ಅಗ್ನಿ ವೀರರಾಗಿರಿ

ಜೈ ಎನ್ನಿರೋ ಜೈ ಜೈ ಎನ್ನಿರೋ

ಭಾರತಾಂಬೆ ಪಾದ ಪದ್ಮಕೆ

ನಮೋ ಎನ್ನಿರೋ…..||

ಬನ್ನಿರೋ… ಬನ್ನಿರೋ…

ತರುಣರೆಲ್ಲರೂ ಬಂದು

ಸೇನೆ ಸೇರಿರೋ…

ಗಡಿಯ ಕಾಯಿರೋ

ಗಡಿಯೊಳಗೆ ನಗ್ಗುವವರ

ಮೆಟ್ಟಿ ನಿಲ್ಲಿರೋ….. 

ದೇಶ ದ್ರೋಹಿ ಶತ್ರುಗಳ

ಮಟ್ಟ ಹಾಕಿರೋ…..

ವೀರ ಸೈನಿಕರಾಗಿ

ದೇಶದ ಸೀಮೆ ಕಾಯಿರೋ

ರಾಜಪಥಕೆ ಬನ್ನಿರೋ

ರಾಜಪಥವ ನೋಡಿರೋ

ರಾಜಪಥದಿ ಗಸ್ತು ತಿರುಗಿ

ಶಕ್ತಿ ತೋರಿರೋ….

ಒಂದು ಗೂಡಿರೋ ನೀವು

ಬಂದು ಸೇರಿರೋ

ದೇಶಪ್ರೇಮಿಯಾಗಿ ನೀವು

ದೇಶ ರಕ್ಷಣೆ ಮಾಡಿರೋ…

ಪಥಕೆ ಬನ್ನಿರೋ 

“ಅಗ್ನಿಪಥಕೆ” ಬನ್ನಿರೋ

“ಅಗ್ನಿವೀರರಾಗಿ” ಮಂದೆ

ಧನ್ಯರಾಗಿರೋ……

ಅಗ್ನಿವೀರರಾಗಿ ಮಹಾ

ಸೇನಾನಿ ಯಾಗಿರಿ

ಮೇರಾ ಭಾರತ್ ಮಹಾನ್

ಎಂದು ಜೈಕಾರ ಹಾಕಿರಿ.

————————————-

ಕೆ.ಪುಂಡಲೀಕ ನಾಯಕ್,

ನಾಯ್ಕನಕಟ್ಟೆ ಕೆರ್ಗಾಲು ✍️

Leave a Reply