ಮಗಳು ನಿಮ್ಮನ್ನು ಬಿಟ್ಟು ಹೋದರೆ, ಮಗ ಸುಟ್ಟು ಹೋಗುತ್ತಾನೆ. ~ಡಾ. ಶಶಿಕಿರಣ್ ಶೆಟ್ಟಿ

ಆಕೆಗೆ 68ವರ್ಷ ಆತನಿಗೆ 75 ಮಕ್ಕಳು ವಿದೇಶದಲ್ಲಿದ್ದರು. ಅಜ್ಜ ಅಜ್ಜಿ ಖುಷಿ ಖುಷಿಯಾಗಿ ಮನೆಯಲ್ಲಿದ್ದರು ಅವರ ಖುಷಿಗೆ ಕಾರಣವೂ ಇತ್ತು, ಯಾವಾಗ ತಮಗೆ ಕೊನೆಯ ವಯಸ್ಸಲ್ಲಿ ಮಕ್ಕಳು ನಮ್ಮೊಂದಿ ಗಿರಲು ಸಾಧ್ಯವಿಲ್ಲ ಎಂದು ತಿಳಿಯಿತೋ ಆ ದಿನವೇ ಅವರಿಬ್ಬರ ಆಲೋಚನೆ ಬದಲಾಗಿತ್ತು.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಇಸ್ಪೀಟ್ ಅಲ್ಲಿ ಕತ್ತೆ ಎಂಬ ಆಟವನ್ನು ಆಡುತಿದ್ದರು. ಅಲ್ಲಿ ಸೋತವರಿಗೆ ಪನಿಶ್ಮೆಂಟ್ ಸಿಗುತಿತ್ತು ಗಂಡ ಸೋತರೆ ಆ ದಿನ ಕಿಚನ್ ಅಲ್ಲಿ ಅವನೇ ಇರಬೇಕಿತ್ತು ಅನ್ನ, ಬೇರೆ ಬೇರೆ ಪದಾರ್ಥ ಮಾಡುವುದು , ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ನೆಲ ಒರೆಸುವುದು ಇತ್ಯಾದಿ ಆತ ಮಾಡಬೇಕಿತ್ತು(ಹೆಂಡತಿ ಹೇಳಿಕೊಡುತ್ತಾಳೆ ), ಹಾಗೇ ಹೆಂಡತಿ ಸೋತರೆ ಬ್ಯಾಂಕ್ಗೆ ಹೋಗುವುದು, lic ಕಟ್ಟುವುದು, ಅಂಗಡಿ ವ್ಯವಹಾರ, ಲೆಕ್ಕಾಚಾರ ಇತ್ಯಾದಿ ಕಲಿಯಬೇಕಿತ್ತು (ಗಂಡ ಹೇಳಿ ಕೊಡುತ್ತಾನೆ ), ಹೀಗೆ ಖುಷಿ ಖುಷಿ ಯಾಗಿದ್ದರು.

ಕೊನೆಗೂ ಆ ದಿನ ಬಂದೇ ಬಿಟ್ಟಿತು, ವರ್ಷ 5 ಕಳೆದಾಗ ಒಂದು ದಿನ ಅಜ್ಜಿ ತೀರಿಕೊಂಡರು. ವಿದೇಶ ದಿಂದ ಬಂದ ಮಕ್ಕಳು ತಮ್ಮ ಕೆಲಸ ಮುಗಿಸಿದರು.

ಮತ್ತೆ ವಿದೇಶಕ್ಕೆ ಹೋಗುವ ಮೊದಲು ಅಪ್ಪನನ್ನು ಕರೆದು ಹೇಳಿದರು. ಅಪ್ಪ ಇನ್ನು ಅಮ್ಮ ಇಲ್ಲ ನಾವು ವಿದೇಶಕ್ಕೆ ಹೋಗುತ್ತೇವೆ ಇಲ್ಲಿಯ ಅಸ್ತಿ ಎಲ್ಲಾ ಮಾರಿ ಪಾಲು ಮಾಡಿ ನಮ್ಮ ನಮ್ಮ ಪಾಲು ತೆಗೆದುಕೊಂಡು ಹೋಗುತ್ತೇವೆ. ನಿನ್ನ ಪಾಲಿನ ಹಣ ದಲ್ಲಿ ನಿನ್ನನ್ನೊಂದು ಒಳ್ಳೆಯ ವೃದ್ದಾಶ್ರಮಕ್ಕೆ ಸೇರಿಸಿ ಹೋಗುತ್ತೇವೆ.

ಇಲ್ಲಿ ನೀನಿನ್ನು ಒಬ್ಬನೇ ಅಡುಗೆ, ಊಟ, ಮನೆ ಎಲ್ಲವನ್ನು ನಿಭಾಯಿಸಿಕೊಂಡು ಇರಲು ಸಾಧ್ಯವಿಲ್ಲ ಎಂದರು.

80ವರ್ಷದ ಅಜ್ಜ ಒಂದು ಕ್ಷಣ ಯೋಚಿಸಿ ದರು. ನೋಡಿ ಮಕ್ಕಳೇ ನೀವು ನಾಳೆಯೇ ವಿದೇಶಕ್ಕೆ ಹೋಗಬಹುದು ನನ್ನ ಬಗ್ಗೆ ಚಿಂತೆ ಬೇಡ ನಾನು ಹೇಗೆ ಬದುಕಬೇಕೆಂದು ಜೀವದಲ್ಲಿರುವಾಗಲೇ ನನ್ನ ಪತ್ನಿ ತಿಳಿಸಿದ್ದಾಳೆ.

ಜೀವನದ ಕೊನೆಯ ಗಳಿಗೆಯಲ್ಲಿ ನಮ್ಮೊಂದಿ ಗಿಲ್ಲದ ನೀವುಗಳು ನಾನು ಸತ್ತ ಬಳಿಕವೂ ಬರುವ ಅವಶ್ಯಕತೆ ಇಲ್ಲ. ಆಸ್ತಿ ಹಾಗು ಅಸ್ತಿಯ ಚಿಂತೆ ನಿಮಗೆ ಬೇಡ, ನಾಳೆಯೇ ಇಲ್ಲಿಂದ ತೊಲಗಿ.

ನೀವು ಹೋದಮೇಲೆ ಗೋಮಯ ಹಾಕಿ ಕೊಠಡಿ ಶುದ್ಧಗೊಳಿಸಬೇಕು ಎಂದವರೇ ದಡಾರನೆ ಬಾಗಿಲು ಹಾಕಿ ಮಲಗಿ ಬಿಟ್ಟಿದ್ದರು. ಮಕ್ಕಳು ಬಿಟ್ಟ ಕಣ್ಣು ಬಿಟ್ಟoತೆ ನೋಡುತಿದ್ದರು.

ನಿಜ ಆ ಇಸ್ಪೀಟ್ ಎಲೆಯ ಕತ್ತೆ ಆಟ ನಿಜಕ್ಕೂ ಜೀವನವನ್ನು ಕಲಿಸಿ ಬಿಟ್ಟಿತ್ತು ಅಜ್ಜನಿಗೆ.

ಇದು ಸ್ಪಷ್ಟ ಸಂದೇಶ 60 ದಾಟಿದ ಪ್ರತಿ ಅಜ್ಜ, ಅಜ್ಜಿ ಮಾಡಲೇಬೇಕಾದ ಕೆಲಸ, ನಾಳೆ ಅವರ ಸಂಸಾರದ ಜಂಜಾಟದ ಮಧ್ಯ ನಿಮಗೆಂದು ಮೀಸಲಿಡಲು ನಿಮ್ಮ ಮಗ, ಮಗಳಿಗೆ ಖಂಡಿತ ಸಮಯವಿರುವುದಿಲ್ಲ.

ಆಸ್ಟ್ರೇಲಿಯಾ ದಲ್ಲೋ ಮುಂಬೈ ಅಲ್ಲೂ ಇರಬಹುದು ನಾಳೆ ನಿಮ್ಮ ಸಂಗಾತಿ ಆಗಲಿದಾಗ ವೃದ್ದಾಶ್ರಮವಷ್ಟೇ ಗತಿ ಯಾಗಲಿದೆ ನೆನಪಿರಲಿ. 60 ರ ನಂತರ ಗಂಡಸರು ಅಡುಗೆ ಕಲಿತರೆ ಹೆಂಗಸರು ಬ್ಯಾಂಕಿಂಗ್ ವ್ಯವಹಾರ ಕಲಿತರೆ ಯಾರ ಹಂಗೂ ಇಲ್ಲದೇ ಇನ್ನೊಂದಿಷ್ಟು ದಿನ ಆರಾಮವಾಗಿ ಬದುಕಬಹುದು.

ನನ್ನ ಮಗ ನೋಡುತ್ತಾನೆ ಮಗಳು ನೋಡುತ್ತಾಳೆ ಎಂಬುದು ನಿಮ್ಮ ಕನಸು ಮಾತ್ರ ನೆನಪಿರಲಿ.

ಯಾಕೆಂದರೆ…
ಮಗಳು ನಿಮ್ಮನ್ನು ಬಿಟ್ಟು ಹೋದರೆ ಮಗ ಸುಟ್ಟು ಹೋಗುತ್ತಾನೆ.

 
 
 
 
 
 
 
 
 

Leave a Reply