ಭಾರತದ ಭರವಸೆಯ ನಾಯಕನಿಗೆ ಹುಟ್ಟು ಹಬ್ಬದ ಸಂಭ್ರಮ~ಕವಾ೯ಲು

ಭಾರತದ ಜನಪ್ರೀಯ ಪ್ರಧಾನಿ ಎಂದು ಹೆಸರಾದ ನರೇಂದ್ರ ಮೋದಿಯವರು 70ರ ಹರೆಯಕ್ಕೆ ಕಾಲಿಡುತ್ತಿದ್ದಾರೆ.ನವಯುವಕನಂತೆ ಕ್ರಿಯಾಶೀಲ, ಸಮರ್ಪಿತ ಮತ್ತು ನಿರ್ದಿಷ್ಟ, ಅವರು ಒಂದು ಶತಕೋಟಿಗೂ ಅಧಿಕ ಭಾರತೀಯರ ಆಶೋತ್ತರ ಮತ್ತು ಭರವಸೆ ಗಳನ್ನು ಪ್ರತಿಬಿಂಬಿಸುತ್ತಾರೆ.

ಪ್ರಧಾನ ಮಂತ್ರಿಯಾಗಿ ಮೇ 2014ರಿಂದ ಜವಾಬ್ದಾರಿ ಪಡೆದ ಮೇಲೆ ಮೊದಲ ಹೆಜ್ಜೆಯಾಗಿ, ಪ್ರತಿಯೊಬ್ಬ ಭಾರತೀಯನೂ ಒಟ್ಟಾರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ಕಾರ್ಯಗಳಲ್ಲಿ ಸಹಪಯಣಿಗನಾಗಿ ತಮ್ಮ ಆಶೋತ್ತರ ಹಾಗೂ ಅಪೇಕ್ಷೆಗಳು ಫಲಕಾಣುವ ಹಾಗೂ ಅವುಗಳ ಅನುಭವಗಳಿಸುವ ಅವಕಾಶ ಸೃಷ್ಠಿಸಿದವರು ಇವರು ಈ ನಿಟ್ಟಿನಲ್ಲಿ, ಸಮಾಜದ ಕೊನೆ ಸಾಲಿನ ಕಟ್ಟಕಡೆಯ ವ್ಯಕ್ತಿಯ ಕೂಡಾ ಸೇವೆಯಲ್ಲಿ ನಿರತನಾಗಲು ಅವರ ಪಾಲಿಗೆ“ಅಂತ್ಯೋದಯ ” ನೀತಿ ಸೂತ್ರ ಗಾಢ ಪ್ರಭಾವ ಬೀರಿದೆ. ಸಂಪೂರ್ಣವಾಗಿ ತೆರೆದ ಮುಕ್ತ ವಾತಾವರಣ, ಸುಲಭ ಹಾಗೂ ಪಾರದರ್ಶಕತೆ ಹೊಂದಿದ ಆಡಳಿತವನ್ನು ಸ್ಥಾಪಿಸಲು ಪ್ರಯತ್ನಿಸಿರುವುದು ಅಭಿನಂದನೀಯ.

ಅವರ ವಿವಿಧ ಯೋಜನೆಗಳ ಬಗ್ಗೆ ತಿಳಿಸುದಾದರೆ ಬಹಳಷ್ಠಿದೆ ಪ್ರಾಮುಖ್ಯವಾಗಿ ದೇಶದ ಅರ್ಥಿಕವ್ಯವಸ್ಥೆಯಲ್ಲಿ ಜನಸಾಮಾನ್ಯನೂ ಸೇರ್ಪಡೆಗೊಂಡು ನೇರವಾಗಿ ಪಾಲ್ಗೊಳ್ಳುವಂತೆ ಮಾಡಿದ “ಪ್ರಧಾನ ಮಂತ್ರಿ ಜನ್ ಧನ್ ಯೋಜನಾ” ದೇಶದ ಅರ್ಥ ವ್ಯವಸ್ಥೆ ಬದಲಾವಣೆಯ ನೂತನ ಮೈಲುಗಲ್ಲಾಗಿದೆ. ದೇಶದಲ್ಲಿ ಕೈಗಾರಿಕಾ ಕ್ರಾಂತಿಯಾಗಲು “ ಮೇಕ್ ಇನ್ ಇಂಡಿಯ” ಯೋಜನೆ ಮೂಲಕ ಸುಲಭವಾಗಿ ವ್ಯವಹಾರನಡೆಸಲು ಸಾಧ್ಯವಾಗುವಂತಹ ಉತ್ತಮ ವಾಣಿಜ್ಯ ವಾತಾವರಣ ಕಲ್ಪಿಸಿಕೊಡುತ್ತೇವೆ – ಎಂದು ವಿದೇಶಿ ಹೂಡಿಕೆದಾರರಿಗೆ ಹಾಗೂ ಉದ್ಯಮಿಗಳಿಗೆ ನೀಡಿದ ಆಹ್ವಾನ ಅತ್ಯಂತ ಯಶಸ್ವಿಯಾಗಿದೆ. ಕಾರ್ಮಿಕ ನೀತಿ ಸುಧಾರಣೆ ಹಾಗೂ ಕಾರ್ಮಿಕ ಘನತೆ ಹೆಚ್ಚಿಸುವ “ ಶ್ರಮ ಏವ ಜಯತೆ “ ಯೋಜನೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ತಮ್ಮಲ್ಲಿ ಯುವ ಜನತೆಯ ಕೌಶಲ್ಯ ಸಂಪನ್ಮೂಲವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಜನಸಾಮಾನ್ಯನಿಗಾಗಿ ಪ್ರಪ್ರಥಮವಾಗಿ ಕೇಂದ್ರ ಸರ್ಕಾರ “ಮೂರು ಸಾಮಾಜಿಕ ಭದ್ರತೆಯ ಯೋಜನೆ”ಗಳನ್ನು ಪ್ರಾರಂಭಿಸಿದೆ. ಹಿರಿಯರಿಗೆ ನಿವೃತ್ತಿವೇತನ ಮತ್ತು ಬಡವರಿಗೆ ವಿಮಾ ರಕ್ಷಣೆಯ ಯೋಜನೆಗಳಲ್ಲಿ ಗಮನ ಕೇಂದ್ರೀಕರಿಸುವ ಮೂಲಕ ಜನಪರ ಕಾಳಜಿ ಎತ್ತಿ ಹಿಡಿದಿದೆ. ನೂತನ ತಂತ್ರಜ್ಞಾನದ ಅಳವಡಿಕೆ ಮೂಲಕ ಭಾರತೀಯರ ಜೀವನದಲ್ಲಿ ಮಹತ್ತರ ಹಾಗೂ ಪರಿಣಾಮಕಾರಿ ಬದಲಾವಣೆ ತರುವ ಸದುದ್ಧೇಶದಿಂದ “ಡಿಜಿಟಲ್ ಇಂಡಿಯ ಮಿಷನ್“ ಯೋಜನೆ, ದೇಶದಾಧ್ಯಂತ ಸ್ವಚ್ಛತೆಯ ಕ್ರಾಂತಿ ಮೂಡಿಸುವ ಸಾಮೂಹಿಕ ಜನಾಂದೋಲನದ ಉದ್ದೇಶದಿಂದ “ಸ್ವಚ್ಛ ಭಾರತ್ ಮಿಷನ್ “ ಯೋಜನೆಯನ್ನು ಮಹಾತ್ಮ ಗಾಂಧಿಯವರ ಜನ್ಮ ದಿನವಾದ ಅಕ್ಟೋಬರ್ 2, 2014ರಂದು ಪ್ರಾರಂಭಿಸಿದರು. ಜನಮನಗೆದ್ದ ಈ ಪರಿಣಾಮಕಾರಿ ಯೋಜನೆಯ ವಿಸ್ತಾರ ಹಾಗೂ ಪ್ರಭಾವ ಅಮೂಲ್ಯವಾದುದು ವಾದುದು ಹಾಗೂ ಇದು ಐತಿಹಾಸಿಕ ಆಂದೋಲನವಾಗಿ ಗುರುತಿಸಲ್ಪಟ್ಟಿದೆ. ಎಂದರೆ ತಪ್ಪಾಗ ಲಾರದು.

ವಿಶ್ವದ ಅತಿದೊಡ್ಡ ಪ್ರಜಾತಾಂತ್ರಿಕ ದೇಶಕ್ಕೆ ಜಾಗತಿಕವಾಗಿ ಅತ್ಯುನ್ನತ ಸ್ಥಾನಮಾನವಿದೆ ಎಂದು ಗುರುತಿಸಿಕೊಳ್ಳಲು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅತ್ಯಂತ ಸಧೃಡ ಹಾಗೂ ಬಲಿಷ್ಠ “ ವಿದೇಶಾಂಗ ನೀತಿಗಳು ” ಕಾರಣವಾದವು. ವಿಶ್ವ ಮಟ್ಟದಲ್ಲಿ ಒಂದು ದಿನವನ್ನು “ ಅಂತರಾಷ್ಟ್ರೀಯ ಯೋಗ ದಿನ”ವಾಗಿ ಆಚರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಕರೆಗೆ ವಿಶ್ವಸಂಸ್ಥೆಗೆ ಸಕಾರಾತ್ಮಕ ಸ್ಪಂದನೆಗಳು ಪ್ರವಾಹೋಪಾದಿಯಲ್ಲಿ ಬಂದವು. ಪ್ರಧಾನ ಮಂತ್ರಿಯವರ ಮನವಿಗೆ ಓಗೊಟ್ಟು ಜಗತ್ತಿನ ಉದ್ದಗಲದ ಒಟ್ಟು 177 ದೇಶಗಳು ಒಂದಾದವು, ಜೂನ್ 21 ನ್ನು ಇನ್ನು ಮುಂದೆ ಪ್ರತಿ ವರ್ಷವೂ “ ವಿಶ್ವಸಂಸ್ಥೆಯಲ್ಲಿ ಅಂತ ರಾಷ್ಟ್ರೀಯ ಯೋಗ ದಿನ” ವೆಂದು ಘೋಷಿಸಿ ವಿಶ್ವದಾಧ್ಯಂತ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಇದು ಯೋಗಕ್ಕೆ ಸಿಕ್ಕಿದ ದೊಡ್ಡ ಮಾನ್ಯತೆಯಾಗಿದೆ. ಅನೇಕ ಯೋಜನೆಗಳು ದೇಶದ ಜನರ ಬದುಕನ್ನು ಎತ್ತರಕ್ಕೆ ಏರಿಸಬಲ್ಲದು.

ಗುಜರಾತಿನ ಸಣ್ಣ ಹಳ್ಳಿಯ “ಒಂದು ರೂಪಾಯೀಗೂ ಗತಿಯಿಲ್ಲದ ” ಕೇವಲ ಪ್ರೀತಿ – ಸ್ನೇಹವೇ ತುಂಬಿತುಳುಕುತ್ತಿದ್ದ ಬಡ ಕುಟುಂಬದಲ್ಲಿ 1950 ರ ಸೆಪ್ಟೆಂಬರ್ 17 ರಂದು ಜನಿಸಿದ ಮೋದಿಯವರ ಬಾಲ್ಯದ ಕಷ್ಟದ ಜೀವನ ಇವರಪಾಲಿಗೆ ಕಠಿಣ ಪರಿಶ್ರಮದ ಪಾಠ ಕಲಿಸಿತು. ಅಲ್ಲದೆ, ಜನಸಾಮಾನ್ಯನ ಬದುಕು ಬವಣೆ ಪರಿತಾಪಗಳ ನಡುವಣ ಅನನ್ಯ ಜೀವಿತಾನುಭವ ನೀಡಿತು. ಇದರಿಂದ ಪ್ರೇರಿತರಾದ ಅವರು ಯುವಕರಾಗಿದ್ದಾಗಲೇ ದೇಶ ಹಾಗೂ ಜನತೆಯ ಸೇವೆಗಾಗಿ ತಮ್ಮನ್ನು ಅರ್ಪಿಸಿ ಕೊಂಡರು.

ಮೋದಿಯವರು “ ಜನತೆಯ ನಾಯಕ”. ಜನಸಾಮಾನ್ಯರ ಕ್ಷೇಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವರು. ಬಡಜನತೆಯ ಕಷ್ಟಕಾರ್ಪಣ್ಯ ನಿವಾರಣೆಗೆ , ಸಮಸ್ಯೆಗಳ ಪರಿಹಾರಕ್ಕಾಗಿ ಜೀವನವನ್ನು ಸಮರ್ಪಿಸಿಕೊಂಡವರು. ಜನರ ಜೊತೆ ಬೆರೆವ, ಅವರ ಜೀವನಾನುಭವ ಹಂಚಿಕೊಳ್ಳುವ ವ್ಯಕ್ತಿತ್ವ . ಜನರ ನೋವು, ನಲಿವು, ಸುಖ ದುಃಖಗಳಲ್ಲಿ ಪಾಲುದಾರರಾಗುವುದಕ್ಕಿಂತ ಹೆಚ್ಚಿದ ಏನನ್ನೂ ಅವರು ಬಯಸಿಲ್ಲ.ಅಂತರ್ಜಾಲ ಮೂಲಕ ತನ್ನ ಬಲಿಷ್ಠವಾದ ಪ್ರಭಾವ ಬೆಳೆಸಿಕೊಂಡ ಅವರು ಜನರ ಜೊತೆ “ನೇರ ಖಾಸಗಿ ಸಂಪರ್ಕ” ಇಟ್ಟುಕೊಳ್ಳಲು ಈ ಆಧುನಿಕ ಸೌಲಭ್ಯ ಅನುಕೂಲ ಮಾಡಿಕೊಟ್ಟಿತು. ದೇಶದ ಅತ್ಯಂತ “ಟೆಕ್ನೋ ಸ್ನೇಹಿ” ನಾಯಕ ಎಂದುಅವರನ್ನು ಗುರುತಿಸಲಾಗುತ್ತಿದೆ.

ರಾಜಕಾರಣದ ಹೊರತಾಗಿ ಮೋದಿಯವರು ವಿಶೇಷ ಆಸಕ್ತಿ ಹೊಂದಿರುವ ಇನ್ನೊಂದು ಕ್ಷೇತ್ರವೆಂದರೆ, ಅದು ಬರವಣಿಗೆ. ಅವರು ಕವನ ಸಂಕಲನಗಳೂ ಸೇರಿದಂತೆ ಹಲವಾರು ಪುಸ್ತಕ ಬರೆದಿದ್ದಾರೆ, ಅವರ ದಿನಚರಿ ಪ್ರಾರಂಭವಾಗುವುದು ಯೋಗಾಭ್ಯಾಸ ದೊಂದಿಗೆ ಕರೋನಾದ ಈ ಸಮಯದಲ್ಲಿ ಭಾರತವನ್ನು ಆತ್ಮನಿಭ೯ರವನ್ನಾಗಿ ಮಾಡಲು ನಾವೆಲ್ಲರೂ ಒಂದಾಗಬೇಕಾಗಿದೆ. ಭರವಸೆ ಮೂಡಿಸಿದ ಈ ನಾಯಕನಿಗೆ “ನಮೋ “

Leave a Reply