ಮನವ ಮುದಗೊಳಿಸಿದ”ಲಾಂಛನ”ದ ಹೊಸ ಪ್ರಯೋಗ 

ಸಮಷ್ಟಿಯದೇ ಧ್ಯಾನ ’ಲಾಂಛನ’ದು. ಸಮಷ್ಟಿಯು ಸಂಯೋಜಕ. ಸಮಷ್ಟಿಯೇ ಉತ್ಪಾದಕ. ವ್ಯಷ್ಟಿಯಾದರೂ ಸಮಷ್ಟಿಯಿಂದಲೇ , ವ್ಯಷ್ಟಿಯ ಕ್ರಿಯಾಶೀಲಗೆ ಸಮಷ್ಟಿಗಾಗಿ , ಸೇರುವುದಾದರೂ ಸಮಷ್ಟಿಯು, ವ್ಯಷ್ಟಿಯಾದರೂ ಸಂಯೋಜಕವಾಗಿಯೇ ಇರಬೇಕಾಗಿರುವುದು. ವ್ಯಕ್ತಿಯ ವಿಭಜಕ, ವಿಯೋಜಕ ವಿಘಟಕ ಕಲಾಪಗಳು. ವ್ಯಷ್ಟಿಯ ಬೆಳವಣೆಗೆಗೆ ಮಾರಕ. ವಿಘಟಿತ ಸಮಾಜಕ್ಕೂ ಮಾರಕ. ವ್ಯಷ್ಟಿ ನಿರ್ಮಾಣ ಸಮಷ್ಟಿವಿಕಾಸಕ್ಕೆ ಬೋದನೆ. ಇಂಗಿತವು ಹೂರಣ ಸಂಘಟಣಗಳಿಗಿಂತ ಎಷ್ಟೋಪಾಲು ಶ್ರೇಷ್ಟ. ಈ ಸೂಕ್ಶ್ಮದ ನಡೆಯಲ್ಲಿ ವ್ಯಷ್ಟಿ-ಸಮಷ್ಟಿ ಬಂಧ ಪರಿಸರಗಾಮಿ. ಇದು ಲಾಂಛನದ ನಡೆ.

ಶಿವ ಶಕ್ತ್ಯ ಯುಕ್ತೊ ಯದಿ ಭವತಿ ಶಕ್ತ ಪ್ರಭವಿತುಂ
ನಚೇ ದೇವಂ ದೇವೋ ನ ಖಲು ಖುಶಲ ಸ್ಪಂದಿತು ಮಪಿ
ಅತಃ ಸ್ವಾಮಾರಾಧ್ಯಾಂ ಹರಿ-ಹರ ವಿರಿಂಚಾದಿರಪಿ…

ಅವಳಲ್ಲೇ ಯೆಲ್ಲವೂ ಸಮಾಹಿತವಾಗಿದೆ
ಅವಳೇ ಅನಂತ ಶಕ್ತಿ
ಅವಳೇ ಸರ್ವವನ್ನೂ ಅರಿತವಲು.

ಅವಳು ಪ್ರತಿಯೊಬ್ಬರಲ್ಲೂ ಇರುವಳು
ನಿಮ್ಮಲ್ಲಿರುವ ಆ ಲ-ಲಿ-ತೆ ಯನ್ನು ನೀವೂ ಎಚ್ಚರ ಗೊಳಿಸಬೇಕು.
ನವ ರಾತ್ರಿಯ ಪ್ರಯುಕ್ತ ನವ ದುರ್ಗೆಯರನ್ನ ವಿಭಿನ್ನವಾಗಿ ತೋರಿಸಿ ಕೊಡುವ ಒಂದು ಸಣ್ಣ ಪ್ರಯತ್ನ

Day -1. वंदे वांच्छितलाभायाचंद्रार्धकृतशेखराम्।… वृषारूढांशूलधरांशैलपुत्रीयशस्विनीम्।

ಶೈಲಪುತ್ರಿ: ಶೈಲಪುತ್ರಿ ಪರ್ವತರಾಜನ ಮಗಳು. ದ್ರವ್ಯದರಾಶಿಯಿಂದ ಉಗಮಿತ ಶಕ್ತಿ. ಶಕ್ತಿ ಪುಂಜಗಳಾದ ದೇವತೆಗಳ ಗರ್ವವನ್ನೇ ಭಂಗಗೊಳಿಸಿದ ಶಕ್ತಿ. ಇದು ಶಕ್ತಿ ಚಕ್ರದ ಅನಂತ ದರ್ಶನವಿದೆ. ಈ ಶಕ್ತಿಯ ಕೇಂದ್ರೀಕರಣ (ಉಪಾಸನಾ) ಭೂತತತ್ವದಿಂದಲೇ ಆರಂಭ. ಆದುದರಿಂದಲೇ ನವರಾತ್ರಿಯ ಮೊದಲದಿನದಿಂದ ಈ ದುರ್ಗೆಯ ಅನಾವರಣ. ಯೋಗಸಾಧನೆಗೂ ಸಂಬಂಧ ಈ ಕಾರಣ.

Shailaputri: Shailaputri is the daughter of a mountanous monarch. The energy is from the mass of earth. This form of energy has made aghast of bundles in energies in the cosmos, believed as devathas, as is meant . It has the macro vision , the infinite cycles of energy. Hence, here the centration of the con – is consciousness. Thus the experi-mentation starts with earth . Durga is un-covered on the first day of navratri. This has linked to yogasaadhana. This pre-empts a mix of bhavas and rasas- chemical, alchemical.

Facebook Link : https://www.facebook.com/Lanchanaart
Insta account link : https://bit.ly/371t2JO***********************************************************Day-Brahmacharini~

दधाना करपद्माभ्यामक्षमालाकमण्डलू।

देवी प्रसीदतु मयि ब्रह्मचारिण्यनुत्तमा॥

ಬ್ರಹ್ಮಚಾರಿಣಿ: ಶಕ್ತಿಯ ಈ ರೂಪ ಬ್ರಹ್ಮದೆಡೆಗೆ ಚಲಿತ- ಬ್ರಹ್ಮಚಾರಿಣಿ! ವ್ಯಷ್ಟಿಯ ನಡೆ ಸಮಷ್ಟಿಯೆಡೆಗೆ, ಕೇಂದ್ರೀಕರಣ ಧ್ಯಾನ, ಎರಡನೆಯ ದಿನ ಈ ಶಕ್ತಿಯೆಡೆಗೆ. ಇದು ತಪಸ್ಸು, ತ್ಯಾಗ, ವೈರಾಗ್ಯ, ಸ್ವಚ್ಚ ಬದುಕಿನ ಪ್ರದಾತ್ರಿ. ಯಾರನ್ನೇ ಆದರೂ ಕರ್ತವ್ಯಪಥದಲ್ಲಿ ಚಲನಚೋದಿ ಸಾಧಕನನ್ನು ಯೋಗಗಾಮಿಯಾಗಿಸುತ್ತದೆ. ಸಾಧಕನಲ್ಲಿ ಅನಂತ ಮೇರೆಮೀರಿದ ಸಾಮರ್ಥ್ಯ ತುಂಬುತ್ತದೆ. ಪರಸ್ಪರಾವಲಂಬನದ ಬದುಕು ಎಲ್ಲರಿಗೂ ಸ್ವೀಕಾರ್ಯ!

Brahmachaarini
This form of energy is moving towards cosmos, Brahmacharini. Vyasti moves towards samasti. In mentation and centration, this form of energy is of the second day, provides bountifully. Tapas, thyaga, vairagya and sound living, keeping one duty-conscious to the cosmos! This helps saadhaka in yoga. Saadhaka receives bo…

**********************************************************

Day – 3~Chandragantaa

पिण्डजप्रवरारुढा चण्डकोपास्त्रकैर्युता।
प्रसादं तनुते मह्यं चन्द्रघण्टेति विश्रुता॥

ಚಂದ್ರಘಂಟಾ: ಮೂರನೇ ದಿನದ ಶಕ್ತಿ ಭ್ರೂಣಜನ್ಯ ಜಂಗಮಗಳ ಶಕ್ತಿ. ಶಾಂತಿಪ್ರದಾಯಕ. ಇದರಿಂದ ಬಿದಿಗೆ ಚಂದ್ರನ ಶಾಂತ ವಿಕಾಸದ ನಡೆ. ಈ ಶಕ್ತಿ ಯುದ್ದೋಪಾದಿ ಸನ್ನದ್ಧ. ವಿಕಾಸದ ಧ್ವನಿ ಯಾರನ್ನಾದರೂ ಎಚ್ಚರಿಸುವಂತದ್ದು. ಸಾಧಕನು ಅಸ್ತಿತ್ವದ ಮೂಲದ ಶಕ್ತಿಚಕ್ರದಲ್ಲಿರುತ್ತಾನೆ. ಇದು ಸಾಧಕನಿಗೆ ವಿಶೇಷ ದರ್ಶನಾನುಭವದ ಸ್ರೋತವಾಗ ಬಹುದು. ನಿರ್ಭಯನೂ , ನಿರ್ಭರನೂ ಆಗುತ್ತಾನೆ, ಘಂಟೆಯ ಧ್ವನಿಗೆ ಯಾರೂ ಶರಣಾಗತನಾಗದೇ ಇರಲಾಗದ್ದು. ಬಾಹ್ಯಾಂತರ ವಿಕಾಸ ಈ ಘಂಟಾಧ್ವನಿ ಕಟ್ಟಿಕೊಡುವ ಗಂಟು!

Chandragantaa: This third day energy blesses the embryo-born beings with peace and energy. The move is as soft as the crescent moon, ready on war-footing ! The sound of evolution awakens one and all. Saadhaka would be in the root of the wheel of existence and energy. This can claim a visionary experiential wheel of move . The saadhaka assumes nirbharathaa, and nirbhayathaa. No one can escape being surrendered to the sound of energy-bell. The sound of the bell promises evolution of inside, outside!

*************************************************************

Day – 4~ Kooshmanda

सुरासम्पूर्णकलशं रुधिराप्लुतमेव च।
दधाना हस्तपद्माभ्यां कूष्माण्डा शुभदास्तु मे॥

Kooshmanda: The energy form of the fourth day is Kooshmandaa . The creator of the micro and macro ‘anda’. This energy emerges from prior darkness , with a smile celestial and illuminative. In each and everything and every being, this effulgence illumines. It is the spring-board of ‘anaahatha’ beset in the heart of things. It is the fourth day power so forth. It erases all polemic and pandemic . The great sciences of shaasthraas ordain redemptions forever.
ಕೂಷ್ಮಾಂಡಾ: ನಾಲ್ಕನೆದಿನಶಕ್ತಿರೂಪ ಕೂಷ್ಮಾಂಡ ! ಸ್ಥೂಲ ಸೂಕ್ಷ್ಮ ಅಂಡದ ಸೃಷ್ಟಿದಾತ್ರಿ ಈ ಶಕ್ತಿ. ಪೂರ್ವದ ಕತ್ತಲಿನಿಂದ ಭವ್ಯ ಹಸನ್ಮುಖದಿಂದ ಉದಯಿಸುವ ಶಕ್ತಿ. ಸ್ವಪ್ರಕಾಶವುಳ್ಳದ್ದು. ಎಲ್ಲದರಲ್ಲೂ ಈ ಪ್ರಕಾಶವೇ ಸುಶೋಭಿತ. ಹೃದಯ ಸ್ಥಾನಸ್ಥಿತ ಅನಾಹತದಿಂದ ಚಿಮ್ಮುವ ಶಕ್ತಿಸಿಂಚನ. ಇದೀಗ ನಾಲ್ಕನೆಯದಿಂದ ಶಕ್ತಿಪುಂಜ. ರೋಗ, ಶೋಕಗಳನ್ನೆಲ್ಲ ಅಳಿಸಿಹಾಕುವ ಶಕ್ತಿ . ಶಾಸ್ತ್ರಗಳಲ್ಲಿನ ವಿಶಿಷ್ಟ ವಿಜ್ಞಾನಗಳೇ ನಿವಾರಕ ಶಕ್ತಿಗಳ ಸ್ರೋತ ಚಿರಂತನ ಚಿಮ್ಮಿ ಬರಲಿ.

ಲಾಂಛನದ ಈ ನಮ್ಮ ನವ ದುರ್ಗೆಯರ ಫೊಟೋಶೂಟ್ ನಲ್ಲಿ ನಾವು ದುರ್ಗೆಯರ ಶಕ್ತಿ, ಭಾವ, ರಸಗಳಲ್ಲಿ ದುರ್ಗೆಯನ್ನು ತೋರಿಸಿಕೊಡುವ ಒಂದು ಸಣ್ಣ ಪ್ರಯತ್ನ. ಇದರ ಪರಿಕಲ್ಪನೆ ಶಶಾಂಕ ಶಿವತ್ತಾಯ ಹಾಗೂ ತೇಜಸ್ವಿ ಶ್ರೀಪತಿ ಆಚಾರ್ಯ ಉಡುಪಿ ಇವರದ್ದು. ಫೊಟೋಗ್ರಫಿ ತೇಜಸ್ವಿ ಶ್ರೀಪತಿ ಆಚಾರ್ಯ . ಲೈಟಿಂಗ್ ಶಶಾಂಕ ಶಿವತ್ತಾಯ ಹಾಗೂ ಕೌಶಿಕ್ ಚೆಟ್ಟಿಯಾರ್. ವರ್ಣ ಸಂಯೋಜನೆ ಮತ್ತೆ ಖೊರಿಯೋಗ್ರಫಿ ಪ್ರಶಾಂತ ಊದ್ಯಾವರ , ಉಡುಪಿ. ಕಲಾವಿದರಾದ ಶ್ರೇಯ ಭಟ್, ಚೈತ್ರ ರಾವ್, ವೀಣ, ಸ್ವೀಕೃತಿ ಶೆತ್ತ್ಯ್, ಸಂಜನ ಸಿ ರಾವ್ ಇವರೆಲ್ಲ ನಮ್ಮ ಈ ಫೊಟೊಶೂಟ್ ನಲ್ಲಿ ನಮಗೆ ದುರ್ಗೆಯ ವೇಷದಲ್ಲಿ ನಮಗೆ ಸಹಕರಿಸಿದವರು.

ಮುಂದುವರೆಯುವುದು….

 
 
 
 
 
 
 
 
 

Leave a Reply