ಅಂಚೆ ವ್ಯವಹಾರ ಅಭಿವೃದ್ಧಿ ದಿನ~ಪೂರ್ಣಿಮಾ ಜನಾರ್ದನ್

ಭಾರತೀಯ ಅಂಚೆ ಇಲಾಖೆ~ಅಂಚೆ ವ್ಯವಹಾರ ಅಭಿವೃದ್ಧಿ ದಿನ.

ರಾಷ್ಟ್ರೀಯ ಅಂಚೆ ಸಪ್ತಾಹದ ಸಡಗರದಲ್ಲಿ ಇಂದು ನಮ್ಮ ಅಂಚೆ ಇಲಾಖೆ ಆಚರಿಸುತ್ತಲಿದೆ ಅಂಚೆ ವ್ಯವಹಾರ ಅಭಿವೃದ್ಧಿ ದಿನ. (ಬ್ಯುಸಿನೆಸ್ ಡೆವಲಪ್ ಮೆಂಟ್ ಡೇ)ಭಾರತೀಯ ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರ, ವಿತ್ತ ವ್ಯವಹಾರ ಮಾತ್ರವಲ್ಲದೆ ಜನ ಸ್ಪಂದನೆಗೆ ಹತ್ತು ಹಲವು ವಿಶೇಷ ಸೇವೆ ಸವಲತ್ತುಗಳನ್ನು ಗ್ರಾಹಕರಿಗೆ ನೀಡಿದೆ..

ಪತ್ರಗಳು, ನೋಂದಾಯಿತ ಅಂಚೆ, ತ್ವರಿತ ಅಂಚೆ, ಮನಿಯಾರ್ಡರ್ ಮುಂತಾದ ಅಗತ್ಯ ಸೇವೆಯೊಂದಿಗೆ ಇನ್ನೂ ಹಲವು ಸೇವೆಗಳ ಮೇಲೆ ಕಣ್ಣಾಡಿಸೋಣ. ವಾಣಿಜ್ಯ ಅಂಚೆ ( ಬ್ಯುಸಿನೆಸ್ ಪೋಸ್ಟ್) ಸೇವೆಯಲ್ಲಿ ಪತ್ರಗಳನ್ನು ಅಂಚೆಗೆ ಹಾಕುವ ಮೊದಲು‌ ಮಾಡಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಅಂಚೆ ಇಲಾಖೆಯೇ ಮಾಡುವುದಲ್ಲದೇ ಈ ಸೇವೆಗೆ ಗ್ರಾಹಕರಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲಾಗುವುದು.

ರೀಟೈಲ್ ಅಂಚೆ ಸೇವೆಯಡಿಯಲ್ಲಿ ತನ್ನ ಅತೀ ದೊಡ್ಡ ಅಂಚೆ ಜಾಲವನ್ನು ಸಹಭಾಗಿತ್ವ ದ ಅವಕಾಶಕ್ಕಾಗಿ ಕಾದಿರಿಸಿದ್ದು ವಿದ್ಯುತ್, ದೂರವಾಣಿ, ಅರ್ಜಿ ಫಾರ್ಂ ಗಳ ಮಾರಾಟ, ರೈಲು ಟಿಕೇಟು,ತಿರುಪತಿ ದರ್ಶನ ಟಿಕೇಟ್, ವಿಶೇಷ ವಸ್ತುಗಳ ಮಾರಾಟ ಈ ಎಲ್ಲ ಸೇವೆಯ ಳನ್ನೊಳಗೊಂಡಿದೆ. ವಿದ್ಯುನ್ಮಾನ ಪಾವತಿ ಅಥವಾ ಇ ಪೇಮೆಂಟ್ ಸೇವೆಯ ವ್ಯಾಪ್ತಿಯಲ್ಲಿ ಅಂಚೆ ಕಚೇರಿಗಳ ಕೌಂಟರ್ ನಲ್ಲಿ ಪರೀಕ್ಷಾ ಶುಲ್ಕ, ಮುಂತಾದ ಬಿಲ್ ಳನ್ನು ಪಾವತಿಸುವ ಅವಕಾಶವಿದೆ.

ಮಾಧ್ಯಮ ಅಂಚೆ( ಮೀಡಿಯಾ ಪೋಸ್ಟ್) ಯ ಮೂಲಕ ಅಂಚೆ ಪತ್ರಗಳು,ಅಂಚೆ ಕಚೇರಿಯ ಉಳಿತಾಯ ಖಾತಾ ಪಾಸ್ ಪುಸ್ತಕಗಳ ಮೂಲಕ ಜಾಹೀರಾತು ನೀಡುವ ಸೌಲಭ್ಯ ವಿದ್ದು ನಮ್ಮ ಭಾರತದಾದ್ಯಂತ ಅತೀ ದೊಡ್ಡ ಸಂಪರ್ಕ ಜಾಲವುಳ್ಳ ನಮ್ಮ ಅಂಚೆ ಇಲಾಖೆಯ ಪರಿಕರಗಳ ಮೂಲಕ ಗ್ರಾಮೀಣ ಪ್ರದೇಶವನ್ನು ತಲುಪಲು ಇದರಿಂದ ಸುಲಭ ಸಾಧ್ಯ. ಜಾಹೀರಾತು ವಿಭಾಗದಲ್ಲಿ ಸುಲಭ, ಸರಳವಾಗಿ ಕೈ ಗೆಟಕುವ ದರದಲ್ಲಿ ಸಿಗುವ ಆದರೆ ಬಲು ವಿಶಿಷ್ಟ ರೀತಿಯಲ್ಲಿ ಅತ್ಯಧಿಕ ಜನರನ್ನು ತಲುಪುವ ಜಾಹೀರಾತು ಮಾಧ್ಯಮ ಇದಾಗಿದೆ.

ಅಲ್ಲದೆ ಭಾರತೀಯ ಅಂಚೆ ಇಲಾಖೆ ವಿದ್ಯನ್ಮಾನ ಹಣ ರವಾನೆ (ಇ ಎಮ್ಒ), ತ್ವರಿತ ಹಣ ರವಾನೆ( ಐ ಎಮ್ಒ) ವಿದೇಶಗಳಿಂದ ಹಣ ಸ್ವೀಕರಿಸಲು ಸುಲಭ ಲಭ್ಯ ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ ಫರ್, ಲಿಖಿತ ಸಂದೇಶ ತಲುಪಿಸಲು ಇಲ್ಲವೇ ವಿವಿಧ ಸಂದರ್ಭಗಳಲ್ಲಿ, ಶುಭಾಶಯ ಕಳುಹಿಸಲು ಇ ಪೋಸ್ಟ್, ವ್ಯಾವಹಾರಿಕ ಸಂದೇಶ ಕಳುಹಿಸಲು ಡೈರೆಕ್ಟ್ ಪೋಸ್ಟ್, ದೊಡ್ಡ ಗಾತ್ರದ ಸರಕು ಸಾಗಾಣೆಗೆ ಸರಕು ಸಾಗಣೆ ಅಂಚೆ, ( logistic post), ಬಟವಾಡೆಯ ಸಮಯದಲ್ಲಿ ನಗದು ಪಾವತಿ ವ್ಯವಸ್ಥೆ ಇರುವ ಕ್ಯಾಶ್ ಆನ್ ಡೆಲಿವರಿ ಸೌಲಭ್ಯ ಹೀಗೆ ಹತ್ತು ಹಲವು ಜನಸ್ನೇಹಿ ಸೇವೆಗಳು ನಮ್ಮ ಅಂಚೆ ಇಲಾಖೆಯ ಹೆಗ್ಗಳಿಕೆ.

ಎಲ್ಲ ಗ್ರಾಹಕರಿಗೆ ನಮ್ಮ ಭಾರತೀಯ ಅಂಚೆ ಇಲಾಖೆಯಿಂದ ಶುಭ ಆಶಯಗಳು.

 
 
 
 
 
 
 
 
 

1 COMMENT

Leave a Reply