ಇಂದು ವಿಶ್ವ ಪಿತೃ ದಿವಸ~ಡಾ। ವ್ಯಾಸರಾಜ ತಂತ್ರಿ, ಉಡುಪಿ 

ಒಂದು ಸುಂದರ ಸುಖೀ ಕುಟುಂಬದ ಆಧಾರ ಸ್ತಂಭವೇ ತಂದೆ. ತಂದೆಯಿಂದ ತಾಯಿಗೆ ಮತ್ತು ಮಕ್ಕಳಿಗೆ ಕಾಲಕಾಲಕ್ಕೆ ಸಿಗಬೇಕಾದ್ದು ಸಿಕ್ಕರೆ, ಆ ಸಂಸಾರ ಆನಂದಸಾಗರ. ಆದರೆ ಸಿಗ ಬೇಕಾದು ದನ್ನು ಕಾಲಕ್ಕೆ ಸಿಗಲು ಮಾಡುವ ತಂದೆಯ ಪರಿಶ್ರಮ ನಿಃಸ್ವಾರ್ಥ.

ಹುಟ್ಟಿದ ಮಗುವಿನಿಂದ ಯೌವನದ ಬೆಳವಣಿಗೆ ಯವರೆಗೆ‌ ತಾಯಿಯ ಆರೈಕೆಗೆ ತಂದೆಯೇ ಬೆನ್ನೆಲುಬು. ಅಂತಹ ದೇವರ ಸಮಾನರಾದ ತಂದೆಗೆ ವಿಶ್ವ ಅಪ್ಪಂದಿರ ದಿನದ ಸಾಷ್ಟಾಂಗ ಪ್ರಣಾಮಗಳು.

ಆದರೆ ಈ ಪ್ರಪಂಚದಲ್ಲಿ ಹಲವರಿಗೆ ಹುಟ್ಟಿನಿಂದ ತಂದೆಯ ನೋಡುವ ಸುಯೋಗವೇ ಇರದು.
ಅಂತಹವರನ್ನು ಹಲವು ಬಾರಿ ತಾಯಿಯೇ ತಂದೆಯಾಗಿ, ಅಥವಾ, ಕೆಲವರು ತಂದೆಯ ಸ್ಥಾನದಲ್ಲಿ ನಿಂತು ಅನಾಥರಾಗದಂತೆ ಜವಾಬ್ದಾ ರಿ ವಹಿಸಿಕೊಳ್ಳುತ್ತಾರೆ.

ಹಾಗಾಗಿ ಪ್ರಪಂಚದಲ್ಲಿ ಜನಕ (ಹುಟ್ಟಿಸಿದವ), ಉಪನೀತ (ಉಪನಯನ ಅಂದರೆ ವಿದ್ಯೆ ಕಲಿ ಯುವ ವಯಸ್ಸಿಗೆ ಗುರುಗಳ ಬಳಿಗೆ ಕರೆದು ಕೊಂಡು ಹೋಗುವುದು-ವಿದ್ಯೆಗೆ ನೆರವಾದ ವನು) ವಿದ್ಯೆ ಕಲಿಸಿದವನು ಅನ್ನದಾತಾ (ನಿತ್ಯ ಉಣ್ಣಲು ಬೇಕಾದ ಕೆಲಸ ಕೊಟ್ಟವನು) ಭಯತ್ರಾತಾ (ಕಷ್ಟಕಾಲದಲ್ಲಿ ದುಷ್ಟರಿಂದ ರಕ್ಷಣೆ ನೀಡುವವನು)

ಇವರೆಲ್ಲರೂ ತಂದೆಯ ಸಮಾನರು. ಇವರೆಲ್ಲರಿಗೂ ಪ್ರಣಾಮಗಳು.

 
 
 
 
 
 
 
 
 
 
 

Leave a Reply