Janardhan Kodavoor/ Team KaravaliXpress
27.6 C
Udupi
Wednesday, August 17, 2022
Sathyanatha Stores Brahmavara

ಪದ್ಮಾಸಿನಿಗೆ ಮೂರು ಚಿನ್ನದ ಪದಕ~ಭಾವನಾ ಕೆರೆಮಠ

ವಿದ್ಯಾರ್ಥಿಗಳಿಗೆ ರ‍್ಯಾಂಕ್, ಪದಕಗಳು ಬರುವುದು ಸಹಜ, ಆದರೆ ಅಂತಹ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಉಪನ್ಯಾಸ ಕಿಗೆ ಇದೀಗ ಮೂರು ಚಿನ್ನದ ಪದಕಗಳೊಂದಿಗೆ ಪ್ರಥಮ ರ‍್ಯಾಂಕ್ ಲಭಿಸಿದೆ. ಹೌದು ಮೂಲತಹ ಉಡುಪಿ ಜಿಲ್ಲೆಯ ಪದ್ಮಾಸಿನಿ ಉದ್ಯಾವರ ಅವರು ಮೈಸೂರು ವಿವಿಯ ಜಾನಪದ ಎಂ ಎ ಯಲ್ಲಿ ಇಂತಹ ವಿಶಿಷ್ಟ ಸಾಧನೆಗೈದಿದ್ದಾರೆ.ಉಡುಪಿಯ ಕಡಿಯಾಳಿಯಲ್ಲಿನ ಕಮಲಾಬಾಯಿ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಎಂ.ಜಿ ಎಂ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ವಿದ್ಯಾಭ್ಯಾಸ ಮಾಡಿ ಮಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ ಎ ಮಾಡಿದ್ದರು ಪದ್ಮಾಸಿನಿ. ಇದಾದ ನಂತರ 2007 ರಿಂದ 2017ರವರೆಗೆ ಹತ್ತು ವರ್ಷಗಳ ಕಾಲ ವಿದ್ಯಾರ್ಥಿಗಳ ನೆಚ್ಚಿನ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದರು. ಇದೀಗ ಮತ್ತೊಮೆ ವಿದ್ಯಾರ್ಥಿಯಾಗಿ ಈ ಸಾಧನೆಯಿಂದ ಎಲ್ಲರಲ್ಲೂ ಹೊಸ ಸ್ಪೂರ್ತಿ ತುಂಬಿ ದ್ದಾರೆ.ಅ.19ರ ಸೋಮವಾರದಂದು ಮೈಸೂರಿನಲ್ಲಿ ನಡೆದ ವಿಶ್ವವಿದ್ಯಾಲಯದ 100ನೇ ವರ್ಷದ ಘಟಿಕೋತ್ಸವ ಸಮಾರಂಭ ದಲ್ಲಿ ಮೈಸೂರು ವಿವಿಯು ಚಿನ್ನದ ಪದಕಗಳನ್ನು ಪದ್ಮಾಸಿನಿಯವರಿಗೆ ನೀಡಿದೆ. ತಮ್ಮ ಕಾಲೇಜು ವಿದ್ಯಾಭ್ಯಾಸದೊಂದಿಗೆ ನಾಟಕಗಳಲ್ಲಿ ತೊಡಗಿಸಿಕೊಂಡಿದ್ದ ಈಕೆ, ಇಂದಿಗೂ ಉತ್ತಮ ರಂಗ ನಟಿ. ಅದರೊಂದಿಗೆ ಯಕ್ಷಗಾನ, ಭರತನಾಟ್ಯವನ್ನು ಕಲಿತ್ತಿದ್ದು ಈಗ ಪ್ರಸ್ತುತ ಒಡಿಸ್ಸಿ ನೃತ್ಯಾಭ್ಯಾಸವನ್ನು ಸೌಮ್ಯ ರಂಗಸ್ವಾಮಿಯವರಲ್ಲಿ ಮಾಡುತ್ತಿದ್ದಾರೆ.

ಈ ಸಾಧನೆಯ ಕುರಿತು ಇವರಲ್ಲಿ ಕೇಳಿದರೆ, ನಾನು ಯಾವುದೇ ಪೂರ್ವ ಸಿದ್ಧತೆಯಿಂದ ಈ ವಿಷಯದ ಸ್ನಾತಕ ವಿದ್ಯಾಭ್ಯಾಸವನ್ನು ಆಯ್ದುಕೊಂಡದಲ್ಲ. ಹೀಗೆ ಬೇರೆ ವಿಷಯಗಳ ಕುರಿತು ಹುಡುಕುವಾಗ, ಮೈಸೂರು ವಿವಿಯಲ್ಲಿ ಜಾನ ಪದ ವಿಭಾಗಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅದನ್ನು ಗಮನಿಸಿ ಅರ್ಜಿ ಕಳುಹಿಸಿ, ನಂತರ ಪರೀಕ್ಷೆಯಲ್ಲಿ ಎಲ್ಲರಿಗಿಂತ ಉತ್ತಮ ಅಂಕದೊಂದಿಗೆ ಈ ಓದನ್ನು ಆರಂಭಿಸಿದೆ. ಸಾಂಸ್ಕೃತಿಕ ನಗರಿಯಾದ ಅಲ್ಲಿ ನಾಟಕ ಮತ್ತು ಇತರೆ ಕಲೆಯೊಂದಿ ಗಿನ ಒಡನಾಟ ನನಗಿದ್ದ ಕಾರಣ ಎರಡು ವರ್ಷ ಓದುವುದೂ ಸುಲಭವಾಯಿತು ಎನ್ನುತ್ತಾರೆ.

ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಈ ಜಾನಪದ ವಿಷಯದಲ್ಲಿಯೇ ಪಿ.ಎಚ್ ಡಿ ಮಾಡುವ ಕನಸನ್ನು ಹೊಂದಿರುವ ಇವರು ಪ್ರಸ್ತುತ ಶಿರ್ವ ಸೈಂಟ್ ಮೇರಿಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿ ದ್ದಾರೆ. ಇದರೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಈ ಸಂಸ್ಥೆಯ ಮೂಲಕ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಮಾಡುವ ಯೋಚನೆಯೂ ಪದ್ಮಾಸಿನಿ ಉದ್ಯಾವರ ಅವರಿಗಿದೆ.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!