Janardhan Kodavoor/ Team KaravaliXpress
24.6 C
Udupi
Thursday, July 7, 2022
Sathyanatha Stores Brahmavara

ನಾವು ಬೆಳೆಸಿದ ಮರವನ್ನು ತೋರಿಸಿ.. ಇದೇ ನಮ್ಮ ಸ್ಟೇಟಸ್ ಅನ್ನುವ ಮಟ್ಟಕ್ಕೆ ಹಸಿರನ್ನು ಬೆಳೆಸಬೇಕು~ನಾಗಭೂಷಣ್ ಬೇಳೂರು 

ಈ ಮನುಷ್ಯನಿಗೆ ಸಂಪತ್ತು ಎಂದರೆ ಬರೀ ಹಣ ಸಂಪತ್ತು ಮಾತ್ರ ನೆನಪಿಗೆ ಬರುತ್ತದೆ. ಇದೇ ಒಂದು ಕೆಟ್ಟ ಆಲೋಚನೆಯಿಂದ ಇಂದು ನಾವು ಪರಿಸರ ಎನ್ನುವ ಸಂಪತ್ತನ್ನು ಕಳೆದು ಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಈ ಪರಿಸರವು ನಮಗೆ ದಿನ ನಿತ್ಯ ಗಾಳಿ, ಬೆಳಕು, ನೀರು ಹೀಗೆ ಎಲ್ಲವನ್ನೂ ಯಾವುದೇ ಸ್ವಾರ್ಥ ಇಲ್ಲದೆ ಕೊಡುತ್ತ ಬಂದಿದೆ. ಆದರೆ ನಾವು ಈ ಪರಿಸರಕ್ಕೆ ಯಾವ ಕೊಡುಗೆ ಕೊಟ್ಟಿದ್ದೇವೆ? ಒಮ್ಮೆ ಆಲೋಚಿಸಿ ನೋಡಿದರೆ ಶೂನ್ಯ..
ಹೌದು ನಾವು ಈ ಪರಿಸರವನ್ನು ಉಳಿಸುವ ಬದಲು ಒಂದಲ್ಲ ಒಂದು ರೀತಿಯಲ್ಲಿ ನಾಶ ಮಾಡುತ್ತ ಬಂದಿದ್ದೇವೆ. ಎಲ್ಲೆಂದರಲ್ಲಿ ಕಸ ಹಾಕುವುದು, ನೀರನ್ನು ಮಲೀನ ಮಾಡುವುದು, ನಮಗೆ ತೊಂದರೆ ಆದರೆ ಆ ಮರವನ್ನು ಕಡಿಯುವುದು ಹೀಗೆ ಹಲವು ತರದಲ್ಲಿ ಪರಿಸರವನ್ನು ನಾವು ತಿನ್ನುತ್ತಾ ಬಂದಿದ್ದೇವೆ. ಆದರೆ ಆ ನಮ್ಮ ಸುಂದರವಾದ ಪರಿಸರ, ಪ್ರಕೃತಿ ಎಂದಿಗೂ ನಮಗೆ ಗಾಳಿ, ನೀರು, ಬೆಳಕನ್ನು ನೀಡುವುದನ್ನು ನಿಲ್ಲಿಸಲಿಲ್ಲ. 
ನಮ್ಮ ವೇಗದ ಸಂಚಾರಕ್ಕೆ ನೆರಳು ನೀಡುವ, ಗಾಳಿ ನೀಡುವ ಅದೆಷ್ಟೋ ವರುಷದಿಂದ ಆಕಾಶ ನೋಡುವ ಮರವನ್ನು ಭೂಮಿಯಲ್ಲಿ ಮಲಗಿಸಿ ಬಿಟ್ಟೆವು. ಆವಾಗಲು ನಮ್ಮ ಈ ಪರಿಸರ, ಪ್ರಕೃತಿ ಮಾತಾಡಲಿಲ್ಲ.  ಈ ಮನುಷ್ಯ ಎಷ್ಟು ಸ್ವಾರ್ಥಿ ಗೊತ್ತಾ..   ನಮಗೆ ಬೇಕಾದ ಹಾಗೆ ಪರಿಸರ ಬೆಳೆಸಿದೆವು ಹೊರತು ಪರಿಸರಕ್ಕೆ ಅನುಕೂಲವಾಗುವಂತೆ ಇರಲಿಲ್ಲ. ನಾವೆಲ್ಲ  ತಿಳಿಯ ಬೇಕಾಗಿರುವ ಒಂದು ವಿಷಯ ಇದೆ.  ಪರಿಸರದಿಂದ ನಾವು ಹೊರತು ನಮ್ಮಿಂದ ಪರಿಸರ ಅಲ್ಲಾ. 
ನಾವು ಇಲ್ಲದೆ ಪರಿಸರ ಸುಂದರವಾಗಿ, ಆಕರ್ಷಣೀಯವಾಗಿ ಬೆಳೆಯುತ್ತೆ, ಆದರೆ ನಾವುಗಳು ಈ ಪರಿಸರ ಇಲ್ಲದೆ ಒಂದು ಕ್ಷಣ ಬದುಕಲು ಸಾಧ್ಯವಿಲ್ಲ. ಈ ಮನುಷ್ಯನ ಬುದ್ಧಿಮಟ್ಟ ವಿಕಸನ ಆದಂತೆ ಪ್ರಕೃತಿ ಕ್ಷೀಣಿಸುತ್ತಾ ಹೋಯಿತು. ನಮಗೆ ನಮ್ಮ ಮನೆಯ ಒಳಗೆ ಸುಚಿತ್ವವಾಗಿ ಇರಬೇಕು ಎನ್ನುವ ಕಾಳಜಿ  ಸುತ್ತಲಿನ ಪರಿಸರದ ಸುಚಿತ್ವದ ಬಗ್ಗೆ ಕಾಳಜಿ ವಹಿಸಲಿಲ್ಲ. 
ಈ ಎಲ್ಲಾ ತಪ್ಪುಗಳಿಗೆ ಪ್ರಕೃತಿ ಆಗಾಗ ಚಂಡಮಾರುತ, ಸುನಾಮಿ, ಉಲ್ಕಾಪಾತ ಮುಂತಾದ ಪ್ರಕೃತಿ ವಿಕೋಪದ ಮೂಲಕ ನಮಗೆ ದಿಟ್ಟ ಉತ್ತರವನ್ನು ಕೊಡುತ್ತಾ ಇದ್ದರೂ ನಮಗೆ ಪರಿಸರದ ಕಾಳಜಿ ಬರಲಿಲ್ಲ. ಪ್ರಕೃತಿಯಲ್ಲಿ ವಿಲೀನ ಆಗದಂತ ವಸ್ತುವನ್ನು ನಿರ್ಮಿಸಿ ಕೊನೆಯದಾಗಿ ಅದನ್ನು ಬೆಂಕಿ ಹಚ್ಚಿ ಸುಟ್ಟು ಹೊಗೆಯ ಮೂಲಕ  ನಾವು ಉಸಿರಾಡುವ ಗಾಳಿಯನ್ನು ಮಲೀನ ಮಾಡುವುದರಲ್ಲಿ ನಾವುಗಳು ತೊಡಗಿದ್ದೇವೆ.
 ಈ ಪರಿಸರದ ಮೇಲಿನ ಪ್ರೀತಿ ಕಾಳಜಿ ಒಂದು ದಿನಕ್ಕೆ ಸೀಮಿತವಾಗಿರದೇ ಪ್ರತಿದಿನ ಪ್ರೀತಿ ಕಾಳಜಿ ತೋರಿಸುವಂತೆ ಆಗಬೇಕು. ನಮ್ಮ ವಾಟ್ಸಾಪ್ ಸ್ಟೇಟಸ್ ಗಾಗಿ ಒಂದು ಗಿಡ ನೆಟ್ಟು ನೀರು ಹಾಕಿದರೆ ಪ್ರಯೋಜನವಿಲ್ಲ. ಒಬ್ಬರು ಬಂದು ನಿಮ್ಮ ಸ್ಟೇಟಸ್ ಏನೆಂದು ಕೇಳುವಾಗ ನಾವು ಬೆಳೆಸಿದಂತ ಮರವನ್ನು ತೋರಿಸಿ ಇದೆ ನಮ್ಮ ಸ್ಟೇಟಸ್ ಅನ್ನುವ ಮಟ್ಟಕ್ಕೆ ಹಸಿರನ್ನು ಬೆಳೆಸಬೇಕು.
ಮುಖ್ಯವಾಗಿ ಶಾಲಾ ಮಕ್ಕಳಿಗೆ ಪರಿಸರದ ಪ್ರಾಮುಖ್ಯತೆ ಬರುವ ಹಾಗೆ ತಿಳಿಸಬೇಕು. ಅವರಲ್ಲಿಯೂ ಪರಿಸರದ ಮೇಲೆ ಪ್ರೀತಿ ಕಾಳಜಿ ಬರುವಂತೆ ಒಲವು ಮೂಡಿಸಬೇಕು..
ನಾವು ಬಳಸುವ ಈ ಗಾಳಿ ನೀರು, ಬೆಳಕು, ಉತ್ತಮವಾದ ಹೂ ಹಣ್ಣು ನೀಡುವ ನಮ್ಮ ಪ್ರಕೃತಿಗೆ ನಾವು ಯಾವುದೇ ನಾಶವನ್ನು ಬಯಸದೆ, ಮಾಲಿನ್ಯ ಮಾಡದೇಧನ್ಯವಾದವನ್ನು ದಿನಾಲೂ ಹೇಳುವ…
 “ಹಸಿರೇ-ಉಸಿರು” ವಿಶ್ವ ಪರಿಸರ ದಿನದ ಶುಭಾಶಯಗಳು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!