ಕೊರಗಬೇಡ ಮನವೇ ಅಮ್ಮನಿಲ್ಲವೆಂದು- ಮಲ್ಲಿಕಾ ಶ್ರೀಶ ಬಲ್ಲಾಳ್

ಕೊರಗಬೇಡ ಮನವೇ ಅಮ್ಮನಿಲ್ಲವೆಂದು
ಮರುಗಬೇಡ ಮನವೇ ಅಪ್ಪನಿಲ್ಲವೆಂದು..
ದೂಷಿಸಬೇಡ ವಿಧಿಯನ್ನು ಹೆತ್ತು ಹೊತ್ತವರನ್ನು ದೂರಮಾಡಿದೆ ಎಂದು….
ಆ ದೇವರು ಕರುಣಿಸಿಹನು ನನ್ನ ಹಿರಿಮಗಳಲ್ಲಿ ಹೆತ್ತಬ್ಬೆಯ ನಗುವನ್ನು..
ನೋಟವನ್ನು ಮಮಕಾರದ ರೂಪವನ್ನು…
ನೀಡಿಹನು ನನ್ನ ಕಿರಿಮಗಳಲ್ಲಿ ನನ್ನಪ್ಪನ ಚುರುಕುತನವನ್ನು..
ಕೋಪವನ್ನು, ಹಠವನ್ನು, ಕರುಣೆಯ ಸಾಕಾರ ಮೂರ್ತಿಯನ್ನು…
ಬಳಿ ಇದ್ದಾಗ ಮನ ಕುರುಡಾಗಿಸುವುದು..
ಕಳೆದುಕೊಂಡ ಮೇಲೆ ಬೆಲೆ ತಿಳಿಯುವಂತೆ ಮಾಡುವುದು ಎಲ್ಲಾ ವಿಧಿ ವಿಸ್ಮಿತ…
– ಮಲ್ಲಿಕಾ ಶ್ರೀಶ ಬಲ್ಲಾಳ್

 
 
 
 
 
 
 
 
 
 
 

Leave a Reply