ಹೂನಗು
ನಮ್ಮ ಮನೆಯ ಅಂಗಳದಲ್ಲಿ ಅಣ್ಣ ನೆಟ್ಟಿದ್ದನೊಂದು ಗಿಡ
ಆ ಗಿಡದಲ್ಲಿ ಬಿಟ್ಟಿತೊಂದು ಮೊಗ್ಗು
ಯಾವ ರಂಗಿನ ಹೂವು ಅರಳೀತು ಎಂಬ ಕುತೂಹಲ ಮನೆಯಲಿದ್ದ ಮಕ್ಕಳಿಗೆ.
ಸಂಜೆಯ ವೇಳೆಯ ಗಾಳಿ ಮಳೆಯ ರಭಸಕೆ ಬೆದರಿ ಬೆಂಡಾಗಿ ಅರೆ ಬಿರಿದು ನಿಂತಿತು ಮೊಗ್ಗು.
ಮರುದಿನದ ಅರುಣೋದಯದ ಸೊಬಗಿಗೆ ಸೂರ್ಯನ ಕಿರಣಗಳಿಗೆ ಮನಸೋತು, ಮಳೆಯ ಹನಿಗಳಿಂದ ಮೈದಡವಿಕೊಂಡು ಕೆಂದಾವರೆಯ ಬಣ್ಣದ ಸೊಗಸಿನಿಂದ ನಳನಳಿಸುತ್ತ ಅರಳಿ ನಿಂತಿತು ಸುಂದರ ಸುಮವಾಗಿ.
ಅರಳಿನಿಂತ ಹೂವಿನ ಅಂದ ಕಂಡು ಮನೆಯ ಮಕ್ಕಳ ಮುಖದಲ್ಲಿ ಮೂಡಿತು ನಗು…
ಹೂವಿನ ಮುಗುಳ್ನಗು ಮಕ್ಕಳ ಮುಖದಲ್ಲಿ ಮೂಡುವ ಸ್ವಚ್ಛ ನಗು ಎರಡಕ್ಕೂ ಸರಿಸಮ ಏನುಂಟು…
ಇದರಿಂದ ಮನೆ ಮನದಲ್ಲಿ ಹೆಚ್ಚುವುದು ಸುಖ ಶಾಂತಿ ಸೊಬಗು…
– ಮಲ್ಲಿಕಾ ಶ್ರೀಶ ಬಲ್ಲಾಳ್