ಕೃಷ್ಣಮೂರ್ತಿ ಭಟ್ ಅವರಿಗೆ ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ಕಸಾಪ ದತ್ತಿ ಪುರಸ್ಕಾರ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕಿನಿಂದ ಕೊಡಮಾಡುವ ಯಕ್ಷಪ್ರೇಮಿ ಶ್ರೀ ನಾರಾಯಣ ಸ್ಮರಣಾರ್ಥ ಕಸಾಪ ದತ್ತಿ ಪುರಸ್ಕಾರಕ್ಕೆ ಉಡುಪಿಯ ಯಕ್ಷಗಾನ ಕೇಂದ್ರದ ಗುರುಗಳಾದ ಕೃಷ್ಣಮೂರ್ತಿ ಭಟ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷರಾಗಿರುವ ರವಿರಾಜ್ ಎಚ್.ಪಿ ತಿಳಿಸಿರುತ್ತಾರೆ .

ಇದೇ ಬರುವ ಮೇ 5ರಂದು ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಉಡುಪಿಯ ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕಸಾಪ ಉಡುಪಿ ತಾಲೂಕಿನ ಗೌ.ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಮತ್ತು ರಂಜಿನಿ ವಸಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply