ಮನಸಿನ ಆಲೋಚನೆಗೆ ಸ್ಯಾನಿಟೈಸರ್ ಹಾಕೋದೆಂದು…

ಅಕ್ಕಮಹಾದೇವಿಯ ವಚನದಲ್ಲಿ ಓದಿದ್ದ ನೆನಪು.

 ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು… ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು.. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು ಭಾವ ಶುದ್ಧ ವಿಲ್ಲದವರಲ್ಲಿ ಧೂಪವ ನೊಲ್ಲೆಯಯ್ಯಾ ನೀನು… ಪರಿಣಾಮಿ ಗಳಲ್ಲದವರಲ್ಲಿ ನೈವೇದ್ಯವ ನೊಲ್ಲೆಯಯ್ಯಾ ನೀನು.. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು …ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು.. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ..

ಇತ್ತೀಚಿನ ದಿನಗಳಲ್ಲಿ ಮನಸ್ಸು ತುಂಬಾ ನೆಗೆಟಿವ್ ಆಗಿಯೇ ಆಲೋಚಿಸಲು ಶುರುಮಾಡಿದೆ, ಹಾಗೆಂದ ಮಾತ್ರಕ್ಕೆ ಆಲೋಚನೆ ಮಾಡಿದ ಮಾತ್ರಕ್ಕೆ ಅದೇ‌ ಬದುಕಾಗಲು ಸಾಧ್ಯವಿಲ್ಲ.  ಮನಸಿನ ಭಾವನೆಗಳು ನಮ್ಮಲ್ಲೇ ತಯಾರಿಯಾಗುತ್ತವೆ, ತಯಾರಿಯಲ್ಲಿ ಎರಡು ತರದ ಕಚ್ಛಾವಸ್ತುಗಳ ಪಾತ್ರ ಅತೀಮುಖ್ಯ ಅದೇನೆಂದರೆ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು. ಇತ್ತೀಚಿನ ಕಾಲದಲ್ಲಿ ಋಣಾತ್ಮಕ ಚಿಂತನೆಗಳು ಮತ್ತು ಸ್ವಯಂ ದುಡುಕು ನಿರ್ಣಯಗಳು ಬದುಕಿನ ಕೊಂಡಿ ಕಳಚಿ ಪಯಣ ಮುಗಿಯುವಂತೆ ಮಾಡಿದ್ದನ್ನೂ ನಾವು ನೋಡ ಬಹುದಾಗಿದೆ. ಎಲ್ಲಿಯವರೆಗೆ ಎಂದರೆ ಕೈಗೆ ಹಾಕಿದಷ್ಟು ಸ್ಯಾನಿಟೈಸರ್ ನಮ್ಮ ನಮ್ಮ ಮನಸ್ಸಿಗೆ ಸ್ವಲ್ಪ ಪ್ರಮಾಣದಲ್ಲಿ ಹಾಕಿದ್ದಲ್ಲೂ ಸ್ವಲ್ಪ ಶುಚಿತ್ವದಿಂದ ಕೂಡಿರುತ್ತದೆ.

ಕಾರಣ ಸದಾ ಕಾಲ ನಮ್ಮ ಚಿಂತನೆಗಳು ಧನಾತ್ಮಕ ಆಗಿರಲೇ ಬೇಕು ಎಂದೂ ಅಲ್ಲ ಕಾರಣ ಧನಾತ್ಮಕ ಚಿಂತನೆಗಳು ಅತಿಯಾದ ಆತ್ಮ ವಿಶ್ವಾಸ ಮೂಡಿಸಿ ಕೆಲವೊಮ್ಮೆ ಪರಿಸ್ಥಿತಿಯ ಅನುಗುಣವಾಗಿ ಋಣಾತ್ಮಕ ಫಲಿತಾಂಶ ಸಿಕ್ಕಲ್ಲಿ ತೀರಾ ಡಿಪ್ರೆಶನ್ ಅಂದರೆ ಮಾನಸಿಕವಾಗಿ ಕುಗ್ಗಿಹೋಗುವ ಪ್ರಮೇಯವೂ ಬರುತ್ತದೆ. 

ಪ್ರಸ್ತುತ ಕೊರೋನ ಕಾಲ ಘಟ್ಟದಲ್ಲಿ ಮಾಸ್ಕ್, ಸ್ಯಾನಿಟೈಸರ್, ಸೋಶಿಯಲ್ ಡಿಸ್ಟ್ಯನ್ಸ್ ಮಾಡಬೇಕು ಸರಿ ಆದರೆ ಗಡಿಗಡಿಗೆ ಸ್ಯಾನಿ ಟೈಸರ್ ಕೈಗೆ ಹಚ್ಚುತ್ತಾ ಮುಟ್ಟಿದ್ದು ಬಂದದ್ದುಕ್ಕೆಲ್ಲಾ ಮನಸಿನ ಋಣಾತ್ಮಕ ಸಂದೇಶದಂತೆ ನಾವು ಕುಣಿಯುತ್ತಾ ಸಾಗಿದರೆ ಧನಾತ್ಮಕ ಚಿಂತನೆಗಳು ಕಮರಿಹೋಗಿ ಮೈನಸ್ ಫಲಿತಾಂಶ ಜಾಸ್ತಿಯಾಗುತ್ತದೆ, ಹಾಗೆಂದಲ್ಲಿ ಋಣಾತ್ಮಕ ಬೇಡವೇ ಬೇಕು ಅದು ಕೇವಲ ಕೊರೊನ ಟೆಸ್ಟ್ ರಿಪೋರ್ಟ್ ಲಿ ಮಾತ್ರ, ಧನಾತ್ಮಕ ಚಿಂತನೆಗಳು ನಮ್ಮ ಮನಸ್ಸು ಮತ್ತು ಕೆಲಸದ ಮೇಲಿನ ಶ್ರದ್ಧೆಯನ್ನು ಗಟ್ಟಿಗೊಳಿಸುತ್ತದೆ.

ಇತ್ತೀಚಿನ ಸುದ್ದಿ ವಾಹಿನಿಗಳಲ್ಲಿ ನೋಡಿರಬಹುದು, ಕೇಳಿರಬಹುದು ಜಾಸ್ತಿ ನೆಗೆಟಿವ್ ಆಲೋಚಿಸಿ ಮನಸ್ಸಿಗೆ ಘಾಸಿಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಯುವ ಜನತೆಯೇ ಇದಕ್ಕೆ ಸಾಕ್ಷಿ. ಅದರಿಂದಾಗಿ ನಾವೇ ಸ್ವಯಂ ಶಿಸ್ತು ಪಾಲಿಸಿ, ಹೇಗೆ ಕೈ ಸ್ವಚ್ಛ ಮಾಡಲು ಹಾಕುವ ಸ್ಯಾನಿಟೈಸರ್ ನ ಕಾಲುಭಾಗ ನಮ್ಮ ಆಲೋಚನೆ, ಮಾತು, ಆತ್ಮ ವಿಶ್ವಾಸ ಇವುಗಳ ಪ್ರೇರೆಪಣೆಯ ಶಕ್ತಿ ಮತ್ತು ಉಗಮ ಸ್ಥಾನವಾಗಿರುವ ನಮ್ಮ ಸ್ತುಪ್ತ ಮನಸ್ಸಿಗೆ ಹಾಕಿಕೊಂಡಲ್ಲಿ ಕೆಟ್ಟ ಆಲೋಚನೆ, ಇತರೇ ಬೇಡದ ವಿಚಾರ, ಮತ್ಸರ, ಲೋಭ, ಮೋಹ, ಖಿನ್ನತೆ, ದೂರವಾಗಿ ಹೇಗೆ ಒಂದು ಹನಿ ಸ್ಯಾನಿಟೈಸರ್ 99.99% ಪ್ರತಿಶತ ಕೀಟಾಣು ಕೊಲ್ಲುತ್ತದೋ ಅಷ್ಟೇ ವೇಗದಲ್ಲಿ ಮನಸ್ಸಿನ ಒಳಹೊಕ್ಕು ಋಣಾತ್ಮಕ ಆಲೋಚನೆ ಎಂಬ ಕೀಟಾಣು ದೂರವಾಗಲೂಬಹುದು.

ಅದಕ್ಕೇ ಹೇಳಿದ್ದು ಮನಸ್ಸಿನ ಆಲೋಚನೆಗಳಿಗೆ ಸ್ಯಾನಿಟೈಸರ್ ಹಾಕೋದೆಂದು. ಹಾಕೋಣವೇ ಇನ್ನಾದರೂ ಇಂದು..

 
 
 
 
 
 
 
 
 

Leave a Reply