ಗಾದೆ ತೋರಣ.. 4- ಸಂತೋಷವೇ ಯೌವನ.. ಚಿಂತೆಯೇ ಮುಪ್ಪು.~ ಪೂರ್ಣಿಮಾ ಜನಾರ್ದನ್

ಮನುಷ್ಯನ ಜೀವನ ಎಂಬುದು ಸಿಹಿ ಕಹಿಗಳ ಮಿಶ್ರಣ. ಕಷ್ಟ ಖುಷಿ, ನೋವು ನಲಿವು ಇವೆಲ್ಲವೂ ಜೀವನದ ಅವಿಭಾಜ್ಯ ಅಂಗಗಳು.. ಹಗಲು ಕಳೆದು ಇರುಳು, ಇರುಳು ಕಳೆದು ಹಗಲು ಬರುವಂತೆ ನಮ್ಮ ಸುಖ ದುಃಖಗಳೂ ಕೂಡಾ ಒಂದರ ನಂತರ ಇನ್ನೊಂದು ಬಂದೇ ಬರುತ್ತದೆ.

ನಮ್ಮ ಜೀವನದಲ್ಲಿ ಇಂದು ,ಈಗ ಇದ್ದ ಪರಿಸ್ಥಿತಿ ಇನ್ನೊಂದು ಕ್ಷಣಕ್ಕೆ ಬದಲಾಗು ತ್ತದೆ. ಹಾಗಿರುವಾಗ ನಾಳೆಯ ಬಗ್ಗೆ ನಾವು ಮಾಡುವ ವಿನಾಕಾರಣ ಚಿಂತೆ ನಮ್ಮಲ್ಲಿ ರುವ ಶಕ್ತಿಯನ್ನು ಕುಂದಿಸಿ ಆಯುಷ್ಯ ವನ್ನು ಕೊನೆಗೊಳಿಸುತ್ತದೆ.

ಚಿಂತೆ ಮಾಡಿದವನ‌ ಮನಸ್ಸು ಬೇಗ ಮುಪ್ಪಿಗೆ ಜಾರಿದರೆ ಸದಾ ಸಂತಸದ ಮನಸ್ಸು ತಾರುಣ್ಯದ ಉಲ್ಲಾಸದಲ್ಲಿ ರುತ್ತದೆ.

ಹಲವಾರು ಖಾಯಿಲೆಗಳಿಗೆ ಕಾರಣ ವಾಗುವ ಚಿಂತೆ ನಮ್ಮನ್ನು ಬೇಗ ಚಿತೆಗೆ ಒಯ್ಯುತ್ತದೆ. ಹಾಗಾಗಿ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸದೇ ಸಕಾರಾತ್ಮಕ ಯೋಚನೆ ಗಳತ್ತ ನಮ್ಮ ಮನವನ್ನು ಮುನ್ನಡೆಸೋಣ.

ವಿನಾಕಾರಣ ಚಿಂತೆ ಮಾಡದೆ ಆರೋಗ್ಯ ಪೂರ್ಣ ಜೀವನವನ್ನು ಜೀವಿಸೋಣ ಎಂಬ ಕಿವಿ ಮಾತಿನೊಂದಿಗೆ ಸಂತೋಷ ವೇ ಯೌವನ. ಚಿಂತೆಯೇ ಮುಪ್ಪುಎಂಬ ಗಾದೆ ಚಾಲ್ತಿಯಲ್ಲಿದೆ.

ಆತ್ಮೀಯರೆ.. ಸಂತಸದ ಈ ಸುದಿನ ಮಧುರವಾಗಲಿ…

ನಾಳಿನ ಚಿಂತೆಯ ಮರೆತು ಬದುಕು ಭವ್ಯವಾಗಲಿ…
ನಮಸ್ಕಾರ…

 
 
 
 
 
 
 
 
 
 
 

1 COMMENT

Leave a Reply