ಕರ್ಮ ರಿಟರ್ನ್ಸ್ ~ ಡಾ. ಶಶಿಕಿರಣ್ ಶೆಟ್ಟಿ

ಅಜ್ಜ ತನ್ನ ಪೆoಷನ್ ಹಣದಲ್ಲಿ ಉಳಿಸಿದ 5500 ರೂ ಅನ್ನು ತೆಗೆದು ಕೊಂಡು ತನ್ನ 5 ಹಲ್ಲು ಗಳನ್ನು ತೆಗೆಸಲು ಡೆಂಟಿಸ್ಟ್ ಹತ್ರ ಹೋಗುತಿದ್ದರು.ದಾರಿಯಲ್ಲಿ ಒಂದಷ್ಟು ಜನ ಸೇರಿದ್ದರು ಮನೆಯಜಮಾನ ಆಕೆಯ ಮನೆಯ ಸಾಮಾನುಗಳನ್ನು ಹೊರಗೆಸೆ ಯುತಿದ್ದ. ಚಿಕ್ಕ ಮಗುವೊಂದನ್ನು ಕಂಕುಳಲ್ಲಿಟ್ಟು ಕೊಂಡು ಆಕೆ ಆತನ ಕಾಲಿನ ಬಳಿ ಅಂಗಾಲಾಚುತಿದ್ದಳು. “ಏನಾಯಿತು? ” ಎಂದರು ಅಜ್ಜ, “ಸರ್ 2 ತಿಂಗಳಾಯಿತು ಬಾಡಿಗೆ ಕೊಡದೆ,ಸತಾಯಿಸುತ್ತಿದ್ದಾರೆ”ಸಿಟ್ಟಿನಿಂದ ಆತ ಹೇಳಿದ್ದ..
ಆ ಮನೆ ಜೋಪಡಿ ಯಂತಿತ್ತು, “ಎಷ್ಟಪ್ಪ ಬಾಡಿಗೆ?” ಎಂದರು ಅಜ್ಜ, “2ತಿಂಗಳಿದ್ದು 5000 ಸರ್” ಎಂದ ಆತ.. ಕಿಸೆ ಯಿಂದ ತೆಗೆದು ಕೊಟ್ಟರು ಅಜ್ಜ.. ಆಕೆ ಅಳುತ್ತ ಕೈ ಮುಗಿದಳು… ಶಬ್ದವೇ ಬರುತ್ತಿರಲಿಲ್ಲ ಆಕೆಗೆ.
ಅಜ್ಜ ಡೆಂಟಲ್ ಕ್ಲಿನಿಕ್ ಒಳಗೆ ಹೋದರು .. ಮೆಲ್ಲ ಕಾಂಪೌಂಡರ್ ಬಳಿ ಬಗ್ಗಿ ಕೇಳಿದರು .. “ಒಂದು ಹಲ್ಲು ತೆಗೆದದ್ದಕ್ಕೆ ಎಷ್ಟು?,”…”500” ಎಂದ ಆತ, ಅಜ್ಜನ ಕಿಸೆ ಯಲ್ಲಿ 500 ರಒಂದು ನೋಟಷ್ಟೇ ಇತ್ತು, 5000 ಈಗಷ್ಟೇ ಅಲ್ಲಿ ಬಾಡಿಗೆ ಯವನಿಗೆ ಕೊಟ್ಟದ್ದೂ ನೆನಪಾಗಿ ಬೇಸರವಾಯಿತು ಅಜ್ಜನಿಗೆ. “ವಯಸ್ಸಾದವರಿಗೆ ಡಿಸ್ಕೌಂಟ್ ಉಂಟಾ?” ಕೇಳಿದರು ಆಸೆ ಇಂದ…
“ಇಲ್ಲ” ಎಂದ ಕಾಂಪೌಂಡರ್, “ಎಷ್ಟು ಹಲ್ಲು” ಎಂದು ಕೇಳಿದ, “5 ಹಲ್ಲಿದೆ, ಎಲ್ಲಾ ತೆಗಿಬೇಕಿತ್ತಪ್ಪ ತೀರಾ ನೋವು ತಡೆಯ ಲಾಗುತ್ತಿಲ್ಲ… ಆದರೆ…” ಎಂದರು ಅಜ್ಜ. ಮಾತು ತುಂಡರಿಸಿದ ಕಾಂಪೌಂಡರ್ “ನಿಮ್ಮಲ್ಲಿರುವ ಹಣ ಈ ಕವರ್ ಗೆ ಹಾಕಿ ಡಾಕ್ಟರ್ ಹತ್ರ ಹಲ್ಲು ತೋರ್ಸಿ.  ತೆಗಿತಾರೆ ಹೇದುರ್ಕೊ ಬೇಡಿ ಅಜ್ಜ ಡಾಕ್ಟರ್ ಕವರ್ ಓಪನ್ ಮಾಡಿ ಚೆಕ್ ಮಾಡಲ್ಲ” ಎಂದ ಆತ. ಹೆದರಿಕೆ ಇಂದಲೇ ಒಳ ಹೋದರು ಅಜ್ಜ..5 ಹಲ್ಲು ತೆಗೆದಾಗ ಡಾಕ್ಟರ್ ಕವರ್ ತೆಗೆದು ಕೊಂಡು ಅಜ್ಜನಲ್ಲಿ ಮಾತಾಡು ತಿದ್ದರು.
ಅಜ್ಜನಿಗೆ ಜೀವನದಲ್ಲಿ ಮೊದಲಬಾರಿ ಎದೆ ಡಬ ಡಬ ಹೊಡೆದು ಕೊಳ್ಳುತಿತ್ತು. ಆತ ಕವರ್ ತೆರೆದರೆ ನನ್ನ ಮರ್ಯಾದೆ ಹರಾಜಾ ಗುತ್ತದೆ ಎಂದು ಹೆದರುತ್ತಲೇ ಕೂತರು.. ಅಷ್ಟರಲ್ಲಿ ಡಾಕ್ಟರ್ ಸಡನ್ ಆಗಿ ಕವರ್ ತೆರೆದರು.  ಅಜ್ಜ ಕಣ್ಣು ಮುಚ್ಚಿ ಹಲ್ಲು ಕಚ್ಚಿ ಕೂತರು. ಅಲ್ಲೊಂದು ವಿಸ್ಮಯವಿತ್ತು..
ಅಜ್ಜ 5 ಹಲ್ಲಿಗೆ 2500 ಆಗಬೇಕು ನೀವು ಮರೆತು 4500 ಇಟ್ಟಿದ್ದೀರಿ. ತಗೊಳ್ಳಿ 2,000 ವಾಪಸ್ ಎಂದು 500ರ  4 ನೋಟ್ ಕೊಟ್ಟಾಗ ಏನೂ ತಿಳಿಯದ ಅಜ್ಜ ಅದನ್ನು ತೆಗೆದು ಕೊಂಡು ಹೊರಗೆ ಕೂತಿದ್ದ ಕಾಂಪೌಂಡೇರ್ಗೆ ಕೊಟ್ಟಿದ್ದರು. ಕಾಂಪೌಂಡರ್ ಆಶ್ಚರ್ಯದಿಂದ ಇದ್ದರೆ ಅಜ್ಜನೂ ಏನೂ ತಿಳಿಯದೆ ದೇವರ ಆಟ ಎನ್ನುತ್ತಾ ಹೊರಹೋದರು.
ಇತ್ತ ಡಾಕ್ಟರ್ ಮಾತ್ರ ನಗುತ್ತಿದ್ದ.. ಆತ ತನ್ನಲ್ಲಿದ್ದ ಸಿಸಿ ಟಿವಿ ಯಲ್ಲಿ ಹೊರಗೆ ಅಜ್ಜ ಹಾಗು ಕoಪೌಂಡರ್ ಮದ್ಯ ನಡೆದ ಸoಬಾಷಣೆ ಕೇಳುತಿದ್ದರು.  ತನ್ನ ಕಾಂಪೌಂಡರ್ ಅವನ 10,000 ತಿಂಗಳ ಸಂಬಳದಲ್ಲಿ 2000 ಅಜ್ಜನಿಗೆ ಕೊಟ್ಟದ್ದು ಅವರಿಗೆ ಬೇಸರವಿತ್ತು. ಹಾಗೇ ಅವರ ಮನಸ್ಸು ಕೂಡಾ ಕರಗಿತ್ತು. ತಮ್ಮದೇ 2000 ವನ್ನು ವಾಪಾಸ್ ಕೊಟ್ಟಿದ್ದರು ಅವರು. ಒಟ್ಟಲ್ಲಿ ಕಾಂಪೌಂಡರ್ ಆರಂಭಿಸಿದ್ದ  ಆಟವನ್ನು ವೈದ್ಯರು ಮುಗಿಸಿ ಬಿಟ್ಟಿದ್ದರು. ಆದರೆ…
ಅಲ್ಲೊಂದು ಟ್ವಿಸ್ಟ್ ಇತ್ತು.  ವೈದ್ಯರೇನೋ ಆಟ ಮುಗಿಯಿತು ಅಂದುಕೊಂಡಿದ್ದರು ಆದರೆ ಆಟ ಇನ್ನೂ ಮುಂದುವರಿದಿತ್ತು.  ಅಷ್ಟರಲ್ಲಿ ಟ್ರಿಣ್ ಟ್ರಿಣ್ ಎಂದು ವೈದ್ಯರ ಮೊಬೈಲ್ಗೆ ಸಂದೇಶ ವೊಂದು ಬಂದಿತ್ತು.  ನೋಡಿದರೆ 2000 ರೂಪಾಯಿ ಯಾರೋ ಫೋನ್ ಪೇ ಮಾಡಿದ್ದರು.
ವೈದ್ಯರಿಗೆ ಅರ್ಥವಾಗಿರಲಿಲ್ಲ ಯಾರು ಹಾಕಿದ್ದು ಎಂದು?.  ಅಷ್ಟರಲ್ಲಿ ಹೆಂಡತಿಯ ಕಾಲ್ ಬಂದಿತ್ತು “ರೀ ಒಂದು ಗುಡ್ ನ್ಯೂಸ್ ಇದೆರಿ ಎಂದಳು. ವೈದ್ಯರಿಗೆ ಆಶ್ಚರ್ಯವಾಗಿತ್ತು. “ಮೊನ್ನೆ ಚಿನ್ನದಂಗಡಿಯಲ್ಲಿ ಗೋಲ್ಡ್ ತಗೊಂಡಿದ್ವಿ ಅಲ್ವಾ ಅಲ್ಲಿ ಲಕ್ಕಿ ಕಸ್ಟಮರ್ ಬಾಕ್ಸ್ ಇತ್ತಲ್ವಾ ಅಲ್ಲಿ ನಿಮ್ಮ ನಂಬರ್ ಹಾಕಿದ್ದೆ ಬಾಕ್ಸ್ ಗೆ ನೀವು 10 ಲಕ್ಕಿ ಮೆಂಬರ್ ಅಲ್ಲಿ ಆಯ್ಕೆ ಆಗಿದ್ದೀರಾ ಅಂತೆ.  ನಿಮ್ ಮೊಬೈಲ್ಗೆ 2,000 ರೂ ಫೋನ್ ಪೇ ಮಾಡಿದ್ದಾರೆ ಅಂತೆ ಬಂತಾ?” ಕೇಳಿದಾಗ ಹಾ ಹಾ ಬಂತು ಎಂದಿದ್ದರು ..
ಈಗ ತಿಳಿದಿತ್ತು ಆಟ ಮುಗಿಸಿದ್ದು ಪರಮಾತ್ಮ ಎಂದು. ವಾವ್ ಭಗವಂತನ ಸಂದೇಶ ಅದೆಷ್ಟು ಸ್ಪಷ್ಟವಾಗಿದೆ ನೋಡಿ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ. ಅದೂ ಹಣ, ಒಡವೆ, ಸಹಾಯ ವಾದರೂ ಸರಿ ಮೋಸ, ವಂಚನೆ, ಅಹಂಕಾರ ವಾದರೂ ಸರಿ ಬೇರೆಯವರಿಗೆ ನೀವು ಕೊಟ್ಟದ್ದು ನಿಮಗೆ ವಾಪಾಸ್ ಸಿಗಲೇ ಬೇಕು ನೋಡುತ್ತೀರಿ.
 
 
 
 
 
 
 
 
 
 
 

Leave a Reply