Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಅಂಚೆ ಕಛೇರಿ ಮತ್ತು ನಾನು~ರಾಘವೇಂದ್ರ ಜಿ.ಜಿ

ಈ ಅಂಚೆ ಕಛೇರಿಯ ಕುರಿತಾಗಿ ಒಂದಷ್ಟು ಹೇಳೋಕೆ ಬರೆಯೋಕೆ ಮೊದಲಿಂದಲೂ ಮನಸಿತ್ತು ಆದರೆ ಅದಕ್ಕೊಂದು ಅವಕಾಶ ಮತ್ತು ಸಮಯ ಸಿಕ್ಕಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ‘ಅಂಚೆ ಸಪ್ತಾಹ’ ಆಗುತ್ತಲಿರುವ ಹಿನ್ನೆಲೆಯಲ್ಲಿ ಬರೆಯಲು ಅವಕಾಶ ಒದಗಿ ಬಂದಿದೆ. ನಾನು ಅಂಚೆ ಕಛೇರಿಯ ಒಡನಾಟ ಬೆಳಸಿಕೊಂಡಿದ್ದು ನನ್ನ ಐದನೇ ತರಗತಿಯಲ್ಲಿ ಅಂದ್ರೆ ನಮ್ಮೂರ ಮಠದಗದ್ದೆಯಿಂದ ನಾವು ಹೊಸಗದ್ದೆ ಸ.ಹಿ.ಪ್ರಾ.ಶಾಲೆಗೆ ಹೋಗುತ್ತಿದ್ವಿ
ಅಲ್ಲಿ ನಮ್ಮ ಊರಿನ ಅಂಚೆ ಕಛೇರಿ ಇತ್ತು ಅಂದಿನ ಅಂಚೆ ಅಧೀಕ್ಷಕ ಗುಂಡೇ ಗೌಡರು(ಪ್ರೀತಿಯಿಂದ ಗುಂಡಣ್ಣ) ನಾವು ಕೊಡುತ್ತಿದ್ದು ಐದು ರೂಪಾಯಿಯಿಂದ ಹಿಡಿದು ಎಷ್ಟೇ ದೊಡ್ಡ ಮೊತ್ತವಿದ್ದರೂ ಕಟ್ಟಿಸಿಕೊಳ್ಳುತ್ತ ಇದ್ದರು, ನನಗೆ ಎಸ್.ಬಿ ಖಾತೆ ತೆರೆಯಲು ಪ್ರೋತ್ಸಾಹಿಸಿದ್ದು ನನ್ನ ಅಮ್ಮ. ಆಗ ನಾವು ನೆಂಟರಿಷ್ಟರ ಮನೆಗೆ ರಜೆಗೆ ಹೋದಾಗ ಸಣ್ಣ ಮಕ್ಕಳು ಎಂದು ಹಣ ಕೊಡುತ್ತಿದ್ದರು, ಊಟಕ್ಕೆ ಹೋದಾಗ ದಕ್ಷಿಣೆ ಕೊಡುತ್ತಿದ್ದರು, ಹೀಗೆ ಯಾವಾಗಲಾದ್ರು ಪಾಕೇಟ್ ಮನಿ ಅನ್ನೋ ಕಾನ್ಸೆಪ್ಟ್ ಈಗ ಆದ್ರೆ ಆಗ ದಿನ ಮೂರು ಕಿ.ಮಿ ನಡೆದು ಹೋಗೋ ಬದಲು ಇವತ್ತು ಬಸ್ಸಲ್ಲಿ ಹೋಗು ಎಂದು ಬಸ್ ಚಾರ್ಜ್ ಕೊಡುತ್ತಿದ್ದರು ಆ ಹಣವನ್ನೆಲ್ಲಾ ನಾವು ಕಟ್ಟುತ್ತಾ ಇದ್ದೆವು.ಆದ್ರೆ ಅಂಚೆ ಕಛೇರಿಯ ವೈಶಿಷ್ಟ್ಯ ಏನೆಂದರೆ ನಿಮ್ಮ ಸಹಿ ಮಾತ್ರ ಯಾವುದು ಇತ್ತೋ ಅದೇ ಹಾಕಬೇಕು ನಾನು ಆಗ ಕನ್ನಡಲ್ಲಿ ಹಾಕುತ್ತಿದ್ದೆ ಈಗ ಇಂಗ್ಲಿಷ್ ಲಿ ಸಹಿ ಹಾಕುತ್ತಿ ದ್ದೇನೆ ಆದ್ರೆ ಈಗಲೂ ನಮ್ಮ ಊರಿನ ಅಂಚೆಗೆ ಹೋದಾಗ ನಾನು ಅಕೌಂಟ್ ತೆರೆಯುವಾಗ ಐದನೇ ಕ್ಲಾಸ್ ನ ನನ್ನ ಸಹಿ ಹಳೇ ಕಡತಗಳನ್ನು ತೆಗೆದು ತೋರಿಸಿ ಭಟ್ರೆ ಇದೇ ತರ ಸಹಿ ಮಾಡಿ ಕೊಡಿ ಎಂದು ಹೇಳಿದ್ದೂ ಉಂಟು. ಹಣ ಕಟ್ಟೋ ಬಗ್ಗೆ ಹೇಳಿದೆ ಕಟ್ಟಿದ ಹಣ ನೂರರ ಗಡಿದಾಟಿತು ಎಂದರೆ ಅಷ್ಟು ಖುಷಿ ಹಾಗೆ ಸ್ವಲ್ಪ ತೆಗೆಯುವ ಎಂಬೋ ಕುತೂಹಲ.

ಈಗಲೂ ನಾನು ಮನೆಯಲ್ಲಿ ಅಪ್ಪನ ಹತ್ರ ಹಣಕೊಟ್ಟು ಬರುತ್ತೇನೆ ಕಾರಣ ಅವರು ಪ್ರತೀ ತಿಂಗಳ ಆರ್.ಡಿ ಕಟ್ಟುವಾಗ ನನ್ನ ಎಸ್.ಬಿ ಹಣ ಕಟ್ಟಿ ಬರುತ್ತಾರೆ, ಅಪ್ಪ ಅಮ್ಮ ಸದಾ ಹೇಳೋದುಂಟು ನೋಡು ಮಗ ಈಗ ನಿಂಗೆ ಸಂಬಳ ಬ್ಯಾಂಕ್ ಗೆ ಬರುತ್ತೆ ಆದ್ರೆ ಪೋಸ್ಟ್ ಆಫೀಸ್ ನ ಹಣ ನಿಂಗೆ ‘ ಆಪತ್ಧನ’ ದ ತರದ ಎಂದು. ಹಾಗೆಯೆ ಉಳಿತಾಯ ಕಲ್ಪನೆ ನಮ್ಮಲ್ಲಿ ಮೂಡಿಸಿದ್ದು ಈ ಅಂಚೆ, ಹಾಗೆಯೆ ನಮಗೆ ಪತ್ರ ಬರೆಯೋ ಆ ಚೆಂದ ಅನುಭವದ ರುಚಿ ಹಚ್ಚಿಸಿದ್ದು ಸಹಾ ಇದೆ.

ಅಂದು ನಮ್ಮ ದೊಡ್ಡಪ್ಪಂಗೆ, ಚಿಕ್ಕಪ್ಪಂಗೆ, ಅಕ್ಕನಿಗೆ, ಮಾವನಿಗೆ, ಸ್ನೇಹಿತರಿಗೆ ಕಾಗದ ಪತ್ರ ಬರೆಯುತ್ತಾ ಇದ್ವಿ, ಎಡಭಾಗದ ಮೂಲೆಯಲ್ಲಿ ಕ್ಷೇಮ ಎಂದು, ಮಧ್ಯದಲ್ಲಿ ಶ್ರೀರಾಮ ಎಂದು, ಬಲಭಾಗದ ಮೂಲೆಯಲ್ಲಿ ದಿನಾಂಕ, ಕೊನೆಯಲ್ಲಿ ತಪ್ಪಿದ್ದಲ್ಲಿ ಕ್ಷಮಿಸಿ, ನಿಮ್ಮ ಆಶೀರ್ವಾದ ಬೇಡುವ ಇತಿ ನಿಮ್ಮ ಎಂದು. ಒಂದು ಸೊಗಸಾದ ಓದಿದರೂ ಮತ್ತೊಮ್ಮೆ ಓದಬೇಕು ಎನ್ನೋ ತರ ರಸವತ್ತಾಗಿ ಬರೆಯುವ ಆಸಕ್ತಿ ಇರ್ತಾ ಇತ್ತು.
ಕಾಲಕಳೆದಂತೆ ಈ ಮೊಬೈಲ್ ಎಲ್ಲರ ಕೈಗೂ ಬಂದಮೇಲೆ ಹುಟ್ಟಿನ ಖುಷಿ ವಿಚಾರದಿಂದ ಹಿಡಿದು- ಸಾವಿನ ದುಃಖದ ವಿಚಾರದ ವರೆಗೂ ಕೇವಲ ಮೊಬೈಲ್ ಸಂದೇಶದಲ್ಲೇ ಮುಗಿಸಿ, ಅಧಿಕೃತ ‌ವ್ಯವಹಾರಗಳಿಗೆ ಅಂಚೆ ಬಳಸೋ ಪ್ರವೃತ್ತಿ ಬಂದಿರೋದು ಖೇಧನೀಯ. ಅಂಚೆಯ ಬಗ್ಗೆ ಒಡನಾಟ ಸದಾ ಅಜರಾಮರ ಬರೆಯುತ್ತಾ ಹೋದರೆ ಇನ್ನಷ್ಟು ಇದೆ.  ಆದರೆ ಮತ್ತೊಮ್ಮೆ ಪ್ರಯತ್ನಿಸುವೆ,
 ಅನುಭವದ ಬಗ್ಗೆ ಬರೆಯುವಾಗ ಉಡುಪಿ ವಿಭಾಗದಲ್ಲಿ ಅಂಚೆ ಸಪ್ತಾಹದ ಉಸ್ತುವಾರಿ ವಹಿಸಿಕೊಂಡು ವಿವಿಧ ತರಹೇವಾರು ಕಾರ್ಯಕ್ರಮ ನೀಡುತ್ತಾ ಅವಕಾಶಗಳನ್ನು ಕಲ್ಪಿಸುತ್ತಾ ಬಂದು ಹದಿನೈದನೇ ತಾರೀಖಿನಂದು ‘ಅಂಚೆ ಪತ್ರ’ ದ ದಿನದ ಅಂಗವಾಗಿ ಕೊವಿಡ್-೧೯ ನಿಂದ ಮುಖಾಮುಖಿಯಾಗದೆ ಮನೆಯಲ್ಲಿ ಕುಳಿತು ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ನಮ್ಮ ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ‘ಅಂಚೆ ಪತ್ರದ’ ಮೂಲಕ ಎಲ್ಲಾ ಉಪನ್ಯಾಸಕ, ಉಪನ್ಯಾಸಕೇತರ ಮಿತ್ರರು ತಮ್ಮ ಕೈ ಬರಹದಲ್ಲಿ ಪಾಠ ಹಾಗೂ ಪಠ್ಯೇತರ ವಿಚಾರವಾಗಿ ನೈತಿಕ ಮೌಲ್ಯಗಳ ಸಾರವನ್ನು ಕಳಿಸುತ್ತಿದ್ದಾರೆ.  ಇದಕ್ಕೆ ಉಡುಪಿ ಅಂಚೆ ಇಲಾಖೆಯ ಮಾರುಕಟ್ಟೆ ವಿಭಾಗದ  ಪೂರ್ಣಿಮಾ ಜನಾರ್ದನ್ ಅವರಿಗೆ ಅನಂತ ಧನ್ಯವಾದಗಳು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!