ಗರಿಕೆಯ (ದೂರ್ವೆ) ಮಹತ್ವ~ ಚಿನ್ಮಯ ಭಟ್ಟ,ಉಡುಪಿ.

ಗಣಪತಿಯು ಗರಿಕೆಯಿಂದ(ದೂರ್ವೆಯಿಂದ) ಪೂಜಿಸಿದರೆ  ಸಂಪ್ರೀತನಾಗುತ್ತಾನೆ ಮತ್ತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆಯಿದೆ. “ಒಮ್ಮೆ ತಪಸ್ಸು ಮಾಡಿ ಬ್ರಹ್ಮನಿಂದ ಅಗ್ನಿಶಕ್ತಿಯನ್ನು ಪಡೆದಿದ್ದ ಅನಲ ಎಂಬ ರಾಕ್ಷಸನು ಮನುಷ್ಯರಿಗೆ ಮತ್ತು ದೇವತೆಗಳಿಗೆ ತೊಂದರೆಯನ್ನು ನೀಡುತ್ತಿದ್ದನು. ದೇವತೆಗಳೆಲ್ಲ ಗಣಪತಿಯ ಬಳಿ ಸಹಾಯ ಕೋರಿದರು.

ಗಣಪತಿ ಮತ್ತು ರಾಕ್ಷಸನ ನಡುವೆ ಘನಘೋರ ಯುದ್ಧ ನಡೆಯಿತು. ಯುದ್ಧದಲ್ಲಿ ಅನಲಾಸುರನನ್ನು ಗಣಪತಿಯಿಂದ ಸೋಲಿಸಲಾಗ ಲಿಲ್ಲ. ಗಣಪತಿಯು ಕೋಪಗೊಂಡು ವಿರಾಟ ರೂಪವನ್ನು ತಾಳಿ ಅನಲಾಸುರನನ್ನು ತನ್ನ ಬಾಯಿಯಿಂದ ನುಂಗಿ ಬಿಡುತ್ತಾನೆ. ಗಣಪತಿಯ ಹೊಟ್ಟೆಯ ಒಳಕ್ಕೆ ಹೋದ ಅನಲಾಸುರನು ಬೆಂಕಿಯನ್ನು ಉಗುಳುತ್ತಾನೆ. ಬೆಂಕಿಯ ಉಷ್ಣದಿಂದ ಹೊಟ್ಟೆ ಉದಿ ಕೊಳ್ಳುತ್ತದೆ. ಯಾವ ಉಪಾಯವನ್ನು ಮಾಡಿದರು ಗಣಪತಿಯ ನೋವು ಕಡಿಮೆಯಾಗುವುದಿಲ್ಲ.

ಆಗ ಋಷಿಮುನಿಗಳು 21 ಗರಿಕೆಯನ್ನು ಗಣಪತಿಯ ತಲೆಯ ಮೇಲಿಟ್ಟರು ಉಷ್ಣಾಂಶವು ಆವಿಯಾಗಿ ಹೊಟ್ಟೆನೋವು ಕಡಿಮೆ ಯಾಯಿತು. ಅಂದಿನಿಂದ ಗಣಪತಿಯು ಯಾರು ತನಗೆ ಗರಿಕೆಯಿಂದ ಪೂಜಿಸುತ್ತಾರೋ ಅವರ ಮೇಲೆ ಸದಾ ನನ್ನ ಆಶೀರ್ವಾದ ಇರುತ್ತದೆ ಎಂದು ಅಭಯ ನೀಡಿರುವನು. ಹಾಗಾಗಿ ಗಣಪತಿಗೆ ಗರಿಕೆಯನ್ನು ಅರ್ಪಿಸಿದರೆ ಒಳ್ಳೆಯದು ಎಂಬ ನಂಬಿಕೆಯಿದೆ”.     

ಗರಿಕೆಯು ಅನೇಕ ಕಾಯಿಲೆಗಳಿಗೂ ರಾಮ ಬಾಣವೆನಿಸಿದೆ. ಬೆಕ್ಕು ಮತ್ತು ನಾಯಿಗಳು ಆರೋಗ್ಯದಲ್ಲಿ ಏರುಪೇರಾದಾಗ ಈ ಗರಿಕೆ ಹುಲ್ಲನ್ನೇ ತಿಂದು ಗುಣ ಪಡಿಸಿಕೊಳ್ಳುತ್ತವೆ. 

ಬರಹ:ಚಿನ್ಮಯ ಭಟ್ಟ. ಉಡುಪಿ.                                           

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply