ಇಂದು ಒಂದಷ್ಟು ಉಳಿಸಿ ನಾಳಿನ ಭವಿಷ್ಯ ರೂಪಿಸಿ ۔۔ಅಂಚೆ ಉಳಿತಾಯ ದಿನದ ಶುಭಾಶಯಗಳು..
ಇಂದಿನ ಉಳಿತಾಯ ನಾಳೆಯ ಸಂತಸದ ಜೀವನಕ್ಕೆ ಅಡಿಪಾಯ ಎಂಬ ಆಶಯದಂತೆ ಜನಸಾಮಾನ್ಯರ ಇಲಾಖೆ ಎಂದೇ ಹೆಸರಾದ ಭಾರತೀಯ ಅಂಚೆ ಇಲಾಖೆಯಲ್ಲಿ ಉಳಿತಾಯಕ್ಕೆ ಹಲವಾರು ಯೋಜನೆಗಳಿವೆ. ಕೈಯಲ್ಲಿ ಕಾಸಿದ್ದಾಗ ಖಾತೆಗೆ ಜಮಾ ಮಾಡಿ ಕೈ ಖಾಲಿಯಾದಾಗ ಉಳಿತಾಯದ ಹಣವನ್ನು ಉಪಯೋಗಿಸಲು ನಮ್ಮ ಅಂಚೆ ಉಳಿತಾಯ ಖಾತೆ ಅವಕಾಶ ಕಲ್ಪಿಸುತ್ತದೆ.
ಕೇವಲ 500 ರೂಗಳಿಂದ ಆರಂಭಿಸಬಹುದಾದ ಈ ಉಳಿತಾಯ ಖಾತೆಗೆ ಗರಿಷ್ಠ ಮಿತಿ ಇಲ್ಲ. ಶೂನ್ಯ ಶುಲ್ಕದಲ್ಲಿ ಎಟಿಎಂ ಪಡೆದುಕೊಳ್ಳಬಹುದಾಗಿದ್ದು ಕೇವಲ 26 ರೂಗಳಿಗೆ ಚೆಕ್ ಬುಕ್ ನಿಮಗೆ ದೊರೆಯಲಿದ್ದು ಯಾವುದಾದರೂ ಒಂದು ಅಂಚೆ ಕಚೇರಿಯಲ್ಲಿ ಇರುವ ಒಂದು ಉಳಿತಾಯ ಖಾತೆಯಿಂದ ಭಾರತದಾದ್ಯಂತ ವ್ಯವಹಾರ ವ್ಯವಹರಿಸಬಹುದಾಗಿದೆ ۔
ಅಂಚೆ ಕಚೇರಿಯಲ್ಲಿ ತಿಂಗಳಿಗೊಮ್ಮೆ ಗ್ರಾಹಕರು ಪಡೆಯುವ ಮಾಸಿಕ ವರಮಾನ ಯೋಜನೆಯ ಒಂಟಿ ಖಾತೆಯಲ್ಲಿ ರೂ.4,50,000 ಹಾಗೂ ಜಂಟಿ ಖಾತೆಯಲ್ಲಿ 9 ಲಕ್ಷ ದಷ್ಟು ಇರಿಸಬಹುದಾಗಿದ್ದು7.2% ದರದಲ್ಲಿ ಪ್ರತಿ ತಿಂಗಳು ರೂ. 4950/- ಬಡ್ಡಿ ಪಡೆಯಬಹುದು. ಉಳಿತಾಯ ಖಾತೆಗೆ ಅದನ್ನು ವರ್ಗಾಯಿಸಿ ತಿಂಗಳ ಖರ್ಚಿಗೆ ಅದರ ಅವಶ್ಯಕತೆ ಇಲ್ಲದಿದ್ದಲ್ಲಿ ಅದರಲ್ಲೇ ಆವರ್ತನೀಯ ಖಾತೆ(ಆರ್ ಡಿ) ತೆರೆಯ ಬಹುದಾಗಿದೆ.
ಅದರಲ್ಲೂ ಹಿರಿಯ ನಾಗರಿಕ ಉಳಿತಾಯ ಯೋಜನೆ 60 ವರ್ಷಗಳ ಮೇಲ್ಪಟ್ಟ ಗ್ರಾಹಕರಿಗಿದ್ದು ರೂ.15 ಲಕ್ಷ ಗಳಷ್ಟು ಇಡಲು ಅವಕಾಶವಿದ್ದು ಮೂರು ತಿಂಗಳಿಗೊಮ್ಮೆ 7.4% ಬಡ್ಡಿದರದಲ್ಲಿ 27,750 (ಟಿಡಿಎಸ್ ಇದ್ದಲ್ಲಿ ರೂ.2,775 ಕಡಿತವಾಗಿ ರೂ 24,975 ಖಾತೆದಾರರಿಗೆ ದೊರೆಯುತ್ತದೆ) ನಿವೃತ್ತಿ ನಂತರ ಪಿಂಚಣಿ ಇಲ್ಲದವರಿಗೆ ಇದೊಂದು ನಿತ್ಯ ಖರ್ಚಿಗೆ ದಾರಿಯಾಗಿದ್ದು ಹಿರಿಯ ನಾಗರಿಕರು ಈ ಖಾತೆಗಳ ಪ್ರಯೋಜನ ಪಡೆದಿದ್ದಾರೆ .( ಇಂದಿನ ಬಡ್ಡಿದರದ ಅನ್ವಯ)
ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಪ್ರತಿ ತಿಂಗಳು ರೂ. 1000/- ಹಾಕುತ್ತಾ ಬಂದಲ್ಲಿ ಐದು ವರ್ಷಗಳ ಅವಧಿಯಲ್ಲಿ ನಿಮ್ಮ ಖಾತೆಯಲ್ಲಿ ರೂ.69,697ರಷ್ಟು ಜಮೆ ಆಗಿರುತ್ತದೆ .(ಇಂದಿನ ಬಡ್ಡಿದರದ ಅನ್ವಯದಂತೆ ).ಮತ್ತೆ ಕೇಂದ್ರ ಸರಕಾರದಿಂದ “ಹೆಣ್ಣು ಮಗುವನ್ನು ಉಳಿಸಿ. ಹೆಣ್ಣುಮಗುವನ್ನು ಓದಿಸಿ” ಎಂಬ ಘೋಷಣಾ ವಾಕ್ಯದೊಂದಿಗೆ ಆರಂಭಗೊಂಡ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಇಡುವ ಹಣಕ್ಕೆ ಗರಿಷ್ಠ ಬಡ್ಡಿದರ 7.6% ಲಭ್ಯವಿದ್ದು 10 ವರ್ಷದ ಒಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಮಾತ್ರ ಈ ಖಾತೆ ತೆರೆಯ ಬಹುದಾಗಿದೆ.
ಅತಿ ಹೆಚ್ಚು ಲಾಭ ಇರುವ ಈ ಖಾತೆಗೆ ವರುಷಕ್ಕೆ ಕನಿಷ್ಠ ರೂ 250/- ಹಾಕಬೇಕಾಗಿದ್ದು ಒಂದುವರೆ ಲಕ್ಷ ತನಕದ ಗರಿಷ್ಠ ಮಿತಿ ಇದೆ. ತಿಂಗಳಿಗೊಮ್ಮೆ 1000 ರೂ ನಂತೆ ಹಾಕುತ್ತಾ ಬಂದರೆ ಹದಿನೈದು ವರ್ಷಗಳಲ್ಲಿ ಗ್ರಾಹಕರ ಖಾತೆಯಲ್ಲಿ ಆಗುವ ರೂ 1,80,000/- . 21 ವರ್ಷಗಳ ಅವಧಿಯಲ್ಲಿ ಅದಕ್ಕೆ 3,30,373/-ಬಡ್ಡಿ ದೊರೆತು ಪೂರ್ಣ ಹಣ 5,10, 373/- ಹೆಣ್ಣು ಮಗುವಿನ ಕೈ ಸೇರುತ್ತದೆ. (ಈಗಿನ ಬಡ್ಡಿದರದ ಅನ್ವಯ) ತಂದೆ ತಾಯಿಯ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಖಾತೆ ತೆರೆಯಬಹುದಾಗಿದ್ದು ತೆರಿಗೆ ವಿನಾಯಿತಿ ಸೌಲಭ್ಯವಿದೆ.
ಮನೆಯಲ್ಲಿ ಹೆಣ್ಣುಮಕ್ಕಳಿಲ್ಲ, ಗಂಡು ಮಗುವಿದೆ , ಇದಕ್ಕೆ ಯಾವ ಉಳಿತಾಯ ಯೋಜನೆ ಮಾಡೋಣ ಎಂದು ಯೋಚನೆ ಮಾಡುವ ಅಪ್ಪ-ಅಮ್ಮಂದಿರು ನಿರಾಶರಾಗಬೇಕಿಲ್ಲ. ಎಲ್ಲಾ ವಯೋಮಾನದವರಿಗೆ, ಹೆಣ್ಣು-ಗಂಡೆಂಬ ಭೇದವಿಲ್ಲದೇ ಸಾರ್ವಜನಿಕ ಭವಿಷ್ಯ ನಿಧಿ ಖಾತೆ (ಪಿಪಿಎಫ್) ತೆರೆಯಬಹುದು. ವರುಷಕ್ಕೆ ಕನಿಷ್ಠ ರೂ.500/- ಮತ್ತು ಗರಿಷ್ಠ ಒಂದುವರೆ ಲಕ್ಷ ಹೂಡಿಕೆಗೆ ಶೇಕಡಾ 7.1 ಬಡ್ಡಿದರವಿದೆ. ತಿಂಗಳಿಗೆ ವಿನಿಯೋಗಿಸುವ ಒಂದು ಸಾವಿರ ರೂಗಳಿಗೆ 15 ವರ್ಷಗಳಲ್ಲಿ ಜಮೆಗೊಳ್ಳುವ ಹಣ 1,80,000 ರೂಗಳಿಗೆ 1,35,572 ಬಡ್ಡಿ ದೊರೆಯಲಿದ್ದು, ಖಾತೆದಾರನಿಗೆ ರೂ.3,15,572/- ಸಿಗುತ್ತದೆ( ಇವತ್ತಿನ ಬಡ್ಡಿದರದ ಪ್ರಕಾರ ಮಾತ್ರ) ಅಲ್ಲದೆ ಇದಕ್ಕೆ ತೆರಿಗೆ ವಿನಾಯಿತಿ ಸೌಲಭ್ಯವಿದೆ.
.
ಇದಲ್ಲದೆ 6.9 ಶೇಕಡಾ ಬಡ್ಡಿಯಲ್ಲಿ 124 ತಿಂಗಳುಗಳಲ್ಲಿ ಪಕ್ವವಾಗುವ ಕಿಸಾನ್ ವಿಕಾಸ್ ಪತ್ರ , 6.8 ಶೇಕಡಾ ಬಡ್ಡಿ ಸಿಗುವ 5 ವರ್ಷಗಳ ಸೇವಿಂಗ್ ಸರ್ಟಿಫಿಕೇಟ್, 5.5 ಬಡ್ಡಿದರದಲ್ಲಿ ಒಂದು ವರ್ಷ, ಎರಡು ವರ್ಷ ,ಮೂರು ವರ್ಷಗಳ ಕಾಲಮಿತಿ ಠೇವಣಿ( ಟೈಮ್ ಡೆಪಾಸಿಟ್) ಮತ್ತು 6.7 %ಬಡ್ಡಿದರದಲ್ಲಿ ಐದು ವರ್ಷಗಳ ಕಾಲಮಿತಿ ಠೇವಣಿ ಸೌಲಭ್ಯ ಕೂಡ ಅಂಚೆ ಕಚೇರಿಯಲ್ಲಿ ಲಭ್ಯವಿದೆ .
ಅಲ್ಲದೆ ಇದೀಗ ಮನೆಯೊಳಗೆ ಕುಳಿತು ಬ್ಯಾಂಕ್ ವ್ಯವಹಾರ ನಡೆಸುವಲ್ಲಿ ಬಹು ಉಪಯೋಗಿ ಐಪಿಪಿಬಿ ಖಾತೆ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್) ಬಹು ಜನಪ್ರಿಯವಾಗುತ್ತಿವೆ. ಬೇರೆ ಬ್ಯಾಂಕುಗಳಿಂದ ಹಣ ತೆಗೆಯುವುದು, ಅಂಚೆ ಉಳಿತಾಯ ಖಾತೆಗೆ ಹಣ ವರ್ಗಾವಣೆ ,ಇಲ್ಲವೇ ಹಣ ಸಂದಾಯ ,ವಿದ್ಯುತ್ ಬಿಲ್, ಫೋನ್ ರಿಚಾರ್ಜ್, ಪಿಪಿಎಫ್, ಆರ್ ಡಿ, ಸುಕನ್ಯಾ ಖಾತೆಗಳಿಗೆ ಮನೆಯಲ್ಲೆ ಕುಳಿತು ಹಣ ತುಂಬಲು ಅನುಕೂಲವಾಗುವಂತೆ ಅಂಚೆ ಇಲಾಖೆಯಲ್ಲಿ ಐಪಿಪಿಬಿ ಖಾತೆ ತೆರೆಯಲು ಮುಕ್ತ ಅವಕಾಶವಿದ್ದು ಅಂಚೆಯಣ್ಣ ಈಗ ಮೈಕ್ರೋ ಎಟಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ .
ಅಂಚೆ ಉಳಿತಾಯ ಖಾತೆಯಲ್ಲಿ 12 ರೂಗಳನ್ನು ವರ್ಷಕ್ಕೆ ಕಟ್ಟಿ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯ ಸದಸ್ಯ ಮತ್ತು ರೂ 330/-ನ್ನು ವರುಷಕ್ಕೆ ಕಟ್ಟಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆಯ ಖಾತೆ ತೆರೆದು ಅವಘಡ ಸಂಭವಿಸಿದಲ್ಲಿ 2 ಲಕ್ಷ ರೂಪಾಯಿಗಳಷ್ಟು ಪರಿಹಾರ ಪಡೆಯಬಹುದಾಗಿದೆ .ಅಲ್ಲದೆ 60 ವರುಷಗಳ ಬಳಿಕ ಪಿಂಚಣಿ ಸಿಗುವ ಅಟಲ್ ಪಿಂಚಣಿ ಯೋಜನೆಯನ್ನು ಕೂಡಾ ಆರಂಭಿಸಬಹುದಾಗಿದೆ ಭಾರತೀಯ ಅಂಚೆ ಇಲಾಖೆಯ ವಿವಿಧ ಜನಪರ ಯೋಜನೆಗಳತ್ತ ಗಮನಹರಿಸಿ …. ಸುಭದ್ರ ಭವಿಷ್ಯದ ದಿನಗಳನ್ನು ನಿಮ್ಮದಾಗಿಸಿ ..
ಉಡುಪಿ ಅಂಚೆ ವಿಭಾಗ, ಉಡುಪಿ…576101