ಬಿಸಿ ಬಿಸಿ ನೀರು ಕುಡಿದು ನಾಲಿಗೆ, ಬಾಯಿ ಸುಟ್ಟುಕೊಂಡ್ರಾ….

ಕೊರೊನಾ ಎಂಬ ಸಾಂಕ್ರಾಮಿಕ ಕಾಯಿಲೆ ಬಂದ ಮೇಲೆ ಆರೋಗ್ಯದ ಬಗ್ಗೆ ಜನರಲ್ಲಿ ಕಾಳಜಿ ಅಧಿಕವಾಗಿದೆ. ಹಿಂದೆ ಸಾಮಾನ್ಯವಾಗಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಾದ ಶೀತ, ಕೆಮ್ಮು ಜ್ವರ ಬಂದಾಗ, ವೈದ್ಯರ ಸಲಹೆಯ ಮೇರೆಗೆ ಅದು ವಾಸಿಯಾಗುವವರೆಗೆ ಬಿಸಿ ನೀರನ್ನು ಕುಡಿದು, ವಾಸಿಯಾದ ಬಳಿಕ ಮತ್ತೆ ಪುನಃ ತಣ್ಣೀರನ್ನು ಕುಡಿಯುತ್ತಿದ್ದೆವು.

ಹೆಚ್ಚಾಗಿ ಮಹಿಳೆಯರು, ಮಕ್ಕಳು ತಮ್ಮ ಆರೋಗ್ಯದ ಹಿತ ದೃಷ್ಟಿಯಿಂದ ಮನೆಯಿಂದ ಕಚೇರಿಗೆ, ಅಥವಾ ಶಾಲೆಗೆ ತೆರಳುವಾಗ ತಮ್ಮ ಬ್ಯಾಗ್ನಲ್ಲಿ ನೀರಿನ ಬಾಟಲಿಯನ್ನು ಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಈಗ ಎಲ್ಲರೂ ಮನೆಯಿಂದ ಹೊರಗಡೆ ತೆರಳುವಾಗ ಬಾಟಲಿಯಲ್ಲಿ ಬಿಸಿ ನೀರನ್ನು ಹಿಡಿದುಕೊಂಡೇ ಹೋಗುತ್ತಿದ್ದಾರೆ.

ನಮ್ಮ ಹಿರಿಯರು ಯಾವಾಗಲೂ ಹೇಳುತ್ತಾರೆ ಕುದಿಸಿ ತಣಿಸಿದ ನೀರು ಅಥವಾ ಉಗುರು ಬೆಚ್ಚಗಿನ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂದು, ಬಹಳ ಜನರು ಬಿಸಿ ಬಿಸಿ ಯಾದ ನೀರನ್ನು ಕುಡಿದು ಬಾಯಿ ಸುಟ್ಟು ಕೊಂಡಿದ್ದಾರೆ, ಇದರಿಂದಾಗಿ ಆಹಾರ ಪಧಾರ್ಥಗಳ ಸವಿ ರುಚಿಯ ಅನುಭವವನ್ನು ಕಳೆದುಕೊಂಡಿದ್ದಾರೆ.ಯಾವಾಗಲೂ ತಣ್ಣೀರು ಇಷ್ಟಪಡುತ್ತಿದ್ದ ಜನರು ಈ ಬಾರಿಯ ಬಿರು ಬೇಸಿಗೆಯಲ್ಲಿಯೂ ತಮ್ಮ ಆರೋಗ್ಯದ ಮೇಲಿನ ಕಾಳಜಿಯಿಂದ ಬಿಸಿ ನೀರು ಕುಡಿದಿದ್ದಾರೆ. ತಂಪು ಪಾನೀಯ, ಐಸ್ ಕ್ರೀಮ್ ಗಳಿಗೆ ಸಾಕಷ್ಟು ಬೇಡಿಕೆ ಬೇಸಿಗೆ ಸಮಯದಲ್ಲಿ ಸಾಮಾನ್ಯವಾಗಿ ಅಧಿಕವಾಗಿರುವುದು, ಆದರೆ ಇವುಗಳ ಮಾರುಕಟ್ಟೆ ಪಾಲನ್ನು ಈ ಬಾರಿ ಕೊರೊನ ನುಂಗಿ ಬಿಟ್ಟಿದೆ.

ಸದಾ ಬಿಸಿ ನೀರನ್ನು ಕುಡಿಯುವ ಉದ್ದೇಶದಿಂದ ಮನೆಯ ಒಂದು ಕಡೆಯಲ್ಲಿ ಜೋಪಾನವಾಗಿದ್ದ ಥರ್ಮಾಪ್ಲಾಸ್ಕ್ ಗಳೆಲ್ಲಾ ಹೊರಗಡೆ ಬಂದಿದೆ. ಹಾಗೆಯೇ ಹಲವರು ಒನ್ಲೈನ್ ಶಾಪಿಂಗ್ ಕಂಪನಿಯ ಮೂಲಕವೂ ಖರೀದಿಸಿದ್ದಾರೆ. ಮಾರುಕಟ್ಟೆಯಲ್ಲಿಯೂ ಮಿಲ್ಟನ್, ಪ್ರೇಸ್ಟೇಜ್, ಸೇಲ್ಲೋ, ಮುಂತಾದ ಕಂಪನಿಗಳು ವಿವಿಧ ಗಾತ್ರದ, ವಿವಿಧ ವಿನ್ಯಾಸದ,ಥರ್ಮಾಪ್ಲಾಸ್ಕ್ ಗಳನ್ನು ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಿವೆ.

ಇನ್ನು ಕೆಲವರು ಕುಡಿಯುವ ಬಿಸಿ ನೀರಿಗೆ ಲಾವಂಚದ ಬೇರು, ಏಲಕ್ಕಿ, ಲವಂಗ ಜೀರಿಗೆ, ಕೊತ್ತಂಬರಿ ಹಾಕಿ ನೀರನ್ನು ಕುಡಿಯುತ್ತಿದ್ದಾರೆ. ಇದು ಆರೋಗ್ಯದ ಹಿತದೃಷ್ಟಿಯಿಂದಲೂ ಒಳ್ಳೆಯದು.

 
 
 
 
 
 
 
 
 
 
 

Leave a Reply