿಗೊಳಿಸಿದರು. ಅಪ್ಪಣಾಚಾರ್ಯರುಗೆ ಶ್ರೀಹಯಗ್ರೀವ ದೇವರ ಜತೆ ಶ್ರೀರಾಯರ ದರ್ಶನವಾಯಿತು.

ಇಂತಹ ಪರಮಕರುಣಾಳುಗಳು ವೃಂದಾವನಸ್ಥರಾದ ಈ ಪರಮ ಪವಿತ್ರವಾದ ದಿನದಂದು ಶ್ರೀಅಪ್ಪಣಾಚಾರ್ಯರು ರಚಿಸಿ, ಸಿದ್ಧಿಪಡೆದ ಮಂಗಳಕರವಾದ ರಾಯರ ಸ್ತೋತ್ರವನ್ನು ನಾವು ಪಠಿಸೋಣ.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಮೂಕೋಪಿ ಯತ್ಪ್ರಸಾದೇನ ಮುಕುಂದ ಶಯನಾಯತೇ| ರಾಜರಾಜಾಯತೇ ರಿಕ್ತೋ ರಾಘವೇಂದ್ರಂ ತಮಾಶ್ರಯೇ ||

ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ| ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ ||

ಆಪಾದ ಮೌಲಿ ಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್| ತೇನ ವಿಘ್ನಾಃ ಪ್ರಣಶ್ಯಂತಿ ಸಿಧ್ಧ್ಯಂತಿ ಚ ಮನೋರಥಾಃ ||

ಶ್ರೀ ರಾಘವೇಂದ್ರ ಸ್ತೋತ್ರ:

ಶ್ರೀಪೂರ್ಣಬೋಧ ಗುರುತೀರ್ಥಪಯೋಬ್ಧಿಪಾರಾ ಕಾಮಾರಿಮಾಕ್ಷವಿಷಮಾಕ್ಷಶಿರಃ ಸ್ಪೃಶಂತಿ। ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತಪರಾಂಘ್ರಿ ಪಯೋಜಲಗ್ನಾ ॥ 1॥

ಜೀವೇಶಭೇದಗುಣಪೂರ್ತಿಜಗತ್ಸುಸತ್ತ್ವ ನೀಚೋಚ್ಚಭಾವಮುಖನಕ್ರಗಣೈಃ ಸಮೇತಾ ।
ದುರ್ವಾದ್ಯಜಾಪತಿಗಿಲೈರ್ಗುರುರಾಘವೇನ್ದ್ರವಾಗ್ದೇವತಾಸರಿದಮಂ ವಿಮಲೀಕರೋತು ॥ 2॥

ಶ್ರೀರಾಘವೇಂದ್ರ ಸಕಲಪ್ರದಾತಾ ಸ್ವಪಾದಕಂಜದ್ವಯಭಕ್ತಿಮದ್ಭ್ಯಃ ।
ಅಘಾದ್ರಿ ಸಂಭೇದನ ದೃಷ್ಟಿವಜ್ರಃ ಕ್ಷಮಾಸುರೇನ್ದ್ರೋಽವತು ಮಾಂ ಸದಾಽಯಮ್ ॥ 3॥

ಶ್ರೀರಾಘವೇಂದ್ರೋ ಹರಿಪಾದಕಂಜನಿಷೇವಣಾಲ್ಲಬ್ಧ ಸಮಸ್ತಸಂಪತ್ ।
ದೇವಸ್ವಭಾವೋ ದಿವಿಜದ್ರುಮೋಽಯಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ ॥ 4॥

ಭವ್ಯಸ್ವರೂಪೋ ಭವದುಃಖತೂಲಸಂಘಾಗ್ನಿಚರ್ಯಃ ಸುಖಧೈರ್ಯಶಾಲೀ ।
ಸಮಸ್ತದುಷ್ಟಗ್ರಹನಿಗ್ರಹೇಶೋ ದುರತ್ಯಯೋಪಪ್ಲವಸಿಂಧುಸೇತುಃ ॥ 5॥

ನಿರಸ್ತದೋಷೋ ನಿರವದ್ಯವೇಷಃ ಪ್ರತ್ಯರ್ಥಿಮೂಕತ್ವ ನಿದಾನಭಾಷಃ ।
ವಿದ್ವತ್ಪರಿಜ್ಞೇಯಮಹಾವಿಶೇಷೋ ವಾಗ್ವೈಖರೀನಿರ್ಜಿತಭವ್ಯಶೇಷಃ ॥ 6॥

ಸಂತಾನಸಂಪತ್ಪರಿಶುದ್ಧಭಕ್ತಿವಿಜ್ಞಾನವಾಗ್ದೇಹಸುಪಾಟವಾದೀನ್ ।
ದತ್ತ್ವಾ ಶರೀರೋತ್ಥಸಮಸ್ತದೋಷಾನ್ ಹತ್ತ್ವಾ ಸ ನೋಽವ್ಯಾದ್ಗುರುರಾಘವೇಂದ್ರಃ ॥ 7॥

ಯತ್ಪಾದೋದಕಸಂಚಯಃ ಸುರನದೀಮುಖ್ಯಾಪಗಾಸಾದಿತಾ-
ಸಂಖ್ಯಾಽನುತ್ತಮಪುಣ್ಯಸಂಘವಿಲಸತ್ಪ್ರಖ್ಯಾತಪುಣ್ಯಾವಹಃ ।

ದುಸ್ತಾಪತ್ರಯನಾಶನೋ ಭುವಿ ಮಹಾ ವನ್ಧ್ಯಾಸುಪುತ್ರಪ್ರದೋ
ವ್ಯಂಗಸ್ವಂಗಸಮೃದ್ಧಿದೋ ಗ್ರಹಮಹಾಪಾಪಾಪಹಸ್ತಂ ಶ್ರಯೇ ॥ 8॥

ಯತ್ಪಾದಕಂಜರಜಸಾ ಪರಿಭೂಷಿತಾಂಗಾ ಯತ್ಪಾದಪದ್ಮಮಧುಪಾಯಿತಮಾನಸಾ ಯೇ ।
ಯತ್ಪಾದಪದ್ಮಪರಿಕೀರ್ತನಜೀರ್ಣವಾಚಸ್ತದ್ದರ್ಶನಂ ದುರಿತಕಾನನದಾವಭೂತಮ್ ॥ 9॥

ಸರ್ವತಂತ್ರ ಸ್ವತಂತ್ರೋಽಸೌ ಶ್ರೀಮಧ್ವಮತವರ್ಧನಃ ।
ವಿಜಯೀಂದ್ರ ಕರಾಬ್ಜೋತ್ಥಸುಧೀಂದ್ರ ವರಪುತ್ರಕಃ ।
ಶ್ರೀರಾಘವೇಂದ್ರೋ ಯತಿರಾಟ್ ಗುರುರ್ಮೇ ಸ್ಯಾದ್ಭಯಾಪಹಃ ॥ 10॥

ಜ್ಞಾನಭಕ್ತಿಸುಪುತ್ರಾಯುಃ ಯಶಃ ಶ್ರೀಪುಣ್ಯವರ್ಧನಃ ।
ಪ್ರತಿವಾದಿಜಯಸ್ವಾನ್ತಭೇದಚಿಹ್ನಾದರೋ ಗುರುಃ ।
ಸರ್ವವಿದ್ಯಾಪ್ರವೀಣೋಽನ್ಯೋ ರಾಘವೇಂದ್ರಾನ್ನವಿದ್ಯತೇ ॥ 11॥

ಅಪರೋಕ್ಷೀಕೃತಶ್ರೀಶಃ ಸಮುಪೇಕ್ಷಿತಭಾವಜಃ ।
ಅಪೇಕ್ಷಿತಪ್ರದಾತಾಽನ್ಯೋ ರಾಘವೇಂದ್ರಾನ್ನವಿದ್ಯತೇ ॥ 12॥

ದಯಾದಾಕ್ಷಿಣ್ಯವೈರಾಗ್ಯವಾಕ್ಪಾಟವಮುಖಾಂಕಿತಃ ।
ಶಾಪಾನುಗ್ರಹಶಕ್ತೋಽನ್ಯೋ ರಾಘವೇಂದ್ರನ್ನವಿದ್ಯತೇ ॥ 13॥

ಅಜ್ಞಾನವಿಸ್ಮೃತಿಭ್ರಾಂತಿಸಂಶಯಾಪಸ್ಮೃತಿಕ್ಷಯಾಃ ।
ತನ್ದ್ರಾಕಂಪವಚಃಕೌಂಠ್ಯಮುಖಾ ಯೇ ಚೇನ್ದ್ರಿಯೋದ್ಭವಾಃ ।
ದೋಷಾಸ್ತೇ ನಾಶಮಾಯಾನ್ತಿ ರಾಘವೇಂದ್ರ ಪ್ರಸಾದತಃ ॥ 14॥

`ಓಂ ಶ್ರೀ ರಾಘವೇಂದ್ರಾಯ ನಮಃ ‘ ಇತ್ಯಷ್ಟಾಕ್ಷರಮಂತ್ರತಃ ।
ಜಪಿತಾದ್ಭಾವಿತಾನ್ನಿತ್ಯಂ ಇಷ್ಟಾರ್ಥಾಃ ಸ್ಯುರ್ನಸಂಶಯಃ ॥ 15॥

ಹಂತು ನಃ ಕಾಯಜಾನ್ದೋಷಾನಾತ್ಮಾತ್ಮೀಯಸಮುದ್ಭವಾನ್ ।
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ ॥ 16॥

ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ ।
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರ ಸಂಶಯಃ ॥ 17॥

ಅಗಮ್ಯಮಹಿಮಾ ಲೋಕೇ ರಾಘವೇಂದ್ರೋ ಮಹಾಯಶಾಃ ।
ಶ್ರೀಮಧ್ವಮತದುಗ್ಧಾಬ್ಧಿಚಂದ್ರೋಽವತು ಸದಾಽನಘಃ ॥ 18॥

ಸರ್ವಯಾತ್ರಾಫಲಾವಾಪ್ತ್ಯೈ ಯಥಾಶಕ್ತಿಪ್ರದಕ್ಷಿಣಮ್ ।
ಕರೋಮಿ ತವ ಸಿದ್ಧಸ್ಯ ವೃಂದಾವನಗತಂ ಜಲಮ್ ।
ಶಿರಸಾ ಧಾರಯಾಮ್ಯದ್ಯ ಸರ್ವತೀರ್ಥಫಲಾಪ್ತಯೇ ॥ 19॥

ಸರ್ವಾಭೀಷ್ಟಾರ್ಥಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ ।
ತವ ಸಂಕೀರ್ತನಂ ವೇದಶಾಸ್ತ್ರಾರ್ಥಜ್ಞಾನಸಿದ್ಧಯೇ ॥ 20॥

ಸಂಸಾರೇಽಕ್ಷಯಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ ।
ಸರ್ವಾವದ್ಯಜಲಗ್ರಹೈರನುಪಮೈಃ ಕಾಮಾದಿಭಂಗಾಕುಲೇ ।
ನಾನಾವಿಭ್ರಮದುರ್ಭ್ರಮೇಽಮಿತಭಯಸ್ತೋಮಾದಿಫೇನೋತ್ಕಟೇ ।
ದುಃಖೋತ್ಕೃಷ್ಟವಿಷೇ ಸಮುದ್ಧರ ಗುರೋ ಮಾ ಮಗ್ನರೂಪಂ ಸದಾ ॥ 21॥

ರಾಘವೇಂದ್ರ ಗುರುಸ್ತೋತ್ರಂ ಯಃ ಪಠೇದ್ಭಕ್ತಿಪೂರ್ವಕಮ್ ।
ತಸ್ಯ ಕುಷ್ಠಾದಿರೋಗಾಣಾಂ ನಿವೃತ್ತಿಸ್ತ್ವರಯಾ ಭವೇತ್ ॥ 22॥

ಅಂಧೋಽಪಿ ದಿವ್ಯದೃಷ್ಟಿಃ ಸ್ಯಾದೇಡಮೂಕೋಽಪಿ ವಾಕ್ಪತಿಃ ।
ಪೂರ್ಣಾಯುಃ ಪೂರ್ಣಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ಭವೇತ್ ॥ 23॥

ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿಮಂತ್ರಿತಮ್ ।
ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್ ॥ 24॥

ಯದೃಂದಾವನ ಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ ।
ಸ್ತೋತ್ರೇಣಾನೇನ ಯಃ ಕುರ್ಯಾತ್ಪ್ರದಕ್ಷಿಣನಮಸ್ಕೃತಿ ।
ಸ ಜಂಘಾಲೋ ಭವೇದೇವ ಗುರುರಾಜಪ್ರಸಾದತಃ ॥ 25॥

ಸೋಮಸೂರ್ಯೋಪರಾಗೇ ಚ ಪುಷ್ಯಾರ್ಕಾದಿಸಮಾಗಮೇ ।
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ ।
ಭೂತಪ್ರೇತಪಿಶಾಚಾದಿಪೀಡಾ ತಸ್ಯ ನ ಜಾಯತೇ ॥ 26॥

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರೋರ್ವೃಂದಾವನಾಂತಿಕೇ ।
ದೀಪಸಂಯೋಜನಾತ್ ಜ್ಞಾನಂ ಪುತ್ರಲಾಭೋ ಭವೇದ್ಧ್ರುವಮ್ ॥ 27॥

ಪರವಾದಿಜಯೋ ದಿವ್ಯಜ್ಞಾನಭಕ್ತ್ಯಾದಿವರ್ಧನಮ್ ।
ಸರ್ವಾಭೀಷ್ಟಪ್ರವೃದ್ಧಿಸ್ಸ್ಯಾನ್ನಾತ್ರ ಕಾರ್ಯಾ ವಿಚಾರಣಾ ॥ 28॥

ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಮ್ ।
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ॥ 29॥

ಯೋ ಭಕ್ತ್ಯಾ ಗುರುರಾಘವೇಂದ್ರ ಚರಣದ್ವಂದ್ವ ಸ್ಮರನ್ ಯಃ ಪಠೇತ್ ।
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ತಸ್ಯಾಸುಖಂ ಕಿಂಚನ ।
ಕಿಂತ್ವಿಷ್ಟಾರ್ಥಸಮೃದ್ಧಿರೇವ ಕಮಲಾನಾಥಪ್ರಸಾದೋದಯಾತ್ ।
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೋಽತ್ರ ಹಿ” ॥ 30॥

ಇತಿ ಶ್ರೀ ರಾಘವೇಂದ್ರಾರ್ಯ ಗುರುರಾಜಪ್ರಸಾದತಃ ।
ಕೃತಂ ಸ್ತೋತ್ರಮಿದಂ ಪುಣ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿದೈಃ ॥ 31॥

ಇತಿ ಶ್ರೀ ಅಪ್ಪಣ್ಣಾಚಾರ್ಯವಿರಚಿತ ಶ್ರೀರಾಘವೇಂದ್ರಸ್ತೋತ್ರಂ ಸಂಪೂರ್ಣಂ

ರಾಜ ರಾಜಾಯತೇ ರಿಕ್ತೋ ಶ್ರೀರಾಘವೇಂದ್ರಂ ತಮಾಶ್ರಯೇ…

ಶ್ರೀಶ ಚರಣಾರಾಧಕ, ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.

 
 
 
 
 
 
 
 
 
 
 

Leave a Reply