ಸಾಗುತ್ತಿರಲಿ ಪವಿತ್ರ ಪ್ರಯಾಣ ~ಪಿ.ಲಾತವ್ಯ ಆಚಾರ್ಯ

ಪಕ್ಷಮಾಸದಲಿ ಪುಣ್ಯಕ್ಷೇತ್ರಗಳಿಗೆ ಪ್ರಯಾಣ !
ದೇವತಾರ್ಚನೆಯ ಜೊತೆ ಪಿತೃಕಾರ್ಯದ ಅರ್ಪಣ !
ಅಂತರ್ಬಹಿರ್ ಉನ್ನತಿಗೆ ಪಿತೃಸೇವೆ ಪ್ರಮುಖ ಸಾಧನಾ !
ಅಗೋಚರ ಆಪ್ತರಿಗೆ ಸಂತೃಪ್ತಿಯ ಸೋಪಾನ !!

ತ್ರಿವೇಣಿ ಸಂಗಮದಲ್ಲಿ ಗಂಗಾ-ಯಮುನ-ಸರಸ್ವತಿ ಸ್ನಾನ ವೇಣಿದಾನ !
ಗಯಾಕ್ಷೇತ್ರದಲ್ಲಿ ಫಲ್ಗುಣಿ ಸ್ನಾನ-ವಪನ-ಪಿಂಡಪ್ರದಾನ !
ವಾರಣಾಸಿಯಲ್ಲಿ ಶಿವಾರ್ಪಣ-ಗಂಗಾ ಸ್ನಾನ !
ಅಯೋಧ್ಯೆಯಲ್ಲಿ ಸರಯೂ ಸ್ನಾನ-ಶ್ರೀರಾಮನ ದರುಶನ !!

ಶ್ರದ್ಧಾ-ಭಕ್ತಿಯ ಹವಿಸ್ಸು ಹಸಿವ ನೀಗಿಸುವುದು !
ಪೂರ್ವಜರ ಚೇತನಕ್ಕೆ ಸಂತಸ ನೀಡುವುದು !
ದಾನ-ಧರ್ಮಗಳು ಕಾಣದ ದಾರಿಗೆ ಬೆಳಕಾಗುವುದು !
ಸತ್ಕಾರ್ಯಗಳು ಇಹ-ಪರದಲಿ ಸರ್ವರ ರಕ್ಷಿಪುದು !!

ಅಗ್ನಿಪರೀಕ್ಷೆಗಳು ಹಲವು ಎದುರಾಗುವುದು !
ದಣಿವು-ನಿದ್ದೆಯ ಮಂಪರು-ಪರೀಕ್ಷೆ
ಜರಗುತ್ತಲೇ ಇರುವುದು !
ಹಸಿವು-ಬಾಯಾರಿಕೆ ಮಗ್ಗುಲಲ್ಲೇ ಕುಂತಿರುವುದು !
ಕರ್ಮಾಂಗಗಳು ಪೂರ್ಣಗೊಂಡಾಗ ಎಲ್ಲವೂ ಮರೆತು ಹೃದಯ ತುಂಬಿ ಬರುವುದು !!

ಮರೆಯದೆ ಸಾಗುತ್ತಿರಲಿ ಶಾಸ್ತ್ರೋಕ್ತ ಆಚರಣೆ !
ಧಾರ್ಮಿಕ ಮೌಲ್ಯಗಳಿಗೆ ಸಲ್ಲುತ್ತಿರಲಿ ವಿಶೇಷ ಆಧರಣೆ !
ಮನೆ-ಮನದಲಿ ಹರಿಯುತ್ತಿರಲಿ ಹರಿ-ಹಿರಿಯರ ಸ್ಮರಣೆ !
ನಂಬಿನಡೆವವರ ಸರ್ವದೋಷಗಳು ಆಗಲಿ ಪೂರ್ಣನಿವಾರಣೆ !!

ಆತ್ಮೀಯರೇ,
ಪುಣ್ಯಕ್ಷೇತ್ರಗಳಿಗೆ ತೆರಳಿ ತೀರ್ಥಸ್ನಾನಗಳನ್ನು ಪೂರೈಸಿ ದೇವರದರ್ಶನಗಳನ್ನು ಸ್ವೀಕರಿಸಿ ದಾನಧರ್ಮಗಳನ್ನು ಸಲ್ಲಿಸಿ ಪಿತೃಕಾರ್ಯಗಳನ್ನು ಶ್ರದ್ದಾಭಕ್ತಿಯಿಂದ ನೆರವೇರಿಸಿದ ಬಂಧುಭಗಿನಿಯರಿಗೆ ಸಾಷ್ಟಾಂಗ ಪ್ರಣಾಮಗಳು. ಅವರ ಆಶೀರ್ವಾದಗಳು ನಮಗೆಲ್ಲರಿಗೂ ಸದಾ ಇರಲಿ

ಪಿ.ಲಾತವ್ಯ ಆಚಾರ್ಯ.

 
 
 
 
 
 
 

Leave a Reply