ಪಿಎಎಸಿ ಪ್ಲಾನಿಸ್ಪಿಯರ್ ಮೂಲಕ ಎಲ್ಲರಿಗೂ ಆಕಾಶ ತಿಳಿಯುವ ಅವಕಾಶ

ಆಕಾಶದಲ್ಲಿ ಇರುವ ನಕ್ಷತ್ರ ಪುಂಜಗಳ ಒಟ್ಟು ಸಂಖ್ಯೆ 88 ಆಗಿದ್ದರೂ ಕೂಡ, ಅವುಗಳಲ್ಲಿ ಕೆಲವು ಮಾತ್ರ ಪ್ರತಿ ತಿಂಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ಆಕಾಶದ ಈ ಬದಲಾವಣೆಯನ್ನು ತಿಳಿಯಲು, ಖಗೋಳ ಮಾಹಿತಿಗಳನ್ನೊಳಗೊಂಡ ನಕಾಶೆಗಳನ್ನು ಮಾತ್ರವಲ್ಲದೆ, ಪ್ಲಾನಿಸ್ಪಿಯರ್ ಅನ್ನು ಕೂಡ ಬಳಸಬಹುದು. 'ಪ್ಲಾನಿಸ್ಪಿಯರ್ ' ಖಗೋಳ ವೀಕ್ಷಕರು ತಾವೇ ತಯಾರಿಸಿ, ಆಕಾಶದಲ್ಲಿ ನಕ್ಷತ್ರಗಳ ಚಲನೆಯನ್ನು ಗುರುತಿಸಬಹುದಾದ ನಕ್ಷೆ.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು, ಪ್ರತಿಯೊಬ್ಬ ಆಸಕ್ತ ವ್ಯಕ್ತಿ ಪ್ಲಾನಿಸ್ಪಿಯರ್ ಅನ್ನು ವಿನ್ಯಾಸಗೊಳಿಸುವ ಮೂಲಕ ಆಕಾಶದಲ್ಲಿ ನಕ್ಷತ್ರಪುಂಜಗಳನ್ನು ಗುರುತಿಸಲು ಅವಕಾಶವನ್ನು ಒದಗಿಸುತ್ತಿದೆ .ಇದರ ಮಾಹಿತಿಯು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದ್ದು, PAAC ವೆಬ್‌ಸೈಟ್‌ನಿಂದ ಅದನ್ನು ಪಡೆಯಬಹುದು.

ಆಸಕ್ತರು , https://paac.ppc.ac.in/planisphere ಗೆ ಭೇಟಿ ನೀಡಿ ಭಾಷೆಯನ್ನು ಆಯ್ಕೆ ಮಾಡಿ, ಪ್ಲಾನಿಸ್ಪಿಯರ್ ಅನ್ನು ಡೌನ್‌ಲೋಡ್ ಮಾಡಬಹುದು. ಇದರಲ್ಲಿ ನಕ್ಷೆಯನ್ನು ತಯಾರಿಸುವ ಹಾಗೂ ಬಳಸುವ ಕುರಿತು ಮಾಹಿತಿಯನ್ನು ನೀಡಲಾಗಿದೆ.

ಇದರ ಪ್ರಯೋಜನವನ್ನು ಪ್ರತಿಯೊಬ್ಬ ಖಗೋಳಾಸಕ್ತರು ಪಡೆಯಬೇಕೆಂದು PAAC ಆಶಿಸುತ್ತದೆ. ನವೆಂಬರ್ 25ರಂದು, ಉಡುಪಿ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಪ್ಲಾನಿಸ್ಪಿಯರ್ ಅನ್ನು ಬಿಡುಗಡೆ ಗೊಳಿಸಿದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ., ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ ಹಾಗೂ PAAC ವಿದ್ಯಾರ್ಥಿನಿ ಶುಭಶ್ರೀ ಶಣೈ ಉಪಸ್ಥಿತರಿದ್ದರು.

PAAC ತನ್ನ ವೆಬ್ ಸೈಟ್ ಮೂಲಕ ಜನರಿಗೆ ತಲುಪಿ ಆದ ಬೆಳವಣಿಗೆಯ ಜೊತೆಗೆ ಪ್ಲಾನಿಸ್ಪಿಯರ್ ಅನ್ನು ಬಳಸುವ ವಿಧಾನವನ್ನು, ವಿದ್ಯಾರ್ಥಿಗಳ ಶ್ರಮವನ್ನು ಸಂಯೋಜಕರಾದ ಶ್ರೀ ಅತುಲ್ ಭಟ್ ಅವರು ತಿಳಿಸಿದಾಗ, ಒಂದು ವರ್ಷ ಪೂರ್ಣಗೊಳಿಸಿರುವ PAAC ವೆಬ್ ಸೈಟ್ ಗೆ ಹಾಗೂ ಪ್ರೋತ್ಸಾಹ ನೀಡುತ್ತಿರುವ ತಂಡಕ್ಕೆ ಶ್ರೀ ಪಾದರು ಆಶೀರ್ವದಿಸಿದರು.

 
 
 
 
 
 
 
 
 
 
 

Leave a Reply