ಕಲಿಯುಗ ಕಲಿಸುತ್ತಿದೆ~ಮಧುಶ್ರೀ ಜಯಂತ

ಇತ್ತೀಚಿನ ದಿನಗಳಲ್ಲಿ ಜನರು ಎಲ್ಲೆಂದರಲ್ಲಿ ಸಾವು ನೋವುಗಳಿಗೆ ಒಳಗಾಗುತ್ತಿದ್ದಾರೆ, ಆದರೆ ಇದಕ್ಕೆ ಇಂತದ್ದೇ ಕಾರಣವೆನ್ನುವ ಹಾಗಿಲ್ಲ. ಕಾರಣಗಳು ಹಲವು, ಅವುಗಳಲ್ಲಿ ಹೆಚ್ಚಾದ ವಾಹನಗಳ ಅಪಘಾತಗಳು, ಕಲಹ ಗಲಭೆ ದ್ವೇಷ ಸೇಡು, ಬಡತನ ಆತ್ಮಹತ್ಯೆ, ಮೋಸ ವಂಚನೆ, ಕಳ್ಳತನ, ರೈತರ ಸಮಸ್ಯೆಗಳು, ಪರೀಕ್ಷೆಗಳ ಪಾಲಿತಾಂಶದಿಂದ, ಹೀಗೆ ಹತ್ತು ಹಲವು ಕಾರಣಗಳು.

ಆದರೂ ಬಹಳ ಹೆಚ್ಚಾಗಿ ಕಾಡುತ್ತಿರುವ ಸಮಸ್ಯೆ ಎಂದರೆ, ಪ್ರೀತಿಯಲ್ಲಿ ಮೋಸ ಹೊಂದಿ ಆತ್ಮಹತ್ಯೆಗೆ ಗುರಿಯಾಗುವುದು. ತಂದೆ ತಾಯಿ ಕುಟುಂಬದ ಪ್ರೀತಿಯಲ್ಲಿ ಬೆಳೆದು, ಹದಿ ಹರೆಯದ ವಯಸ್ಸಿನಲ್ಲಿ ಅದು ತಪ್ಪು ಎಂದು ತಿಳಿಯುವ ಮೊದಲೆ, ಪ್ರೀತಿ ಪ್ರೇಮದ ಜಾಲದಲ್ಲಿ ಸಿಲುಕಿ, ಒದ್ದಾಡಿ ಮನೆಯವರಿಗೆ ಹೇಳಿಕೊಳ್ಳಲಾಗದೆ, ಅಲ್ಲಿ ಬದುಕಲು ಆಗದೆ ಕೊನೆಗೆ ಆತ್ಮಹತ್ಯೆಗೆ ಒಳಗಾಗುತ್ತಾರೆ.

ಇದಕ್ಕೆ ಹಲವು ಕಾರಣಗಳಿದ್ದು ಕೆಲವೊಂದು ಹೀಗಿವೆ.
1) ಪೋಷಕರ ಅತಿಯಾದ ಮುದ್ದು, ಹಾಗೂ ಮಕ್ಕಳು ಕೇಳಿದನ್ನೆಲ್ಲ ಕೊಡಿಸುವುದು, ಬೇಕು ಬೇಕೆಂದಾಗ ಹಣ ಕೊಡುವುದು.  ಹಣ ಓಡಾಡುವ ಮಕ್ಕಳಿಗೆ ಕೆಲವು ಕೆಟ್ಟ ಸ್ನೇಹಿತರ ಸಹವಾಸ ಉಂಟಾಗಿ, ದುಶ್ಚಟಗಳಿಗೆ ಬಲಿಯಾಗುವುದು.

2) ನಮ್ಮ ಮಕ್ಕಳಿಗೆ ಏನುಬೇಕು, ಏನುಬೇಡ ಎಂದು ಅರಿತು, ಬೆಳೆದ ಮಕ್ಕಳನ್ನು ಸ್ನೇಹಿತರಂತೆ ಮನಗಂಡು, ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಪ್ರೋತ್ಸಾಹಿಸದೆ ಇರುವುದು.

3) ಪೋಷಕರು ಮಕ್ಕಳಿಗೆ ಅತಿಯಾದ ಶಿಸ್ತು ಕಠಿಣ ಕ್ರಮ ಕೈಗೊಂಡು, ಎಲ್ಲದಕ್ಕೂ ಬೈಗುಳ, ಮನೆಯಲ್ಲಿ ಯಾವಾಗಲೂ ಕೋಪ ಸಿಡುಕು, ಹೀಗೆ ಮಕ್ಕಳನ್ನು ಅಧಿಕಾರಿಯುತವಾಗಿ ನಡೆಸಿಕೊಳ್ಳುವುದು, ಇದರಿಂದ ಮಕ್ಕಳಲ್ಲಿ ನಿಮ್ಮ ಬಗೆಗೆ ಪ್ರೀತಿಯ ಬದಲು ಹೆಚ್ಚು ಭಯವೇ ಆವರಿಸಿ, ನಿಮ್ಮನ್ನು ಆದರಿಸುವ ಬದಲು ಹೆದರುವುದೆ ಜಾಸ್ತಿಯಾಗಿ, ಮನೆಯವರಿಗಿಂತ ಹೊರಗಿನದರಲ್ಲಿ ಆಸಕ್ತಿ ಹುಟ್ಟಿ, ಮಕ್ಕಳು ಪೋಷಕರ ಕೈಬಿಟ್ಟು ಹೋಗುವ ಸಾಧ್ಯತೆ ಬಹಳಷ್ಟು.

4) ಕೆಲವು ಮಕ್ಕಳು ದಿನನಿತ್ಯದಲ್ಲಿ ಹೊರಗೆ ನ ನಡೆಯುವ ಘಟನೆಗಳಿಗೆ ಆಕರ್ಷಿತರಾಗಿಯೋ ಅಥವಾ ಭಯ ಭೀತರಾಗಿಯೂ ಖಿನ್ನತೆಗೆ ಒಳಗಾಗಿ ವಿಚಿತ್ರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಮಕ್ಕಳ ಒಡನಾಟ ಎಲ್ಲಿ ಜಾಸ್ತಿ ಇದೆ ಅಲ್ಲಿ ನಮ್ಮ ಗಮನ ಇರಬೇಕು.

5) ಚಿಕ್ಕಮಕ್ಕಳಿಗೆ ಪೋಷಕರು, ಗುರುಹಿರಿಯರಿಗೆ ಗೌರವ ನೀಡುವುದನ್ನು ಹೇಳಿಕೊಡಬೇಕು, ಮನೆಯಲ್ಲಿನ ಸಂಬಂಧನ್ನು ಆಧರಿಸಿ, ಕಾಪಾಡುವಂತೆ ಹೇಳಿಕೊಡಬೇಕು, ಹಾಗೆ ಮನೆಯಲ್ಲಿನ ಗಂಡುಮಕ್ಕಳಿಗೆ ಹೆಣ್ಣಿನ ಮಾನ, ಗೌರವ, ಕಾಳಜಿ ಬಗ್ಗೆ ಮಾಹಿತಿ ನೀಡ ಬೇಕು.

6) ಈಗ ದೊಡ್ಡ ಪಿಡುಗಾಗಿ ಕಾಡುತಿರುವುದು ಮೊಬೈಲ್ ಗಳು, ಕೆಲವು tv ಕಾರ್ಯಕ್ರಮಗಳು, ಹಾಗೂ ಸಾಮಾಜಿಕ ಜಾಲ ತಾಣಗಳು…. ಈ ಎಲ್ಲದರಿಂದ ಮಕ್ಕಳು ಆಕರ್ಷಿತರಾಗಿ ಮಾನಸಿಕ ಸ್ಥಿಮಿತ ತಪ್ಪಿದಂತೆ ಆಗಿದೆ. ಹಾಗೂ ಜಾಲತಾಣಗಳಲ್ಲಿ ನಡೆಯುವ ಕೆಲವು ವಿದ್ಧ್ಯಮಾನಗಳಿಂದ ದಿನದಿಂದ ದಿನಕ್ಕೆ ಆತ್ಮಹತ್ಯೆ ಗಳು, ಕೊಲೆಗಳು ನಡೆಯುತ್ತಿರುವುದನ್ನು ನೀವು ನೋಡುತ್ತಿದ್ದೀರ.

ಹೀಗೆ ಸುಮಾರು ಕಾರಣಗಳಿಂದ ಇಂದಿನ ಜನತೆ ಜಾಗೃತರಾಗುವ ಅವಶ್ಯಕತೆ ಇದೆ. ಇದು ನಮ್ಮ ಮನೆಯಿಂದಲೇ ಪ್ರಾರಂಭವಾಗ ಬೇಕು, ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎನ್ನುವ ಹಾಗೆ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಪೋಷಕರಿಂದ ದೊರೆಯಬೇಕು, ನಂತರ ನಮ್ಮ ನೋಡಿ ನಮ್ಮ ನೆರೆಹೊರೆಯವರು, ಅವರಿಂದ ನಮ್ಮ ಸುತ್ತ ಮುತ್ತಲಿನ ಪರಿಸರ ಹೀಗೆ ಎಲ್ಲೆಡೆಯೂ ನಮ್ಮ ನಾಡು ನುಡಿ ಸಂಸ್ಕೃತಿ ಮೊಳಗಬೇಕು, ಈ ಕೆಲಸ ಯುವ ಜನಾಂಗದ ಕೈಯಿಂದ ಕೂಡಲೇ ಜಾರಿಯಾಗ ಬೇಕು.

ಮಧುಶ್ರೀ ಜಯಂತ ಉಡುಪ, ಅಂಬುತೀರ್ಥ

 
 
 
 
 
 
 
 
 
 
 

Leave a Reply