Janardhan Kodavoor/ Team KaravaliXpress
26.6 C
Udupi
Sunday, November 27, 2022
Sathyanatha Stores Brahmavara

ಕರೋನಾ ಮೈಮರೆವು ಅಪಾಯಕ್ಕೆ ದಾರಿಯಾಗಬಹುದು

ಇತ್ತಿಚೆಗೆ ನಾವು ನೋಡುತ್ತಿರುವ ಸಂಗತಿ ಯಂತೆ ಕರೋನಾದ ಬಗ್ಗೆ ಜನರಿಗೆ ಅಸಡ್ಡೆ ಎದುರಾಗಿದೆ. ಪರಿಣಾಮ ಕರೋನಾ ಮತ್ತು ನಮಗೆ ಯಾವುದೇ ಸಂಬಂಧವಿಲ್ಲದಂತೆ ಹೆಚ್ಚಿನ ಜನರು ವತಿ೯ಸುತ್ತಿದ್ದಾರೆ ಇದು ಸರಿಯಲ್ಲ. ಮುಖ್ಯವಾಗಿ ಮಾಸ್ಕ್ ಹಾಕುವುದು ಸಾಮಾಜಿಕ ಅಂತರ ಕಾಪಾಡುವುದು ನಿಧಾನವಾಗಿ ಕಡಿಮೆಯಾಗಿರುದನ್ನು ನಾವು ಗಮನಿಸುತ್ತಿದ್ದೇವೆ. ಸಕಾ೯ರದ ನೀತಿ ನಿಯಮಗಳನ್ನು ಮೀರಿ ಸಮಾರಂಭಗಳ ಆಯೋಜನೆ, ಕಾಯ೯ಕ್ರಮಗಳಲ್ಲಿ ಯಾವುದೇ ರೀತಿಯ ಕರೋನಾ ಮುಂಜಾಗ್ರತೆ ವಹಿಸದಿರುವುದು ಸಾಮಾನ್ಯವಾಗುತ್ತಿದೆ ಇದು ಅಪಾಯಕ್ಕೆ ಎಡೆ ಮಾಡುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.

ಆದರೂ ನಮ್ಮವರಿಗೆ ಎಚ್ಚರವಾಗಿಲ್ಲ. ಕರೋನಾದ ಲಕ್ಷಣ ಕಂಡು ಬಂದರೂ ಕೂಡ ಅದನ್ನು ಮುಚ್ಚಿಟ್ಟು ಸುರಕ್ಷತೆ ವಹಿಸದ ಪರಿಣಾಮ. ಸೋoಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ಐಸಿಯು ವೆಂಟಿಲೇಟರ್ ನಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕಡಿಮೆಯಾಗುತ್ತಿರುವುದು ಅಪಾಯದ ಸಂಕೇತ. ಹೀಗಾಗಿ ಜನರು ಸಕಾ೯ರದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.

ಮಾಸ್ಕ್‌ ಧರಿಸಲೇ ಬೇಕೇ? ಎಂಬ ಪ್ರಶ್ನೆ ನಮ್ಮನ್ನು ಕಾಡ ಬಹುದು ನಮ್ಮ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕು ಇದರಲ್ಲಿ ರಿಯಾಯಿತಿ ಬೇಡ. ಮಾಸ್ಕ್‌ ಧರಿಸುವ ಜತೆಗೆ ನಿಯಮಿತ ಅವಧಿಯಲ್ಲಿ ಕೈಗಳನ್ನು ಸಾಬೂನು ಅಥವಾ ಇನ್ನಿತರ ಶುಚಿತ್ವ ಕಾಪಾಡಿಕೊಳ್ಳುವ ವಸ್ತುಗಳಿಂದ ತೊಳೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಕೆಲವು ಜನರು ಫೋಲಿಸರು ಹಾಕುವ ಫೈನ್‌ ನಿಂದ ತಪ್ಪಿಸಲು ಮಾಸ್ಕ್ ಹಾಕುದನ್ನು ನಾವು ನೋಡುತ್ತೇವೆ. ನಮ್ಮ ಆರೋಗ್ಯದ ಬಗ್ಗೆ ನಮಗೆ ಗಮನ ಇದ್ದರೆ ಎಲ್ಲರೂ ಮಾಸ್ಕ್ ಹಾಕಬೇಕಾದ ಅಗತ್ಯವಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ವೃರಸ್‌ನ ಭಯ ಅಗತ್ಯವಿಲ್ಲವೇ? ಹೆಚ್ಚು ಜಾಗೃತರಾಗಿರಬೇಕಾದವರಾರು?
ತಜ್ಞರ ಪ್ರಕಾರ, ಮಧುಮೇಹ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿರುವವರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ ಪರಿಣಾಮದಿಂದ ರೋಗ ನಿರೋಧಕ ಶಕ್ತಿಯಲ್ಲಿ ಕೊಂಚ ಕಡಿಮೆ ಇರುವ ಸಾಧ್ಯತೆಗಳು ಹೆಚ್ಚು. ಅಂತೆಯೇ ಹಿರಿಯ ನಾಗರಿಕರಲ್ಲೂ ರೋಗಗಳನ್ನು ಹೋರಾಡುವ ಕಣಗಳ ಸಂಖ್ಯೆ ಕಡಿಮೆ ಇರುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಈ ವರ್ಗದ ಜನರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ.

ಆರೋಗ್ಯ ಸಮಸ್ಯೆ ಇರುವವರಿಗೆ ಸೋಂಕು ತಗಲುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಎಂದು ಅವಲೋಕಿಸಲಾಗಿದೆ. ಆದರೂ ಯುವ ಸಮುದಾಯವೂ ಈ ಮಹಾಮಾರಿ ವೈರಸ್‌ನಿಂದ ಪಾರಾಗಲು ಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವುದೇ ಸೂಕ್ತವಾಗಿದೆ. ಜಿಲ್ಲಾಡಳಿತದ ನಿಯಮ ಪಾಲನೆ ಮಾಡಿರಿ

ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಮಂದಿ ವೈದ್ಯರು ಕರೋನಾದ ಬಗ್ಗೆ ಮುಂಜಾಗ್ರತೆ ವಹಿಸಲು ಕರೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ರೂಪಿಸಿದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ. ನಮ್ಮ ಉದಾಸೀನ ಮತ್ತು ನಿಲ೯ಕ್ಷದಿಂದ ಉಳಿದವರು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕರೋನಾ ದೂರವಾಗುವ ತನಕ ನಿಯಮಗಳನ್ನು ಪಾಲನೆ ಮಾಡೋಣ. ಅಪ ಪ್ರಚಾರ, ಅಪನಂಬಿಕೆ ಬೇಡ: – ಕೆಲವು ಜನರು ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ತಪ್ಪು ದಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ.

ಒಟ್ಟಾಗಿ ಕರೋನಾ ದೂರವಾಗಬೇಕಾದರೆ ಸಕಾ೯ರ ಮಾತ್ರ ಕೆಲಸ ಮಾಡಿದರೆ ಸಾಲದು ಎಲ್ಲರೂ ತಮ್ಮ ಆರೋಗ್ಯದ ದೃಷ್ಠಿಯಿಂದ ಕರೋನಾ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಈಗಾಗಲೇ ವಿಶ್ವದ ಕೆಲವು ದೇಶದಲ್ಲಿ ಕರೋನಾದ ಎರಡನೇ ಹಂತ ಪ್ರಾರಂಭವಾಗಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಜೀವನ ಸಾಗಿಸೋಣ.ಕರೋನಾ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸೋಣ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!