ಫ್ಯಾಷನ್ ಲೋಕದತ್ತ ಮಾಸ್ಕ್

-ಜಗತ್ತಿನಾದ್ಯಂತ ಹರಡಿರುವ ಕೊರೊನ ಎಂಬ ಸಾಂಕ್ರಾಮಿಕ ರೋಗ,  ಜನರಲ್ಲಿ ಸ್ವಚ್ಛತೆಯ ಬಗೆಗೆ ಜಾಗ್ರತೆ ಮೂಡಿಸಿದ್ದಂತೂ ಸತ್ಯ, ಹಾಗಾಗಿ ನಾವೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಅಥವಾ ಮಾಸ್ಕ್ ಧರಿಸಿಕೊಂಡೊ, ಕೈಯನ್ನು ಸೋಪಿನಿಂದಲೋ, ಸ್ಯಾನಿ ಟೈಸರ್ ನಿಂದಲೋ ತೊಳೆದುಕೊಳ್ಳುತ್ತಿದ್ದೇವೆ. ಹಿಂದೆ ವೈದ್ಯರು, ನರ್ಸ್ ನವರು ಕೆಲವು ಸಂದರ್ಭದಲ್ಲಿ ಮಾತ್ರ ಮಾಸ್ಕ್ ಧರಿಸುತ್ತಿದ್ದರು. ಸಾಮಾನ್ಯ ಜನರಾದ ನಾವೆಲ್ಲರೂ ಏನಾದರೂ ಕೆಟ್ಟ ವಾಸನೆ ಬಂದರೆ ಹಾಗೆಯೇ ಸೀನುವಾಗ  ನಮ್ಮ ಕರ್ಚಿಪ್ ಅನ್ನು ಮುಖಕ್ಕೆ ಹಿಡಿಯುತ್ತಿದ್ದೆವು.

ಇಂದು ಎಲ್ಲರೂ ಈ ಸಾಂಕ್ರಾಮಿಕ ರೋಗದಿಂದಾಗಿ, ಸ್ವ -ಆರೋಗ್ಯದ ಹಿತದೃಷ್ಟಿಯಿಂದ  ಖರೀದಿಸಿ, ಉಪಯೋಗಿಸುವ ಅನಿರ್ವಾರ್ಯತೆ ಇದೆ ಅಷ್ಟೇ ಅಲ್ಲದೇ, ಮಾಸ್ಕ್ ಅನ್ನು ಕಡ್ಡಾಯವಾಗಿ ಹೊರಗಡೆ ಸಂಚರಿಸುವಾಗ ಧರಿಸಬೇಕೆಂಬ ಆದೇಶವನ್ನು ಸರ್ಕಾರವೂ ನೀಡಿದೆ. ಇದು ಮುಂದಿನ ದಿನಗಳಲ್ಲಿ ತುಂಬಾ ರೀತಿಯಲ್ಲಿ ಬದಲಾವಣೆ ಬರಬಹುದೇನೋ …?  ಫ್ಯಾಷನ್ ಡಿಸೈನ್ ಕಲಿಯುವ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಒಂದು ಅಧ್ಯಯನ ವಿಷಯಗಳು/ ಅಥವಾ ಪಠ್ಯದಲ್ಲಿ ಒಂದು ಭಾಗವಾಗಿ ಬರಬಹುದು.ಮೆಡಿಕಲ್ ಶಾಪ್ ಗಳಲ್ಲಿ ಮಾತ್ರ ಸಿಗುತ್ತಿದ್ದ  ಮಾಸ್ಕ್ ಗಳು ಇಂದು ಸಾಮಾನ್ಯ ಅಂಗಡಿಗಳಲ್ಲಿಯೂ ದೊರಕುತ್ತಿದೆ. ಮಹಿಳೆಯರ, ಗಂಡಸರ, ಮಕ್ಕಳ, ಉಡುಪುಗಳನ್ನು ಸಿದ್ಧಪಡಿಸುವ ಕಂಪನಿಗಳು ವಿವಿಧ ಗಾತ್ರದ, ವಿವಿಧ ವಿನ್ಯಾಸದ, ಗುಣಮಟ್ಟದ ಮಾಸ್ಕ್ ಗಳನ್ನು,  ಸಿದ್ಧಪಡಿಸುತ್ತಿದೆ. ನಮ್ಮ ದೇಶದಲ್ಲಿ ಬೇರೆಯವರನ್ನು ಅನುಸರಣೆ ಮಾಡುವುದು  ಯಾವುದೇ ವಿಷಯದಲ್ಲಿ ಅಧಿಕ, ಹಾಗಾಗಿ ಯುವಕ -ಯುವತಿಯರು  ಬಣ್ಣ ಬಣ್ಣದ ಮಾಸ್ಕ್,ಗಳನ್ನು ತಮ್ಮ ಉಡುಪಿಗೆ  ಮ್ಯಾಚಿಂಗ್ ಆಗಿ ಧರಿಸಿದರೆ , ಅದನ್ನು ಹಲವು ಮಂದಿ ಯುವಕ ಯುವತಿಯರು  ಅನುಸರಿಸುತ್ತಾರೆ, ಅದೇ ಮುಂದೊಂದು ದಿನ ಫ್ಯಾಷನ್ ಆಗುತ್ತದೆ.

ಹಾಗಾಗಿ ಸಿದ್ದ ಉಡುಪು ತಯಾರಿಸುವ ಉದ್ಯಮಗಳು, ಪುರುಷರ ಶರ್ಟ್ / ಟಿ ಶರ್ಟ್ ಗೆ ಮ್ಯಾಚ್ ಆಗುವ ಮಾಸ್ಕ್ ಗಳನ್ನು , ಮಹಿಳೆಯರ ವಿವಿಧ ಬಗೆಯ ಡ್ರೆಸ್ ಗಳಿಗೆ ಅನುಗುಣವಾಗಿ ಬಣ್ಣ ಬಣ್ಣದ ಝರಿ ಇರುವ ಮಾಸ್ಕ್ ಗಳನ್ನು ಸಿದ್ಧಪಡಿಸುತ್ತಿದೆ.  ಇಲ್ಲಿಯೂ ಹಲವಾರು ಮಾರು ಕಟ್ಟೆ ತಂತ್ರಗಾರಿಕೆಗಳನ್ನು ಕಂಪೆನಿಗಳು ಅಳವಡಿಸಿಕೊಂಡಿದೆ,  ಅವೆಂದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಬಣ್ಣ ಬಣ್ಣದ ಮಾಸ್ಕ್, ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಸಭ್ಯ ರೀತಿಯ ಮಾಸ್ಕ್, ಊಟ, ತಿಂಡಿ ಲಘು ಪಾನೀಯ ಸ್ವೀಕರಿಸಲು ಬಾಯಿಯ  ಮದ್ಯದಲ್ಲಿ ಒಪೆನ್ ಮಾಡುವಂತೆಯೋ, ಅಥವಾ ಝಿಪ್ / ಬಟನ್ ಇರುವ ಮಾಸ್ಕ್, ಸುಲಭದಲ್ಲಿ ಧರಿಸುವಂತೆ ಆಗುವ ಮಾಸ್ಕ್,ಇತ್ಯಾದಿ.ಇನ್ನು ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಗಳಲ್ಲಿ, ಬಟ್ಟೆ ಮಳಿಗೆಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಉಚಿತವಾಗಿ  ಮಾಸ್ಕ್ ಗಳನ್ನು ನೀಡುತ್ತಿವೆ. ಇನ್ನು ಈ ಮಾಸ್ಕ್ ಗಳೂ ಕೂಡ ವಿವಿಧ, ಬೆಲೆಯಲ್ಲಿ, ಅಂದರೆ ಅತೀ ಕಡಿಮೆ ಬೆಲೆ, ಕಡಿಮೆ ಗುಣಮಟ್ಟವಿರುವ ಮಾಸ್ಕ್, ಸಾಧಾರಣ ಗುಣಮಟ್ಟವಿರುವ ಮಾಸ್ಕ್, ಉತ್ತಮ ಗುಣಮಟ್ಟವಿರುವ ಅಧಿಕ ಬೆಲೆಯ ಮಾಸ್ಕ್ ಗಳೂ  ಮಾರುಕಟ್ಟೆಯಲ್ಲಿ ದೊರಕುತ್ತಿವೆ.  ಮಾಸ್ಕ್ ಧರಿಸುವುದರಿಂದ ಕೆಲವೊಂದು ಬಗೆಯ ಆಭರಣಗಳು ಅಂದರೆ ಹೆಂಗಳೆಯರ ಕಿವಿಯ ಒಲೆ ಮೂಗುತಿ, ಧರಿಸಿದರೂ ಕಾಣಿಸುವುದಿಲ್ಲ, ಹಾಗೆಯೇ ಸೌಂದರ್ಯ ವರ್ಧಕ ಸಾಮಗ್ರಿಗಳಾದ, ಲಿಪ್ಸ್ ಸ್ಟಿಕ್, ಕ್ರೀಮ್ ಗಳಿಗೆ ಬೇಡಿಕೆ ಕಡಿಮೆಯಾಗಿದೆ, ಹಾಗೆಯೇ  ಕೆಲವು ಪುರುಷರು ಪ್ರತಿದಿನ ಶೇವಿಂಗ್ ಮಾಡುವ ಬದಲು ವಾರಕೊಮ್ಮೆಯೋ, ತಿಂಗಳಿಗೊಮ್ಮೆಯೋ ಮಾಡುತ್ತಿದ್ದಾರೆ.

 ಇದರಿಂದ ಬ್ಲೇಡ್ ತಯಾರಿಸುವ / ಶೇವಿಂಗ್ ಕ್ರೀಮ್ ತಯಾರಿಸುವ ಕಂಪೆನಿಗಳಿಗೆ ನಷ್ಟವಾಗುತ್ತಿದೆ ಇಂದು ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ಧರಿಸುವ ಮಾಸ್ಕ್ ಗಳನ್ನು, ಸಿದ್ದಉಡುಪು ತಯಾರಿಸುವ ಉದ್ಯಮಗಳು ತಮ್ಮ ಮಾರುಕಟ್ಟೆ ತಂತ್ರಗಾರಿಕೆಯನ್ನಾಗಿ  ಬಳಸಿದೆ, ಹಾಗೆಯೇ  ಮುಂದೊಂದು ದಿನ ಮಾಸ್ಕ್ ಧರಿಸುವುದು ಫ್ಯಾಷನ್ ಆಗಬಹುದೇನೋ ?  ಮಾಸ್ಕ್ ಧರಿಸಿ ಹೊರಗಡೆ ಸಂಚರಿಸಿ

 

Click: Srikanth Udupa

 

 
 
 
 
 
 
 
 
 
 
 

Leave a Reply