ನಿಮ್ಮನ್ನು  ಯಾಮಾರಿಸುತ್ತಿದ್ದಾರೆ~ ಡಾ. ಶಶಿಕಿರಣ್ ಶೆಟ್ಟಿ

ಪದೇ ಪದೇ ಆ ಶಾಲೆಯ ಮಕ್ಕಳಿಗೆ ವಾರ್ನ್ ಮಾಡಿದ್ದರು ಶಾಲೆಗೆ ಜಂಕ್ ಫುಡ್ ತರಬಾರದು ಎಂದು. ಅಂದು ಪ್ರಿನ್ಸಿಪಾಲ್ ಸಡನ್ ಆಗಿ  ಬಂದು ಪೂರ್ತಿ ಶಾಲೆಯ ಮಕ್ಕಳ ಟಿಫಿನ್ ಬಾಕ್ಸ್ ಚೆಕ್ ಮಾಡಿದ್ದರು ಒಟ್ಟು 13 ಮಕ್ಕಳನ್ನು ಜಂಕ್ ಫುಡ್ ತಂದ ಅಪರಾದಿ ಗಳೆಂದು ಪರಿಗಣಿಸಿ ಪ್ರಿನ್ಸಿಪಾಲ್ ರೂಮಿಗೆ ಕರೆಯಲಾಯಿತು. ಇಡೀ ಶಾಲೆಯಲ್ಲಿ ಗುಸು ಗುಸು ಪಿಸಿ ಪಿಸಿ ಆರಂಭ ವಾಗಿತ್ತು. ಅವರಿಗೆ ಇದೆ ಇವತ್ತು ಮಾರಿ ಹಬ್ಬ ಹಾಗೇ ಹೀಗೆ ಎಂದು.13 ಜನರನ್ನು ಸಾಲಲ್ಲಿ ನಿಲ್ಲಿಸಲಾಯಿತು. ಪ್ರಿನ್ಸಿಪಾಲ್ ಕೈಯಲ್ಲಿ ಕೋಲಿತ್ತು ಎಲ್ಲರನ್ನು ಕೈ ನೀಡುವಂತೆ ಹೇಳಿದ್ದರು.
ಇನ್ನೇನು ಪೆಟ್ಟು ಬೀಳಬೇಕು ಅಲ್ಲಿ ಚಿಕ್ಕ ಹುಡುಗನೊಬ್ಬ ಮುಂದೆ ಬಂದ. ಸರ್ ಇಲ್ಲಿ ನಮ್ಮ ತಪ್ಪೇನು ಇಲ್ಲ ನಮ್ಮ ತಂದೆ ತಾಯಿ ಕಳಿಸಿದ್ದು, ಶಿಕ್ಷೆ ಕೊಡುವುದಾದರೆ ಅವರಿಗೆ ಕೊಡಿ ಇಲ್ಲಿ ನಮ್ಮದೇನು ತಪ್ಪಿದೆ? ಕೇಳಿಯೇ ಬಿಟ್ಟ.. ವಾವ್ ಆತನ ಮಾತಲ್ಲೂ ಸತ್ಯವಿತ್ತು… ಪ್ರಿನ್ಸಿಪಾಲ್ ಗೂ ಹೌದೆoದು ತೋರಿತ್ತು.. ಎಲ್ಲರನ್ನು ವಾಪಾಸ್ ಕಳಿಸಿ ಮನೆಯವರಿಗೆ 1000 ಫೈನ್ ಹಾಕಿದರು ಮತ್ತೆ ತಪ್ಪು ಮಾರುಕಳಿಸಿದರೆ 10,000 ರೂ ಫೈನ್ ಹಾಕುವುದಾಗಿ ಹೇಳಿ ಕಳುಹಿಸಿ ದ್ದರು….ಕಥೆ ಮುಗಿಯಿತು…
ಇಂತಹ ಅದೆಷ್ಟು ತಪ್ಪುಗಳು ನಮ್ಮ ನಿಮ್ಮ ನಿತ್ಯ ಜೀವನದಲ್ಲಿ ನಡೆಯುತ್ತಿಲ್ಲ ನೋಡಿ. ಮೊನ್ನೆ ರಾಜ್ಯಪಾಲರ ಬಾಷಣಕ್ಕೆ ಪ್ರದಾನ ಪ್ರಯೋಜಕರು ತಾಜಾ ಚಂದ್ ಗುಟ್ಕಾ ಎಂದೂ, ಬಾಯಲ್ಲಿ ಹಾಕಿ ಕೇಸರಿ ಎಂದೂ ಆ ಚ್ಯಾನೆಲ್ ನವರು ಪದೇ ಪದೇ ಹೇಳುತ್ತಿದ್ದರೆ. ಇನ್ನೊಂದು ಚ್ಯಾನೆಲ್ ಅಲ್ಲಿ ಗೂಡoಗಡಿಯಲ್ಲಿ ಗುಟ್ಕಾ ಮಾರಾಟ ಮಾಡಿದ್ದಕ್ಕಾಗಿ ಅಂಗಡಿ ಮಾಲಕನ ಮೇಲೆ 10,000 ರೂ ದಂಡ ವಸೂಲಿ ಮಾಡಿದ ಧೀರರು ಎಂದು 4 ಪೊಲೀಸ್, ನಾಲ್ಕು ಪಂಚಾಯತ್/ ಮುಂನ್ಸಿಪಾಲಿಟಿ ಸಿಬ್ಬಂದಿ, ಒಂದಿಬ್ಬರು ಸಮಾಜ ಸೇವಕರು, ಮತ್ತೆ ಒಂದಿಬ್ಬರು ಮಾಹಿತಿ ಹಕ್ಕು ಹೋರಾಟಗಾರರು ಮದ್ಯದಲ್ಲಿ ಕಳ್ಳನಂತೆ ನಿಂತಿದ್ದಾನೆ ಬಡ ಅಂಗಡಿಯವ.
ಅರೆ .. ಸ್ವಾಮಿ ನೀವೇನು ದಂಡು ಪಾಳ್ಯದ ಕಳ್ಳನನ್ನ ಹಿಡಿದದ್ದು?… ಪಾಪದ ಬಡ ಅಂಗಡಿಯವನ ಮೇಲೆ ನಿಮ್ಮ ರೋಷ ತೋರಿಸುವ ಬದಲು ಆ ಗುಟ್ಕಾ ಕಂಪೆನಿಯನ್ನು ಮುಚ್ಚಿಸ ಬಹುದಲ್ವಾ?, ಆ ಕಂಪೆನಿಯವರ ಬೂಟು ನೆಕ್ಕುವ ನಿಮಗೆ, ನಿಮ್ಮ ಸಾಹಸ ಪ್ರದರ್ಶಿಸಲು ಈ ಬಡ ಗೂಡoಗಡಿಯವನೇ ಬೇಕಾದಾನೆ?ಇಂತಹ ಇನ್ನೊಂದು ಉದಾಹರಣೆ ಪ್ಲಾಸ್ಟಿಕ್ ನಿಷೇದ ಎಂಬ ನಾಟಕ,ದೊಡ್ಡ,ದೊಡ್ಡ ಫ್ಯಾಕ್ಟರಿ ಗಳಲ್ಲಿ  ಪ್ಲಾಸ್ಟಿಕ್ ತಯಾರಿ ಮಾಡಲು ಲೈಸೆನ್ಸ್ ಕೊಟ್ಟು ಚಿಕ್ಕ ಚಿಕ್ಕ ಅಂಗಡಿ ಯಲ್ಲಿ ಬಂದು ಪ್ಲಾಸ್ಟಿಕ್ ಮಾರಾಟ ಬಂದನ ಎಂದು ಪೌರುಷ ತೋರುವ ನಪುoಸಕರಿಗೇನು ಕಮ್ಮಿ ಇಲ್ಲ ನಮ್ಮಲ್ಲಿ.
ಹಾಗೇ ಗೋವಿನ ಹೆಸರಲ್ಲಿ ರಾಜಕೀಯ ಮಾಡಿ, ಮುಗ್ದರನ್ನು  ಯಾಮಾರಿಸುವ ಜನರೇ ತುಂಬಿದ್ದಾರೆ ಇಲ್ಲಿ , ಯಾಕೆ ಗೊ ವನ್ನು ಕಡಿದ ವ್ಯಕ್ತಿಗೆ ಅಷ್ಟೇ ಕಠಿಣ ಶಿಕ್ಷೆ ವಿಧಿಸಿ ಕಾನೂನಾತ್ಮಕ ವಾಗಿ ಆ ಕೆಲಸ ಮಾಡಬಾರದು?, ಅದು ಬಿಟ್ಟು ಚುನಾವಣಾ ಸಮಯ ಬಂದಾಗ ಅಲ್ಲೊಂದು ಇಲ್ಲೊಂದು ಇಂತಹ ರೋಷ ಉಕ್ಕಿಸುವ ಭಾಷಣ ಮಾಡಿ ಅಮಾಯಕರ ಬಲಿ ಕೊಟ್ಟು ತಮ್ಮ ರಾಜಕೀಯ ಬೇಳೆ ಬೇಯಿಸುವುದು ಅದೆಷ್ಟು ಸರಿ?..
ಬೇಕಿದ್ದರೆ ಗೂಗಲ್ ಅಲ್ಲಿ ನೀವೇ ಟೈಪ್ ಮಾಡಿ ನೋಡಿ ಪ್ರಪಂಚದಲ್ಲಿ ಅತೀಹೆಚ್ಚು ಬೀಫ್ (ದನದ ಮಾಂಸ ) ರಫ್ತು ಮಾಡುವ ದೇಶ ಗಳಲ್ಲಿ ಬ್ರಝಿಲ್ ಬಿಟ್ಟರೆ ನಾವೇ ಮುಂದೆ ಇದ್ದೇವೆ… ಹಾಗಿದ್ದ ಮೇಲೆ ಅದೆಂತಹ ಮೋಸದ ಆಟ ದ ಭಾಗವಾಗಿದ್ದೇವೆ ನಾವು?, ಯಾಕೆ ಗೋವನ್ನು ಕಡಿವ ಎಷ್ಟೇ ದೊಡ್ಡ ಜನ ವಾದರೂ ಆತನ ರುಂಡ ಕಡಿಯುವ ಕಾನೂನು ಮಾಡಬಾರದು?,ಯಾಕೆ ಮಾಡುತ್ತಿಲ್ಲ, ಇನ್ನೆಷ್ಟು ದಿನ ಭೂತದ ಬಾಯಲ್ಲಿ ಗೀತೆ ಕೇಳಬೇಕು ಹೇಳಿ?
ಮಕ್ಕಳಿಗೆ ಜೂಜಾಡಬೇಡಿ ಎನ್ನುವ ನಾವುಗಳು, ಯಾಕೆ 24ಗಂಟೆ ರಮ್ಮಿ ಅಡಿ, ಬೆಟ್ಟಿಂಗ್ ಆಪ್ ಡೌನ್ಲೋಡ್ ಮಾಡಿ ಎಂದು ದಿನದ 24ಗಂಟೆಯೂ ಆರಚುವ ಜಾಹೀರಾತನ್ನು ಪ್ರೋತ್ಸಾಹಿಸಬೇಕು?, ಅಲ್ಲಿ ದುಡ್ಡು ಮಾಡಿ ಯುವ ಜನತೆ ಯನ್ನು ದಾರಿ ತಪ್ಪಿಸುವ ಚಿತ್ರತಾರೆ, ಕ್ರಿಕೆಟ್ ಆಟಗಾರನನ್ನು ನಮ್ಮ ಆರಾದ್ಯ ದೈವ ಮಾಡಿಕೊಳ್ಳ ಬೇಕು?, ತಪ್ಪು ಯಾರೂ ಮಾಡಿದರೂ ತಪ್ಪೇ ಎನ್ನುವ ಮನಸ್ಥಿತಿ ಯಾಕೆ ನಮ್ಮದಾಗ ಬಾರದು ಒಮ್ಮೆ ಯೋಚಿಸಿ.

ಆಗ ನಮಗೆ ತಿಳಿಯುತ್ತದೆ, ಶಾಲೆಯ ಪ್ರಿನ್ಸಿಪಾಲರ ಬಳಿ ಆ ಮಗು ಕೇಳಿದ ಪ್ರಶ್ನೆ ಈಗ ಅದೆಷ್ಟು ಪ್ರಸ್ತುತ ಎಂದು. ಎಚ್ಚರ ದೇಶವಾಸಿಗಳೇ ಎಚ್ಚರ…. ಯಾಕೆಂದರೆ…. ನಮ್ಮನ್ನು ನಿಮ್ಮನ್ನು ಒಂದಷ್ಟು ಜನ ಯಾಮಾರಿಸುತ್ತಿದ್ದಾರೆ.

 
 
 
 
 
 
 
 
 

Leave a Reply