ಅನಾವಶ್ಯಕವಾಗಿ ಬೇರೆಯವರ ಮನೆಗಳಿಗೆ ಭೇಟಿ ನೀಡುವುದನ್ನು ಸದ್ಯಕ್ಕೆ ತಪ್ಪಿಸಿ~- ಗಣೇಶ್ ಪ್ರಸಾದ್ ಜಿ. ನಾಯಕ್

ಅನಾವಶ್ಯಕವಾಗಿ ಬೇರೆಯವರ ಮನೆಗಳಿಗೆ ಭೇಟಿ ನೀಡುವುದನ್ನು ಸದ್ಯಕ್ಕೆ ತಪ್ಪಿಸಿ. ಏಕೆಂದರೆ ರಾಜ್ಯಾದ್ಯಂತ ಪಾಸಿಟಿವ್ ದೃಢಪಟ್ಟಿರುವ ವ್ಯಕ್ತಿಗಳಲ್ಲಿ ಬಹುತೇಕರು ಹೋಮ್ ಐಸೊಲೇಷನ್ ನಲ್ಲಿ ಇದ್ದಾರೆ.

ಪರಿಸ್ಥಿತಿ ಎಲ್ಲಿಯವರೆಗೆ ಇದೆ ಎಂದರೆ ಸುತ್ತಮುತ್ತಲಿನ ಮನೆಗಳಿಗೆ ಕೂಡ ಮಾಹಿತಿ ಇರುವುದಿಲ್ಲ. ಇದರಿಂದ ತಿಳಿವಳಿಕೆ ಇಲ್ಲದೆ ಆ ಪರಿಸರದಲ್ಲಿ ಇರುವ ಇತರರು ಹೋಮ್ ಐಸೊಲೇಷನ್ ನಲ್ಲಿ ಇರುವವರ ಮನೆಗಳಿಗೆ ಭೇಟಿ ನೀಡಬಹುದು. ಭೇಟಿ ನೀಡಿದ ವ್ಯಕ್ತಿ ಮತ್ತೊಬ್ಬರ ಮನೆಗೆ ಹೋಗಬಹುದು.

ಈ ರೀತಿ ಆಗಿ ಸೋಂಕು ಹರಡಿದರೆ ಅದಕ್ಕೆ ಯಾರು ಹೊಣೆ? ಕಳೆದ ವರ್ಷ ಇದ್ದ ಹಾಗೆ ಪರಿಸ್ಥಿತಿ ಇಲ್ಲ. ಈಗ ಸೋಂಕು ಹರಡುವಿಕೆ ವೇಗ ಪಡೆದುಕೊಂಡಿದೆ.

ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕನಿಷ್ಠ ಪಕ್ಷ ಸಂಬಂಧ ಪಟ್ಟ ಇಲಾಖೆಯ ವತಿಯಿಂದ ಆ ಮನೆಗಳಿಗೆ ‘ಗುರುತು’ ಅಥವಾ ಸುತ್ತಮುತ್ತಲಿನ ಕೆಲವು ಮನೆಗಳಿಗೆ ಮಾಹಿತಿ ನೀಡಿದರೆ Break The Chain ಗೆ ನಿಜವಾದ ಅರ್ಥ ಬರುತ್ತದೆ. ಇಲ್ಲದಿದ್ದರೆ ಇದು ಬರೀ ಘೋಷಣೆ ಮಾತ್ರ ಆಗುತ್ತದೆ.

 

 
 
 
 
 
 
 
 
 
 
 

Leave a Reply